ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಹಾಗೂ ಜೆಡಿಎಸ್ ಅಭ್ಯರ್ಥಿ ಮಾಜಿ ಶಾಸಕ ಸುರೇಶ್ ಬಾಬು ನಡುವೆ ಮಾತಿನ ಜಟಾಪಟಿ ಶುರುವಾಗಿದೆ. ಕಾನೂನು ಸಚಿವರಿಗೆ ನೈತಿಕತೆ ಪಾಠದ ಅಗತ್ಯವಿದೆ. ಮಾಧುಸ್ವಾಮಿಗೆ ಸೋಲಿನ ಭೀತಿಯಿದೆ. ಮಾಧುಸ್ವಾಮಿ ಸೋಲಿಸಲು ಸಿದ್ದರಾಮಯ್ಯ ಬೇಡ ನಾನೇ ಸಾಕು. ಸಚಿವ ಮಾಧುಸ್ವಾಮಿ ವಿರುದ್ಧ ಸುರೇಶ್ ಬಾಬು ಆಕ್ರೋಶ.
ವರದಿ: ಮಹಾಂತೇಶ್, ಏಷ್ಯಾನೆಟ್ ಸುವರ್ಣನ್ಯೂಸ್
ತುಮಕೂರು (ಜ.28): ವಿಧಾನಸಭೆ ಚುನಾವಣಾ ಕಾವು ದಿನೇ ದಿನೇ ಹೆಚ್ಚಾಗುತ್ತಿರುವ ಬೆನ್ನಲ್ಲೇ ರಾಜಕೀಯ ಜಟಾಪಟಿ ಹೆಚ್ಚಾಗುತ್ತಿದೆ. ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಹಾಗೂ ಜೆಡಿಎಸ್ ಅಭ್ಯರ್ಥಿ ಮಾಜಿ ಶಾಸಕ ಸುರೇಶ್ ಬಾಬು ನಡುವೆ ಮಾತಿನ ಜಟಾಪಟಿ ಶುರುವಾಗಿದೆ. ಚಿಕ್ಕನಾಯಕನಹಳ್ಳಿ ಕ್ಷೇತ್ರ ಟಾಕ್ ವಾರ್ ಜೋರಾಗಿದೆ. ಮಾಧುಸ್ವಾಮಿಗೆ ಕ್ಲಾಸ್ ಗೆ ಕ್ಲಾಸ್ ತೆಗೆದುಕೊಂಡ ಸುರೇಶ್ ಬಾಬು, ಅವರ ನಾಲಿಗೆ ಅವರ ಸ್ವಭಾವ ತೋರಿಸುತ್ತೆ ಎಂದಿದ್ದಾರೆ. ದೇವೇಗೌಡರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ, ಇದನ್ನು ಖಂಡಿಸುತ್ತೇನೆ. ಚಿಕ್ಕನಾಯಕನಹಳ್ಳಿಗೆ ಬಂದ ಕುಮಾರಸ್ವಾಮಿ ಬಂದ್ರೆ ಪ್ರಶ್ನಿಸಲು ಇವರ್ಯಾರು, ಕುಮಾರಸ್ವಾಮಿಯನ್ನು ಕ್ಷೇತ್ರಕ್ಕೆ ಬರಬೇಡ ಅಂತ ಹೇಳೋಕೆ ಇವರಿಗೆ ಯಾವುದೇ ನೈತಿಕ ಹಕ್ಕು ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.
ಈ ಹಿಂದೆ ಬೆಂಗಳೂರು ಇವರಪ್ಪನದ್ದ ಎಂದು ಸಚಿವ ಸೊಮಣ್ಣ, ಆರ್ ಅಶೋಕ್‌ಗೂ ಕೂಡ ಇವರು ಮಾತನಾಡಿದ್ದರು, ನಾವು ಅವರ ಭಾಷೆಯಲ್ಲಿಯೇ ಉತ್ತರ ನೀಡಿದ್ರೆ ನಮಗೂ ಅವರಿಗೂ ವ್ಯತ್ಯಾಸ ಇರಲ್ಲ, ಅವರ ಮಾತಿನಲ್ಲಿ ಹಿಡಿತ ಇರಬೇಕು. ನಾನು ಮಾತನಾಡಿದ್ರೆ ಯಾರು ನನ್ನ ಪ್ರಶ್ನೆ ಮಾಡಲ್ಲ ಅನ್ನೋದು ಅವರ ಮೂರ್ಖತನ, . ಕ್ಷೇತ್ರದಲ್ಲಿ ಅಭಿವೃದ್ದಿಯಾಗಲಿ ನಾವು ಮಾತನಾಡುವುದು ಬೇಡ ಅಂತ ಸುಮ್ಮನಿದ್ದೇವೆ. ಫೈಪ್ ಲೈನ್ ಮಾಡಿರುವುದೇ ದೊಡ್ಡ ಅಭಿವೃದ್ದಿ ಅಂತ ತಿಳಿದುಕೊಂಡಿದ್ದಾರೆ. ಇವರು ಪೈಪ್ ಲೈನ್ ಮಂತ್ರಿಯಾಗಿದ್ದಾರೆ, ಸಣ್ಣ ನೀರಾವರಿ ಸಚಿವರಾಗಿಲ್ಲ, ಪೈಪ್ ಲೈನ್ ಕಾಮಗಾರಿಗಳಲ್ಲಿ ದೊಡ್ಡ ಭ್ರಷ್ಟಚಾರವಾಗಿದೆ. ಅವರು ಎಲ್ಲೇ ಹೋದ್ರು ಜಗಳವಾಡೋದು ಒಂದು ಪ್ರವೃತ್ತಿ ಅಂದುಕೊಂಡಿದ್ದಾರೆ.
ನಾನು ಹೇಳಿದ್ದೆ ಕೇಳ್ಬೇಕು, ನಾನೇ ಮೇಧಾವಿ, ಎಲ್ಲರಿಕ್ಕಿಂತ ನಾನೇ ಶ್ರೇಷ್ಠ ಅಂದುಕೊಂಡಿದ್ದಾರೆ. ಮೇಧಾವಿ ಅನ್ನೋ ಬಿರುದನ್ನು ಬೇರೆಯವರು ಕೊಡ್ಬೇಕು, ಅದನ್ನು ಬಿಟ್ಟು ನಮಗೆ ನಾವೇ ಬಿರುದು ಕೊಡದಲ್ಲ, ರೈತರು,ಮಹಿಳೆಯರು ಸಮಸ್ಯೆ ಬಗ್ಗೆ ಕೇಳಿದ್ರೆ ಅವಾಚ್ಯಶಬ್ದಗಳಿಂದ ಬೈಯ್ಯೋದು ಎಷ್ಟು ಸರಿ, ಸಂಸದೀಯ ಸಚಿವರಾಗಿ ಯಾವ ತರ ಮಾತನಾಡ್ಬೇಕು ಎಂಬ ಹಿಡಿತ ನಿಮ್ಮ ನಾಲಿಗೆ ಮೇಲಿಲ್ಲ, ಸಚಿವರಾಗಿದ್ದುಕೊಂಡು ನಮ್ಮ ಕ್ಷೇತ್ರದ ಜನರಿಗೆ ಅಗೌರವ ತಂದಿರುವ ಹಲವಾರು ನಿದರ್ಶನಗಳಿವೆ. ಇಡೀ ದೇಶದಲ್ಲಿ ಕಾನೂನು ಸಚಿವರಾಗಿ ಕೋರ್ಟ್ ಮೂಲಕ ಛೀಮಾರಿ ಹಾಕಿಸಿಕೊಂಡಿರುವ ಇವರು ಮಾತ್ರ.
ವಿಶ್ವೇಶ್ವರಯ್ಯಗೆ ಪೂಜೆ ಮಾಡಿದ ಹಾಗೇ ನನ್ನ ಪೋಟೋಗೂ ಪೂಜೆ ಮಾಡಬೇಕು:
ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ನೀರಾವರಿ ಹರಿಕಾರ ನಾನು ಅಂತ ಹೇಳ್ಕೊಂಡು ಓಡಾಡ್ತಿರಾ, ನಿಮಗೆ ನೈತಿಕತೆ ಇದ್ರೆ, ನೀರಾವರಿಯಲ್ಲಿ ಮಾಡಿದ ಅಭಿವೃದ್ಧಿ ಬಗ್ಗೆ ದಾಖಲೆ ಕೊಡಿ ಎಂದು ಸವಾಲ್ ಹಾಕಿದ್ರು. ಭಾಷಣಗಳಲ್ಲಿ ವಿಶ್ವೇಶ್ವರಯ್ಯರ ಪೋಟೋ ಇಟ್ಟಂಗೆ ನನ್ನ ಪೋಟೋ ಹಾಕೊಂಡು ನಿವೆಲ್ಲಾ ಪೂಜೆ ಮಾಡ್ಬೇಕು ಅಂತಾರೆ. ವಿಶ್ವೇಶ್ವರಯ್ಯ ಅವರಿಗೆ ಹೋಲಿಸಿಕೊಳ್ಳೋಕೆ ಅವರ ಕಾಲಿನ ಧೂಳಿಗೂ ಸಮಾನವಿಲ್ಲ ನೀವು, ಸುಳ್ಳನ್ನೇ ಹತ್ತು ಸಲ ಹೇಳಿ ನಿಜ ಮಾಡ್ಬೇಕು ಅನ್ನೋ ಸ್ವಭಾವ ನಿಮ್ದು, ಕ್ಷೇತ್ರದ ಜನಕ್ಕೆ ಗೊತ್ತು, ಸುರೇಶ್ ಬಾಬು ಯಾರು, ಮಾಧುಸ್ವಾಮಿ ಯಾರು ಅಂತ, ನೀವೆನಾದ್ರು ಮುಂದೆ ಇದೆ ರೀತಿ ವೈಯಕ್ತಿಕ ನಿಂದನೆ ಮಾತನಾಡಿದ್ರೆ. ನಿಮ್ಮ ಪುರಾಣವನ್ನು ಒಂದೊಂದನ್ನ ಬಿಚ್ಚಿಡ್ಬೇಕಾಗುತ್ತೆ. ಹುಟ್ಟಿದಾಗಲೇ ನೀವೇನು ಬೃಹಸ್ಪತಿ ಅಲ್ಲ, ನೀವು ಏನೇನ್ ಮಾಡಿದ್ರಿ, ನಿಮ್ಮನ್ನ ನಂಬಿಕೊಂಡು ಬಂದವರು ಯಾವ ಸ್ಥಿತಿಗೆ ಬಂದ್ರು, ಇದೆಲ್ಲಾ ಇಂಚಿಂಚು ಗೊತ್ತಿದೆ,ನಾಲಿಗೆ ಮೇಲೆ ಹಿಡಿತ ಇರಲಿ ಎಂದು ಎಚ್ಚರಿಸಿದ್ರು.
ನಿಮ್ಮನ್ನು ಸೋಲಿಸಲು ಸಿದ್ದರಾಮಯ್ಯಬೇಕಿಲ್ಲ ನಾನೇ ಸಾಕು:
ಹಾಲು ಕುಡಿಯೋ ಮಗುವಿನ ಜೊತೆ ನಾನು ಸ್ಪರ್ಧೆ ಮಾಡ್ಬೇಕಲ್ಲ ನನ್ನ ಕರ್ಮ ಅಂತಿರಾ. ನಿಮ್ಮ ವಿರುದ್ಧ ಒಂದಲ್ಲ ಎರಡಲ್ಲ 6 ಚುನಾವಣೆ ಎದುರಿಸಿದ್ದೇನೆ. ಮೂರರಲ್ಲಿ ಸೋತಿದಿನಿ, ಮೂರರಲ್ಲಿ ಗೆದ್ದಿದ್ದೆನೆ, ಹೀಗಾಗಿ ನಿಮ್ಮನ್ನು ಸೋಲಿಸಲು ಸಿದ್ದರಾಮಯ್ಯ ಬೇಡ ನಾನೇ ಸಾಕು.
ಮಾಧುಸ್ವಾಮಿ ನನ್ನ ನನ್ನ ಬೇನಾಮಿ ಆಸ್ತಿ ಬಗ್ಗೆ ಮಾತನಾಡ್ತಾರೆ:
ಮಾಧುಸ್ವಾಮಿ ಅವರಿಗೆ ಯಾವ್ಯಾವ್ ಕಂಟ್ರಾಕ್ಟರ್ ಯಾವ್ ಕಾರ್ ಕೊಟ್ಟವರೇ, ಮಾತನ್ನೇ ಬಂಡವಾಳ ಮಾಡ್ಕೊಂಡು ಅವರನ್ನೇಲ್ಲ ಇವರ ಅಡಿಹಾಳಾಗಿ ಮಾಡ್ಕೊಂಡಿದ್ದಾರೆ. ಪಾಪದ ಹಣವನ್ನ ಉಪಯೋಗಿಸಲ್ಲ ಅಂತೀರಾ ಮೈನಿಂಗ್ ಹಣ ಪಾಪದ ಹಣ ಅಲ್ವಾ. ಇವರು ಮಾಡೋದೆಲ್ಲಾ ಅವ್ಯವಹಾರ, ಇಡೀ ಜಿಲ್ಲೆಗೆ ಇವರ ಕ್ರಷರ್ ನಿಂದ ಕಲ್ಲು ಹೋಗ್ಬೇಕು. ಇವರ ಇಟ್ಟಿಗೆ ಫ್ಯಾಕ್ಟರಿಯಿಂದನೇ ಇಟ್ಟಿಗೆಗಳು ಹೋಗ್ಬೇಕು. ಕಾಂಕ್ರೀಟ್ ಸಿಮೆಂಟ್ ಎಲ್ಲಾ ಇವರದ್ದೇ ಹೋಗ್ಬೇಕು ಇದು ಇವರ ಕಾನೂನು ಎಂದು ಹೇಳಿದರು.
ಸಚಿವ ಮಾಧುಸ್ವಾಮಿ ವಿಕೃತ ಮನಸ್ಸಿನ ಮಂತ್ರಿ: ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ
ಮಾಧುಸ್ವಾಮಿಗೆ ಸೋಲಿನ ಭೀತಿ:
ಮಾಧುಸ್ವಾಮಿ ಅವರಿಗೆ ಸೋಲಿನ ಭೀತಿ ಕಾಣ್ತಿದೆ, ನಾನು ಏನಾದ್ರು ಚುನಾವಣೆಯಲ್ಲಿ ಸೊತ್ರೆ. ಅದಕ್ಕೆ ಕಾರ್ಯಕರ್ತರೇ ಕಾರಣ ಅಂತ ಸಭೆಯಲ್ಲಿ ಅವರೇ ಹೇಳಿದ್ದಾರೆ. ನಾನು ಹಗಲು ಕಳ್ಳ ಅಂತಾರೆ, ಅವರು ರಾತ್ರಿ ಕಳ್ಳಾನಾ, ನಾನು ಹಗಲು ಕಳ್ಳನಾದ್ರೆ.ಓಪನ್ ಆಗಿ ಹೇಳ್ತಿನಿ, ನಿಮ್ಮದೇ ಸರ್ಕಾರ ಇದೆ. ನನ್ನ ಹೆಸರಲ್ಲಿ ಏನೇ ಬೇನಾಮಿ ಆಸ್ತಿ ಇದ್ರು ಮುಟ್ಟುಗೋಲು ಹಾಕಿಕೊಳ್ಳಿ ಎಂದು ಸವಾಲ್ ಹಾಕಿದ್ರು.
ASSEMBLY ELECTION: ಹಾಸನಕ್ಕೆ ಭವಾನಿ ರೇವಣ್ಣ ಅವರೇ ಸೂಕ್ತ- ಗೆದ್ದೇ ಗೆಲ್ತಾರೆ: ಸಂಸದ ಪ್ರಜ್ವಲ್ ರೇವಣ್ಣ
ಮಾಧುಸ್ವಾಮಿ ಅವರನ್ನ ನಾನು ಬಹಳ ನಂಬಿದ್ದೆ. ಸಂಸದೀಯ ಪಟು, ಇವರು ದುಡ್ಡಿನಿಂದ ಹೋಗಲ್ಲ ಅಂತ.ಇವರದ್ದೇ ಆದ ಸಿದ್ದಾಂತ ಇಟ್ಕೊಂಡಿದ್ದಾರೆ ಅಂತ ಅನ್ಕೊಂಡಿದ್ದೆ.ಈ ಮನುಷ್ಯ ಬರಗೆಟ್ಟ ದೇವರಿಗೆ ಪರೇವು ಅಂತರಲ್ಲ ಆಗೆ ಆಗಿದೆ. ಯಾವ್ದೆ ಇರ್ಲಿ ತಗೊಂಡು ಬಾ... ನಾನು ಮಾಡ್ಕೊತ್ತಿನಿ ಅನ್ನೋದು ಇವರ ಜಾಯಮಾನ ಆಗಿದೆ. ಇನ್ನು ಅವರಿಗೆ ಹೊಟ್ಟೆ ತುಂಬಿಲ್, ಸದನದಲ್ಲಿ ಟೀಕೆ ಮಾಡದನ್ನ ನೋಡಿದ್ರೆ. ಏನೋ ಬಿಡಪ್ಪ ಮಾಧುಸ್ವಾಮಿ ಒಳ್ಳೇಯವರು ಅಂತ ಜನ ಅಂತಾರೆ. ಹೀಗೆ ಮಾಧುಸ್ವಾಮಿ ವಿರುದ್ಧ ಸುರೇಶ್ ಬಾಬು ಹರಿ ಹಾಯ್ದರು.