ಉಜ್ವಲ ಭವಿಷ್ಯ ಬಯಸುವವರು ಮೋದಿಗೆ ಮತ ಹಾಕ್ತಾರೆ: ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌

Published : Mar 10, 2023, 01:01 PM IST
ಉಜ್ವಲ ಭವಿಷ್ಯ ಬಯಸುವವರು ಮೋದಿಗೆ ಮತ ಹಾಕ್ತಾರೆ: ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌

ಸಾರಾಂಶ

ಉಜ್ವಲ ಭವಿಷ್ಯ ಬಯಸುವವರು ಪ್ರಧಾನಿ ನರೇಂದ್ರ ಮೋದಿ ಪರ ಮತ ಚಲಾಯಿಸುತ್ತಾರೆ. ಯಾರಿಗೆ ಇಂಗ್ಲೆಂಡ್‌ಗೆ ತೆರಳಿ ಚೀನಾ ಹೊಗಳಬೇಕೋ ಅವರು ಕಾಂಗ್ರೆಸ್‌ಗೆ ಮತ ನೀಡುತ್ತಾರೆ ಎಂದು ಕೇಂದ್ರ ಕೌಶಲಾಭಿವೃದ್ಧಿ, ಉದ್ಯಮಶೀಲನೆ, ಮಾಹಿತಿ ತಂತ್ರಜ್ಞಾನ ರಾಜ್ಯ ಖಾತೆ ಸಚಿವ ರಾಜೀವ್‌ ಚಂದ್ರಶೇಖರ್‌ ಅವರು ರಾಹುಲ್‌ ಗಾಂಧಿ ಅವರನ್ನು ಪರೋಕ್ಷವಾಗಿ ಟೀಕಿಸಿದರು.

ಬೆಂಗಳೂರು (ಮಾ.09): ಉಜ್ವಲ ಭವಿಷ್ಯ ಬಯಸುವವರು ಪ್ರಧಾನಿ ನರೇಂದ್ರ ಮೋದಿ ಪರ ಮತ ಚಲಾಯಿಸುತ್ತಾರೆ. ಯಾರಿಗೆ ಇಂಗ್ಲೆಂಡ್‌ಗೆ ತೆರಳಿ ಚೀನಾ ಹೊಗಳಬೇಕೋ ಅವರು ಕಾಂಗ್ರೆಸ್‌ಗೆ ಮತ ನೀಡುತ್ತಾರೆ ಎಂದು ಕೇಂದ್ರ ಕೌಶಲಾಭಿವೃದ್ಧಿ, ಉದ್ಯಮಶೀಲನೆ, ಮಾಹಿತಿ ತಂತ್ರಜ್ಞಾನ ರಾಜ್ಯ ಖಾತೆ ಸಚಿವ ರಾಜೀವ್‌ ಚಂದ್ರಶೇಖರ್‌ ಅವರು ರಾಹುಲ್‌ ಗಾಂಧಿ ಅವರನ್ನು ಪರೋಕ್ಷವಾಗಿ ಟೀಕಿಸಿದರು.

ನಗರದ ಖಾಸಗಿ ಹೊಟೆಲ್‌ನಲ್ಲಿ ನಡೆದ ಡೀಪ್‌ಟೆಕ್‌ ಸಮ್ಮಿಟ್‌ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ದೇಶದ ಜನತೆಯ ಎದುರು ಸರಳವಾಗಿ ಎರಡು ಅವಕಾಶಗಳಿವೆ. ನನ್ನ ಪ್ರಕಾರ ಯಾರು ಉಜ್ವಲ ಭವಿಷ್ಯ ನೋಡಲು, ಕಟ್ಟಲು ಬಯಸುತ್ತಾರೋ ಅವರು ದೇಶದ ಅಭಿವೃದ್ಧಿಗಾಗಿ ಶ್ರಮಿಸುವ ರಾಜಕೀಯ ಪ್ರಧಾನಿ ಮೋದಿ ಅವರನ್ನು ಬೆಂಬಲಿಸಿ ಮತ ನೀಡುತ್ತಾರೆ. ಅದನ್ನು ಹೊರತುಪಡಿಸಿ ಅದೇ ಇಂಗ್ಲೆಂಡ್‌ಗೆ ತೆರಳಿ ಚೀನಾ ಕುರಿತು ವಿಸ್ತಾರವಾಗಿ ಹೊಗಳುತ್ತ, ಭಾರತವನ್ನು ಕಡೆಗಣಿಸುವುದನ್ನು ಬಯಸುವವರು ಕಾಂಗ್ರೆಸ್‌ಗೆ ಮತ ಹಾಕುತ್ತಾರೆ ಎಂದು ಹೇಳಿದರು.

3 ವರ್ಷದಲ್ಲಿ ರಾಜ್ಯದ 20 ಲಕ್ಷ ಯುವಕರಿಗೆ ಟೆಕ್‌ ತರಬೇತಿ: ರಾಜೀವ್‌ ಚಂದ್ರಶೇಖರ್‌

ದೇಶದಿಂದ 200 ಬಿಲಿಯನ್‌ನಷ್ಟು ಐಟಿ-ಐಟಿಎಸ್‌ ಉತ್ಪನ್ನಗಳು ರಫ್ತಾಗುತ್ತಿವೆ. ಇದು ವರ್ಷದಿಂದ ವರ್ಷಕ್ಕೆ ಶೇ.20ರಷ್ಟು ಹೆಚ್ಚುತ್ತಿದೆ. 2014ರ ಬಳಿಕ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ದೇಶಕ್ಕೆ ತಂತ್ರಜ್ಞಾನ ಕ್ಷೇತ್ರದ ವಿಫುಲ ಅವಕಾಶಗಳನ್ನು ತೆರೆದಿಟ್ಟಿತು. ಮುಂದಿನ ಹತ್ತು ವರ್ಷ ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚು ಅವಕಾಶ ಸೃಷ್ಟಿಸಲು ‘ಇಂಡಿಯಾ ಟೆಕೆಡ್‌’ (ಡೆಕೆಟ್‌ ಆಫ್‌ ಟೆಕ್ನಾಲಜಿ ಆಪರ್ಚುನಿಟಿಸ್‌) ಘೋಷಣೆಯಡಿ ಇಂಟರ್‌ನೆಟ್‌, ಕನ್ಸ್ಯೂಮರ್‌ ಟೆಕ್‌, ಇ ಕಾಮರ್ಸ್‌ ಕಂಪನಿಗಳು, ಎಲೆಕ್ಟ್ರಾನಿಕ್‌ ಉಪಕರಣಗಳ ಉತ್ಪಾದನೆ, ಡೆಟಾ, ಸೆಮಿಕಂಡಕ್ಟರ್‌, ಕೃತಕ ಬುದ್ಧಿಮತ್ತೆ, ಎಲೆಕ್ಟ್ರಾನಿಕ್‌ ಡಿಸೈನ್‌, ಸೈಬರ್‌ ಸೆಕ್ಯೂರಿಟಿ, ಬಾಹ್ಯಾಕಾಶ, ಬ್ಲಾಕ್‌ಚೈನ್‌ ಸೇರಿ ತಂತ್ರಜ್ಞಾನ ವಲಯದ ಎಲ್ಲ ವಿಭಾಗಗಳಲ್ಲೂ ದೇಶ, ಕರ್ನಾಟಕದ ಯುವ ಸಮುದಾಯ ತನ್ನನ್ನು ತೊಡಗಿಸಿಕೊಳ್ಳಲು ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ ಎಂದರು.

‘ಆ್ಯಪಲ್‌ ಕೇಂದ್ರದಿಂದ ಮಹತ್ತರ ಬದಲಾವಣೆ’: ಬೆಂಗಳೂರಿನ ಹೊರವಲಯದಲ್ಲಿ 300 ಎಕರೆ ಪ್ರದೇಶದಲ್ಲಿ ತಲೆ ಎತ್ತಲಿರುವ ಆ್ಯಪಲ್‌ ಕಂಪನಿಯ ಉತ್ಪಾದನಾ ಕೇಂದ್ರ ಮೊಬೈಲ್‌ ಸೇರಿ ಹಲವು ಡಿವೈಸ್‌ಗಳನ್ನು ಉತ್ಪಾದಿಸಲಿದೆ. ಇದು ಬೆಂಗಳೂರು ಎಲೆಕ್ಟ್ರಾನಿಕ್‌ ಉತ್ಪಾದನೆಯ ಪ್ರಮುಖ ಕೇಂದ್ರವಾಗಿ ಗುರುತಿಸಿಕೊಳ್ಳಲು ಹಾಗೂ ಆ ಮೂಲಕ ರಾಜ್ಯದ ತಂತ್ರಜ್ಞಾನ ವಲಯದಲ್ಲೇ ಮಹತ್ತರ ಬದಲಾವಣೆಗೆ ಕಾರಣವಾಗಲಿದೆ ಎಂದು ಸಚಿವ ರಾಜೀವ್‌ ಚಂದ್ರಶೇಖರ್‌ ಹೇಳಿದರು.

ಐಟಿ ಆಕ್ಟ್‌ಗೆ ಪರ್ಯಾಯವಾಗಿ ಡಿಜಿಟಲ್ ಇಂಡಿಯಾ ಬಿಲ್: ರಾಜೀವ್ ಚಂದ್ರಶೇಖರ್

ಕಳೆದ 25 ವರ್ಷಗಳಿಂದ ಚೀನಾ ಎಲೆಕ್ಟ್ರಾನಿಕ್‌ ವಸ್ತುಗಳ ಪ್ರಬಲ ಉತ್ಪಾದಕನಾಗಿದೆ. ಆದರೆ, ಕಳೆದ ಐದಾರು ವರ್ಷಗಳಲ್ಲಿ ಭಾರತ ಈ ಕ್ಷೇತ್ರದಲ್ಲಿ ತನ್ನ ಛಾಪನ್ನು ಮೂಡಿಸುತ್ತಿದೆ. 2014ಕ್ಕೂ ಮುನ್ನ ಶೂನ್ಯ ಮೊಬೈಲ್‌ ಉತ್ಪಾದಕ ದೇಶವಾಗಿದ್ದ ಭಾರತ 2024ರ ವೇಳೆಗೆ 1 ಲಕ್ಷ ಕೋಟಿ ಮೌಲ್ಯದ ಮೊಬೈಲ್‌ಗಳನ್ನು ರಫ್ತು ಮಾಡುತ್ತಿದೆ. ಹೀಗೆ ಎಲೆಕ್ಟ್ರಾನಿಕ್‌ ವಲಯದಲ್ಲಿ ಭಾರತ ಸಂಪೂರ್ಣವಾಗಿ ಪರಿವರ್ತನೆಗೊಂಡಿದೆ. ಈ ಕಾರಣದಿಂದಲೇ ಆ್ಯಪಲ್‌ ಅತೀ ದೊಡ್ಡ ಉತ್ಪಾದನಾ ಕೇಂದ್ರವನ್ನು ತೆರೆಯಲು ಮುಂದಾಗುತ್ತಿದೆ. ಇದರ ಜೊತೆಗೆ ಆರೋಗ್ಯ ಕ್ಷೇತ್ರ ಸಂಬಂಧಿತ ತಂತ್ರಜ್ಞಾನ ಉತ್ಪಾದನಾ ಕೇಂದ್ರ ಆರಂಭಿಸುವ ಕುರಿತಂತೆ ಚಿಂತನೆ ನಡೆಸಿದೆ. ಇದು ಪೂರ್ಣವಾಗಿ ಮೇಡ್‌ ಇನ್‌ ಇಂಡಿಯಾ ಆಗಲಿದೆ ಎಂದು ಸಚಿವರು ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕರ್ನಾಟಕ ಗದ್ದುಗೆ ಫೈಟ್‌ ಬಗ್ಗೆ ಹೈಕಮಾಂಡ್‌ ನಾಯಕರ ಚರ್ಚೆ
ಚುಂಚ ಶ್ರೀ ಬಳಿ ಕೈ ಮುಗಿದು ಎಚ್‌ಡಿಕೆ ಕ್ಷಮೆ