400 ರೂಪಾಯಿ ಕುಕ್ಕರ್‌ಗೆ 1400 ರೂಪಾಯಿ ಸ್ಟಿಕ್ಕರ್‌, ಮತದಾರರನ್ನ ಕುರಿ ಮಾಡಿದ್ರಾ ರಾಜೇಗೌಡ್ರು!

By Govindaraj SFirst Published Mar 10, 2023, 12:32 PM IST
Highlights

ಶಾಸಕ ರಾಜೇಗೌಡ ಮತದಾರರಿಗೆ ಯಾಮಾರಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹೌದು! ಕುಕ್ಕರ್ರಿನ ನಕಲಿ ಮುಖ ಇಂದು ಬಯಲಾಗಿದ್ದು, 450 ರೂ ಬೆಲೆಯ ಕುಕ್ಕರ್ ಕೊಟ್ಟು, 1399 ರೂ ಎಂದು ಬಿಲ್ಡಪ್ ಕೊಟ್ಟಿದ್ದಾರಾ ಎಂಬ ಅನುಮಾನಗಳು ಮೂಡಿಬಂದಿವೆ. 

ಚಿಕ್ಕಮಗಳೂರು (ಮಾ.09): ವಿಧಾನಸಭಾ ಚುನಾವಣೆಗೆ ಇನ್ನು ಕೆಲ ತಿಂಗಳು ಮಾತ್ರ ಬಾಕಿ ಉಳಿದಿರುವಾಗಲೇ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡರ ಪರವಾಗಿ ಕಾಂಗ್ರೆಸ್ ಕಾರ್ಯಕತರು ಮತದಾರರರನ್ನು ಸೆಳೆಯುಲು ನಿನ್ನೆ (ಗುರುವಾರ) ಮನೆ‌ ಮನೆಗೆ ಕುಕ್ಕರ್ ಹಂಚಿಕೆ ಮಾಡಿದ್ದರು. ಇದೀಗ ಶಾಸಕ ರಾಜೇಗೌಡ ಮತದಾರರಿಗೆ ಯಾಮಾರಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. 

ಹೌದು! ಕುಕ್ಕರ್ರಿನ ನಕಲಿ ಮುಖ ಇಂದು ಬಯಲಾಗಿದ್ದು, 450 ರೂ ಬೆಲೆಯ ಕುಕ್ಕರ್ ಕೊಟ್ಟು, 1399 ರೂ ಎಂದು ಬಿಲ್ಡಪ್ ಕೊಟ್ಟಿದ್ದಾರಾ ಎಂಬ ಅನುಮಾನಗಳು ಮೂಡಿಬಂದಿವೆ. ಕುಕ್ಕರ್ ಬಾಕ್ಸ್ ಮೇಲೆ 450 ರೂ ಇದೆ, ಆದರೆ ಲೇಬಲ್ ಮೇಲೆ 1399 ರೂಪಾಯಿ ಅಂತಾ ಇದೆ. ಹೀಗಾಗಿ 450 ರೂಪಾಯಿ ಕುಕ್ಕರ್‌ಗೆ 1399ರ ಲೇಬಲ್ ಹಾಕಿ ಕೊಟ್ಟದ್ದನ್ನೂ ಹೋಲಿಕೆ ಮಾಡಿ ಶಾಸಕರ ವಿರುದ್ಧ ಮಲೆನಾಡಿನ ಮತದಾರರು ವ್ಯಂಗ್ಯ ಮಾಡಿದ್ದಾರೆ. 

H3N2 ವೈರಲ್​ ಸೋಂಕಿಗೆ ರಾಜ್ಯದಲ್ಲಿ ಮೊದಲ ಬಲಿ: ಮುನ್ನೆಚ್ಚರಿಕೆ ಕ್ರಮವಾಗಿ ಆರೋಗ್ಯ ತಪಾಸಣೆ

ಶಾಸಕ ಟಿ.ಡಿ.ರಾಜೇಗೌಡ ಭಾವಚಿತ್ರವುಳ್ಳ ಕುಕ್ಕರ್ ವಿತರಣೆ: ಶೃಂಗೇರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯದಿಂದ ಮತ ಕೇಳುವ ಬದಲು ಕುಕ್ಕರ್ ನೀಡಿ ಮತ ಕೇಳುತ್ತಿರುವ ಹಾಲಿ ಕಾಂಗ್ರೆಸ್ ಶಾಸಕರ ವಿರುದ್ಧ ಮತದಾರರು ಸಾಮಾಜಿಕ ಜಾಲ ತಾಣದಲ್ಲಿ ಲೇವಡಿ ಮಾಡಿದ್ದಾರೆ.ಶೃಂಗೇರಿ ಶಾಸಕ ಹಾಗೂ ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಕ್ಷೇತ್ರದಾದ್ಯಂತ ಕುಕ್ಕರ್ ರಾಜಕೀಯ ಆರಂಭಿಸಿದ್ದಾರೆ. 

ಕ್ಷೇತ್ರದಾದ್ಯಂತ ಸುಮಾರು ಒಂದು ಲಕ್ಷಕ್ಕೂ ಅಧಿಕ ಕುಕ್ಕರ್ ವಿತರಣೆ ಮಾಡಿದ್ದು, ಜನಸಾಮಾನ್ಯರು ಈಗ ಕುಕ್ಕರ್ ನೀಡಿ ಮತ ಕೇಳುವುದಾದರೆ ಕಳೆದ ಐದು ವರ್ಷದಿಂದ ಮಾಡಿದ್ದೇನು ಎಂದು ಪ್ರಶ್ನಿಸಿದ್ದಾರೆ. ಚಿಕ್ಕಮಗಳೂರಲ್ಲಿ ಮೂರು ತಾಲೂಕು ಸೇರಿ ಶೃಂಗೇರಿ ವಿಧಾನಸಭಾ ಕ್ಷೇತ್ರವಾಗಿದೆ. ಎನ್.ಆರ್.ಪುರ, ಕೊಪ್ಪ ಹಾಗೂ ಶೃಂಗೇರಿ ವಿಧಾನಸಭಾ ಕ್ಷೇತ್ರವಾಗಿದೆ. ಶಾರದಾಂಬೆ ನೆಲೆಬೀಡು ಶೃಂಗೇರಿ ತಾಲೂಕಿನ ಬೇಗಾರು ಗ್ರಾಮದಲ್ಲಿ ರಮೇಶ್ ಎಂಬ ಕಾರ್ಯಕರ್ತರ ಮೂಲಕ ಮನೆ-ಮನೆಗೆ ಕುಕ್ಕರ್ ಕೊಡಿಸಿ ಫೋಟೋ ಹೊಡೆಸಿಕೊಂಡಿದ್ದಾರೆ. 

ಸ್ಮಶಾನಕ್ಕೆ ಜಾಗ: ವಂಚಕ ಜಿಲ್ಲಾಧಿಕಾರಿಗಳಿಗೆ ಜೈಲಿಗಟ್ಟುವ ಎಚ್ಚರಿಕೆ ನೀಡಿದ ಹೈಕೋರ್ಟ್

ಕುಕ್ಕರ್ ಕೊಡ್ತಿರೋದನ್ನ ಕಂಡು ಶೃಂಗೇರಿ ಜನ ಶಾಸಕರಿಗೆ ನೀವು ಐದು ವರ್ಷ ಮಾಡಿದ್ದೇನು ಎಂದು ಪ್ರಶ್ನಿಸಿದ್ದಾರೆ. ಮೂರು ತಾಲೂಕಿನಲ್ಲೂ ಕಳೆದ ಎರಡ್ಮೂರು ವರ್ಷಗಳಿಂದ ಭಾರೀ ಮಳೆಗೆ ಜನ ಮನೆ-ಮಠ ಕಳೆದುಕೊಂಡಿದ್ದಾರೆ. ಹಲವರಿಗೆ ಇನ್ನೂ ಸೂಕ್ತ ರೀತಿಯಲ್ಲಿ ಪರಿಹಾರ ಬಂದಿಲ್ಲ. ಮಳೆಯಿಂದಾದ ಮೂಲಭೂತ ಸೌಲಭ್ಯಗಳು ಇಂದಿಗೂ ದುರಸ್ಥಿಯಾಗಿಲ್ಲ. ಈಗ ಚುನಾವಣೆ ಬಂತು ಅಂತ ಮತ್ತೆ ಕುಕ್ಕರ್ ಆಮೀಷದ ಮೂಲಕ ಮತ ಕೇಳುತ್ತಿದ್ದಾರೆ ಎಂದು ಜನ ಶಾಸಕರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

click me!