ಕಾಂಗ್ರೆಸ್‌ ಜಾತಿ ಲೆಕ್ಕ : 166 ಕ್ಷೇತ್ರಗಳಲ್ಲಿ ಲಿಂಗಾಯತರು ರಾಕ್‌- ಕುರುಬ ಸಮುದಾಯಕ್ಕೆ ಕೊಕ್‌

By Sathish Kumar KHFirst Published Apr 6, 2023, 1:15 PM IST
Highlights

ರಾಜ್ಯ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಎರಡನೇ ಪಟ್ಟಿ ಸೇರಿ ಒಟ್ಟು 166 ಕ್ಷೇತ್ರಗಳ ಅಭ್ಯರ್ಥಿ ಹೆಸರನ್ನು ಘೋಷಣೆ ಮಾಡಲಾಗಿದೆ. ಈ ಪೈಕಿ ಲಿಂಗಾಯ ಸಮುದಾಯಕ್ಕೆ ಮಣೆ ಹಾಕಲಾಗಿದೆ.

ಬೆಂಗಳೂರು (ಏ.06): ರಾಜ್ಯ ವಿಧಾನಸಭೆ ಚುನಾವಣೆಗೆ ಅಖಾಡ ಸಜ್ಜಾಗುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಎರಡನೇ ಪಟ್ಟಿ ಸೇರಿ ಒಟ್ಟು 166 ಕ್ಷೇತ್ರಗಳ ಅಭ್ಯರ್ಥಿ ಹೆಸರನ್ನು ಘೋಷಣೆ ಮಾಡಲಾಗಿದೆ. ಈ ಪೈಕಿ ಲಿಂಗಾಯ ಸಮುದಾಯದ ಅಭ್ಯರ್ಥಿಗಳಿಗೆ ಹೆಚ್ಚಿನ ಮಣೆ ಹಾಕಲಾಗಿದೆ.

ಕರ್ನಾಟಕದಲ್ಲಿ ಒಟ್ಟು 224 ವಿಧಾನಸಭಾ ಕ್ಷೇತ್ರಗಳಿವೆ. ಈ ಪೈಕಿ ಕಾಂಗ್ರೆಸ್‌ ಮೊದಲ ಹಂತದಲ್ಲಿ 124 ಹಾಗೂ 2ನೇ ಹಂತದಲ್ಲಿ 42 ಅಭ್ಯರ್ಥಿಗಳ ಪಟ್ಟಿ ಸೇರಿ ಒಟ್ಟು 166 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದೆ. ಅದರಲ್ಲಿ ಅತಿಹೆಚ್ಚು ಲಿಂಗಾಯತ ಸಮುದಾಯಕ್ಕೆ ಕಾಂಗ್ರೆಸ್‌ ಮಣೆ ಹಾಕಿರುವುದು ಸ್ಪಷ್ಟವಾಗಿ ಕಂಡುಬಂದಿದೆ. ಇನ್ನು ಅತಿಹೆಚ್ಚು ಟಿಕೆಟ್‌ಗಳನ್ನು ನೀಡಬೇಕು ಎಂದು ಪಟ್ಟಿ ಹಿಡಿದಿದ್ದ ಲಿಂಗಾಯತ ಸಮುದಾಯವನ್ನು ತಣಿಸುವ ಕಾರ್ಯವನ್ನು ಕಾಂಗ್ರೆಸ್‌ ಮಾಡಿದೆ. ಆದರೆ, ಕುರುಬ ಸಮುದಾಯಕ್ಕೆ ಹೆಚ್ಚಿನ ಟಿಕೆಟ್‌ ನೀಡಬೇಕು ಎಂದು ಪಟ್ಟು ಹಿಡಿದಿದ್ದರೂ ಕಾಂಗ್ರೆಸ್‌ ಹೈಕಮಾಂಡ್‌ ಇದಕ್ಕೆ ಮಣಿದಿಲ್ಲ. ಲಿಂಗಾಯತ ಹಾಗೂ ಒಕ್ಕಲಿಗ ಜಾತಿಗಳಿಗೆ ಹೆಚ್ಚಿನ ಟಿಕೆಟ್‌ಗಳು ಹಂಚಿಕೆಯಾಗಿವೆ.

Latest Videos

ಕಾಂಗ್ರೆಸ್‌ 2ನೇ ಪಟ್ಟಿ ಬಿಡುಗಡೆ: 42 ಕ್ಷೇತ್ರಗಳ ಅಭ್ಯರ್ಥಿಗಳು ಇಲ್ಲಿದ್ದಾರೆ ನೋಡಿ..

ಕರ್ನಾಟಕ ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆಯಾಗಿದೆ. ಮೇ.10 ರಂದು ಮತದಾನ ನಡೆಯಲಿದೆ. ಮೇ.13 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಇದೀಗ ಜಾತಿಸಮೀಕರ ಜೋರಾಗಿದೆ. ಕರ್ನಾಟಕದಲ್ಲಿ ಯಾವ ಜಾತಿ ಎಷ್ಟಿದೆ? ಯಾವ ಸಮುದಾಯದ ಮತಗಳು ಈ ಬಾರಿ ಚುನಾವಣೆಯಲ್ಲಿ ನಿರ್ಣಾಯಕ ಅನ್ನೋದು ಆಧರಿಸಿ ನಾಯಕರಿಗೆ ಟಿಕೆಟ್ ನೀಡಲಾಗುತ್ತಿದೆ. ಈ ಕುರಿತು ರೋಚಕ ಮಾಹಿತಿ ಇಲ್ಲಿದೆ.

  • ಕಾಂಗ್ರೆಸ್‌ ಟಿಕೆಟ್‌ ಯಾವ ಜಾತಿಗೆ ಎಷ್ಟು?
  • ಲಿಂಗಾಯತ - 41
  • ಒಕ್ಕಲಿಗ - 32
  • ಪರಿಶಿಷ್ಟ ಜಾತಿ - 27
  • ಪರಿಶಿಷ್ಟ ಪಂಗಡ- 12
  • ಮುಸ್ಲಿಂ - 11
  • ಕುರುಬ- 8
  • ಈಡಿಗ - 7
  • ಬ್ರಾಹ್ಮಣ - 5
  • ಮರಾಠಿ - 4
  • ರೆಡ್ಡಿ ಸಮುದಾಯ - 3
  • ಮೊಗವೀರ - 3
  • ರಜಪೂತ- 2
  • ನಾಯ್ಡು - 1
  • ಉಪ್ಪಾರ- 1
  • ಬಂಟ - 1
  • ಕ್ರೈಸ್ತ - 1
  • ಜೈನ- 1
  • ಕೊಡವ- 1
  • ಆರ್ಯವೈಶ್ಯ- 1

ಇನ್ನೂ 58 ವಿಧಾನಸಭಾ ಕ್ಷೇತ್ರಗಳಿಗೆ ಟಿಕೆಟ್‌ ಬಾಕಿ: 
ಇನ್ನು ರಾಜ್ಯ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಏರಲೇಬೇಕು ಎಂದು ತಂತ್ರ ರೂಪಿಸಿದ್ದಾರೆ. ಮತದಾನ ದಿನಕ್ಕೆ ಇನ್ನು 34 ದಿನಗಳು ಮಾತ್ರ ಬಾಕಿಯಿದ್ದರೂ ರಾಜ್ಯದ ಯಾವುದೇ ಪ್ರಭಲ ಪಕ್ಷಗಳು ಕೂಡ ಸಂಪೂರ್ಣವಾಗಿ 224ಚ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ಈಗಾಗಲೇ 124 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್‌ ಮೊದಲ ಹಂತದಲ್ಲಿ ಬಿಡುಗಡೆ ಮಾಡಿದ್ದು 100 ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಬಾಕಿ ಉಳಿಸಿಕೊಂಡಿತ್ತು. ಇಂದು 2ನೇ ಪಟ್ಟಿ ಬಿಡುಗಡೆ ಆಗಿದೆ. ಇನ್ನೊಂದು ಹಂತದಲ್ಲಿ ಬಿಡುಗಡೆ ಆಗುವ ಬಾಕಿ 58 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯಲ್ಲಿ ಬಿಜೆಪಿಗೆ ಟಾಂಗ್‌ ಕೊಡುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಚಿಂತನೆ ಮಾಡಲಾಗಿದೆ.

ಕೈ -ಕೈ ಮಿಲಾಯಿಸಿದರೂ ಸಿಗಲಿಲ್ಲ ಕೈ ಟಿಕೆಟ್: ತಟ್ಟುವುದೇ ಬಂಡಾಯದ ಬಿಸಿ

ಧಾರವಾಡ 4 ಕ್ಷೇತ್ರಗಳ ಟಿಕೆಟ್‌ ಘೋಷಣೆಗೆ ತಲೆನೋವು:  ಧಾರವಾಡ ಜಿಲ್ಲೆಯ 7 ಕ್ಷೆತ್ರಗಳಲ್ಲಿ 3 ರಲ್ಲಿ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಲಾಗಿದೆ. ಆದರೆ, ಬಾಕಿಯಿರುವ ನಾಲ್ಕು ಕ್ಷೆತ್ರಗಳಲ್ಲಿ ಅಭ್ಯರ್ಥಿಗಳ ಹೆಸರು ಘೋಷಣೆ ಇಲ್ಲ. ಕಾಂಗ್ರೆಸ್ ಹೈಕಮಾಂಡಗೆ ನವಲಗುಂದ, ಹುಬ್ಬಳ್ಳಿಧಾರವಾಡ ಪಶ್ಚಿಮ ಕ್ಷೆತ್ರ, ಹುಬ್ಬಳ್ಳಿಧಾರವಾಡ ಸೆಂಟ್ರೆಲ್ ಕ್ಷೆತ್ರ, ಕುಂದಗೋಳ ಸೇರಿ ನಾಲ್ಕು ಕ್ಷೆತ್ರಗಳು ತಲೆನೋವಾಗಿವೆ. ಈ ನಾಲ್ಕು ಕ್ಷೆತ್ರಗಳಲ್ಲಿ ಟಿಕೆಟ್ ಆಕಾಂಕ್ಷಿಗಳೆ ಹೆಚ್ಚಾಗಿದ್ದಾರೆ. ಆದ್ದರಿಂದ ಆಕಾಂಕಷಿಗಳು ಮೂರನೇಯ ಲಿಸ್ಟ ಗಾಗಿ ಕಾಯುತ್ತಿದ್ದಾರೆ. ನವಲಗುಂದ ಕ್ಷೆತ್ರದಲ್ಲಿ ವಿನೋದ್ ಅಸೋಟಿ, ಎನ್. ಎಚ್. ಕೋನರೆಡ್ಡಿ, ಹುಬ್ಬಳ್ಳಿ ಧಾರವಾಡ ಪಶ್ಚಿಮಕ್ಷೆತ್ರದಲ್ಲಿ 10 ಜನ ಆಕಾಂಕ್ಷಿಗಳು ಮೂಂಚೂಣಿಯಲ್ಲಿದ್ದಾರೆ. ಈ ಪೈಕಿ ದೀಪಕ್ ಚಿಂಚೋರೆ, ಪಿ ಎಚ್ ನೀರಲೇಕರಿ, ನಾಗರಾಜ್ ಗೌರಿ ಮಯೂರ ಮೋರೆ ಪ್ರಮುಖರಾಗಿದ್ದಾರೆ. ಕುಂದಗೋಳ ಕ್ಷೆತ್ರದಲ್ಲಿ ಶಾಸಕಿ ಕುಸುಮಾ ಶಿವಳ್ಳಿ, ಮಾಜಿ ಶಾಸಕ‌ ಎಂ ಎಸ್ ಅಕ್ಕಿ, ಶಿವಾನಂದ ಬೆಂತೂರು ಹಾಗೂ ಹುಬ್ಬಳ್ಳಿ - ಧಾರವಾಡ ಸೆಂಟ್ರೆಲ್ ಕ್ಷೇತ್ರದಲ್ಲಿ ಅನಿಲಕುಮಾರ ಪಾಟೀಲ, ರಜತ ಉಳ್ಳಾಗಡ್ಡಿಮಠ, ಗೀರಿಶ್ ಗದಿಗೆಪ್ಪಗೌಡರ್ ಮಧ್ಯ ಪೈಪೋಟಿ ಏರ್ಪಟ್ಟಿದೆ.

click me!