ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಗೆ ಚುನಾವಣಾ ಐಕಾನ್ ಆಗಿ ತೆಲುಗು ನಿರ್ದೇಶಕ ಎಸ್.ಎಸ್.ರಾಜಮೌಳಿ(SS Rajamouli) ಅವರನ್ನು ನೇಮಕ ಮಾಡಲಾಗಿದೆ.
ರಾಯಚೂರು (ಮಾ.10) : ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಗೆ ಚುನಾವಣಾ ಐಕಾನ್ ಆಗಿ ತೆಲುಗು ನಿರ್ದೇಶಕ(tollywood-director) ಎಸ್.ಎಸ್.ರಾಜಮೌಳಿ(SS Rajamouli) ಅವರನ್ನು ನೇಮಕ ಮಾಡಲಾಗಿದೆ. ರಾಯಚೂರು(Raichur) ಸೇರಿದಂತೆ ರಾಜ್ಯದ 10 ಜಿಲ್ಲೆಗಳಿಗೆ ಚುನಾವಣಾ ಐಕಾನ್ ಆಗಿ ವಿವಿಧ ಕ್ಷೇತ್ರಗಳ ಗಣ್ಯರನ್ನು ನೇಮಕ ಮಾಡಿರುವ ರಾಜ್ಯ ಚುನಾವಣಾ ಆಯೋಗ(Karnataka State Election Commission )ವು ಆಯಾ ಜಿಲ್ಲೆಗಳ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಮತ್ತು ಜಿಲ್ಲಾ ಪಂಚಾಯ್ತಿಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಆದೇಶದ ಪ್ರತಿಯನ್ನು ರವಾನಿಸಿದೆ.
ಸಾರ್ವತ್ರಿಕ ಚುನಾವಣೆಯಲ್ಲಿ ಜನರಲ್ಲಿ ಮತದಾನದ ಜಾಗೃತಿ ಮೂಡಿಸುವುದಕ್ಕಾಗಿ ರಾಜಮೌಳಿ ಅವರನ್ನು ಚುನಾವಣಾ ಐಕಾನ್ ಆಗಿ ನೇಮಕಾತಿ ಆದೇಶವನ್ನು ಆಯೋಗದ ಹೆಚ್ಚುವರಿ ಮುಖ್ಯ ಅಧಿಕಾರಿ ರಾಜೇಂದ್ರ ಚೋಳನ್.ಪಿ ಹೊರಡಿಸಿದ್ದಾರೆ.
ನಿನಗೆ ಗಂಡಸ್ತನ ಇದ್ರೆ ನಿನ್ನ ಶಕ್ತಿ ಪ್ರೊವ್ ಮಾಡು: ಎಚ್‌ಡಿಕೆಗೆ ನೇರ ಸವಾಲು ಹಾಕಿದ ಶಿವನಗೌಡ ನಾಯಕ
ರಾಜಮೌಳಿಗೆ ಜಿಲ್ಲೆ ನಂಟು:
ಸೋಲಿಲ್ಲದ ನಿರ್ದೇಶಕರಾಗಿ ಬಾಹುಬಲಿ 1-2(Bahubali Movie) ಮತ್ತು ಆರ್‌ಆರ್‌ಆರ್(RRR) ಮುಖಾಂತರ ಇಡಿ ಪ್ರಪಂಚ ಪ್ರಖ್ಯಾತಿ ಪಡೆದಿರುವ ಎಸ್.ಎಸ್.ರಾಜಮೌಳಿ ಹಾಗೂ ಅವರ ಕುಟುಂಬಸ್ಥರಿಗೆ ರಾಯಚೂರು ಜಿಲ್ಲೆಯ ನಂಟಿದೆ. ರಾಜಮೌಳಿ ಅವರ ತಂದೆ ಹಾಗೂ ಚಿತ್ರಕಥೆಗಾರ, ನಿರ್ದೇಶಕ ವೈ.ವಿಜಯೇಂದ್ರ ಪ್ರಸಾದ(Y Vijayendra Prasad) ಕುಟುಂಬವು ಕೆಲ ಕಾಲ ಜಿಲ್ಲೆಯ ಮಾನ್ವಿ ತಾಲೂಕಿನ ಅಮರೇಶ್ವರ ಕ್ಯಾಂಪಿ(Amareshwar camp)ನಲ್ಲಿ ನೆಲೆಸಿದ್ದರು.
ಇಲ್ಲಿಂದ ಸಮೀಪದ ಹೈದರಾಬಾದ್ಗೆ ತೆರಳಿ ಸಿನಿಮಾ ರಂಗವನ್ನು ಪ್ರವೇಶಿಸಿದ ರಾಜಮೌಳಿ ಜ್ಯೂ. ಎನ್ಟಿಆರ್ ನಟಿಸಿದ ಸ್ಟೂಡೆಂಟ್ ನಂ.1 ಮುಖಾಂತರ ನಿರ್ದೇಶನವನ್ನು ಆರಂಭಿಸಿ ಸಿಂಹಾದ್ರಿ, ಸೈ, ವಿಕ್ರಮಾರ್ಕುಡು, ಛತ್ರಪತಿ, ಮಗಧೀರ, ಮರಾರಯದ ರಾಮನ್ನ, ಯಮ ದೊಂಗ, ಈಗ, ಬಾಬುಬಲಿ 1 ಮತ್ತು 2 ಹಾಗೂ ಕಳೆದ ವರ್ಷ ತೆರೆ ಕಂಡ ಆರ್‌ಆರ್‌ಆರ್ ಹೀಗೆ ತಾವು ನಿರ್ದೇಶಿಸಿದ ಎಲ್ಲ ಚಿತ್ರಗಳನ್ನು ಸೂಪರ್ ಡೂಪರ್ ಹಿಟ್ ಆ್ಟಗಿದೆ. ಇಂದು ಸ್ಟಾರ್ ನಟರಿಗಿರುವಷ್ಟೇ ಕ್ರೇಜನ್ನೇ ರಾಜಮೌಳಿ ಸಹ ಹೊಂದಿದ್ದಾರೆ. ರಾಯಚೂರು ಜಿಲ್ಲೆ ತೆಲಂಗಾಣ ಹಾಗೂ ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿರುವುದರಿಂದ ರಾಜಮೌಳಿ ಹಾಗೂ ಅವರ ಕುಟುಂಬದ ಸದಸ್ಯರು ಹಾಗಾಗ ಜಿಲ್ಲೆಗೆ ಬಂದು ಹೋಗುತ್ತಾರೆ. ಆದ್ದರಿಂದ ಎಸ್.ಎಸ್.ರಾಜಮೌಳಿ ಅವರನ್ನು ಚುನಾವಣಾ ಐಕಾನ್ ಮಾಡುವಂತೆ ಜಿಲ್ಲಾಡಳಿತ ಆಯೋಗಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಇದನ್ನು ಪರಿಗಣಿಸಿದ ಚುನಾವಣಾ ಆಯೋಗದ ಹೆಚ್ಚುವರಿ ಮುಖ್ಯ ಅಧಿಕಾರಿ ರಾಜೇಂದ್ರ ಚೋಳನ್.ಪಿ ನೇಮಕಾತಿ ಆದೇಶ ಹೊರಡಿಸಿದ್ದಾರೆ.
'ಮಸ್ಕಿಗೆ ಬರುವ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಕಪ್ಪು ಬಾವುಟ ಪ್ರದರ್ಶನ'