ಉಪಮುಖ್ಯಮಂತ್ರಿ ಹುದ್ದೆ ನಿರೀಕ್ಷೆಯಲ್ಲಿರುವ ಶ್ರೀರಾಮುಲುಗೆ ಎದುರಾಯ್ತು ಮತ್ತೊಂದು ಸಂಕಷ್ಟ

By Suvarna NewsFirst Published Dec 17, 2019, 8:30 PM IST
Highlights

 ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಹುದ್ದೆಯ ನಿರೀಕ್ಷೆಯಲ್ಲಿರುವ ಸಚಿವ ಬಿ.ಶ್ರೀರಾಮುಲುಗೆ ಇದೀಗ ಹಳೇ ಪ್ರಕರಣದಲ್ಲಿ ಹೊಸ ಸಂಕಷ್ಟ ಎದುರಾಗಿದೆ.

ಬೆಂಗಳೂರು, [ಡಿ.17]: ಬಳ್ಳಾರಿ ಹೊರವಲಯದಲ್ಲಿ ಬೆಲೆಬಾಳುವ ಜಮೀನು ಕಬಳಿಸಿದ ಆರೋಪಕ್ಕೊಳಗಾಗಿರುವ ಆರೋಗ್ಯ ಸಚಿವ ಬಿ. ಶ್ರೀರಾಮುಲು ವಿರುದ್ಧ 'ಭೂಕಬಳಿಕೆ ತಡೆ ವಿಶೇಷ ನ್ಯಾಯಾಲಯ' ಸ್ವಯಂಪ್ರೇರಿತ  ಪ್ರಕರಣ ದಾಖಲಿಸಿಕೊಂಡಿದೆ.

ನ್ಯಾಯಾಧೀಶ ಎಚ್.ಎನ್.ನಾರಾಯಣ ನೇತೃತ್ವದ ಪೀಠ ಸ್ವಯಂ ಸ್ವಯಂಪ್ರೇರಿತ ಪ್ರಕರಣ [ಸುಮೋಟೋ ಕೇಸ್] ದಾಖಲಿಸಿಕೊಂಡಿದ್ದಲ್ಲೇ, ಈ ಪ್ರಕರಣದ ಬಗ್ಗೆ ಸಮಗ್ರ ವರದಿ ನೀಡುವಂತೆ ಬಳ್ಳಾರಿ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ.

ಬಿಎಸ್‌ವೈ ನಿವಾಸಕ್ಕೆ ಸಚಿವಾಕಾಂಕ್ಷಿಗಳ ದಂಡು! ಯಾರಾಗ್ತಾರೆ 4ನೇ ಡಿಸಿಎಂ?

2008 ಬಳ್ಳಾರಿ ಗ್ರಾಮೀಣ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಶ್ರೀರಾಮುಲು, ಕೌಲ್ ಬಜಾರ್ ಪ್ರದೇಶದಲ್ಲಿ 57 ಎಕರೆ ಸರ್ಕಾರಿ ಮತ್ತು ಖಾಸಗಿ ಜಮೀನು ಕಬಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಅಂದು ಅಂದ್ರೆ 2008ರಲ್ಲೂ ಸಹ ಇದೇ ಆರೋಗ್ಯ ಸಚಿವರಾಗಿದ್ದ ಶ್ರೀರಾಮುಲು ವಿರುದ್ಧ ಜಿ.ಕೃಷ್ಣಮೂರ್ತಿ ಎನ್ನುವರು ಜಿಲ್ಲಾ ಮತ್ತು ವಿಶೇಷ ನ್ಯಾಯಾಲದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ದೂರಿನ ವಿಚಾರಣೆ ನಡೆಸಿದ್ದ ನ್ಯಾಯಾಲಯ ಈ ಬಗ್ಗೆ ತನಿಖೆ ನಡೆಸುವಂತೆ ಲೋಕಾಯುಕ್ತ ಪೊಲೀಸರಿಗೆ ನಿರ್ದೇಶಿಸಿತ್ತು.

BSYಯಿಂದ ಶ್ರೀರಾಮುಲು ಅಂತರ ಕಾಯ್ದುಕೊಳ್ತಿರೋದೇಕೆ?: ಇಲ್ಲಿವೆ 7 ಕಾರಣಗಳು

2018ರ ವಿಧಾನಸಭೆ ಸಂದರ್ಭದಲ್ಲಿ ಶ್ರೀರಾಮುಲು ಅವರಿಗೆ ಉಪಮುಖ್ಯಮಂತ್ರಿ ಕೊಡಲಾಗುತ್ತದೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಆದ್ರೆ ಡಿಸಿಎಂ ಹುದ್ದೆ ಸಿಗದಿದ್ದರಿಂದ ಇದೀಗ ರಾಮುಲು ನಾಯಕರ ಮೇಲೆ ಮುನಿಸಿಕೊಂಡಿದ್ದು, ದೂರ-ದೂರ ಹೋಗುತ್ತಿದ್ದಾರೆ. ಇದೀಗ ಭೂಕಂಟಕ ಎದುರಾಗಿದ್ದು, ಶ್ರೀರಾಮುಲುಗೆ ಮತ್ತಷ್ಟು ಹಿನ್ನಡೆಯಾಗುವ ಸಾಧ್ಯತೆಗಳಿವೆ.

click me!