ತೀವ್ರ ಸ್ವರೂಪ ಪಡೆದುಕೊಂಡ ಮೊಟ್ಟೆ ಗಲಾಟೆ, ಮತ್ತೊಂದು ರಣಕಹಳೆ ಮೊಳಗಿಸಲು ಸಿದ್ದರಾಮಯ್ಯ ಟೀಮ್ ಸಜ್ಜು

By Ramesh B  |  First Published Aug 20, 2022, 12:35 PM IST

ಮಡಿಕೇರಿಗೆ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆದಿರುವ ಪ್ರಕರಣ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದು ಈ ಕುರಿತು ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವೆ ಕೆಸರೆರಚಾಟ ಜೋರಾಗಿಯೇ ನಡೆಯುತ್ತಿದೆ.ಇದಕ್ಕೆ ಸಿದ್ದು ಬಣ ಬೇರೆ ಪ್ಲಾನ್ ಮಾಡಿದೆ.


ಬೆಂಗಳೂರು/ಮೈಸೂರು, (ಆ.20): ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆದ ವಿಚಾರ ಇದೀಗ ರಾಜ್ಯ ರಾಜಕಾರಣದಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇದೇ ಆಗಸ್ಟ್ 26ರಂದು ಕೊಡಗು ಎಸ್ಪಿ ಕಚೇರಿ ಮುತ್ತಿಗೆ ಹಾಕಲು ಸಿದ್ದರಾಮಯ್ಯ ಕರೆ ಕೊಟ್ಟಿದ್ದಾರೆ.

ಇದರ ಮಧ್ಯೆ ಸಿದ್ದರಾಮಯ್ಯನವರ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಮೈಸೂರಿನಿಂದ ಮಡಿಕೇರಿಗೆ ಪಾದಯಾತ್ರೆ ಮಾಡಲು ಚಿಂತನೆ ನಡೆಸಿದ್ದಾರೆ. ಮಡಿಕೇರಿ ಚಲೋ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲು ಸಿದ್ದತೆ ನಡೆಸಿದ್ದು ಪಾದಯಾತ್ರೆಯ ರೂಪುರೇಷೆ ಕುರಿತು ಮೈಸೂರಿನಲ್ಲಿ ಸಿದ್ದತೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

Latest Videos

undefined

ಸಿದ್ದು ಕಾರಿಗೆ ಮೊಟ್ಟೆ ಎಸೆದಿದ್ದು ಖಂಡಿಸಿ ರಾಜ್ಯಾದ್ಯಂತ ಕಾಂಗ್ರೆಸ್‌ ಪ್ರತಿಭಟನೆ

ಇದೇ ತಿಂಗಳ ಆಗಸ್ಟ್ 26ರಂದು ಮಡಿಕೇರಿಯಲ್ಲಿ ಎಸ್ಪಿ ಕಚೇರಿ ಮುತ್ತಿಗೆ ಕಾರ್ಯಕ್ರಮವನ್ನ ಕಾಂಗ್ರೆಸ್ ಹಮ್ಮಿಕೊಂಡಿದೆ. ಇದಕ್ಕೂ ಮುನ್ನ ಬಳ್ಳಾರಿ ಚಲೋ ಪಾದಯಾತ್ರೆಯ ರೀತಿಯಲ್ಲಿ ಮೈಸೂರಿನಿಂದ ಮಡಿಕೇರಿ ಚಲೋ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲು ಸಿದ್ದರಾಮಯ್ಯ ಬಣ ಯೋಜನೆ ರೂಪಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಹಾಗೂ ಯತೀಂದ್ರ ಶ=ಸಿದ್ದರಾಮಯ್ಯ ನೇತೃತ್ವದಲ್ಲಿ ಕಾರ್ಯಕ್ರಮದ ರೂಪುರೇಷೆ ಸಿದ್ದಪಡಿಸಲಾಗುತ್ತಿದೆ.

ಸಿದ್ದರಾಮಯ್ಯ ತಮ್ಮ ತಾಕತ್ತು ಹಾಗೂ ವರ್ಚಸ್ಸನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲಿರುವ ಸಿದ್ದರಾಮಯ್ಯ. ರಾಜ್ಯ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲೇ ಆಡಳಿತರೂಢ ಬಿಜೆಪಿ ಸರ್ಕಾರದಿಂದ ಒಂದರ ಮೇಲ್ಲೊಂದು ಎಡವಟ್ಟು ಹಾಗೂ ಈ ಮೊಟ್ಟೆ ಪ್ರಕರಣವನ್ನು ಲಾಭ ಪಡೆಯಲು ಕಾಂಗ್ರೆಸ್ ಯತ್ನ ಕಸರತ್ತು ನಡೆಸಿದೆ.

ದಾವಣೆಗೆರೆಯಲ್ಲಿ ಅಮೃತ ಮಹೋತ್ಸವಕ್ಕೆ ಸಿಕ್ಕ ಅಭೂತ ಬೆಂಬಲದಿಂದ ಸಿದ್ದರಾಮಯ್ಯ ಫುಲ್ ಖುಷ್ ಆಗಿದ್ದಾರೆ. ಇನ್ನೊಂದೆಡೆ ಆಡಳಿತರೂಢ ಬಿಜೆಪಿಗೆ ಕಸಿವಿಸಿಯಾಗುತ್ತಿದ್ದು, ಇದಕ್ಕೆ ಪ್ರತಿಯಾಗಿ ಏನಾದರೂ ಒಂದು ಮಾಡಿ ಸಿದ್ದರಾಮಯ್ಯನವರನ್ನ ಕೆಡವಲು ಇನ್ನಿಲ್ಲದ ಕಸರತ್ತು ನಡೆಸಿದೆ. ಇದೀಗ ಸಾವರ್ಕರ್ ವಿಚಾರವನ್ನಿಟ್ಟುಕೊಂಡು ಬಿಜೆಪಿ ಸಿದ್ದರಾಮಯ್ಯವರ ಹಿಂದೆ ಬಿದ್ದಿದೆ.

ಅಲ್ಲದೇ ಕಾಂಗ್ರೆಸ್ ಮುತ್ತಿಗೆ ಬಗ್ಗೆ ಸ್ಥಳೀಯ ಶಾಸಕ ಕೆ.ಜಿ ಬೊಪ್ಪಯ್ಯ ಪ್ರತಿಕ್ರಿಯಿಸಿ, ಬರಲಿ ನೋಡುತ್ತೇವೆ ಎಂದು ಸವಾಲು ಹಾಕಿದ್ದಾರೆ. ಇದನ್ನ ಸವಾಲಾಗಿ ಸ್ವೀಕರಿಸಿರುವ  ಇದಕ್ಕೆ ಟಕ್ಕರ್ ಕೊಡಲು ಸಿದ್ದರಾಮಯ್ಯನವರ  ಟೀಮ್ ನಮ್ಮ ನಡಿಗೆ ಮಡಿಕೇರಿ ಕಡೆಗೆ ಎಂಬ ಶೀರ್ಷಿಕೆಯಡಿಯಲ್ಲಿ ಬಿಜೆಪಿ ಹಾಗೂ ಆ ವಿರುದ್ದ ರಣಕಹಳೆ ಊದಲು ಸಜ್ಜಾಗಿದೆ. 

click me!