Karnataka Politics: ಕಾಂಗ್ರೆಸ್‌ ಕಿರಿಕ್‌ ಪಾರ್ಟಿ ಇದ್ದಂತೆ: ಶ್ರೀರಾಮುಲು

Kannadaprabha News   | Asianet News
Published : Jan 30, 2022, 04:09 AM ISTUpdated : Jan 30, 2022, 04:15 AM IST
Karnataka Politics: ಕಾಂಗ್ರೆಸ್‌ ಕಿರಿಕ್‌ ಪಾರ್ಟಿ ಇದ್ದಂತೆ: ಶ್ರೀರಾಮುಲು

ಸಾರಾಂಶ

*  10-20 ಜನ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರುತ್ತಾರೆ ಎಂಬುದು ಸುಳ್ಳು *  ಇತ್ತೀಚಿಗೆ ಸುಳ್ಳು ಹೇಳುವುದನ್ನು ಕಲಿತ ಕಾಂಗ್ರಸ್ಸಿಗರು *  ಇಬ್ರಾಹಿಂಗೆ ಕೆಪಿಸಿಸಿ ಅಧ್ಯಕ್ಷನಾಗುವ ಸಾಮರ್ಥ್ಯ ಅವರಿಗಿದೆ

ಹುಬ್ಬಳ್ಳಿ(ಜ.30):  ಕಾಂಗ್ರೆಸ್‌(Congress) ಪಕ್ಷ ಅನ್ನೋದು ಕಿರಿಕ್‌ ಪಾರ್ಟಿ ಇದ್ದಂತೆ. ಕಾಂಗ್ರೆಸ್‌ ನಾಯಕರೆಲ್ಲರೂ ಕಿರಿಕ್‌ ನಾಯಕರೇ ಆಗಿದ್ದಾರೆ. ಇದರೊಂದಿಗೆ ಇತ್ತೀಚಿಗೆ ಸುಳ್ಳು ಹೇಳುವುದನ್ನು ಕಲಿತ್ತಿದ್ದಾರೆ ಎಂದು ಸಚಿವ ಬಿ. ಶ್ರೀರಾಮುಲು( B Sriramulu) ಲೇವಡಿ ಮಾಡಿದರು.

ಬಿಜೆಪಿ(BJP) ನಾಯಕರು ಕಾಂಗ್ರೆಸ್‌ ಸೇರುತ್ತಾರೆ ಎಂಬ ಹೇಳಿಕೆಗೆ ಮೇಲಿನಂತೆ ಪ್ರತಿಕ್ರಿಯೆ ನೀಡಿದ ಅವರು, 10-20 ಜನ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರುತ್ತಾರೆ ಎಂದು ಹೇಳುತ್ತಿದ್ದಾರೆ. ದೇಶ, ರಾಜ್ಯದಲ್ಲಿ ತಿರಸ್ಕಾರಗೊಂಡಂತಹ ಪಕ್ಷವದು. ಅಲ್ಲಿಗೆ ಯಾರು ಹೋಗಬೇಕು? ಸೋಲಿನ ಹತಾಶೆಯಿಂದ ಈ ರೀತಿಯೆಲ್ಲ ಹೇಳುತ್ತಿದ್ದಾರೆ ಎಂದರು.

Congress Padayatra 'ಮುಖ್ಯಮಂತ್ರಿ ಆಗುವ ದೃಷ್ಟಿಯಿಂದಲೇ ಡಿಕೆಶಿ ಪಾದಯಾತ್ರೆ'

ನೀವೆಲ್ಲ ಟೀವಿಗಳಲ್ಲಿ ತೋರಿಸುತ್ತೀರಿ. ಅದನ್ನು ಜನ ನೋಡುತ್ತಾರೆ. ಹೀಗಾಗಿ, ಟಿಆರ್‌ಪಿಗಾಗಿ(TRP) ಈ ರೀತಿ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಪ್ರೀತಂಗೌಡ ಕಾಂಗ್ರೆಸ್‌ಗೆ ಅರ್ಜಿ ಹಾಕಿದ್ದಾರೆ ಎಂದೆಲ್ಲ ಹೇಳಿದ್ದಾರೆ. ಇದೆಲ್ಲ ಶುದ್ಧ ಸುಳ್ಳು. ಇಲ್ಲಷ್ಟೇ ಅಲ್ಲ. ಗೋವಾದಲ್ಲೂ (Goa)ಸುಳ್ಳು ಹೇಳುತ್ತಿದ್ದಾರೆ ಎಂದರು.

ವಿಧಾನಪರಿಷತ್‌ ಸದಸ್ಯ ಸಿ. ಎಂ. ಇಬ್ರಾಹಿಂ(CM Ibrahim) ಕಾಂಗ್ರೆಸ್‌ ತೊರೆಯುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇಬ್ರಾಹಿಂ ಒಬ್ಬ ಕಾಂಗ್ರೆಸ್‌ನ ಹಿರಿಯ ನಾಯಕ. ಪ್ರತಿಪಕ್ಷ ನಾಯಕ, ಕೆಪಿಸಿಸಿ ಅಧ್ಯಕ್ಷನಾಗುವ ಸಾಮರ್ಥ್ಯ ಅವರಿಗಿದೆ. ಅಲ್ಪಸಂಖ್ಯಾತರಿಂದ ವೋಟ್‌ ಮಾತ್ರ ಹಾಕಿಸಿಕೊಂಡ ಬಳಿಕ ಅವರ ಬೆನ್ನಿಗೆ ಚೂರಿ ಹಾಕುವ ಕೆಲಸವನ್ನು ಕಾಂಗ್ರೆಸ್ಸಿಗರು ಮಾಡಿದ್ದಾರೆ. ರಾಜ್ಯದಲ್ಲಿ ಶೇ. 18ರಷ್ಟು ಮುಸ್ಲಿಮರಿದ್ದಾರೆ. ಆದರೆ, ಅವರಿಂದ ಮತ ಪಡೆಯುವ ಕಾಂಗ್ರೆಸ್‌ ಅವರಿಗೆ ಯಾವುದೇ ಸ್ಥಾನಮಾನ ನೀಡಿಲ್ಲ. ಇಷ್ಟಿದ್ದರೂ ಸಿದ್ದರಾಮಯ್ಯ ತಾನೇ ಅಹಿಂದ ನಾಯಕ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಹೀಗೆ ಹೇಳಿಕೊಳ್ಳುವ ಮೊದಲು ಇಬ್ರಾಹಿಂ ಕೇಳುವ ಪ್ರಶ್ನೆಗಳಿಗೆ ಸಿದ್ದರಾಮಯ್ಯ ಉತ್ತರ ನೀಡಲಿ ಎಂದು ಸವಾಲು ಎಸೆದರು,.

ಸಿದ್ದರಾಮಯ್ಯಗೆ 5 ಕಡೆಯಿಂದ ಕ್ಷೇತ್ರದ ಜನರು ಕರೆಯುತ್ತಿದ್ದಾರಂತೆ. ಅವರಿಗೆ 224 ಕಡೆಯೂ ಕರೆದಿರಬಹುದು. ಕ್ಷೇತ್ರ ಹುಡುಕಾಟ ನಡೆಸಲಿ ಎಂದು ವ್ಯಂಗ್ಯವಾಡಿದರು.

ಜನತೆ ಮೆಚ್ಚುವಂತಹ ಆಡಳಿತವನ್ನು ಬಿಜೆಪಿ ನೀಡಿದೆ

ಚಳ್ಳಕೆರೆ:  ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಪಕ್ಷದ ಹಿರಿಯ ನಾಯಕರಾಗಿದ್ದು, ಸರ್ಕಾರವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸುವಲ್ಲಿ ಸಫಲರಾಗಿದ್ದಾರೆ. ಚಿತ್ರದುರ್ಗ ಜಿಲ್ಲೆ ಉಸ್ತುವಾರಿ ಜವಾಬ್ದಾರಿಯಿಂದ ನನ್ನನ್ನು ಬಿಡುಗಡೆಗೊಳಿಸಿ ಬಳ್ಳಾರಿ ಜಿಲ್ಲೆ ಉಸ್ತುವಾರಿ ವಹಿಸಿರುವುದು ನನಗೆ ಸಂತಸ ತಂದಿದೆ. ಪಕ್ಷದ ಸಂಘಟನೆಗೆ ಒತ್ತು ನೀಡುವುದಾಗಿ ಸಾರಿಗೆ ಸಚಿವ ಶ್ರೀರಾಮುಲು ತಿಳಿಸಿದರು.

ಗುರುವಾರ ಸಂಜೆ ದೊಡ್ಡೇರಿಯ ಶ್ರೀ ಕನ್ನೇಶ್ವರ ಆಶ್ರಮದ ದತ್ತಾವಧೂತ ಮಲ್ಲಿಕಾರ್ಜುನ ಸ್ವಾಮೀಜಿಯವರನ್ನು ಭೇಟಿ ಮಾಡಿ ಪೂಜಾ ಕಾರ್ಯಗಳನ್ನು ನೆರವೇರಿಸಿದ ನಂತರ ನೆರೆದಿದ್ದ ಭಕ್ತರೊಂದಿಗೆ ಗ್ರಾಮೀಣ ಭಾಗದ ಕೆಲವು ಸಮಸ್ಯೆಯನ್ನು ಸಹ ಆಲಿಸಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ(Narendra Modi) ವಿಶ್ವಮೆಚ್ಚಿದ ನಾಯಕರಾಗಿದ್ದು, ಅವರ ಮಾರ್ಗದರ್ಶನದಲ್ಲಿ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಹಾಗೂ ರಾಜ್ಯಮಟ್ಟದಲ್ಲಿ ಮುಂದಿನ ದಿನಗಳಲ್ಲೂ ಸಹ ಅಧಿಕಾರ ನಡೆಸುವುದು ಶತಸ್ಸಿದ್ಧ. ಇತ್ತೀಚೆಗಷ್ಟೇ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಘೋಷಣೆಯಾಗಿದ್ದು, ಚುನಾವಣಾ ಸಮೀಕ್ಷೆಯಲ್ಲಿ ಹೆಚ್ಚು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ವಹಿಸಲಿದೆ ಎಂಬ ಮಾಹಿತಿ ಪತ್ರಿಕೆಗಳಲ್ಲಿ ಬಂದಿದೆ. ಬಿಜೆಪಿಯ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗುತ್ತಿದೆ. ಮುಂಬರುವ ಜಿಲ್ಲಾ, ತಾಲ್ಲೂಕು ಪಂಚಾಯಿತಿ ಚುನಾವಣೆ ಸೇರಿದಂತೆ ಎಲ್ಲಾ ಚುನಾವಣೆಗಳಲ್ಲೂ ಬಿಜೆಪಿ ಹೆಚ್ಚು ಸ್ಥಾನಗಳನ್ನು ಪಡೆಯುವ ಮೂಲಕ ಇನ್ನಷ್ಟುಶಕ್ತಿಶಾಲಿಯಾಗಿ ಬೆಳೆಯಲಿದೆ. ಮುಂಬರುವ ರಾಜ್ಯದ ಆಯವ್ಯಯದಲ್ಲಿ ಬಡ ಜನರಿಗೆ ಹೆಚ್ಚು ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಲಾಗುತ್ತಿದೆ ಎಂದರು.

KSRTC ಸಿಬ್ಬಂದಿಗೆ ಸಂತಸದ ಸುದ್ದಿ ನೀಡಿದ ಸಾರಿಗೆ ಸಚಿವ ರಾಮುಲು

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಾಳೆಮಂಡಿ ರಾಮದಾಸ್‌, ರೂಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಪಿ.ಜಯಪಾಲಯ್ಯ, ಎಸ್ಟಿಮೋರ್ಚಾ ರಾಜ್ಯ ಕಾರ್ಯದರ್ಶಿ ಟಿ.ಮಂಜುನಾಥ, ಜಿಲ್ಲಾ ಎಸ್ಟಿಮೋರ್ಚಾ ಅಧ್ಯಕ್ಷ ಶಿವಣ್ಣ, ಜಿಲ್ಲಾ ಓಬಿಸಿ ಪ್ರಧಾನ ಕಾರ್ಯದರ್ಶಿ ತಿಮ್ಮಣ್ಣ, ಮಂಡಲಾಧ್ಯಕ್ಷ ಈ.ರಾಮರೆಡ್ಡಿ, ಚನ್ನಗಾನಹಳ್ಳಿ ಮಲ್ಲೇಶ್‌, ಬೂದಿಹಳ್ಳಿ ರಾಜಣ್ಣ, ಚಂದ್ರಣ್ಣ, ರೈತ ಮೋರ್ಚಾ ತಾಲೂಕು ಅಧ್ಯಕ್ಷ ನವೀನ್‌ಕುಮಾರ್‌, ಎಚ್‌.ವಿ.ಪ್ರಕಾಶ್‌ರೆಡ್ಡಿ, ಅಂಜಿ ಮದಕರಿ, ವಿ.ಎಂ.ಮೋಹನ್‌, ಕಾಲುವೇಹಳ್ಳಿ ಪಾಲಯ್ಯ, ಎಸ್‌.ಪಾಪೇಶ್‌ನಾಯಕ, ಮಠದ ಆಡಳಿತಾಧಿಕಾರಿ ಸಾಯಿದೇವನ್‌, ಕರಿಯಣ್ಣ ಮುಂತಾದವರು ಉಪಸ್ಥಿತರಿದ್ದರು.

ಅನಗತ್ಯ ವಿವಾದ ಸೃಷ್ಟಿಸುತ್ತಿರುವ ವಿರೋಧ ಪಕ್ಷದವರು

ಇತ್ತೀಚಿನ ದಿನಗಳಲ್ಲಿ ಭಾರತೀಯ ಜನತಾ ಪಕ್ಷದ ಜನಪ್ರಿಯತೆ ಸಹಿಸದ ವಿರೋಧ ಪಕ್ಷದ ಮುಖಂಡರು ಅನಗತ್ಯ ವಿವಾದಗಳನ್ನು ಸೃಷ್ಟಿಮಾಡುತ್ತಿದ್ದಾರೆ. ಪ್ರಸ್ತುತ ಸ್ಥಿತಿಯಲ್ಲಿ ಯಾವ ಬಿಜೆಪಿ ಶಾಸಕರು ಕಾಂಗ್ರೆಸ್‌ ಸೇರುವ ಸಂಭವವಿಲ್ಲ. ಕೆಲವು ಶಾಸಕರು ಸೌಹಾರ್ಥಯುತವಾಗಿ, ಸ್ನೇಹ ಪೂರ್ವಕವಾಗಿ ಕಾಂಗ್ರೆಸ್‌ ಮುಖಂಡರನ್ನು ಭೇಟಿ ಮಾಡಿರಬಹುದು. ಆದರೆ ಪಕ್ಷವನ್ನು ತ್ಯಜಿಸುವ ಯಾವುದೇ ಮಾಹಿತಿ ಇಲ್ಲ. ಆದರೂ ಸಹ ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕರು ಮಾತ್ರ ಬಿಜೆಪಿ ಶಾಸಕರು ಸಂಪರ್ಕದಲ್ಲಿದ್ದಾರೆಂಬ ಅಸಮರ್ಪಕ ಹೇಳಿಕೆ ನೀಡುವ ಮೂಲಕ ಪಕ್ಷದ ವರ್ಚಸನ್ನು ಹಾಳುಮಾಡುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ