ನಾನೇನು ಹಿಂದೂ ಅಲ್ವೇನ್ರಿ?, ಹಿಂದುತ್ವ ಅವರಪ್ಪನ ಆಸ್ತಿನಾ?: ಬಿಜೆಪಿಗರ ವಿರುದ್ಧ ಡಿಕೆಶಿ ಗರಂ

By Girish GoudarFirst Published Aug 20, 2022, 12:33 PM IST
Highlights

ಸಿದ್ದರಾಮಯ್ಯ ಅವರ ಮನೆ ದೇವರ ಹೆಸರು ಇಟ್ಟುಕೊಂಡಿದ್ದಾರೆ. ಶಿವನ ಮಗ ಕುಮಾರ ಅಂತ ನನಗೆ ಹೆಸರು ಇಟ್ಟಿದ್ದಾರೆ: ಡಿ.ಕೆ.ಶಿವಕುಮಾರ್‌

ಬೆಂಗಳೂರು(ಆ.20):  ನಾನೇನು ಹಿಂದೂ ಅಲ್ವೇನ್ರಿ?, ಗಾಂಧಿ ಪರಿವಾರದವರು ಕಾಶ್ಮೀರದ ಪಂಡಿತರಾಗಿದ್ದವರು. 25 ವರ್ಷಗಳಳ ಹಿಂದೆ ಯುಗಾದಿ ಹಬ್ಬದ ದಿನ ಸೋನಿಯಾ ಗಾಂಧಿ ಮನೆಗೆ ಹೋಗಿದ್ದೆವು. ಅವತ್ತು ಯುಗಾದಿ ಹಬ್ಬ ಇತ್ತು, ಸೋನಿಯಾ ಅವರು ಯುಗಾದಿ ಹಬ್ಬವನ್ನ ಮಾಡ್ತಾ ಇದ್ರು, ನನಗೆ ಶಿವನ ಮಗ ಕುಮಾರ ಅಂತ ಹೆಸರು ಇಟ್ಟಿದ್ದಾರೆ. ಸಿದ್ದರಾಮಯ್ಯ ಅಂತ ಅವರಿಗೆ ಹೆಸರು ಇಟ್ಟಿದ್ದಾರೆ. ಕಲ್ಲು, ಮಣ್ಣು ಅಂತ ಹೆಸರು ಇಟ್ಟಿಕೊಂಡಿದ್ದೇವಾ?. ಹಿಂದುತ್ವ ಅವರಪ್ಪನ ಆಸ್ತಿನಾ? ಅಂತ ಬಿಜೆಪಿಗರ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಕಾಂಗ್ರೆಸ್ ಹಿಂದುತ್ವ ಒಪ್ಪಿಕೊಳ್ಳಲಿ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಶನಿವಾರ) ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ರಾಹುಲ್ ಗಾಂಧಿ ಹಿಂದೂ ಅಲ್ವಾ?, ಪ್ರಿಯಾಂಕಾ ಗಾಂಧಿ ಹಿಂದೂ ಅಲ್ವಾ?, ಹಿಂದುತ್ವ ಯಾರ ಆಸ್ತಿಯೂ ಅಲ್ಲ. ಗಾಂಧಿ ಪರಿವಾರ ಪಂಡಿತರು ರೀ ಅವರು, ಸಿದ್ದರಾಮಯ್ಯ ಅವರ ಮನೆ ದೇವರ ಹೆಸರು ಇಟ್ಟುಕೊಂಡಿದ್ದಾರೆ. ಶಿವನ ಮಗ ಕುಮಾರ ಅಂತ ನನಗೆ ಹೆಸರು ಇಟ್ಟಿದ್ದಾರೆ ಅಂತ ಕಿಡಿಕಾರಿದ್ದಾರೆ. 

ಬರೀ ಹೇಳಿಕೆ ಬೇಡ, ಕೂಡ್ಲೇ ತನಿಖೆ ಮಾಡಿ, ಸಿಐಡಿ- ಇಡಿಗೆ ವಹಿಸಿ: ಸರ್ಕಾರಕ್ಕೆ ಡಿಕೆಶಿ ಸವಾಲ್

ಹಿಂದೂ ಧರ್ಮದ ಆಚರಣೆ ಮತ್ತು ಬಿಜೆಪಿ ತತ್ವದಲ್ಲಿ ವ್ಯತ್ಯಾಸ ಇದೆ. ಕುವೆಂಪು ಒಂದು ಗೀತೆ ಕೊಟ್ಟಿದ್ದಾರೆ. ನಾಡಗೀತೆ ಕೊಟ್ಟಿದ್ದಾರೆ. ಅದನ್ನು ಬಿಡಿಸಿ ಹಾಡಲು ಹೇಳಿ‌ ನೋಡೊಣ, ಆ ಗೀತೆ‌ ತೆಗೆದು ಹಾಕಲಿ ನೋಡೋಣ, ಗಾಂಧೀಜಿ ಹಾಡಿದ ರಘುಪತಿ ರಾಘವ ರಾಜಾ ರಾಂ ಹಾಡು ತೆಗೆಯಲಿ ನೋಡೋಣ, ಸುಮ್ಮನೆ ಗಲಭೆ ಎಬ್ಬಿಸುವುದಲ್ಲ ಅಂತ ಬಿಜೆಪಿಗರ ವಿರುದ್ಧ ಡಿಕೆಶಿ ಹರಿಹಾಯ್ದಿದ್ದಾರೆ. 

ನಿನ್ನೆ ಶಿವಮೊಗ್ಗದ ವ್ಯಾಪಾರಿಗಳು ಬಂದಿದ್ರು, ಯಾರು ಕೂಡ ರಾಜಕೀಯ ಪಕ್ಷಕ್ಕೆ ಸೇರಿದವರಲ್ಲ. ವ್ಯಾಪಾರಕ್ಕೆ ತೊಂದರೆಯಾಗಿದೆ ಅಂದ್ರು, ಈಶ್ವರಪ್ಪ‌ ಹತ್ರ ಕೇಳಿ ಅಂದೆ, ಸರ್ ಅವರ ಬಗ್ಗೆ ಈಗ ಗೊತ್ತಾಗಿದೆ. ಮುಂದೆ ನಾವು ಏನು ಅಂತ ತೊರಿಸುತ್ತೇವೆ ಅಂದ್ರು, ಕಾಲಿಗೆ ಗುಂಡು ಹೊಡೆದು ಸಾಯಿಸ್ತೇನೆ ಅಂದ್ರು, ಎಸ್ಪಿಯನ್ನು ಇನ್ನೂ ಯಾಕೆ ಇಟ್ಟುಕೊಂಡಿದ್ದೀರ?, ಇವರೇನು ಜಡ್ಜಾ..?, ಇದು ಟ್ರೇಲರ್ ಅಷ್ಟೇ, ಮುಂದೆ ಪಿಕ್ಚರ್ ಇದೆ ಅಂತಿದ್ದಾರೆ. ಆದರೂ ಯಾಕೆ ಕ್ರಮ ತೆಗೆದುಕೊಂಡಿಲ್ಲ? ಅಂತ ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ವಿರುದ್ಧ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 
 

click me!