Karnataka Politics: 'ಹುಚ್ಚರ ಕೂಟದ ಅಧ್ಯಕ್ಷ ಕೆ.ಎಸ್‌. ಈಶ್ವರಪ್ಪ'

By Kannadaprabha NewsFirst Published Jun 7, 2022, 4:46 PM IST
Highlights

*   ಬಿಜೆಪಿ ಸಿದ್ಧಾಂತ- ನಿಯಮಗಳ ಗಾಳಿಗೆ ತೂರಿರುವ ಮುಖಂಡರು
*  ಚಡ್ಡಿಯೇನು ರಾಷ್ಟ್ರಧ್ವಜವಲ್ಲ. ಈಶ್ವರಪ್ಪರ ಹಾಗೆ ರಾಷ್ಟ್ರಧ್ವಜಕ್ಕೆ ಸಿದ್ದರಾಮಯ್ಯ ಅವಮಾನವನ್ನೂ ಮಾಡಿಲ್ಲ 
*  ಈಶ್ವರಪ್ಪ ಅವರ ಲಜ್ಜೆಗೆಟ್ಟ ಹೇಳಿಕೆ ಅವರ ಸಂಸ್ಕೃತಿಯನ್ನೇ ತಿಳಿಸುತ್ತದೆ 
 

 ಶಿವಮೊಗ್ಗ(ಜೂ.07):  ರಾಜ್ಯದಲ್ಲಿ ಸಿ.ಟಿ.ರವಿ, ಶೋಭಾ ಕರಂದ್ಲಾಜೆ, ಎಂ.ಪಿ. ರೇಣುಕಾಚಾರ್ಯ, ತೇಜಸ್ವಿ ಸೂರ್ಯ, ಪ್ರತಾಪ್‌ ಸಿಂಹ ಮುಂತಾದವರ ಹುಚ್ಚರ ಕೂಟವೇ ಇದೆ. ಈ ಹುಚ್ಚರಕೂಟಕ್ಕೆ ಕೆ.ಎಸ್‌.ಈಶ್ವರಪ್ಪ ಅವರೇ ಅಧ್ಯಕ್ಷ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಎಸ್‌.ಸುಂದರೇಶ್‌ ಕಟುವಾಗಿ ಟೀಕಿಸಿದರು.

ಈ ಹುಚ್ಚರ ಕೀಳುಮಟ್ಟದ ಹೇಳಿಕೆಗಳನ್ನು ಮುಖ್ಯಮಂತ್ರಿ ಸಹಿಸಿಕೊಳ್ಳುತ್ತಿರುವುದೇ ಹೆಚ್ಚಿನ ವಿಚಾರ. ಅವರು ಮುಖ್ಯಮಂತ್ರಿಯಾಗಲು ಅರ್ಹರೇ ಅಲ್ಲ. ಅದರ ಬದಲು ಪಕ್ಷದ ಮ್ಯಾನೇಜರ್‌ ಹುದ್ದೆ ನಿರ್ವಹಿಸಿದರೆ ಉತ್ತಮ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

Dalit Row: ದಲಿತರು ಕಾನ್ವೆಂಟ್‌ನಲ್ಲಿ ಓದಬಾರದೆ?: ಪ್ರಿಯಾಂಕ್‌ ಖರ್ಗೆ ಕಿಡಿ

ಗುತ್ತಿಗೆದಾರ ಸಂತೋಷ್‌ ಆತ್ಮಹತ್ಯೆ ಪ್ರಕರಣದಲ್ಲಿ ಎ-1 ಆರೋಪಿ ಆಗಿರುವ ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರನ್ನು ಬಂಧಿಸದೇ, ಹುಚ್ಚುಚ್ಚಾಗಿ ಮಾತನಾಡಲು ಬೀದಿಗೆ ಬಿಟ್ಟಿದ್ದಾರೆ. ಈಶ್ವರಪ್ಪ ಅವರ ಲಜ್ಜೆಗೆಟ್ಟಹೇಳಿಕೆ ಅವರ ಸಂಸ್ಕೃತಿಯನ್ನೇ ತಿಳಿಸುತ್ತದೆ. ಅವರಿಗೆ ಮಾನವೂ ಇಲ್ಲ, ಮರ್ಯಾದೆಯೂ ಇಲ್ಲ. ಕೂಡಲೇ ಅವರನ್ನು ಬಂಧಿಸಿ ಜೈಲಿಗಟ್ಟಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಬಿಜೆಪಿ ಮುಖಂಡರು ಅವರದೇ ಪಕ್ಷದ ಸಿದ್ಧಾಂತ ನಿಯಮಗಳನ್ನೇ ಗಾಳಿಗೆ ತೂರಿದ್ದಾರೆ. ಬೀದಿಯಲ್ಲಿ ನಿಂತು ಅರಚುತ್ತಿದ್ದಾರೆ. ಕಿರುಚುತ್ತಿದ್ದಾರೆ. ಅವರ ನಾಲಿಗೆಗಳು ಸಂಸ್ಕೃತಿಯನ್ನೇ ಕಳೆದುಕೊಂಡಿವೆ. ಮಾಡಬಾರದ್ದನ್ನು ಮಾಡುತ್ತಿದ್ದರೂ ತಾವೇ ಶ್ರೇಷ್ಠ ಎಂದು ಹೇಳುತ್ತಿದ್ದಾರೆ. ದೀಪ ಆರುವಾಗ ಜೋರಾಗಿ ಉರಿಯುತ್ತದೆ ಎಂಬಂತೆ, ಅದೇ ರೀತಿ ರಾಜಕಾರಣದಿಂದ ದೂರ ಸರಿಯಲಿರುವ ಈಶ್ವರಪ್ಪ ಈಗ ಉರಿಯುತ್ತಿದ್ದಾರೆ ಎಂದು ಕುಟುಕಿದರು.

Karnataka Politics: ಚುನಾವಣೆ ಹತ್ತಿರ ಬಂದರೂ ಎಚ್ಚೆತ್ತುಕೊಳ್ಳದ ಕಾಂಗ್ರೆಸ್‌..!

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ 5 ವರ್ಷ ಸಮರ್ಥ ಆಡಳಿತ ನಡೆಸಿದ್ದಾರೆ. ಅವರದು ಭ್ರಷ್ಟಾಚಾರ ರಹಿತ ಆಡಳಿತವಾಗಿದೆ. ಅನೇಕ ಭಾಗ್ಯ ಯೋಜನೆಗಳು ಬಡವರಿಗೆ ವರದಾನವಾಗಿವೆ. 13 ಬಾರಿ ಬಜೆಟ್‌ ಮಂಡಿಸಿದ್ದಾರೆ. ಆದರೆ, ಯಾವ ಯೋಗ್ಯತೆಯೂ ಇಲ್ಲದ, ಕೊನೆ ಪಕ್ಷ ಸಚಿವ ಪಟ್ಟವನ್ನೂ ಉಳಿಸಿಕೊಳ್ಳಲಾಗದ ಈಶ್ವರಪ್ಪ ಅವರ ವಿರುದ್ಧ ಬಾಯಿಗೆ ಬಂದಂತೆ ಅರಚುತ್ತಿರುವುದು ಸರಿಯಲ್ಲ. ಚೆಡ್ಡಿಯೇನು ರಾಷ್ಟ್ರಧ್ವಜವಲ್ಲ. ಈಶ್ವರಪ್ಪರ ಹಾಗೆ ರಾಷ್ಟ್ರಧ್ವಜಕ್ಕೆ ಸಿದ್ದರಾಮಯ್ಯ ಅವಮಾನವನ್ನೂ ಮಾಡಿಲ್ಲ. ತನ್ನೆಲ್ಲಾ ಹಗರಣಗಳನ್ನು ಮರೆಮಾಚಲು ಬಿಜೆಪಿ ಇಂತಹ ಹೇಳಿಕೆಗಳ ಮೂಲಕ ಜನರ ದಿಕ್ಕನ್ನು ಬದಲಾಯಿಸುತ್ತಿದೆ ಎಂದು ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಆರ್‌.ಪ್ರಸನ್ನಕುಮಾರ್‌, ಎಚ್‌.ಎಂ. ಚಂದ್ರಶೇಖರಪ್ಪ, ಸಿ.ಎಸ್‌. ಚಂದ್ರಭೂಪಾಲ್‌, ಇಕ್ಕೇರಿ ರಮೇಶ್‌, ರಾಮೇಗೌಡ, ಚಂದ್ರಶೇಖರ್‌, ಜಿ.ಡಿ. ಮಂಜುನಾಥ, ಚಂದನ್‌, ಎನ್‌.ಡಿ. ಪ್ರವೀಣ್‌, ಜಿ.ಪಲ್ಲವಿ ಇದ್ದರು.

ಅವರೇನಂದ್ರು?

- ರಾಜ್ಯದಲ್ಲಿ ಸಿ.ಟಿ.ರವಿ, ಶೋಭಾ ಕರಂದ್ಲಾಜೆ, ಎಂ.ಪಿ. ರೇಣುಕಾಚಾರ್ಯ, ತೇಜಸ್ವಿ ಸೂರ್ಯ, ಪ್ರತಾಪ್‌ ಸಿಂಹ ಮುಂತಾದವರ ಹುಚ್ಚರ ಕೂಟ
- ಗುತ್ತಿಗೆದಾರ ಸಂತೋಷ್‌ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪ ಅವರನ್ನು ಬಂಧಿಸದೇ, ಹುಚ್ಚುಚ್ಚಾಗಿ ಮಾತನಾಡಲು ಬೀದಿಗೆ ಬಿಟ್ಟಿದ್ದಾರೆ
- ಚೆಡ್ಡಿಯೇನು ರಾಷ್ಟ್ರಧ್ವಜವಲ್ಲ. ಈಶ್ವರಪ್ಪರ ಹಾಗೆ ರಾಷ್ಟ್ರಧ್ವಜಕ್ಕೆ ಸಿದ್ದರಾಮಯ್ಯ ಅವಮಾನವನ್ನೂ ಮಾಡಿಲ್ಲ.

click me!