ಸಂಗಣ್ಣ ಕರಡಿ ಬಿಜೆಪಿ ಬಿಡಲ್ಲ, ಸ್ಪರ್ಧೆ ಮಾಡಲ್ಲ: ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ

By Govindaraj S  |  First Published Mar 22, 2024, 10:39 AM IST

ಬಿಜೆಪಿ ಟಿಕೆಟ್ ಸಿಗದೆ ರೆಬಲ್ ಆಗಿರುವವರ ಜತೆ ಮಾತುಕತೆ ನಡೆದಿದ್ದು, ಅತಿ ಶೀಘ್ರ ಎಲ್ಲ ಪರಿಹಾರ ಕಾಣುವ ವಿಶ್ವಾಸವಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಹೇಳಿದರು.


ಹುಬ್ಬಳ್ಳಿ (ಮಾ.22): ಬಿಜೆಪಿ ಟಿಕೆಟ್ ಸಿಗದೆ ರೆಬಲ್ ಆಗಿರುವವರ ಜತೆ ಮಾತುಕತೆ ನಡೆದಿದ್ದು, ಅತಿ ಶೀಘ್ರ ಎಲ್ಲ ಪರಿಹಾರ ಕಾಣುವ ವಿಶ್ವಾಸವಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಹೇಳಿದರು. ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಕೊಪ್ಪಳದ ಸಂಗಣ್ಣ ಕರಡಿ ಅವರ ಜತೆ ಖುದ್ದು ನಾನೇ ಮಾತನಾಡಿರುವೆ. ಅವರು ಬಿಜೆಪಿ ಬಿಟ್ಟು ಎಲ್ಲೂ ಹೋಗಲ್ಲ. ಬಂಡಾಯ ಸ್ಪರ್ಧೆಯನ್ನೂ ಮಾಡಲ್ಲ ಎಂಬ ಭರವಸೆ ಕೊಟ್ಟಿದ್ದಾರೆ. ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸುತ್ತಿದ್ದೇನೆ ಅಷ್ಟೇ ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಪ್ರತಿಕ್ರಿಯಿಸಿದರು.

ಮಾಧುಸ್ವಾಮಿ ಜತೆ ಮಾತುಕತೆ: ಮಾಧುಸ್ವಾಮಿ ಅವರ ಜತೆ ಮಾಜಿ ಸಿಎಂ ಯಡಿಯೂರಪ್ಪ ಅವರೇ ಮಾತನಾಡುತ್ತಿದ್ದಾರೆ. ಈಶ್ವರಪ್ಪ ಅವರೊಂದಿಗೆ ಪಕ್ಷದ ವರಿಷ್ಠರೇ ಮನವೊಲಿಕೆಗೆ ಚರ್ಚೆ ನಡೆಸಿದ್ದಾರೆ. ನಾನೂ ಈ ಹಿಂದೆ ಮಾತನಾಡಿದ್ದೆ. ಭಿನ್ನಮತ ನಿಲ್ಲಲ್ಲ. ಅಂತಿಮವಾಗಿ ಎಲ್ಲವು ಸುಖಾಂತ್ಯ ಕಾಣಲಿದೆ ಎಂದು ಹೇಳಿದರು

Tap to resize

Latest Videos

Lok Sabha Election 2024: ತಂದೆ ಬಂಗಾರಪ್ಪನವರೇ ನನಗೆ ಆದರ್ಶ: ಗೀತಾ ಶಿವರಾಜ್‌ಮಾರ್

ಕೇಸ್ ಕೈಬಿಡಲು ಪ್ರಯತ್ನ: ಮಹದಾಯಿ ಹೋರಾಟಗಾರ ಕುತುಬುದ್ದೀನ್ ಖಾಜಿ ಅವರನ್ನು ರಾಜ್ಯ ರೈಲ್ವೆ ಪೊಲೀಸರು ಬಂಧಿಸಿರಬೇಕು. ಏನಾಗಿದೆ ಎಂಬುದು ಸ್ಪಷ್ಟವಾಗಿ ತಿಳಿದಿಲ್ಲ. ಆದರೆ, ಕೇಸ್ ಕೈಬಿಡಲು ಎಲ್ಲ ಪ್ರಯತ್ನ ಮಾಡುತ್ತೇನೆ ಎಂದು ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು. ರಾಜ್ಯ ರೈಲ್ವೆ ಪೊಲೀಸರನ್ನು ರಾಜ್ಯ ಸರ್ಕಾರವೇ ನೇಮಕ ಮಾಡಿಕೊಂಡಿರುತ್ತದೆ. ಅವರು ಕೇಂದ್ರ ರೈಲ್ವೆ ಪೊಲೀಸರಲ್ಲ. ಬಹುಶಃ ಪ್ರಕರಣ ದಾಖಲಿಸಿ, ವಿಚಾರಣೆಗೆ ಹಾಜರಾಗದೇ ಇರಬಹುದು. ಹಾಗಾಗಿ ಬಂಧಿಸಿರಬಹುದು. ಪ್ರಕರಣ ಕೈಬಿಡಲು ಪ್ರಯತ್ನ ಮಾಡುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಬೆಳಗಾವಿ ಬಿಜೆಪಿ ಟಿಕೆಟ್‌ ಶೆಟ್ಟರ್‌ ಸಿಗುವ ಸಾಧ್ಯತೆ: ಬೆಳಗಾವಿ ಲೋಕಸಭಾ ಚುನಾವಣೆಗೆ ಬಹುತೇಕ ಜಗದೀಶ ಶೆಟ್ಟರ್‌ ಅಭ್ಯರ್ಥಿ ಆಗುವ ಸಾಧ್ಯತೆ ಇದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ಸಿಲಿಂಡರ್‌ ಸ್ಫೋಟದಿಂದ ಗಾಯಗೊಂಡಿದ್ದ ಕಲ್ಲೆ ಗ್ರಾಮದ ಗಾಯಾಳುಗಳಿಗೆ ಸ್ವಾಂತ್ವನ ಹೇಳಿದ ಅವರು, ಬೆಳಗಾವಿ ಟಿಕೆಟ್‌ ಶೆಟ್ಟರ್‌ಗೆ ಸಿಗುವ ಸಾಧ್ಯತೆ ಹೆಚ್ಚಿದೆ ಎಂದರು. ಇನ್ನು, ಕರಡಿ ಸಂಗಣ್ಣ ಜತೆ ನಾನು ಮಾತಾಡಿದ್ದೇನೆ. ನಾನು ಪಕ್ಷ ಬಿಡುವುದಿಲ್ಲ ಎಂದು ಹೇಳಿದ್ದಾರೆ. ಅವರು ರೆಬೆಲ್ ಆಗಿ ಕಣಕ್ಕೆ ಇಳಿಯುವ ಪ್ರಶ್ನೆಯೇ ಇಲ್ಲ. ಕೇವಲ ಬೆಂಬಲಿಗರ ಸಭೆ ಮಾಡುವುದಾಗಿ ಅವರು ಹೇಳಿದ್ದಾರೆ ಎಂದರು.

Neuralink: ಮೆದುಳಿಗೆ ಚಿಪ್‌ ಹಾಕಿದ ಬಳಿಕ ತಲೇಲಿ ಯೋಚಿಸಿ ಕಂಪ್ಯೂಟರಲ್ಲಿ ಚೆಸ್‌ ಆಡಿದ!

ಇನ್ನು ಮಾಧುಸ್ವಾಮಿ ಜತೆ ಬಿ.ಎಸ್‌. ಯಡಿಯೂರಪ್ಪ ಮಾತನಾಡುತ್ತಾರೆ. ಉಳಿದ ಆಕಾಂಕ್ಷಿಗಳೊಂದಿಗೆ ಪಕ್ಷದ ಮುಖಂಡರು ಮಾತನಾಡಿ ಅಸಮಾಧಾನ ಶಮನ ಮಾಡುತ್ತಾರೆ ಎಂದು ಜೋಶಿ ಹೇಳಿದರು. ಇದಕ್ಕೂ ಮುಂಚೆ ಸಿಲಿಂಡರ್‌ ಪ್ರಕರಣದಲ್ಲಿ ಗಾಯಾಳುಗಳಿಗೆ ಸಾಂತ್ವನ ಹೇಳಿದ ಅವರು, ಸಂಬಂಧಪಟ್ಟವರಿಗೆ ಸೂಕ್ತ ಪರಿಹಾರ ನೀಡಲು ಹೇಳಿದ್ದೇನೆ. ಸುಮಾರು ₹ 6 ಲಕ್ಷ ಪರಿಹಾರ ಸಿಗಬಹುದು ಎಂದರು.

click me!