ಬಿಜೆಪಿ ಸರ್ಕಾರದಲ್ಲಿ ರಾಜ್ಯ ಹೆಚ್ಚು ಅಭಿವೃದ್ಧಿ ಆಗಿದೆ; ಕಾಂಗ್ರೆಸ್ ಅವಧಿಯಲ್ಲಿ ರೈತರ ಆತ್ಮಹತ್ಯೆ ಅಧಿಕ: ನಿರ್ಮಲಾ ಸೀತಾರಾಮನ್

Published : Apr 06, 2023, 01:28 PM ISTUpdated : Apr 06, 2023, 03:28 PM IST
ಬಿಜೆಪಿ ಸರ್ಕಾರದಲ್ಲಿ ರಾಜ್ಯ ಹೆಚ್ಚು ಅಭಿವೃದ್ಧಿ ಆಗಿದೆ; ಕಾಂಗ್ರೆಸ್ ಅವಧಿಯಲ್ಲಿ ರೈತರ ಆತ್ಮಹತ್ಯೆ ಅಧಿಕ: ನಿರ್ಮಲಾ ಸೀತಾರಾಮನ್

ಸಾರಾಂಶ

ಚುನಾವಣೆ ಘೊಷಣೆ ಬಳಿಕ ನಾನು ಕರ್ನಾಟಕಕ್ಕೆ ಬಂದಿದ್ದೇನೆ. ಕರ್ನಾಟಕ ಬಿಜೆಪಿ, ಹೇಗೆ ನಿರ್ವಹಣೆ ಮಾಡ್ತಿದೆ ಅನ್ನೋದು ಬೇರೆ ಪಕ್ಷಗಳ ಜೊತೆ ತುಲನಾತ್ಮಕವಾಗಿ ನೋಡಿ. ಬಿಜೆಪಿ ಜೊತೆ ಯುವಕರು ಹೇಗೆ ಇದ್ದಾರೆ ಎಂದೂ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ಬೆಂಗಳೂರು (ಏಪ್ರಿಲ್ 6, 2023): ಮೋದಿ ಸರ್ಕಾರದ ಅವಧಿಯಲ್ಲಿ ಭಾರತ ಹೆಚ್ಚು ಅಭಿವೃದ್ಧಿಯಾಗಿದೆ. ಇದೇ ರೀತಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಕರ್ನಾಟಕ ಸಹ ಸಾಕಷ್ಟು ಅಭಿವೃದ್ಧಿಯಾಗಿದೆ, ಈ ಬಗ್ಗೆ ಕಳೆದ ಹದಿನೈದು ದಿನಗಳ ಡೇಟಾ ತೆಗೆದು ನೋಡಿ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಬೆಂಗಳೂರಿನಲ್ಲಿ ಹೇಳಿದ್ದಾರೆ. 

ಚುನಾವಣೆ ಘೋಷಣೆ ಬಳಿಕ ನಾನು ಕರ್ನಾಟಕಕ್ಕೆ ಬಂದಿದ್ದೇನೆ. ಕರ್ನಾಟಕ ಬಿಜೆಪಿ, ಹೇಗೆ ನಿರ್ವಹಣೆ ಮಾಡ್ತಿದೆ ಅನ್ನೋದು ಬೇರೆ ಪಕ್ಷಗಳ ಜೊತೆ ತುಲನಾತ್ಮಕವಾಗಿ ನೋಡಿ. ಬಿಜೆಪಿ ಜೊತೆ ಯುವಕರು ಹೇಗೆ ಇದ್ದಾರೆ ಎಂದೂ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. ಇನ್ನು, 7 ಬಾರಿ ಪ್ರಧಾನಿಗಳು ಕರ್ನಾಟಕಕ್ಕೆ ಭೇಟಿ ನೀಡಿದ್ದಾರೆ. ಮೋದಿ ಅವರು ಏಪ್ರಿಲ್ 9 ರಂದು 8ನೇ ಬಾರಿ ಬರ್ತಿದ್ದಾರೆ ಎಂದೂ ಕೇಂದ್ರ ಸಚಿವೆ ಮಾಹಿತಿ ನೀಡಿದ್ದಾರೆ.

ಇದನ್ನು ಓದಿ: ಡೆಟಾಲ್‌ನಿಂದ ಮುಖ ತೊಳೆಯಿರಿ: ಕಾಂಗ್ರೆಸ್‌ಗೆ ನಿರ್ಮಲಾ ಸೀತಾರಾಮನ್‌ ಚಾಟಿ

ಇನ್ನು, ಸಂಕಷ್ಟದಲ್ಲಿದ್ದಾಗ ಮೋದಿಯವರು ರಾಜ್ಯಕ್ಕೆ ಬಂದಿಲ್ಲ, ಚುನಾವಣೆ ವೇಳೆ ಬರ್ತಾರೆ ಎಂಬ ಕಾಂಗ್ರೆಸ್‌ನವರ ಆರೋಪ ವಿಚಾರದ ಬಗ್ಗೆಯೂ ನಿರ್ಮಲಾ ಸೀತಾರಾಮನ್‌ ಮಾತನಾಡಿದ್ದು, ಕೈಗೆ ತಿರುಗೇಟು ಕೊಟ್ಟಿದ್ದಾರೆ. ಈ ಆರೋಪದಲ್ಲಿ ಹುರುಳಿಲ್ಲ, 2015 ರಿಂದ 2022 ರವರೆಗೆ 32 ಸಲ ಬಂದಿದ್ದಾರೆ. 32 ಸಲ ರಾಜ್ಯದಲ್ಲಿ ಚುನಾವಣೆ ಬಂದಿದ್ಯಾ. ಆರೋಪ ಮಾಡಬೇಕು ಅಂತ ಮಾಡ್ತಾರೆ ಅಷ್ಟೇ ಎಂದು ಕಾಂಗ್ರೆಸ್‌ ಪಕ್ಷಕ್ಕೆ ನಿರ್ಮಲಾ ಸೀತಾರಾಮನ್ ತಿರುಗೇಟು ನೀಡಿದ್ದಾರೆ. 

ಹಣಕಾಸು ಸಚಿವರ ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರ್ ಸಭೆ ನಡೆದಿದ್ದು, ಭಾರತದ ಹಣಕಾಸು ವಿಚಾರವಾಗಿ ಚರ್ಚೆ ಮಾಡಿದ್ದೇವೆ. ಹಾಗೆ, ಮೋದಿ, ಅಮಿತ್ ಶಾ ಎಲ್ಲರೂ ಕೂಡ ಕರ್ನಾಟಕ ವಿಚಾರವಾಗಿ ಚರ್ಚೆ ಮಾಡಿದ್ದಾರೆ ಎಂದೂ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. 

ಇದನ್ನೂ ಓದಿ: ಅದಾನಿ ಕೇಸಿಂದ ಆರ್ಥಿಕತೆಗೆ ಪೆಟ್ಟಿಲ್ಲ: ನಿರ್ಮಲಾ ಸೀತಾರಾಮನ್‌; ಮೋದಿಗೆ 3 ಪ್ರಶ್ನೆ ಕೇಳಿದ ಕಾಂಗ್ರೆಸ್‌

ಅಲ್ಲದೆ, ಕಳೆದ ಹದಿನೈದು ದಿನಗಳ ಡೇಟಾ ತೆಗೆದು ನೋಡಿ. ಭಾರತ ಎಷ್ಟು ಡೆವಲಪ್ ಆಗಿದೆ, ಕರ್ನಾಟಕ ಕೂಡ ಸಾಕಷ್ಟು ಅಭಿವೃದ್ಧಿ ಆಗಿದೆ‌. ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಮಾಡಲಾಗಿದೆ. 8 ಸಾವಿರ ಕೋಟಿ ರೂ. ಯಲ್ಲಿ ಆರು ಪಥದ ಉನ್ನತ ರಸ್ತೆ ನಿರ್ಮಾಣ ಮಾಡಲಾಗಿದೆ. ಮೈಸೂರು-ಕುಶಾಲನಗರ 4,113 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಆಗಲಿದೆ. 2014-2023 ವರೆಗೂ ಕೋಟ್ಯಂತರ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಆಗಿದೆ. ರೈಲ್ವೇ ಡಬಲಿಂಗ್ ಮತ್ತು ನಿಲ್ದಾಣದಲ್ಲಿ ದಾಖಲೆ ಆಗಿದೆ. ಸಿದ್ದಾರೂಡ ರೈಲ್ವೇ ನಿಲ್ದಾಣ 1,517 ಮೀಟರ್ ರೈಲ್ವೆ ಸ್ಟೇಷನ್ ಉದ್ಘಾಟನೆ ಆಗಿದೆ.

ಇದು ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಕೂಡ ಆಗಿದೆ ಎಂದು ನಿರ್ಮಲಾ ಸೀತಾರಾಮನ್‌ ಇತ್ತೀಚಿನ ರಾಜ್ಯದ ಅಭಿವೃದ್ಧಿ ಬಗ್ಗೆ ಮಾತನಾಡಿದ್ದಾರೆ. ಹಾಗೆ, ಬಿಜೆಪಿಯ ಇತಿಹಾಸ ನೋಡಿ, ತುರ್ತು ಪರಿಸ್ಥಿತಿಯಲ್ಲಿ ಅನೇಕರು ಬಂಧನವಾದ್ರು. ಬಂಧನ ಆದವರನ್ನ ಜೈಲಿನಲ್ಲಿ ಇಟ್ಟಿದ್ರು. ವಿವಿಧ ರೀತಿಯ ಕಾನೂನು ಹೇರಿದ್ರು. ವಿಪಕ್ಷ ನಾಯಕರುಗಳನ್ನ ಬಂಧನ ಮಾಡಿ, ಒಳಗೆ ಇಟ್ಟಿದ್ರು. ತುರ್ತು ಪರಿಸ್ಥಿತಿಯಲ್ಲಿ ಕರ್ನಾಟಕ ಬಿಜೆಪಿಯ ಕಾರ್ಯ ಮೆಚ್ಚುವಂತದ್ದು. ಆ ದಿನಗಳ ಬಿಜೆಪಿ ಕಾರ್ಯ ಯಾರೂ ಮರೆಯುವಂತಿಲ್ಲ ಎಂದು ತುರ್ತು ಪರಿಸ್ಥಿತಿಯ ದಿನಗಳನ್ನು ನಿರ್ಮಲಾ ಸೀತಾರಾಮನ್‌ ಹೇಳಿದ್ರು. 

ಇದನ್ನೂ ಓದಿ: ಅದಾನಿ ಸಮೂಹದ ಬಗ್ಗೆ ಮಾರುಕಟ್ಟೆ ನಿಯಂತ್ರಕರ ನಿಗಾ; ದೇಶದ ಇಮೇಜ್‌ಗೆ ಧಕ್ಕೆ ಇಲ್ಲ: ನಿರ್ಮಲಾ ಸೀತಾರಾಮನ್

ಇನ್ನು, ರೈತರ ಆತ್ಮಹತ್ಯೆ ಬಗ್ಗೆ ಮಾತನಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಕಾಂಗ್ರೆಸ್ ಅವಧಿಯಲ್ಲಿ ರೈತರ ಆತ್ಮಹತ್ಯೆ ಬಹಳಷ್ಟಿತ್ತು. ಯುಪಿಎ ಈಗ ಹೇಳ್ತಿದೆ ಓ ರೈತರ ಆತ್ಮಹತ್ಯೆಯ ಜಾಸ್ತಿ ಆಗಿದೆ, ರೈತರನ್ನ ಕಡೆಗಣಿಸಿದೆ ಅಂತ ಹೇಳ್ತಿದ್ದಾರೆ. ಆದರೆ, ಹಳೆಯದನ್ನ ಕಾಂಗ್ರೆಸ್ ಮರೆತಿದೆ ಎಂದೂ ನಿರ್ಮಲಾ ಸೀತಾರಾಮನ್ ಬೆಂಗಳೂರಿನಲ್ಲಿ ಹೇಳಿದ್ದಾರೆ.
 

ಈ ಮಧ್ಯೆ, ಆಧಾರ್ - ಪ್ಯಾನ್ ಲಿಂಕ್‌ಗೆ ದಂಡ ಹಾಕುತ್ತಿರುವುದನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಮರ್ಥಿಸಿಕೊಂಡಿದ್ದಾರೆ. ಲಿಂಕ್‌ ಮಾಡಲು ಮೊದಲೇ ಸಮಯ ಕೊಡಲಾಗಿತ್ತು, ಅವಕಾಶ ಇದ್ದಾಗ ಆಧಾರ್ - ಪ್ಯಾನ್ ಲಿಂಕ್ ಮಾಡಬೇಕಿತ್ತು. ಗಡುವು ಮುಗಿದ ಮೇಲೆ ದಂಡ ಹಾಕಲಾಗಿದೆ. ಈಗ ದಂಡ ಕಟ್ಟಿ ಲಿಂಕ್ ಮಾಡಬೇಕಿದೆ. ಇನ್ನು, ಈ‌ ಗಡುವೂ‌ ಮುಗಿದರೆ ದಂಡದ ಪ್ರಮಾಣ ಮತ್ತಷ್ಟು ಹೆಚ್ಚಾಗಲಿದೆ. ಇದು ಅನಿವಾರ್ಯ, ಕಾನೂನಾತ್ಮಕವಾಗಿಯೇ ದಂಡ ವಿಧಿಸಲಾಗಿದೆ ಎಂದೂ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಗ್ರಾಪಂ ಅಧ್ಯಕ್ಷರೂ ಮತ್ತು ಹಸಿರು ಪೆನ್ನೂ...!
Karnataka News Live: ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!