ವೀರೇಂದ್ರ ಪಪ್ಪಿ ಅಧಿಕಾರ ಸ್ವೀಕಾರ ಕಾನೂನು ಬಾಹಿರ, ಹೈಕೋರ್ಟ್‌ಗೆ ರೀಟ್ ಅರ್ಜಿ

Published : Jun 15, 2023, 05:21 AM IST
ವೀರೇಂದ್ರ ಪಪ್ಪಿ ಅಧಿಕಾರ ಸ್ವೀಕಾರ ಕಾನೂನು ಬಾಹಿರ, ಹೈಕೋರ್ಟ್‌ಗೆ ರೀಟ್ ಅರ್ಜಿ

ಸಾರಾಂಶ

ಶಾಸಕ ವೀರೇಂದ್ರಪಪ್ಪಿ ಅವರು ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡಿರುವುದು ಕಾನೂನು ಬಾಹಿರವೆಂದು ವಿಧಾನ ಪರಿಷತ್‌ ಸದಸ್ಯ ಕೆ.ಎಸ್‌.ನವೀನ್‌ ಹೇಳಿದರು.

ಚಿತ್ರದುರ್ಗ (ಜೂ.15) ಶಾಸಕ ವೀರೇಂದ್ರಪಪ್ಪಿ ಅವರು ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡಿರುವುದು ಕಾನೂನು ಬಾಹಿರವೆಂದು ವಿಧಾನ ಪರಿಷತ್‌ ಸದಸ್ಯ ಕೆ.ಎಸ್‌.ನವೀನ್‌ ಹೇಳಿದರು.

ಬುಧವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುರುಘಾಮಠಕ್ಕೆ ಆಡಳಿತಾಧಿಕಾರಿ ನೇಮಕ ಮಾಡಿದ್ದನ್ನು ಹೈಕೋರ್ಚ್‌ ರದ್ದುಗೊಳಿಸಿದೆ. ಆರು ವಾರದ ಒಳಗಾಗಿ ಮುಂದಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ತೀರ್ಪು ಬಂದು ಕೇವಲ ಎರಡು ದಿನದ ಒಳಗಾಗಿ ಮುರುಘಾಮಠದಲ್ಲಿ ಸಭೆ ನಡೆಸಿ ನಂತರ ವಿದ್ಯಾಪೀಠಕ್ಕೆ ಕಾರ್ಯದರ್ಶಿ ಅಧಿಕಾರ ಸ್ವೀಕಾರ ನಡೆದಿದೆ. ನ್ಯಾಯಾಲಯದ ಆದೇಶವನ್ನು ತಪ್ಪಾಗಿ ಗ್ರಹಿಸಿ ತರಾತುರಿ ಮಾಡಲಾಗಿದೆ. ಈ ಬಗ್ಗೆ ತಾವು ಹೈಕೋರ್ಚ್‌ನಲ್ಲಿ ರಿಜ್‌ ಅರ್ಜಿ ಸಲ್ಲಿಸಿರುವುದಾಗಿ ಹೇಳಿದರು

ಚಿತ್ರದುರ್ಗ: ಅಶಿಸ್ತು ತೋರಿದ ಅಧಿಕಾರಿಗಳಿಗೆ ಸಚಿವ ಡಿ ಸುಧಾಕರ್ ತರಾಟೆ!

ಈ ಹಿಂದೆ ಆಡಳಿತಾಧಿಕಾರಿಯಾಗಿ ನಿವೃತ್ತ ಐಎಎಸ್‌ ಅಧಿಕಾರಿ ವಸ್ತ್ರದ ಅವರನ್ನು ಸರ್ಕಾರ ನೇಮಕ ಮಾಡಿತ್ತು. ಇದನ್ನು ಪ್ರಶ್ನಿಸಿ ಉಸ್ತುವಾರಿ ಬಸವಪ್ರಭು ಶ್ರೀ ಸೇರಿದಂತೆ ಇತರರು ಹೈಕೋರ್ಚ್‌ ಮೆಟ್ಟಿಲೇರಿದ್ದರು. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕಂದಾಯ ಇಲಾಖೆಯ ಉಪ ಕಾರ್ಯದರ್ಶಿ, ಮುಜರಾಯಿ ಇಲಾಖೆ ಕಾರ್ಯದರ್ಶಿ, ಚಿತ್ರದುರ್ಗ ಜಿಲ್ಲಾಧಿಕಾರಿ ಸೇರಿದಂತೆ ಇತರರು ಪ್ರತಿವಾದಿಗಳಾಗಿ ಮಾಡಲಾಗಿತ್ತು. ಆಡಳಿತಾಧಿಕಾರಿ ನೇಮಕ ರದ್ದು ಮಾಡಿದ್ದ ಹೈಕೋರ್ಚ್‌ ಮುಂದಿನ ಕ್ರಮಕ್ಕೆ ಸೂಚಿಸಿತ್ತು.

ಮುಂದೇನು ಮಾಡಬೇಕೆಂಬ ಚಿತ್ರದುರ್ಗ ಜಿಲ್ಲಾಧಿಕಾರಿ ಸರ್ಕಾರಕ್ಕೆ ಪತ್ರ ಬರೆದಿದ್ದರು. ಈ ಬಗ್ಗೆ ಸರ್ಕಾರ ಕಾನೂನು ಇಲಾಖೆ ಅಭಿಪ್ರಾಯ ಕೇಳಿತ್ತು. ವರದಿ ಬರುವ ಮುನ್ನವೇ ಮರುಘಾಮಠದಲ್ಲಿ ಕಾರ್ಯದರ್ಶಿಯ ನೇಮಕವಾಗಿದೆ . ಮುರುಘಾಮಠಕ್ಕೆ ರಾಜ್ಯದಾದ್ಯಂತ ನೂರಕ್ಕೂ ಹೆಚ್ಚು ಶಾಖಾ ಮಠ, ಬಸವಕೇಂದ್ರಗಳಿವೆ. ಯಾರನ್ನು ಗಣನೆಗೆ ತೆಗೆದುಕೊಂಡಿಲ್ಲ. ಸಾವಿರಾರು ಮಕ್ಕಳಿಗೆ ಅನ್ನದಾಸೋಹ, ಶಿಕ್ಷಣ ನೀಡಿದ ಮಠವನ್ನು ಅದೋಗತಿಗೆ ತೆಗೆದುಕೊಂಡು ಹೋಗಲು ನಾವುಗಳು ಬಿಡುವುದಿಲ್ಲ. ಮಠದ ಅಧಿಕಾರ ಹಿಡಿಯಬೇಕೆಂಬ ಹಪಾ ಹಪಿಯಿಂದ ಇಂತಹ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಐವತ್ತರಿಂದ ನೂರು ಜನ ಸೇರಿಕೊಂಡು ಸಭೆ ನಡೆಸಿ ನಿರ್ಣಯಿಸಿರುವುದನ್ನು ಒಪ್ಪಲ್ಲ ಎಂದರು.

ಮೆಡಿಕಲ್‌ ಕಾಲೇಜಿಗೆ ನೋಟೀಸ್‌:

ಮುರುಘಾಮಠದ ರಿಜಸ್ಟರ್‌ ಗೌರ್ನಿಂಗ್‌ ಕೌನ್ಸಿಲ್‌ನಲ್ಲಿ ಇದ್ದೇನೆ. ಕೆಲವೇ ಕೆಲವರು ಮುರುಘಾಮಠದ ಆಡಳಿತವನ್ನು ಹಿಡಿತಕ್ಕೆ ತೆಗೆದುಕೊಳ್ಳುವ ಸಂಚು ನಡೆಸುತ್ತಿದ್ದಾರೆ. ಮುರುಘಾಮಠ ಉಳಿವಿಗಾಗಿ ರಾಜ್ಯಾದ್ಯಂತ ಭಕ್ತರನ್ನು ಸೇರಿಸಿ ಅಭಿಯಾನ ನಡೆಸಲಾಗುವುದು ಎಂದರು. ಸರಿಯಾಗಿ ನಿರ್ವಹಣೆ ಮಾಡದ ಕಾರಣ ಇಂಡಿಯನ್‌ ಮೆಡಿಕಲ್‌ ಕೌನ್ಸಿಲ್‌ನಿಂದ ಮೆಡಿಕಲ್‌ ಕಾಲೇಜಿಗೆ ನೋಟೀಸು ಬಂದಿದೆ. ಮಠವನ್ನು ಒಳ್ಳೆಯ ದಾರಿಯಲ್ಲಿ ತೆಗೆದುಕೊಂಡು ಹೋಗುವ ಕೆಲಸವಾಗಬೇಕು. ಹೈಕೋರ್ಚ್‌ ಆದೇಶದ ಅನುಸಾರ ನಡೆದುಕೊಂಡರೆ ಎಲ್ಲರಿಗೂ ಒಳ್ಳೆಯದಾಗುತ್ತದೆಂದು ಸಲಹೆ ನೀಡಿದರು.

ಹತ್ತು ಕೋಟಿ ಸಾಲ ತೀರಿಸಲಾಗಿದೆ:

ಡಾ.ಶಿವಮೂರ್ತಿ ಶರಣರು ಜೈಲಿಗೆ ಹೋಗಿರುವುದರಿಂದ ಬಸವಪ್ರಭು ಸ್ವಾಮಿಯನ್ನು ನೇಮಕ ಮಾಡಲಾಗಿದೆ. ಅಂದಿನಿಂದ ಧಾರ್ಮಿಕ ಕೆಲಸಗಳು ನಡೆಯುತ್ತಿವೆ. ಆದರೆ ಸಮಿತಿಯನ್ನು ರಚಿಸಿ ಘೋಷಿಸಿರುವುದು ಯಾವ ನ್ಯಾಯ? ಜಯದೇವ ಜಗದ್ಗುರುಗಳು ಹಳ್ಳಿ ಹಳ್ಳಿ ತಿರುಗಿ ಮಠ ಕಟ್ಟಿದ್ದಾರೆ. ಅವರ ಭಕ್ತಿಯನ್ನು ಮೆಚ್ಚಿ ದಾವಣಗೆರೆ, ಕೊಡಗಿನಲ್ಲಿ ಕೋಟ್ಯಂತರÜ ರು. ಬೆಲೆ ಬಾಳುವ ಭೂಮಿಯನ್ನು ಭಕ್ತರು ದಾನವಾಗಿ ನೀಡಿದ್ದಾರೆ. ಮಠಕ್ಕೆ ಸೇರಿದ ವಿದ್ಯಾಸಂಸ್ಥೆ, ಮೆಡಿಕಲ್‌ ಕಾಲೇಜು, ಸಾವಿರಾರು ವಿದ್ಯಾರ್ಥಿಗಳ ಹಿತವನ್ನು ಗಮನದಲ್ಲಿಟ್ಟುಕೊಂಡು ಹಿಂದಿನ ಮುಖ್ಯಮಂತ್ರಿಗೆ ಪತ್ರ ಬರೆದಿದ್ದರ ಫಲವಾಗಿ ದಕ್ಷ ಆಡಳಿತಾಧಿಕಾರಿಯನ್ನು ನೇಮಿಸಿತ್ತು. ಡಿಸೆಂಬರ್‌ನಲ್ಲಿ ಆಡಳಿತಾಧಿಕಾರಿ ಅಧಿಕಾರ ವಹಿಸಿಕೊಂಡರು. ವಿದ್ಯಾಸಂಸ್ಥೆಯಲ್ಲಿರುವ ಸಮಸ್ಯೆಗಳನ್ನು ನಿವಾರಿಸಿ ಸರಿದಾರಿಗೆ ತೆಗೆದುಕೊಂಡು ಹೋಗಿದ್ದರ ಪರಿಣಾಮವಾಗಿ ವಿವಿಧ ಬ್ಯಾಂಕ್‌ಗಳಲ್ಲಿದ್ದ 32 ಕೋಟಿ ರು.ಸಾಲದಲ್ಲಿ ಐದು ತಿಂಗಳಲ್ಲಿ ಹತ್ತು ಕೋಟಿ ಸಾಲ ತೀರಿಸಲಾಗಿದೆ ಎಂದು ಕೆ.ಎಸ್‌.ನವೀನ್‌ ಹೇಳಿದರು.

Shakti Scheme: ಚಿತ್ರದುರ್ಗದಲ್ಲಿ ಶಕ್ತಿ ಯೋಜನೆಗೆ ವೀರೇಂದ್ರ ಪಪ್ಪಿ ಚಾಲನೆ

ಮೆಡಿಕಲ್‌ ಕಾಲೇಜಿಗಾಗಿ ಬ್ಯಾಂಕ್‌ನಲ್ಲಿ ಗ್ಯಾರಂಟಿಗಾಗಿ ಇಡಲಾಗಿದ್ದ ಒಂಬತ್ತುವರೆ ಕೋಟಿ ರು.ಗಳನ್ನು ವಾಪಸ್‌ ಪಡೆಯಲು ಪತ್ರ ವ್ಯವಹಾರ ಮಾಡಲಾಗಿದೆ. ಇತರರ ಪಾಲಾಗಿದ್ದ ಮಠದ ಆಸ್ತಿಗಳನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದ್ದೇವೆ. ಸಿಬ್ಬಂದಿಗಳಿಗೆ ಮುಂಬಡ್ತಿ ಕೊಟ್ಟಿರಲಿಲ್ಲ. ಅನೇಕ ಕಾಮಗಾರಿಗಳನ್ನು ಪೂರ್ಣಗೊಳಿಸಲು ಟೆಂಡರ್‌ ಕರೆದು ಕೆಲಸ ಕೊಡುವ ಪ್ರಯತ್ನವಾಗಿದೆ. ಬಸವ ಪ್ರತಿಮೆ ನಿರ್ಮಾಣಕ್ಕೆ ಏಳು ಕೋಟಿ ರು.ಬೇರೆಯವರಿಗೆ ನೀಡಲಾಗಿದೆ ಎಂದು ನವೀನ್‌ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ನಾನು ಲಂಚ ಪಡೆದಿದ್ದು ಸಾಬೀತಾದರೆ ರಾಜೀನಾಮೆ: ಗೃಹ ಸಚಿವ ಪರಮೇಶ್ವರ್‌