ಹಾಸನದಲ್ಲಿ ಭವಾನಿ ರೇವಣ್ಣ ಅವರು ಗೆದ್ದೇ ಗೆಲ್ಲುತ್ತಾರೆ. ಅವರು ಈ ಕ್ಷೇತ್ರಕ್ಕೆ ಅನಿವಾರ್ಯವಾಗಿ ಸ್ಪರ್ಧೆ ಮಾಡುವುದು ಬೇಡ. ಅವರೇ ಸೂಕ್ತ ಎಂದು ನಿರ್ಧರಿಸಿ ಟಿಕೆಟ್ ನೀಡಿದರೂ ಗೆಲ್ಲುತ್ತಾರೆ.
ಹಾಸನ (ಜ.28): ಹಾಸನದಲ್ಲಿ ಭವಾನಿ ರೇವಣ್ಣ ಅವರು ಗೆದ್ದೇ ಗೆಲ್ಲುತ್ತಾರೆ. ಅವರು ಈ ಕ್ಷೇತ್ರಕ್ಕೆ ಅನಿವಾರ್ಯವಾಗಿ ಸ್ಪರ್ಧೆ ಮಾಡುವುದು ಬೇಡ. ಅವರೇ ಸೂಕ್ತ ಎಂದು ನಿರ್ಧರಿಸಿ ಟಿಕೆಟ್ ನೀಡಿದರೂ ಗೆಲ್ಲುತ್ತಾರೆ ಎಂದು ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳ ಅಭಿಪ್ರಾಯವೂ ಆಗಿದೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.
ಈ ಕುರಿತು ಹಗದೂರು ಜಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಂಸದ ಪ್ರಜ್ವಲ್ ರೇವಣ್ಣ ಅವರು, ಭವಾನಿ ರೇವಣ್ಣ ಅವರು ಗೆದ್ದೇ ಗೆಲ್ಲುತ್ತಾರೆ. ಅವರು ಈ ಕ್ಷೇತ್ರಕ್ಕೆ ಅನಿವಾರ್ಯ ಅಲ್ಲ, ಅವರೇ ಸೂಕ್ತ ಅಭ್ಯರ್ಥಿಯಾಗಿದ್ದಾರೆ. ಈ ಬಗ್ಗೆ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಕೂಡ ಹೇಳಿದ್ದಾರೆ. ಆದರೆ ನಾವು ಎಲ್ಲಾ ಆಯಾಮಗಳನ್ನು ಕೂಡ ನೋಡಬೇಕು. ಪಾಸಿಟಿವ್ ಅಥವಾ ನೆಗೆಟಿವ್ ಎಲ್ಲಾ ನೋಡಿ ತೀರ್ಮಾನ ತೆಗೆದುಕೊಳ್ಳುವ ಕೆಲಸವಾಗಬೇಕು. ಸೂರಜ್‌ರೇವಣ್ಣ ಅವರಿಗೆ ಇಲ್ಲಿ ಅವರದ್ದೆ ಆದ ಅಭಿಮಾನಿಗಳು, ಬೆಂಬಲಿಗರು ಇದ್ದಾರೆ. ಅವರು ಭವಾನಿರೇವಣ್ಣ ಗೆಲ್ಲುವುದಾಗಿ ಸಲಹೆ ಕೊಟ್ಟಿರಬಹುದು ಎಂದು ಹೇಳಿದರು.
ದಳಪತಿ ಕುಟುಂಬದಲ್ಲಿ ಟಿಕೆಟ್ ಕಾಳಗ: ಅತ್ತಿಗೆ-ಬಾಮೈದ ದಂಗಲ್‌ನಲ್ಲಿ ಗೆಲ್ಲೋದು ಯಾರು?
ನಮ್ಮ ಮನೆಯವರೇ ಪ್ರತಿಭಟನೆ ಮಾಡಬೇಕಾ? : ಪ್ರತಿಭಟನೆ ಬಗ್ಗೆ ನನಗೆ ಗೊತ್ತಿರಲಿಲ್ಲ. ಹರದೂರು ಜಾತ್ರೆ ಇತ್ತು, ದೇವಸ್ಥಾನದ ಪೂಜೆಗೆ ಹೋಗಿ ಬಂದೆ ನಾನು. ಅಲ್ಲಿಂದ ಬರುವಾಗ ಭವಾನಿರೇವಣ್ಣ ಅವರಿಗೆ ಟಿಕೆಟ್ ಕೊಡುವಂತೆ ಪ್ರತಿಭಟನೆ ಮಾಡುತ್ತಿರುವುದು ತಿಳಿಯಿತು. ನಮ್ಮ ಮನೇಲಿ ಯಾಕ್ ಶಾಮಿಯಾನ ಹಾಕಿ ಪ್ರತಿಭಟನೆ ಮಾಡ್ತಿರಾ, ಮಾಡ್ಬೇಡಿ ಅಂತ ಹೇಳಿದೆ. ಆದರೆ, ನೀವು ಬರಲೇಬೇಕು, ಅಲ್ಲಿಯವರೆಗು ಮೌನ ಪ್ರತಿಭಟನೆ ಮಾಡುತ್ತೇವೆ ಎಂದರು. ಕಾರ್ಯಕರ್ತರು ಭವಾನಿ ರೇವಣ್ಣ ಅವರ ಮೇಲಿನ ಅಭಿಮಾನದಿಂದಾಗಿ ಪ್ರತಿಭಟನೆ ಮಾಡಿದ್ದಾರೆ. ಆದರೆ, ಕೂತ್ಕಂಡು ಚರ್ಚೆ ಮಾಡೋಣ ಅಂತಾ ಹೇಳಿದ್ದೀನಿ. ಆದರೂ ಹಠ ಮಾಡ್ಕಂಡು ಪ್ರತಿಭಟನೆಗೆ ಕೂತ್ಕಂಡಿದ್ದಾರೆ. ಎಲ್ಲರನ್ನೂ ಕರೆಸಿ ಮಾತನಾಡುವುದಾಗಿ ಹೇಳಿದ್ದೇನೆ ಎಂದು ತಿಳಿಸಿದರು.
ನನಗೂ ಅಭಿಮಾನಿಗಳು ಬಂದು ಹೇಳುತ್ತಾರೆ: ನನಗೂ ಸಾವಿರಾರು ಜನ ಬಂದು ಹೇಳುತ್ತಾರೆ. ಸರ್ ಭವಾನಿ ರೇವಣ್ಣ ಅವರು ಇಲ್ಲಿ ಸ್ಪರ್ಧೆ ಮಾಡಿದರೆ ಹೀಗೆ ಆಗುತ್ತದೆ. ಆ ರೀತಿ ಒಂದು ಲಾಭಗಳಾಗಬಹುದು ಈ ತರ ನಷ್ಟ ಆಗಬಹುದು ಎಂದು ಚರ್ಚೆ ಮಾಡಿದ್ದಾರೆ. ಇನ್ನು ಮಾಜಿ ಸಚಿವ ಎಚ್.ಡಿ. ರೇವಣ್ಣ ಸಾಹೇಬ್ರಿಗೆ ಅವರದ್ದೇ ಆದಂತಹ ಜನ ಇದ್ದಾರೆ. ಅವರು ಮೊದಲಿನಿಂದ ನಡೆಸಿಕೊಂಡು ಬಂದಿರುವ ಜಿಲ್ಲೆ ಇದು
ಅವರದ್ದೇ ಆದಂತಹ ಒಪಿನಿಯನ್ಸ್ ಇರುತ್ತಚೆ. ಆ ಎಲ್ಲ ಅಭಿಪ್ರಾಯಗಳನ್ನು ತಿಳಿದುಕೊಂಡು ನಂತರ ಕೂತ್ಕಂಡು ಚರ್ಚಿಸಿ ತೀರ್ಮಾನ ಮಾಡುತ್ತಾರೆ. ಪ್ರತಿ ಸಾರಿನೂ ಯಾವಾಗಲೂ ದೇವೇಗೌಡರು ಬಂದು ತೀರ್ಮಾನ ಮಾಡ್ತಾರೆ. ಈಗ ಅವರ ಆರೋಗ್ಯ ಸಮಸ್ಯೆ ಇರುವುದರಿಂದ ಎಲ್ಲರೂ ಅವರು ಬರುವುದನ್ನು ಕಾಯ್ತಾ ಇದ್ದೇವೆ. ಅವರು ಬಂದ ಮೇಲೆ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ಹಾಸನ ವಿಚಾರದಲ್ಲಿ ತಲೆ ಹಾಕಬೇಡಿ: ಹೆಚ್‌ಡಿಕೆಗೆ ಸೂರಜ್ ರೇವಣ್ಣ ತಿರುಗೇಟು
ಟಿಕೆಟ್ ಹಂಚಿಕೆ ಘೋಷಿಸಲು ಇನ್ನೂ ಟೈಂ ಇದೆ: ದೇವೇಗೌಡ ಅವರು ಹಾಸನಕ್ಕೆ ಬರುವುದಾಗಿ ಹೇಳುತ್ತಿದ್ದಾರೆ. ಹಾಸನಕ್ಕೆ ಬಂದು ಎಲ್ಲಾ ಶಾಸಕರು, ರೇವಣ್ಣ ಸಾಹೇಬರನ್ನು ಕೂರಿಸಿಕೊಂಡು, ಅವರೂ ಕೂತ್ಕಂಡು ಚರ್ಚೆ ಮಾಡುತ್ತಾರೆ. ಚುನಾವಣೆಗೆ ಇನ್ನೂ ಸಮಯ ಇದೆ. ಈಗಲೇ ಟಿಕೆಟ್ ಹಂಚಿಕೆಯ ಬಗ್ಗೆ ಇಷ್ಟೊಂದು ಯಾಕೆ ತಲೆಕೆಡಿಸಿಕೊಳ್ಳಲು ಹೋಗಬೇಕು. ನಮಗೆ ಇದರಿಂದ ಏನು ತೊಂದರೆ ಆಗಲ್ಲ. ಎಲ್ಲಾ ಸರಿಪಡಿಸಿಕೊಂಡು ಹೋಗುವ ಕೆಲಸ ಮಾಡುತ್ತೇವೆ. ನಮ್ಮ ಪಕ್ಷದಲ್ಲಿ ಯಾವುದೇ ಸಂದರ್ಭದಲ್ಲಿ ಏನೇ ಡ್ಯಾಮೇಜ್‌ಗಳು ಇದ್ದರೂ ಚುನಾವಣೆ ಬಂದಾಗ ನಾವೆಲ್ಲ ಒಂದೇ ಬಾವುಟದ ಕೆಳಗೆ ಇರುತ್ತೇವೆ. ಇದಕ್ಕೆಲ್ಲ ತಲೆಕೆಡಿಸಿಕೊಳ್ಳುವುದು ಬೇಡ ಎಂದರು.
ಎಂಎಲ್‌ಎ ಭವಾನಿ ರೇವಣ್ಣಗೆರ ಜೈ ಎಂದ ಜನರು: ಹಾಸನದಲ್ಲಿ ಮುಂದಿನ ಎಂಎಲ್‌ಎ ಭವಾನಿ ರೇವಣ್ಣ ಎಂಬ ಘೊಷಣೆ ಮೊಳಗಿತು. ಹಾಸನದ ಆಟೊ ಚಾಲಕರ ಸಂಘದ ಕಾರ್ಯಕ್ರಮದಲ್ಲಿ ಘೋಷಣೆ ಮೊಳಗಿದೆ. ಮುಂದಿನ ಎಂಎಲ್ ಎ ಭವಾನಿಗೆ ಜೈ ಎಂದ ಮಹಿಳಾ ಅಭಿಮಾನಿಗಳು. ಮಜ್ದೂರ್ ಆಟೋ ಚಾಲಕರ ಸಂಘದ ಮೊದಲ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಮ್ಮ ಪುತ್ರರಿಬ್ಬರ ಜೊತೆ ಭಾಗಿಯಾಗಿದ್ದ ಭವಾನಿ ರೇವಣ್ಣ ಅವರಿಗೆ ಮುಂದಿನ ಶಾಸಕಿ ಎಂದು ಘೋಷಣೆ ಕೂಗಿದರು. ಈ ಕಾರ್ಯಕ್ರಮ ಮುಗಿಸಿ ಅನ್ನ ಸಂತರ್ಪಣೆ ಮುಗಿಸಿ ಅಲ್ಲಿಂದ ಹೊರಟರು.