ಶೀಘ್ರ ಕಾಂಗ್ರೆಸ್ ಪ್ರಬಲ ವಿಕೆಟ್ ಪತನ ಸೂಚನೆ

By Kannadaprabha News  |  First Published Oct 31, 2021, 6:40 AM IST
  •  ಪಕ್ಷದಲ್ಲಿ ಸ್ಥಾನಮಾನದ ವಿಚಾರವಾಗಿ ಕಾಂಗ್ರೆಸ್‌ನ ಕೆಲ ನಾಯಕರ ಜತೆಗೆ ಮುನಿಸಿಕೊಂಡಿರುವ ಮಾಜಿ ಸಚಿವ
  • ಡಿಸೆಂಬರ್‌ನಲ್ಲಿ ತಮ್ಮ ಮುಂದಿನ ರಾಜಕೀಯ ನಡೆ ಕುರಿತು ತೀರ್ಮಾನ ತೆಗೆದುಕೊಳ್ಳುವುದಾಗಿ ಮಾಹಿತಿ

ರಾಯಚೂರು (ಅ.31): ಪಕ್ಷದಲ್ಲಿ ಸ್ಥಾನಮಾನದ ವಿಚಾರವಾಗಿ ಕಾಂಗ್ರೆಸ್‌ನ (Congress) ಕೆಲ ನಾಯಕರ ಜತೆಗೆ ಮುನಿಸಿಕೊಂಡಿರುವ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ (CM Ibrahim) ಅವರು ಡಿಸೆಂಬರ್‌ನಲ್ಲಿ ತಮ್ಮ ಮುಂದಿನ ರಾಜಕೀಯ ನಡೆ (political Move) ಕುರಿತು ತೀರ್ಮಾನ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ. 

ಮುಂದಿನ ದಿನಗಳಲ್ಲಿ ರಾಜ್ಯ ರಾಜಕೀಯದಲ್ಲಿ (politics) ಭಾರೀ ಬದಲಾವಣೆಯಾಗಲಿದೆ. ಮೊದಲಿನಿಂದಲೂ ನಾನು ಯಾವುದೇ ಜಾತಿಗೆ (Cast) ಸೀಮಿತವಲ್ಲ ಎನ್ನುವುದು ಎಲ್ಲರಿಗೂ ಗೊತ್ತಿದೆ. ಬೇರೆ ಪಕ್ಷದ ಮುಖಂಡರೊಂದಿಗೆ ಸಂಪರ್ಕದಲ್ಲಿದ್ದೇನೆ. 

Tap to resize

Latest Videos

ಟಿಪ್ಪು ಜಯಂತಿ ಅಂದೇ ವಿರೋಧಿಸಿದ್ದೆ, ಸಿದ್ದುಗ್ಗೆ ಗುದ್ದಿದ ಸಿಎಂ ಇಬ್ರಾಹಿಂ!

ಬದಲಾವಣೆ ಬಯಸುವವರು ನಮ್ಮೊಂದಿಗೆ ಬರುತ್ತಾರೆ ಎಂದರು. ಉಪ ಚುನಾವಣೆ (Election) ಪ್ರಚಾರಕ್ಕೆ ಹೋಗುವಂತೆ ಕಾಂಗ್ರೆಸ್‌ ಹೈಕಮಾಂಡ್‌ನಿಂದ (Congress high command) ಸೂಚನೆ ಬಾರದ ಕಾರಣ ನಾನು ಹೋಗಲಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Former CM Siddaramaiah) ಅವರ ಟೇಸ್ಟ್‌ ಬೇರೆಯಾಗಿದ್ದು, ಮನೆ ಊಟ ಬೇಸರವೆನಿಸಿದೆ ಎಂದರು. ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ನಾಯಕರು ಸೇರಿ ಇತರರು ಬಳಸಿದ ಭಾಷೆ (language) ಅಸಹ್ಯ ಮೂಡಿಸುತ್ತದೆ ಎಂದರು.

ಜತೆಗೆ, ಶಾಸಕ ಜಮೀರ್‌ ಅಹಮದ್‌ (MlA Zameer Ahmed) ನಮ್ಮ ಸಮುದಾಯದ ಮುಖಂಡರು. ಅವರು ಇನ್ನೊಬ್ಬರಿಗೆ ಬಾಯಿಗೆ ಬಂದಂತೆ ಮಾತನಾಡುವುದು ಯಾರಿಗೂ ಶೋಭೆ ನೀಡುವುದಿಲ್ಲ ಎಂದು ಹೇಳಿದರು.

ಇಬ್ರಾಹಿಂಗೆ ಯಾವ್ಯಾವಾಗ ಏನೇನು ಜ್ಞಾನೋದಯ ಆಗುತ್ತೋ ಗೊತ್ತಿಲ್ಲ: ಬೊಮ್ಮಾಯಿ ತಿರುಗೇಟು

ಬೊಮ್ಮಾಯಿಗೂ ಪೂರ್ಣಾವಧಿ ಇಲ್ಲ: ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ (Former CM BS Yediyurappa) ಮಾದರಿಯಲ್ಲಿ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraja bommai) ಸಹ ಪೂರ್ಣಾವಧಿ ಅಧಿಕಾರ ನಡೆಸುವುದಿಲ್ಲ. ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅಕಾಲಿಕವಾಗಿ ಅಧಿಕಾರ ಕಳೆದುಕೊಳ್ಳುತ್ತಾರೆಂದು ಹೇಳಿದ್ದೆ. ಅದೇ ರೀತಿ ಬೊಮ್ಮಾಯಿ ಕೂಡ ಅಧಿಕಾರ ಕಳೆದುಕೊಳ್ಳಲಿದ್ದಾರೆ. ಬಸವಕೃಪಾ ಮತ್ತು ಕೇಶವ ಕೃಪಾ ಒಂದಾಗುವುದು ಕಷ್ಟ ಎಂದು ಇಬ್ರಾಹಿಂ ಹೇಳಿದರು.

ಜೆಡಿಎಸ್ ಸೇರುವ ಒಲವು

 

2023ರ ವಿಧಾನಸಭೆ ಚುನಾವಣೆ ಕಾಂಗ್ರೆಸ್ (Congress) ಸಿದ್ಧತೆ ನಡೆಸಿದ್ದು, ಹಲವು ಜೆಡಿಎಸ್ ಹಾಗೂ ಬಿಜೆಪಿ ನಾಯಕರಿಗೆ ಗಾಳ ಹಾಕಿದೆ. ಆದ್ರೆ, ಇದರ ಮಧ್ಯೆ ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ಪಕ್ಷದಿಂದ ಅಂತರ ಕಾಯ್ದುಕೊಂಡು ಜೆಡಿಎಸ್‌ಗೆ ಹತ್ತಿರವಾಗುತ್ತಿದ್ದಾರೆ.

ಹೌದು....ಕಾಂಗ್ರೆಸ್ ಹಿರಿಯ ನಾಯಕ ಸಿ.ಎಂ. ಇಬ್ರಾಹಿಂ (CM Ibrahim) ಅವರು ಯಾಕೋ ತಮ್ಮ ನಡೆ ಬದಲಿಸುವಂತೆ ಕಾಣಿಸುತ್ತಿದೆ. ಇದಕ್ಕೆ ಪೂರಕವೆಂಬಂತೆ ಇಬ್ರಾಹಿಂ ಹಾಗೂ ಎಚ್‌ಡಿ ಕುಮಾರಸ್ವಾಮಿ ನಡುವಿನ ರಾಜಕೀಯ ಒಡನಾಟ ಹೆಚ್ಚಾಗುತ್ತಿದೆ.

ಕುಮಾರಸ್ವಾಮಿ ಕೈಬಲಪಡಿಸಬೇಕಿದೆ: ಜೆಡಿಎಸ್‌ ಸೇರುವ ಮುನ್ಸೂಚನೆ ಕೊಟ್ರಾ ಕಾಂಗ್ರೆಸ್ ಹಿರಿಯ ನಾಯಕ

 ಶಿವಮೊಗ್ಗದ ಭದ್ರಾವತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ (HD Kumaraswamy) ಜತೆ ವೇದಿಕೆ ಹಂಚಿಕೊಂಡಿದ್ದ ಇಬ್ರಾಹಿಂ, ಇಂದು (ಸೆ.22) ಬಿಡದಿಯ ತೋಟದ ಮನೆಯಲ್ಲಿ ಕುಮಾರಸ್ವಾಮಿಯನ್ಜು ಭೇಟಿ ಮಾಡಿ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚೆ ನಡೆಸಿರುವುದು ತೀವ್ರ ಕುತೂಹಲ ಮೂಡಿಸಿತ್ತು

ಈ ಹಿಂದೆ ಕಾಂಗ್ರೆಸ್ ಬಿಟ್ಟು ಜೆಡಿಎಸ್ ನತ್ತ ಒಲವು ತೋರಿದ್ದ ಇಬ್ರಾಹಿಂ, ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ (HD Devegowda) ಹಾಗೂ ಕುಮಾರಸ್ವಾಮಿ ಅವರನ್ನು ಭೇಟಿ ಮಾತುಕತೆ ನಡೆಸಿದ್ದರು.  ಜೆಡಿಎಸ್ ಪಕ್ಷದ ಅಧ್ಯಕ್ಷ ಸ್ಥಾನವನ್ನು ಇಬ್ರಾಹಿಂಗೆ ನೀಡುವ ಬಗ್ಗೆ ಚರ್ಚೆ ಆಗಿತ್ತು. ನಂತರ ಡಿಕೆ ಶಿವಕುಮಾರ್ (DK Shivakumar) ಹಾಗೂ ಸಿದ್ದರಾಮಯ್ಯ ಪ್ರತ್ಯೇಕವಾಗಿ ಇಬ್ರಾಹಿಂ ನಿವಾಸಕ್ಕೆ ಹೋಗಿ ಪಕ್ಷ ಬಿಡದಂತೆ ಮನವೊಲಿಸಿದ್ದರು. ಆದರೆ ಇದೀಗ ಮತ್ತೆ ಕುಮಾರಸ್ವಾಮಿ ಭೇಟಿ ಮಾಡಿರುವ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.

ಅಲ್ಲದೇ ಕರ್ನಾಟಕದಲ್ಲಿ ಕುಮಾರಸ್ವಾಮಿ ಕೈ ಬಲಪಡಿಸಬೇಕಿದೆ. ಇಂದಿನಿಂದ ಶುಭಕಾಲ ಆರಂಭವಾಗಿದೆ ಎಂದು ಇದೇ ಇಬ್ರಾಹಿಂ,  ಭದ್ರಾವತಿ ತಾಲ್ಲೂಕು ಗೋಣಿಬೀಡಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಹಿರಂಗವಾಗಿಯೇ ಹೇಳಿದ್ದನ್ನ ಇಲ್ಲಿ ಸ್ಮರಿಸಬಹುದು.

ಒಟ್ಟಿನಲ್ಲಿ ಸಿ.ಎಂ. ಇಬ್ರಾಹಿಂ ಅವರ ಇತ್ತೀಚೆಗಿನ ನಡೆ ಗಮನಿಸಿದರೆ ಕಾಂಗ್ರೆಸ್ ತೊರೆದು ಜೆಡಿಎಸ್‌ (JDS) ಸೇರ್ಪಡೆಯಾಗಿವ ಎಲ್ಲಾ ಸಾಧ್ಯತೆಗಳಿವೆ. 

click me!