Assembly election: ವಿಧಾನಸೌಧದದ ಗೋಡೆಗಳು ಕಾಸು ಕಾಸು ಎನ್ನುತ್ತಿವೆ: ಡಿ.ಕೆ.ಶಿವಕುಮಾರ್‌ ಹೀಗೆ ಹೇಳಿದ್ಯಾಕೆ?

By Sathish Kumar KHFirst Published Jan 28, 2023, 6:21 PM IST
Highlights

ರಾಜ್ಯದ ವಿಧಾನಸೌಧದ ಗೋಡೆಗಳಿಗೆ ಕಿವಿ ಕೊಟ್ಟು ಕೇಳಿದಲ್ಲಿ ಎಲ್ಲ ಗೋಡೆಗಳು ಕೂಡ ಕಾಸು, ಕಾಸು ಎಂದು ಹಪಹಪಿಸುತ್ತಿವೆ. ರಾಜ್ಯದ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಸಂಪೂರ್ಣವಾಗಿ ಮುಳುಗಿ ಹೋಗಿದೆ.

ಯಾದಗಿರಿ (ಜ.28): ರಾಜ್ಯದ ವಿಧಾನಸೌಧದ ಗೋಡೆಗಳಿಗೆ ಕಿವಿ ಕೊಟ್ಟು ಕೇಳಿದಲ್ಲಿ ಎಲ್ಲ ಗೋಡೆಗಳು ಕೂಡ ಕಾಸು, ಕಾಸು ಎಂದು ಹಪಹಪಿಸುತ್ತಿವೆ. ರಾಜ್ಯದ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಸಂಪೂರ್ಣವಾಗಿ ಮುಳುಗಿ ಹೋಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸರ್ಕಾರದ ವಿರುದ್ಧ ಆರೋಪಿಸಿದ್ದಾರೆ.

ಯಾದಗಿರಿಯಲ್ಲಿ ಇಂದು ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಈ ವೇಳೆ ರಾಜ್ಯದಲ್ಲಿ ಪಿಎಸ್ಐ ನೇಮಕಾತಿಯಲ್ಲಿ ಅಕ್ರಮವನ್ನು ಬಿಜೆಪಿ ನಾಯಕರು ಮಾಡಿದ್ದಾರೆ. ಐಪಿಎಸ್ ಅಧಿಕಾರಿಗಳು ಇದರಲ್ಲಿ ಭಾಗಿಯಾಗಿದ್ದಾರೆ. ಉದ್ಯೋಗದಲ್ಲಿ ಬಡವರಿಗೆ ಅನ್ಯಾಯ ಆಗುತ್ತಿದೆ. ಈಶ್ವರಪ್ಪ ತಮ್ಮ ಪಕ್ಷದ ಕಾರ್ಯಕರ್ತನ ಹತ್ರ 30% ಲಂಚ ತಗೊಂಡರು. ಇದರಿಂದ ನೇಣು ಹಾಕೊಂಡು ಉಡುಪಿಯಲ್ಲಿ ಸತ್ತರು. ಆಗ ಈಶ್ವರಪ್ಪನ ರಾಜೀನಾಮೆಗಾಗಿ ಧರಣಿ ಮಾಡಿದ್ದರಿಂದ, ಅವರು ರಾಜೀನಾಮೆ ಕೊಟ್ಟರು. ವಿಧಾನಸಭೆಯ ಗೋಡೆಗಳಿಗೆ ಕೀವಿ ಕೊಟ್ಟು ಕೇಳಿದ್ರೆ ಕಾಸು ಕಾಸು ಅಂತ ಅಂತಿವೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಕಮಿಷನ್ ಕುರಿತು ಪತ್ರ ಬರೆದಿದ್ದಾರೆ ಎಂದು ತಿಳಿಸಿದರು.

ಮತ್ತೆ ಸಿಎಂ ಕುರ್ಚಿ ಆಸೆ ಬಿಚ್ಚಿಟ್ಟ ಡಿಕೆಶಿ: ಕಾಮಧೇನು ಕಿವಿಯಲ್ಲಿ ಕೋರಿಕೆ

ಯಾದಗಿರಿ ಮಣ್ಣಿನ ಮಗ ಕಾಂಗ್ರೆಸ್‌ ಅಧ್ಯಕ್ಷ: ದೇಶದಲ್ಲಿ ಮಹಾತ್ಮ ಗಾಂಧಿಯವರು ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ನಂತರ ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂದಿ, ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ. ಈಗ ನಿಮ್ಮ ಮಣ್ಣಿನ ಮಗ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಇತ್ತೀಚೆಗೆ ನರೇಂದ್ರ ಮೋದಿ ಅವರು ಬಂದಾಗ ಕಲ್ಯಾಣ ಕರ್ನಾಟಕಕ್ಕೆ ಕಾಂಗ್ರೆಸ್‌ ಕೊಡುಗೆ ಕೊಟ್ಟಿಲ್ಲ ಎಂದಿದ್ದಾರೆ. ಆದರೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಾವ ಅಭಿವೃದ್ಧಿ ಮಾಡಿದ್ದೀರಿ ಒಂದು ಸಾಕ್ಷಿ ಕೊಡಿ. ಈ ಭಾಗದ ಯುವಕರಿಗಾಗಿ ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್‌ ಅಪಾರ ಕೊಡುಗೆ ನೀಡಿದ್ದಾರೆ ಎಂದರು. 

ಕಾಂಗ್ರೆಸ್‌ ಬಂದಲ್ಲಿ 5 ಸಾವಿರ ಕೋಟಿ ರೂ. ಮೀಸಲು:  ಈ ಭಾಗಕ್ಕೆ 371 ಜೆ ತಿದ್ದುಪಡಿಗಾಗಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರಕ್ಕೆ ಪತ್ರ ಬರೆದಾಗ, ಅಂದಿನ ಉಪ ಪ್ರಧಾನಿಯಾಗಿದ್ದ ಎಲ್.ಕೆ. ಅಡ್ವಾಣಿ ಅವರು 371 ಜೆ ಮೀಸಲಾತಿ ಕೊಡಲ್ಲ ಎಂದಿದ್ದರು. ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರದಲ್ಲಿ ಖರ್ಗೆ ಅವರು ಕೆಂದ್ರ ಸಚಿವರಿದ್ದಾಗ ಕಾನೂನು ತಿದ್ದುಪಡಿ ಮಾಡಿದರು. ಈ ಭಾಗಕ್ಕೆ ನೀರಾವರಿ, ಕೆರೆ ತುಂಬಿಸುವ ಯೋಜನೆ, ಕುಡಿಯುವ ನೀರು ಬಂದಿದ್ದರೆ ಅದಕ್ಕೆ ಕಾಂಗ್ರೆಸ್ ಕಾರಣವಾಗಿದೆ. ಜಯದೇವ ಆಸ್ಪತ್ರೆ, ಇಎಸ್ಐ ಆಸ್ಪತ್ರೆಗಳನ್ನು ಕಾಂಗ್ರೆಸ್‌ ಮಾಡಿದೆ ಎಂದರು. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಈ ಭಾಗಕ್ಕೆ ಪ್ರತಿ ವರ್ಷ 5 ಸಾವಿರ ಕೋಟಿ ಮೀಸಲಿಡುತ್ತೇವೆ ಎಂದರು. 

ಐದು ವರ್ಷಕ್ಕೆ 5 ಲಕ್ಷ ರೂ. ಪಡೆಯಬಹುದು: ಬಿಜೆಪಿ ಯವರು ಜಾತಿ-ಜಾತಿ, ಧರ್ಮ-ಧರ್ಮ ಗಳ ನಡುವೆ ಜಾತಿ ಹಚ್ಚಿದ್ದಾರೆ. ಬಿಜೆಪಿ ಅವರಿಗೆ ಹಿಂದೂ ಮಾತ್ರ ಅಂತೆ. ನಾವು ಹಾಗಲ್ಲ. ಹಿಂದೂ-ಮುಸ್ಲಿಂ, ಲಿಂಗಾಯತ, ಒಕ್ಕಲಿಗ, ಕುರುಬ ಎಲ್ಲಾ ಒಂದೇ ಎಂದು ಮುಂದೆ ಹೋಗುತ್ತಿದ್ದೇವೆ. ಬಡವರ ಮನೆ ಜ್ಯೋತಿ ಬೆಳಗಲು ಭಾಗ್ಯಜ್ಯೋತಿ ಬರಲಿದೆ. ನೀವು ಇನ್ನು ಮುಂದೆ ಯಾರು ಕರೆಂಟ್ ಬಿಲ್ ಕಟ್ಟಂಗಿಲ್ಲ. ಸಿಲಿಂಡರ್, ಪೆಟ್ರೋಲ್, ಡಿಸೇಲ್, ಸ್ಕೂಲ್ ಫಿ ಗಳು ಸೇರಿ ಎಲ್ಲಾ ದರ ಹೆಚ್ಚಾಗಿವೆ. ವ
ಅದಕ್ಕಾಗಿ ತಾಯಂದಿರಿಗೆ ಪ್ರತಿ ತಿಂಗಳು 2 ಸಾವಿರ ನೀಡಲಾಗುತ್ತದೆ. 200 ವ್ಯಾಟ್ ಉಚಿತ, 2 ಸಾವಿರ ರೂ. ಖಚಿತ. ವರ್ಷಕ್ಕೆ 42 ಸಾವಿರ ರೂ. ಐದು ವರ್ಷಕ್ಕೆ 5 ಲಕ್ಷ ರೂ. ಪಡೆಯಬಹುದು ಎಂದರು. 

ಒಂದು ತಗೋಂಡ್ರೆ ಮತ್ತೊಂದು ಚಡ್ಡಿ ಉಚಿತ, ಕಾಂಗ್ರೆಸ್ ಫ್ರೀ ಭಾಗ್ಯಕ್ಕೆ ಹೆಚ್‌ಡಿಕೆ ಟಾಂಗ್!

ಬಿಜೆಪಿ ಕಲ್ಯಾಣ ಕರ್ನಾಟಕವನ್ನು ಕಡೆಗಣಿಸಿದೆ:  ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿ, ಕಲ್ಯಾಣ ಕರ್ನಾಟಕ ಕಾಂಗ್ರೆಸ್ ನ ಭದ್ರಕೋಟೆಯಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಯಾದಗಿರಿಯ ಗುರಮಠಕಲ್ ನಿಂದ 8 ಬಾರಿ ಆಯ್ಕೆಯಾಗಿದ್ದರು. ಯಾದಗಿರಿ ಜಿಲ್ಲೆ ಕಳೆದ ಬಾರಿ 1 ಕ್ಷೇತ್ರದಲ್ಲಿ ಮಾತ್ರ ಗೆದ್ದಿದ್ದೇವೆ. ಈ ಬಾರಿ ಕಲ್ಯಾಣ ಕರ್ನಾಟಕದಲ್ಲಿ 41 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಬೇಕು. ಬಿಜೆಪಿ ಕಲ್ಯಾಣ ಕರ್ನಾಟಕವನ್ನು ಸಂಪೂರ್ಣ ಕಡೆಗಣಿಸಿ ಅನುದಾನ ಕಡಿತಗೊಳಿಸಿದರು. ಯುವಕರ ಉದ್ಯೋಗ ಭರ್ತಿ ಮಾಡಿಲ್ಲ. ಬಿಜೆಪಿ ಸರ್ಕಾರ ಪಿಎಸ್ಐ, ಕೆಪಿಟಿಸಿಎಲ್, ವರ್ಗಾವಣೆ, ಕಾಮಗಾರಿಯಲ್ಲಿ ಭ್ರಷ್ಟಚಾರ ಮಾಡಿದೆ. ನೀರಾವರಿ, ರಸ್ತೆಗಳನ್ನು ಅಭಿವೃದ್ಧಿ ಮಾಡಿಲ್ಲ ಎಂದು ಆರೋಪಿಸಿದರು.

click me!