40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?

40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?

Published : Jul 17, 2026, 02:32 PM IST

ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಕೇವಲ ಇಪ್ಪತ್ತು ಸಚಿವ ಸ್ಥಾನಗಳು ಖಾಲಿ ಇದ್ದು, ನಲವತ್ತಕ್ಕೂ ಹೆಚ್ಚು ಶಾಸಕರು ಆಕಾಂಕ್ಷಿಗಳಾಗಿದ್ದಾರೆ. ಹಿರಿಯ ನಾಯಕರು ತಮ್ಮ ಅನುಭವದ ಆಧಾರದ ಮೇಲೆ ಪಟ್ಟು ಹಿಡಿದಿದ್ದರೆ, ಯುವ ಶಾಸಕರು ಅವಕಾಶದ ನಿರೀಕ್ಷೆಯಲ್ಲಿ ದೆ.

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಈಗ ಹೈಕಮಾಂಡ್ ಮಟ್ಟದ ಹೈಡ್ರಾಮಾ ಶುರುವಾಗಿದೆ. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸಾಮ್ರಾಜ್ಯದಲ್ಲಿ ಈಗ ಸಂಪುಟ ಸಮರ ತಾರಕಕ್ಕೇರಿದೆ. ಸದ್ಯ ಸಚಿವ ಸಂಪುಟದಲ್ಲಿ ಖಾಲಿ ಇರುವುದು ಕೇವಲ ಇಪ್ಪತ್ತು ಸ್ಥಾನಗಳು ಮಾತ್ರ. ಆದರೆ ಈ ಮಂತ್ರಿಗಿರಿಗಾಗಿ ದೆಹಲಿಗೆ ದಂಡಯಾತ್ರೆ ಕೈಗೊಂಡಿರುವ ಆಕಾಂಕ್ಷಿ ಶಾಸಕರ ಸಂಖ್ಯೆ ಬರೋಬ್ಬರಿ ನಲವತ್ತನ್ನು ದಾಟಿದೆ! ಶಾಸಕರುಗಳ ಭಾರಿ ಪಟ್ಟು ಮತ್ತು ಸಚಿವ ಸ್ಥಾನಕ್ಕಾಗಿ ನಡೆಯುತ್ತಿರುವ ಪೈಪೋಟಿಯಿಂದಾಗಿ ಕಾಂಗ್ರೆಸ್ ಕೋಟೆ ಈಗ ಒಳಗೊಳಗೇ ಧಗಧಗಿಸುತ್ತಿದೆ.

ಹಿರಿಯರ ಹೂಂಕಾರಕ್ಕೆ ಹೈಕಮಾಂಡ್ ತತ್ತರ?

ಈಗಾಗಲೇ ಹಲವು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಹಿರಿಯ ನಾಯಕರು ಸಚಿವ ಸ್ಥಾನಕ್ಕಾಗಿ ಹೂಂಕಾರ ಹಾಕುತ್ತಿದ್ದಾರೆ. ಈ ಹಿರಿಯ ಶಾಸಕರ ಹಠದ ಹಿಂದೆ ಯಾವುದಾದರೂ ನಿಗೂಢ ರಾಜಕೀಯ ತಂತ್ರ ಅಡಗಿದೆಯೇ ಎಂಬ ಪ್ರಶ್ನೆ ಈಗ ಎದುರಾಗಿದೆ. ಮತ್ತೊಂದೆಡೆ, ಪಕ್ಷದ ನಾಯಕ ರಾಹುಲ್ ಗಾಂಧಿ ಈ ಹಿಂದೆ ನೀಡಿದ್ದ ಒಂದು ಮಹತ್ವದ ಹೇಳಿಕೆ ಈಗ ಹೊಸ ಮತ್ತು ಯುವ ಶಾಸಕರಲ್ಲಿ ದೊಡ್ಡ ಆಶಾಭಾವನೆಯನ್ನು ಮೂಡಿಸಿದೆ. ಯುವಕರಿಗೂ ಅವಕಾಶ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಹೊಸಬರು ಕಾದು ಕುಳಿತಿದ್ದಾರೆ.

ಕೊಟ್ಟ ಮಾತು ನೆನಪಿಸುತ್ತಿರುವ ನಾಯಕರು

ಇನ್ನು ಕೆಲ ಪ್ರಭಾವಿ ನಾಯಕರು ಚುನಾವಣೆಗೂ ಮುನ್ನ ಮತ್ತು ಸರ್ಕಾರ ರಚನೆಯ ಸಂದರ್ಭದಲ್ಲಿ ಹೈಕಮಾಂಡ್ ತಮಗೆ ನೀಡಿದ್ದ ಭರವಸೆಗಳನ್ನು ಹಾಗೂ 'ಕೊಟ್ಟ ಮಾತು'ಗಳನ್ನು ನೆನಪಿಸುತ್ತಿದ್ದಾರೆ. "ಈ ಬಾರಿ ನಮಗೆ ಜಾತಿ ಮತ್ತು ಪ್ರಾದೇಶಿಕ ಲೆಕ್ಕಾಚಾರಗಳನ್ನು ಬದಿಗಿಟ್ಟು, ಕೇವಲ ಪಕ್ಷಕ್ಕಾಗಿ ನಾವು ಸಲ್ಲಿಸಿರುವ ಸುದೀರ್ಘ ಸೇವೆಯನ್ನಷ್ಟೇ ಮಾನದಂಡವಾಗಿ ಪರಿಗಣಿಸಬೇಕು" ಎಂದು ತೀವ್ರ ಒತ್ತಡ ಹೇರುತ್ತಿದ್ದಾರೆ. ಹೀಗಾಗಿ ಸಚಿವ ಸಂಪುಟ ವಿಸ್ತರಣೆಯ ಬಿಕ್ಕಟ್ಟು ಸದ್ಯಕ್ಕೆ ಬಗೆಹರಿಯದ ಒಗಟಾಗಿ ಪರಿಣಮಿಸಿದೆ.

21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
21:20ಕೈಜಾರಿದ ಮಂತ್ರಿ ಸ್ಥಾನ, ಭುಗಿಲೆದ್ದ ಅಸಮಾಧಾನ! ಹೈಕಮಾಂಡ್ ಲೆಕ್ಕಾಚಾರವೇ ಉಲ್ಟಾ ಆಯ್ತಾ?
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:5360:40 ಮಂತ್ರದಂಡ..! ಬಂಡೆ ಮಂತ್ರಿಮಂಡಲದಲ್ಲಿ ಯಾರಿಗೆ ಅದೃಷ್ಟ? ಯಾರಿಗೆ ಅರ್ಧಚಂದ್ರ..?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
Read more