'ಚಾಮುಂಡೇಶ್ವರಿ ಜನ ಕೈ ಹಿಡಿಯಲಿಲ್ಲ, ಬಾದಾಮಿಯಲ್ಲಿ ಬೀಳ್ಕೊಡಲು ಸಜ್ಜು, ನೀವು ಸಲ್ಲುವ ಜಾಗ ಯಾವುದು'?

By Suvarna News  |  First Published Jan 29, 2022, 11:08 PM IST

* ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ವಾಗ್ದಾಳಿ
* ಟ್ವೀಟ್ ಮೂಲಕ ಸಿದ್ದರಾಮಯ್ಯನವರ ಕ್ಷೇತ್ರ ವ್ಯಂಗ್ಯವಾಡಿದ ಬಿಜೆಪಿ
* ನೀವು ಸಲ್ಲುವ ಜಾಗ ಯಾವುದು? ಎಂದು ಪ್ರಶ್ನೆ


ಬೆಂಗಳೂರು, (ಜ.29): ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಮುಂದಿನ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎನ್ನುವುದು ಇನ್ನೂ ಅಂತಿಮವಾಗಿಲ್ಲ. ಈ ಮೊದಲು ಬಾದಾಮಿಯಿಂದ ಸ್ಪರ್ಧೆ ಮಾಡುವುದಾಗಿ ಹೇಳಿದ್ದರು. ಆದ್ರೆ, ಅಲ್ಲಿ ಚಿಮ್ಮನಕಟ್ಟಿ ನನಗೆ ಬಿಟ್ಟುಕೊಡಿ ಎಂದು ಅಳಲುತೋಡಿಕೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಮುಂದಿನ ಚುನಾವಣೆಗೆ ಕ್ಷೇತ್ರದ ಹುಡುಕಾಟದಲ್ಲಿದ್ದಾರೆ. ಅವರು ಈಗಾಗಲೇ ಏಳೆಂಟು ಕ್ಷೇತ್ರಗಳಿಂದ ಆಫರ್ ಬಂದಿದೆ. ಇನ್ನು ಈ ಬಗ್ಗೆ ಕರ್ನಾಟಕ ಬಿಜೆಪಿ, ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ಹರಿಹಾಯ್ದಿದೆ.

Latest Videos

undefined

ಬಿಜೆಪಿ ಟ್ವೀಟ್
ವರುಣಾ ಕ್ಷೇತ್ರವನ್ನು ಪುತ್ರವ್ಯಾಮೋಹಕ್ಕಾಗಿ ಬಳಸಿಕೊಂಡಿರಿ, ಚಾಮುಂಡೇಶ್ವರಿಯಲ್ಲಿ ಜನರು ಕೈ ಹಿಡಿಯಲಿಲ್ಲ. ಬಾದಾಮಿಯಲ್ಲಿ ಬೀಳ್ಕೊಡಲು ಜನ ಸಜ್ಜಾಗಿದ್ದಾರೆ ಎಂದು ಲೇವಡಿ ಮಾಡಿದೆ.

ಹುಣಸೂರು, ಚಾಮರಾಜಪೇಟೆ, ಚಿಕ್ಕನಾಯಕನಹಳ್ಳಿ, ಮುಂದೆ ಯಾವುದು? ಜನರ ಬೆಂಬಲವಿಲ್ಲ, ಪಕ್ಷದ ಸಹಕಾರವಿಲ್ಲ, ನೀವು ಸಲ್ಲುವ ಜಾಗ ಯಾವುದು? ಸಿದ್ದರಾಮಯ್ಯಗೆ ಪ್ರಶ್ನಿಸಿ ಬಿಜೆಪಿ ಟ್ವೀಟ್ ಮಾಡಿದೆ.

ಮಾನ್ಯ ಸಿದ್ದರಾಮಯ್ಯನವರೇ,

ವರುಣಾ ಕ್ಷೇತ್ರವನ್ನು ಪುತ್ರವ್ಯಾಮೋಹಕ್ಕಾಗಿ ಬಳಸಿಕೊಂಡಿರಿ. ಚಾಮುಂಡೇಶ್ವರಿಯಲ್ಲಿ ಜನರು ಕೈ ಹಿಡಿಯಲಿಲ್ಲ. ಬಾದಾಮಿಯಲ್ಲಿ ಬೀಳ್ಕೊಡಲು ಜನ ಸಜ್ಜಾಗಿದ್ದಾರೆ.

ಹುಣಸೂರು, ಚಾಮರಾಜಪೇಟೆ, ಚಿಕ್ಕನಾಯಕನಹಳ್ಳಿ, ಮುಂದೆ ಯಾವುದು?

ಜನರ ಬೆಂಬಲವಿಲ್ಲ, ಪಕ್ಷದ ಸಹಕಾರವಿಲ್ಲ, ನೀವು ಸಲ್ಲುವ ಜಾಗ ಯಾವುದು?

— BJP Karnataka (@BJP4Karnataka)

ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವವೇ ಇಲ್ಲ ಎಂದು ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ. ಆದರೆ ಸಂವಿಧಾನ ತಜ್ಞ ಸಿದ್ದರಾಮಯ್ಯ ಅವರು ಮಾತ್ರ ಮೌನವಾಗಿದ್ದಾರೆ. ಅಂಬೇಡ್ಕರ್ ಅವರಿಗೆ ಅನ್ಯಾಯ ಮಾಡಿದ ಕಾಂಗ್ರೆಸ್ ಪಕ್ಷದ ನಾಯಕರಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ? ಎಂದು ಪ್ರಶ್ನಿಸಿದೆ.

ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವವೇ ಇಲ್ಲ ಎಂದು ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.

ಆದರೆ ಸಂವಿಧಾನ ತಜ್ಞ ಅವರು ಮಾತ್ರ ಮೌನವಾಗಿದ್ದಾರೆ.

ಅಂಬೇಡ್ಕರ್ ಅವರಿಗೆ ಅನ್ಯಾಯ ಮಾಡಿದ ಕಾಂಗ್ರೆಸ್ ಪಕ್ಷದ ನಾಯಕರಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ?

— BJP Karnataka (@BJP4Karnataka)

ಚಿಕ್ಕನಾಯಕನಹಳ್ಳಿಯಿಂದ ಸ್ಪರ್ಧಿಸುವಂತೆ ಸಿದ್ದುಗೆ ಮನವಿ
 2023ರ ವಿಧಾನಸಭೆ ಚುನಾವಣೆಯಲ್ಲಿ ಮಾಧುಸ್ವಾಮಿಯವರ ತವರು ತುಮಕೂರಿನ ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸುವಂತೆ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಮುಖಂಡರು ಮನವಿ ಮಾಡಿಕೊಂಡಿದ್ದಾರೆ. 

ನಿನ್ನೆಯಷ್ಟೇ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಮಾಜಿ ಸಚಿವ ಟಿ.ಬಿ. ಜಯಚಂದ್ರ ಮತ್ತು ಚಿಕ್ಕನಾಯಕನಹಳ್ಳಿಯ ಕಾಂಗ್ರೆಸ್ ಮುಖಂಡರು ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸುವಂತೆ ಮನವಿ ಮಾಡಿದರು.

ಚಿಕ್ಕನಾಯಕನಹಳ್ಳಇ ಕ್ಷೇತ್ರದಲ್ಲಿ ಅಹಿಂದ ಮತದಾರರು ಹೆಚ್ಚಾಗಿದ್ದು, ಈ ಕ್ಷೇತ್ರದಿಂದ ಸ್ಪರ್ಧಿಸುವುದು ಅಹಿಂದ ನಾಯಕ ಸಿದ್ದರಾಮಯ್ಯನವರಿಗೆ ಸೇಫ್ ಆಗಿರುತ್ತದೆ. ಅಲ್ಲಿಂದ ಸ್ಪರ್ಧಿಸಿದರೆ, ಜಿಲ್ಲೆಯ ಎಲ್ಲಾ 11 ವಿಧಾನಸಭಾ ಸ್ಥಾನಗಳು, ಹಳೇ ಮೈಸೂರು ಭಾಗದ ಕೆಲವು ಭಾಗಗಳು ಮತ್ತು ಶಿವಮೊಗ್ಗ ಮತ್ತು ದಾವಣಗೆರೆಯ ಮೇಲೆ ಪರಿಣಾಮ ಬೀರಲಿದೆ ಎಂದು ತಿಳಿಸಿದ್ದಾರೆ. 

ಕ್ಷೇತ್ರದ ಸಮೀಕ್ಷೆ ನಡೆಸುವಂದೆ ಸಿದ್ದರಾಮಯ್ಯ ಅವರ ಬಳಿ ಮನವಿ ಮಾಡಿಕೊಂಡಿದ್ದೇವೆ. ಇದಕ್ಕೆ ಅವರು ಒಪ್ಪಿಗೆ ಸೂಚಿಸಿದ್ದಾರೆ. ಇದೇ ವೇಳೆ ಸಿದ್ದರಾಮಯ್ಯ ಅವರು, ಪರಿಣಾಮಕಾರಿಯಾಗಿ ಪಕ್ಷವನ್ನು ಸಂಘಟಿಸುವಂತೆ ಮನವಿ ಮಾಡಿಕೊಂಡಿದ್ದಾರೆಂದು ವೈ ಸಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

ಸಂಜೆ ವೇಳೆಗೆ ಮಾಜಿ ಸಚಿವರಾದ ಎಂ.ಬಿ.ಪಾಟೀಲ್ ಮತ್ತು ಜಮೀರ್ ಅಹಮದ್ ಖಾನ್ ಅವರನ್ನು ಭೇಟಿ ಮಾಡಿದ ನಿಯೋಗ, ಚಿಕ್ಕನಾಯಕನಹಳ್ಳಿಯಿಂದ ಸ್ಪರ್ಧಿಸುವಂತೆ ಸಿದ್ದರಾಮಯ್ಯ ಅವರಿಗೆ ಮನವರಿಕೆ ಮಾಡಿಕೊಡುವಂತೆ ಮನವಿ ಮಾಡಿದ್ದರು

click me!