ಬಿಜೆಪಿಯ ಮುಂದಿನ ಸಿಎಂ ಅಭ್ಯರ್ಥಿ ಯಾರು : ಇಲ್ಲಿದೆ ಉತ್ತರ

By Kannadaprabha NewsFirst Published Nov 1, 2021, 6:56 AM IST
Highlights
  • ಮುಂದಿನ ಚುನಾವಣೆಯನ್ನು ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಾಡುತ್ತೇವೆ 
  •  ಮುಂದಿನ ಮುಖ್ಯಮಂತ್ರಿಯೂ ಬೊಮ್ಮಾಯಿ ಅಂತಲೇ ಅರ್ಥ 

ದಾವಣಗೆರೆ (ನ.01): ಮುಂದಿನ ಚುನಾವಣೆಯನ್ನು (Next Election) ಬಸವರಾಜ ಬೊಮ್ಮಾಯಿ (Basavaraj Bommai) ನೇತೃತ್ವದಲ್ಲಿ ಮಾಡುತ್ತೇವೆ ಅಂದರೆ ಮುಂದಿನ ಮುಖ್ಯಮಂತ್ರಿಯೂ ಬೊಮ್ಮಾಯಿ (CM  Basavaraj Bommai) ಅಂತಲೇ ಅರ್ಥ ಎಂದು ವಸತಿ ಸಚಿವ ವಿ.ಸೋಮಣ್ಣ (V Somanna) ಸ್ಪಷ್ಟಪಡಿಸಿದ್ದಾರೆ. 

ಈ ಮೂಲಕ ಮುಂದಿನ ಬಿಜೆಪಿ (BJP) ಸಿಎಂ ಅಭ್ಯರ್ಥಿ ಯಾರು ಎಂಬ ಗೊಂದಲಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮುಂದಿನ ಚುನಾವಣೆ (Election) ಬೊಮ್ಮಾಯಿ ನೇತೃತ್ವದಲ್ಲೇ ಮಾಡುತ್ತೇವೆ ಅಂದರೆ ಮುಖ್ಯಮಂತ್ರಿಯೂ (Karnataka CM) ಬಸವರಾಜ ಬೊಮ್ಮಾಯಿ ಅವರೇ ಆಗಲಿದ್ದಾರೆಂದೇ ಅರ್ಥ. ಕಂದಾಯ ಸಚಿವ ಆರ್‌.ಅಶೋಕ (R ashok) ಹೇಳಿಕೆ, ನನ್ನ ಹೇಳಿಕೆಯ ಅರ್ಥವೂ ಇದೇ ಎಂದರು. 

ಬೆಂಗಳೂರು ಉಸ್ತುವಾರಿಗೆ ಸಚಿವರ ಮಧ್ಯೆ ಬಿಗ್​​ ಫೈಟ್: ಬೊಮ್ಮಾಯಿ ಖಡಕ್ ಸ್ಪಷ್ಟನೆ

ಇದೇ ವೇಳೆ ಬೆಂಗಳೂರು (Bengaluru) ಉಸ್ತುವಾರಿ ಸಚಿವ ಸ್ಥಾನದ ಕುರಿತು ಪ್ರತಿಕ್ರಿಯಿಸಿದ ಅವರು, ಬೆಂಗಳೂರು ಉಸ್ತುವಾರಿ (Bengaluru Incharge) ಸಚಿವ ಸ್ಥಾನವನ್ನು ಯಾರಿಗೆ ಕೊಟ್ಟರೇನು ಬಿಡ್ರಪ್ಪ. ಅದು ಈಗಾಗಲೇ ಮುಗಿದ ಅಧ್ಯಾಯ. ನಾನು ಒಂದೇ ಸಾರಿ ಹೇಳುವುದು. ಎರಡನೇ ಸಾರಿ ಹೇಳಿದರೆ ಅದರ ಮಜಾ ಸಿಗುವುದಿಲ್ಲ. ಹಾಗಾಗಿ ಒಂದು ಸಾರಿ ಹೇಳಿದ್ದೇನಿ. ಉಸ್ತುವಾರಿ ಕೊಡುವುದು, ಬಿಡುವುದು ಮುಖ್ಯಮಂತ್ರಿಗಳ ಪರಮಾಧಿಕಾರ ಎಂದು ಅವರು ಹೇಳಿದರು.

ಎರಡೂ ಕ್ಷೇತ್ರದಲ್ಲೂ ದಾಖಲು: ಸಿಂದಗಿ (Sindagi), ಹಾನಗಲ್‌ (Hanagal) ಎರಡೂ ಕ್ಷೇತ್ರದಲ್ಲಿ ನಾವೇ ಗೆಲ್ಲುತ್ತೇವೆ. ಸಿಂದಗಿಯಲ್ಲಿ 18-20 ಸಾವಿರ ಮತಗಳ (Vote) ಅಂತರದಲ್ಲಿ ಗೆಲ್ಲುತ್ತೇವೆ. ಹಾನಗಲ್‌ ಸಹ ಗೆಲ್ಲುತ್ತೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಬೆಂಗಳೂರು ಉಸ್ತುವಾರಿಗಾಗಿ ಫೈಟ್ 

 

ರಾಜ್ಯ ರಾಜಧಾನಿ ಬೆಂಗಳೂರು (Bengaluru) ನಗರ ಜಿಲ್ಲೆ ಉಸ್ತುವಾರಿಯ ಬಗ್ಗೆ ವಸತಿ ಸಚಿವ ವಿ.ಸೋಮಣ್ಣ (V Somanna) ಹಾಗೂ ಕಂದಾಯ ಸಚಿವ ಆರ್ ಅಶೋಕ್ (R Ashok) ನಡುವೆ ಬಹಿರಂಗ ವಾಕ್ಸಮರ ಶುರುವಾಗಿದೆ.

ಬೆಂಗಳೂರು ನಗರ ಉಸ್ತುವಾರಿಯನ್ನು (Bengaluru In-charge ) ತಮಗೆ ನೀಡುವಂತೆ ಸೋಮಣ್ಣ ಸಿಎಂಗೆ ಮನವಿ ಮಾಡಿದ್ರೆ, ಅತ್ತ ಅಶೋಕ್ ಸಹ ಸದ್ದಿಲ್ಲದೇ ಬೆಂಗಳೂರು ಉಸ್ತುವಾರಿ ಸ್ಥಾನಕ್ಕೆ ಕಸರತ್ತು ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರ ನಡುವೆ ಪೈಪೋಟಿ ಜೋರಾಗಿದೆ.

ಅತ್ತ ಸಿಎಂ ನಡ್ಡಾ ಭೇಟಿ, ಇತ್ತ ಬೆಂಗಳೂರು ಉಸ್ತುವಾರಿಗಾಗಿ ಸಚಿವರ ಗುದ್ದಾಟ

 ನವದೆಹಲಿಯಿಂದ (New Delhi) ಬೆಂಗಳೂರಿಗೆ ವಾಪಸ್‌ ಆಗುತ್ತಿದ್ದಂತೆಯೇ  ನಗರ ಉಸ್ತುವಾರಿಗಾಗಿ ಫೈಟ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai), ಯಾರಿಗೆ ಯಾವ ಜಿಲ್ಲೆಯ ಉಸ್ತುವಾರಿ ಕೊಡಬೇಕು ಎಂಬುದರ ಬಗ್ಗೆ ತೀರ್ಮಾನ ಮಾಡ್ತೇವೆ. ಸಂಪುಟ ಸಚಿವರ ಜೊತೆ ಸೌಹಾರ್ದಯುತವಾಗಿ ಚರ್ಚೆ ಮಾಡಿ ತೀರ್ಮಾನ ಮಾಡ್ತೇನೆ ಎಂದು ಸ್ಪಷ್ಟಪಡಿಸಿದರು.

ಎಲ್ಲರೂ ನಮ್ಮವರೇ ಇದ್ದಾರೆ. ಯಾವುದೇ ರೀತಿಯ ತೊಂದರೆ ಆಗದ ರೀತಿ ನಿರ್ಧಾರ ಮಾಡುತ್ತೇನೆ. ಬೆಂಗಳೂರು ‌ಬಹಳ ಮಹತ್ವದ್ದು. ಇದರ ಬಗ್ಗೆ ಎಲ್ಲರ ಜೊತೆ ಚರ್ಚಿಸಿ, ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸುತ್ತೇನೆ ಎಂದರು. 

ಅಶೋಕ್‍ಗೆ ಬೆಂಗಳೂರು (Bangaluru) ಉಸ್ತುವಾರಿ ಕೊಟ್ಟರೆ ನನ್ನದೇನೂ ಅಭ್ಯಂತರವಿಲ್ಲ. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನಾನೊಂದು ಮನವಿ ಮಾಡಿ

  • ಮುಂದಿನ ಚುನಾವಣೆಯನ್ನು ಬಸವರಾಜ ಬೊಮ್ಮಾಯಿ ನೇತೃತ್ವ
  • 'ಬೊಮ್ಮಾಯಿ ನೇತೃತ್ವ ಅಂದ್ರೆ ಮುಂದಿನ ಸಿಎಂ ಅಂತಲೇ ಅರ್ಥ'
  • ವಸತಿ ಸಚಿವ ವಿ.ಸೋಮಣ್ಣ ಸ್ಪಷ್ಟಪಡಿಸಿದ್ದಾರೆ
  • ಈ ಮೂಲಕ ಮುಂದಿನ ಬಿಜೆಪಿ ಸಿಎಂ ಅಭ್ಯರ್ಥಿ ಯಾರು ಎಂಬ ಗೊಂದಲಕ್ಕೆ ತೆರೆ ಎಳೆಯುವ ಪ್ರಯತ್ನ  
click me!