*ರಂಗೇರಿದ ಕರ್ನಾಟಕ ರಾಜ್ಯಸಭಾ ಚುನಾವಣೆ
* ನಾಲ್ಕುನೇ ಸ್ಥಾನಕ್ಕೆ ಮೂರು ಪಕ್ಷಗಳಿಂದ ಬಿಗ್ ಫೈಟ್
* ಕಾಂಗ್ರೆಸ್‌ಗೆ ಓಪನ್ ಆಫರ್ ಕೊಟ್ಟ ಕೊಟ್ಟ ಉಮಾರಸ್ವಾಮಿ
ಮೈಸೂರು, (ಜೂನ್.07): ಕರ್ನಾಟಕದಲ್ಲಿ ರಾಜ್ಯಸಭೆ ಚುನಾವಣೆ ರಂಗೇರಿದೆ. ನಾಲ್ಕನೇ ಸ್ಥಾನಕ್ಕೆ ಜೆಡಿಎಸ್, ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಬಿಗ್ ಫೈಟ್ ನಡೆದಿದೆ. ಇದರ ಮಧ್ಯೆ ಜೆಡಿಎಸ್ ಅಭ್ಯರ್ಥಿ ಗೆಲುವಿಗೆ ಅಡ್ಡವಾಗಿರುವ ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸುತ್ತಲೇ ಇದ್ದಾರೆ. ಆದ್ರೆ, ಇದೀಗ ಸಿದ್ದರಾಮಯ್ಯಗೆ ಎಚ್‌ಡಿಕೆ ಹೊಸ ಆಫರ್ ಕೊಟ್ಟಿದ್ದಾರೆ.
ಇಂದು(ಮಂಗಳವಾರ) ಮೈಸೂರಿನಲ್ಲಿ ಮಾತನಾಡಿರುವ ಅವರು, ನಮ್ಮ ಬಳಿ 32 ಮತಗಳಿವೆ. ಕಾಂಗ್ರೆಸ್ ಬಳಿ ನಮಗಿಂತ ಕಡಿಮೆ ಮತಗಳಿವೆ. ಕಾಂಗ್ರೆಸ್ಗಿಂತ ಜೆಡಿಎಸ್ ಅಭ್ಯರ್ಥಿಗೆ ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ. ಬೇಕಿದ್ದರೆ ನಮ್ಮ ಪಕ್ಷದ 2ನೇ ಪ್ರಾಶಸ್ತ್ಯದ ಮತಗಳನ್ನು ಕಾಂಗ್ರೆಸ್ ಅಭ್ಯರ್ಥಿಗೆ ನೀಡುತ್ತೇವೆ. ಕಾಂಗ್ರೆಸ್ ಪಕ್ಷದ ಎರಡನೇ ಪ್ರಾಶಸ್ತ್ಯದ ಮತಗಳನ್ನು ಜೆಡಿಎಸ್ ಅಭ್ಯರ್ಥಿಗೆ ನೀಡಲಿ ಎಂದು ಹೊಸ ಆಫರ್ ಘೋಷಿಸಿದರು.
ರಾಜ್ಯಸಭೆ: ಜೆಡಿಎಸ್‌ನ ಆತ್ಮಸಾಕ್ಷಿ ಮತ ಕಾಂಗ್ರೆಸ್‌ಗೆ ಬರುತ್ತೆ: ಸಿದ್ದು
ಬಿಜೆಪಿಯನ್ನು ಸೋಲಿಸಬೇಕಾದರೆ ಕಾಂಗ್ರೆಸ್‌ನ 2ನೇ ಅಭ್ಯರ್ಥಿಯನ್ನು ಜೆಡಿಎಸ್ ಬೆಂಬಲಿಸಬೇಕು. ಜೆಡಿಎಸ್ ಅಭ್ಯರ್ಥಿಯನ್ನು ನಿವೃತ್ತಿಗೊಳಿಸಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಬಿಜೆಪಿ ಸೋಲಿಸುವುದೇ ನಿಮ್ಮ ಉದ್ದೇಶವಾಗಿದ್ದರೆ ಚುನಾವಣೆ ಘೋಷಣೆಗೂ ಮುನ್ನ ಕಾಂಗ್ರೆಸ್ ನಾಯಕರು ನಮ್ಮ ಜತೆ ಚರ್ಚಿಸಿ ಮನವಿ ಮಾಡಬಹುದಿತ್ತಲ್ಲವೇ? ನಾವು ಅಭ್ಯರ್ಥಿಯನ್ನು ಘೋಷಿಸಿದ ಮೇಲೆ ನಿವೃತ್ತಿಗೊಳಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಜೆಡಿಎಸ್ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳನ್ನು ನಿಲ್ಲಿಸಿರುವುದರಿಂದ ತೆಗೆಯಲು ಆಗುವುದಿಲ್ಲ. 2ನೇ ಪ್ರಾಶಸ್ತ್ಯ ಮತಗಳನ್ನು ನಮಗೆ ಕೊಡಿ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಜೂನ್ 2ರಂದು ದೂರವಾಣಿ ಕರೆ ಮಾಡಿ ಮನವಿ ಮಾಡಿದ್ದದರು. ನಮ್ಮ 2ನೇ ಪ್ರಾಶಸ್ತ್ಯ ಮತಗಳನ್ನು ನೀಡುವಂತೆ ಶಾಸಕರನ್ನು ಮನವೊಲಿಸುವೆ ಎಂದು ತಿಳಿಸಿದೆ ಎಂದರು.
ಆದರೆ, ಕಾಂಗ್ರೆಸ್‌ನದ್ದು ಮೊದಲನೇ ಪ್ರಾಶಸ್ತ್ಯದ 22 ಅಥವಾ 23 ಮತಗಳಿದ್ದು, ನಾವು 32 ಕೊಟ್ಟರೂ ಮೊದಲನೇ ಸುತ್ತಿನಲ್ಲೇ ಗೆಲ್ಲುವ ಅವಕಾಶವನ್ನು ಅವರು ಕಳೆದುಕೊಳ್ಳುತ್ತಾರೆ. ಹೀಗಾಗಿ, ಸುರ್ಜೇವಾಲಾ ಅವರಿಗೆ ಸೋಮವಾರ ಕರೆ ಮಾಡಿ ಮಾತನಾಡಿದೆ. ನಾವು 32 ಮತಗಳನ್ನು ನಿಮಗೆ ವರ್ಗಾಯಿಸುತ್ತೇವೆ. ನಿಮ್ಮ ಎರಡನೇ ಅಭ್ಯರ್ಥಿಯ 2ನೇ ಪ್ರಾಶಸ್ತ್ಯದ 23 ಮತಗಳನ್ನು ನಮಗೆ ವರ್ಗಾಯಿಸಿ. ಬಿಜೆಪಿ ಅಭ್ಯರ್ಥಿಯನ್ನು ಸೋಲಿಸೋಣ ಎಂದು ಮನವಿ ಮಾಡಿದೆ. ನಿಮ್ಮ ಜತೆ ಮಾತನಾಡಲು ಪಕ್ಷದ ನಾಯಕರನ್ನು ಕಳುಹಿಸುತ್ತೇನೆ ಎಂದು ಸುರ್ಜೇವಾಲಾ ಹೇಳಿದ್ದರು. ಆದರೆ, ಯಾರೂ ಚರ್ಚೆಗೆ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರು.
ಡಿಎಸ್ ಪಕ್ಷದ ಮತಗಳನ್ನು ಒಡೆಯಲು ಸಿದ್ದರಾಮಯ್ಯ ಕೈಯಲ್ಲಿ ಆಗಲ್ಲ: ನಿಖಿಲ್ ಕುಮಾರಸ್ವಾಮಿ
ಸಿದ್ದು-ಬಿಎಸ್‌ವೈ ಭೇಟಿಗೆ ಎಚ್‌ಡಿಕೆ ಪ್ರಶ್ನೆ
ಕಾಂಗ್ರೆಸ್‌ಗೆ ಆತ್ಮಸಾಕ್ಷಿ ಮತಗಳು ಸಿಗುತ್ತವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಆತ್ಮ ಸಾಕ್ಷಿ ಮತಗಳನ್ನು ಹೇಳುವ ಮುನ್ನ ನಿಮ್ಮಲ್ಲಿ ಆತ್ಮಸಾಕ್ಷಿ ಇದೆಯೇ ಎಂದು ಕೇಳಿಕೊಳ್ಳಿ ಪ್ರಶ್ನಿಸಿಕೊಳ್ಳಿ. 2008-09ರಲ್ಲಿ ಆಪರೇಷನ್ ಕಮಲ ಆದಾಗ ನಿಮ್ಮ ಹಾಗೂ ಬಿ.ಎಸ್.ಯಡಿಯೂರಪ್ಪ ನಡುವೆ ಏನು ನಡೆಯಿತು ಎಂಬುದರ ಬಗ್ಗೆ ಈವರೆಗೆ ಬಾಯಿ ಬಿಟ್ಟಿದ್ದೀರಾ? ವಿಮಾನ ನಿಲ್ದಾಣದ ವಿಐಪಿ ಕೊಠಡಿಯಲ್ಲಿ ಯಡಿಯೂರಪ್ಪ ಹಾಗೂ ನೀವು ಕುಳಿತು ಮಾತನಾಡುತ್ತಿರುವ ಚಿತ್ರ ಬಿಡುಗಡೆಯಾಗಿದೆ. ಆ ಚಿತ್ರ ಯಾವ ಉದ್ದೇಶಕ್ಕೆ, ಯಾರ ಕಡೆಯಿಂದ ಬಿಡುಗಡೆಯಾಗಿದೆ? ಯಾವ ಸಂದೇಶವನ್ನು ನೀಡಲು ಆ ಚಿತ್ರವನ್ನು ಹಾಕಿಸಿದ್ದೀರಿ ಎಂದು ಪ್ರಶ್ನಿಸಿದರು.
ನನ್ನ ಪಕ್ಷವನ್ನು ಉಳಿಸುವ ಕೆಲಸ ನಿಮಗೆ ಬೇಡ. ನಿಮ್ಮನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ ಕಾಂಗ್ರೆಸ್ ಪಕ್ಷವನ್ನು ಉಳಿಸಲು ಶ್ರಮಿಸಿ. 2023ಕ್ಕೆ ಆ ಋಣವನ್ನು ತೀರಿಸಿಕೊಳ್ಳಿ. ನಿಮ್ಮ ಬುರುಡೆ ಭಾಷಣ ಕೇಳಿ ಯಾರೂ ಮತ ನೀಡುವುದಿಲ್ಲ. ಬಿಜೆಪಿಯನ್ನು ನಿರ್ಮೂಲನೆ ಮಾಡಬೇಕಾದರೆ ಸಿದ್ದರಾಮಯ್ಯ ಸಂಕುಚಿತ ಮನೋಭಾವ, ಕಲ್ಮಶದಿಂದ ಹೊರಗೆ ಬರಬೇಕು. ಹೊಸ ರಾಜಕಾರಣವನ್ನು ಆರಂಭಿಸಬೇಕು ಎಂದು ಹೇಳಿದರು.