ಕೈ -ಕೈ ಮಿಲಾಯಿಸಿದರೂ ಸಿಗಲಿಲ್ಲ ಕೈ ಟಿಕೆಟ್: ತಟ್ಟುವುದೇ ಬಂಡಾಯದ ಬಿಸಿ

By Sathish Kumar KH  |  First Published Apr 6, 2023, 12:48 PM IST

ಕಾಂಗ್ರೆಸ್‌ ಟಿಕೆಟ್‌ಗಾಗಿ ಭಾರಿ ಲಾಭಿ ನಡೆಸಿದ್ದರೂ ಸಿಗದ ಹಲವು ನಾಯಕರು ಕಾಂಗ್ರೆಸ್‌ ವಿರುದ್ಧ ಬಂಡಾಯ ಏಳುವರೇ ಎನ್ನುವ ಅನುಮಾನ ಕಾಡುತ್ತಿದೆ.


ಬೆಂಗಳೂರು (ಏ.06): ಕಾಂಗ್ರೆಸ್‌ ಟಿಕೆಟ್‌ಗಾಗಿ ಭಾರಿ ಲಾಭಿ ನಡೆಸಿದ್ದರೂ ಸಿಗದ ಹಲವು ನಾಯಕರು ಕಾಂಗ್ರೆಸ್‌ ವಿರುದ್ಧ ಬಂಡಾಯ ಏಳುವರೇ ಎನ್ನುವ ಅನುಮಾನ ಕಾಡುತ್ತಿದೆ. ಅದರಲ್ಲಿ ಪ್ರಮುಖವಾಗಿ ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿ ಸೋತವರಿಗೆ ಈ ಬಾರಿ ಬಹುತೇಕವಾಗಿ ಟಿಕೆಟ್‌ ಕೊಟ್ಟಿಲ್ಲ. 

ಯೋಗೇಶ್‌ಬಾಬು ಗಲಾಟೆಗೆ ಬಗ್ಗದ ಕೈ ನಾಯಕರು: ಇತ್ತೀಚೆಗೆ ಬಿಜೆಪಿ ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಕಾಂಗ್ರೆಸ್‌ ಸೇರ್ಪಡೆ ಆಗಿದ್ದ ಎನ್.ವೈ. ಗೋಪಾಲಕೃಷ್ಣ ಅವರಿಗೆ ಮೊಳಕಾಲ್ಮೂರು ಕ್ಷೇತ್ರದಿಂದ ಟಿಕೆಟ್‌ ನೀಡಲಾಗಿದೆ. ಆದರೆ, ಕಳೆದ ಬಾರಿ ಸಚಿವ ಶ್ರೀರಾಮುಲು ವಿರುದ್ಧ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋತಿದ್ದ ಯೋಗೇಶ್‌ಬಾಬು ಈ ಬಾರಿಯೂ ತಮಗೇ ಟಿಕೆಟ್‌ ನೀಡಬೇಕು ಎಂದು ಪಟ್ಟು ಹಿಡಿದಿದ್ದರು. ಹೀಗಾಗಿ, ಗೋಪಾಲಕೃಷ್ಣ ಕಾಂಗ್ರೆಸ್‌ ಸೇರ್ಪಡೆ ಆಗುವ ದಿನದಂದು ಕೆಪಿಸಿಸಿ ಕಚೇರಿ ಮುಂದೆ ಭಾರಿ ಗಲಾಟೆಯನ್ನೂ ಮಾಡಿಸಿದ್ದನು. ಆದರೆ, ಈಗ ಟಿಕೆಟ್‌ ಕೈತಪ್ಪಿದ್ದು, ಅವರ ನಡೆ ಬದಲಾಗುವುದೇ ನೋಡಬೇಕಿದೆ.

Tap to resize

Latest Videos

ಕಾಂಗ್ರೆಸ್‌ 2ನೇ ಪಟ್ಟಿ ಬಿಡುಗಡೆ: 42 ಕ್ಷೇತ್ರಗಳ ಅಭ್ಯರ್ಥಿಗಳು ಇಲ್ಲಿದ್ದಾರೆ ನೋಡಿ..

ದತ್ತಾ ನಂಬಿಕೆ ಹುಸಿಗೊಳಿಸಿದ ಕಾಂಗ್ರೆಸ್: ಇತ್ತೀಚೆಗೆ ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಹೋಗಿದ್ದ ಕಡೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ವೈ.ಎಸ್.ವಿ. ದತ್ತಾ ಅವರಿಗೆ ಟಿಕೆಟ್‌ ಕೊಡುವಲ್ಲಿ ಕಾಂಗ್ರೆಸ್‌ ಕೈಕೊಟ್ಟಿದೆ. ಆದರೆ, ಕಳೆದ ಬಾರಿ ಜೆಡಿಎಸ್‌ನಿಂದ ಸೋತು ಸುಣ್ಣವಾಗಿದ್ದ ದತ್ತಾ ಅವರು, ಕಾಂಗ್ರೆಸ್‌ನಿಂದಾದರೂ ಗೆಲ್ಲೋಣ ಎಂದು ನಿರೀಕ್ಷೆ ಮಾಡಿದ್ದರು. ಆದರೆ, ಅವರ ನಂಬಿಕೆಯನ್ನು ಕಾಂಗ್ರೆಸ್‌ ಹುಸಿಗೊಳಿಸಿದೆ.

ಕೈ ಟಿಕೆಟ್‌ ತಪ್ಪಿಸಿಕೊಂಡ ಪ್ರಮುಖ ನಾಯಕರು: 
ವೈ. ಎಸ್. ವಿ ದತ್ತ- ಕಡೂರು
ವಡ್ನಾಳ್ ರಾಜಣ್ಣ- ಚನ್ನಗಿರಿ
ರಘು ಆಚಾರ್- ಚಿತ್ರದುರ್ಗ
ಮಂಜುನಾಥಗೌಡ- ತೀರ್ಥಹಳ್ಳಿ
ಯೋಗೀಶ್ ಬಾಬು- ಮೊಳಕಾಲ್ಮೂರು
ನಾಗರಾಜ್ ಛಬ್ಬಿ- ಕಲಘಟಗಿ
ಎಚ್.ಆರ್. ಶ್ರೀನಾಥ್ - ಗಂಗಾವತಿ

ಕಲಘಟಗಿ ಬಿಟ್ಟುಕೊಡದ ಲಾಡ್‌: ರಾಜ್ಯದಲ್ಲಿ ಸಂಡೂರು ಮೂಲದ ಸಂತೋ‍ಷ್‌ ಲಾಡ್‌ ಅವರು ಕಲಘಟಗಿಯಲ್ಲಿ ಬಂದು ಸ್ಪರ್ಧೆ ಮಾಡುವುದು ಬೇಡ ಎಂದು ಸ್ಥಳೀಯ ಕಾಂಗ್ರೆಸ್ ಮುಖಂಡ ನಾಗರಾಜ್‌ ಛಬ್ಬಿ ಅವರು ಪಟ್ಟು ಹಿಡಿದಿದ್ದರು. ಇದಕ್ಕೆ ಸಂತೋಷ್‌ ಲಾಡ್‌ ಯಾವುದೇ ಪ್ರತಿಕ್ರಿಯೆ ನೀಡದೇ ಕಾಂಗ್ರೆಸ್‌ ಹೈಕಮಾಂಡ್‌ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಟಿಕೆಟ್‌ ಪಡೆಯುವಲ್ಲಿ ಯಶಸ್ವಿ ಆಗಿದ್ದಾರೆ.

ಗಂಗಾವತಿ ಅಭ್ಯರ್ಥಿ ಟಿಕೆಟ್‌ ಬದಲಿಸಿ: ಕೊಪ್ಪಳದ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಇಕ್ಬಾಲ್ ಅನ್ಸಾರಿಗೆ ಕಾಂಗ್ರೆಸ್ ಟಿಕೆಟ್ ಘೋಷಣೆ ಬೆನ್ನಲ್ಲೇ ಅಸಮಾಧಾನ ಭುಗಿಲೆದ್ದಿದೆ. ಟಿಕೆಟ್ ವಂಚಿತ ಹೆಚ್.ಆರ್ ಶ್ರೀನಾಥ್ ರಿಂದ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಿದ ಶ್ರೀನಾಥ್‌ ಟಿಕೆಟ್ ಮೀಸ್ ಆಗಿದ್ದಕ್ಕೆ ಬೇಸರವಿದೆ. ಮುಂದೆ ಬೆಂಬಲಿಗರ ಸಭೆ ಕರೆದು ತೀರ್ಮಾನ ಕೈಗೊಳ್ಳುತ್ತೇನೆ. ಇನ್ನು ಸಮಯ ಇದೆ, ಹೈಕಮಾಂಡ್ ಅಭ್ಯರ್ಥಿ ಬದಲಾವಣೆ ಮಾಡಬೇಕು. ಗಂಗಾವತಿ ಬದಲಿಗೆ ರಾಯಚೂರು ಕ್ಷೇತ್ರಕ್ಕೆ ಅಲ್ಪಸಂಖ್ಯಾತ ಅಭ್ಯರ್ಥಿ ಘೋಷಣೆ ಮಾಡಲಿ ಎಂದು ಗಂಗಾವತಿಯಲ್ಲಿ ಮಾಜಿ ವಿಧಾನ ಪರಿಷತ್‌ ಸದಸ್ಯ ಹೆಚ್.ಆರ್ ಶ್ರೀನಾಥ್ ಹೇಳಿದ್ದಾರೆ. 

ಶಿಗ್ಗಾವಿ ವಿನಯ್‌ ಕುಲಕರ್ಣಿಗಿಲ್ಲ ಟಿಕೆಟ್: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಹಾವೇರಿ ಜಿಲ್ಲೆಯ ಶಿಗ್ಗಾವಿ ಕ್ಷೇತ್ರದಿಂದ ವಿನಯ್‌ ಕುಲಕರ್ಣಿ ಅವರು ಸ್ಪರ್ಧೆ ಮಾಡುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ, ಈಗ ಅವರಿಗೆ ಧಾರವಾಡದಿಂದ ಸ್ಪರ್ಧೆ ಮಾಡಲು ಟಿಕೆಟ್‌ ಘೋಷಣೆ ಮಾಡಲಾಗಿದೆ. ಇನ್ನು ಸಿಎಂ ಬೊಮ್ಮಾಯಿ ವಿರುದ್ಧ ಯಾರು ಸ್ಪರ್ಧೆ ಮಾಡಲಿದ್ದಾರೆ ಎಂಬುದನ್ನು 2ನೇ ಪಟ್ಟಿಯಲ್ಲೂ ತಿಳಿಸಿಲ್ಲ. ಇನ್ನು 3ನೇ ಪಟ್ಟಿಯಲ್ಲಿ ಅರ್ಹ ಅಭ್ಯರ್ಥಿಯನ್ನು ಹಾಕಲು ಕೈ ಹೈಕಮಾಂಡ್‌ ನಾಯಕರು ಚಿಂತನೆ ನಡೆಸಿದ್ದಾರೆ. 

ಏ.8ಕ್ಕೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ರಿಲೀಸ್‌: ಸಿಎಂ ಬೊಮ್ಮಾಯಿ ಮಾಹಿತಿ

ವಯಸ್ಸಾಗಿದೆ ಎಂದರೂ ಬಿಡದ ಕಾಂಗ್ರೆಸ್‌: ಅಫ್ಜಲ್ ಪುರ ವಿಧಾನಸಭಾ ಕ್ಷೇತ್ರದಿಂದ ನಾನು ಈ ಬಾರಿ ಸ್ಪರ್ಧೆ ಮಾಡುವುದಿಲ್ಲ. ನನಗೆ ವಯಸ್ಸಾಗಿದ್ದು, ನನ್ನ ಮಗನಿಗೆ ಟಿಕೆಟ್‌ ಕೊಡಿ ಎಂದರೂ ಪುನಃ ಶಾಸಕ ಎಂ.ವೈ. ಪಾಟೀಲ್‌ಗೆ ಟಿಕೆಟ್‌ ಘೋಷಣೆ ಮಾಡಲಾಗಿದೆ. ಇನ್ನು ಇವರನ್ನು ಹಾಲಿ ಶಾಸಕರೆಂದು ಪರಿಗಣಿಸಿ ಟಿಕೆಟ್‌ ನೀಡಲಾಗಿದೆ ಎಂದು ತಿಳಿದುಬಂದಿದೆ. ಮೊದಲ ಪಟ್ಟಿಯಲ್ಲಿ ತಪ್ಪಿದರೂ 2ನೇ ಪಟ್ಟಿಯಲ್ಲಿ ಶಾಸಕ ಎಂವೈ ಪಾಟೀಲ್ ಟಿಕೆಟ್ ಪಡೆದಿದ್ದಾರೆ. ನನಗೆ ಟಿಕೆಟ್ ಬೇಡ ಎಂದು ವಿದಾಯದ ಭಾಷಣ ಮಾಡಿದ್ದರು. 

click me!