ದೇಶದ ಜನರೇ ಕಾಂಗ್ರೆಸ್‌ ಚಡ್ಡಿ ಕಳಚಿದ್ದಾರೆ: ಕೇಂದ್ರ ಸಚಿವ ಜೋಶಿ

By Kannadaprabha News  |  First Published Jun 7, 2022, 4:06 PM IST

*  ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯನ ಚಡ್ಡಿ ಮಾತ್ರವಲ್ಲ, ಪಂಚೆಯನ್ನೂ ಕಳಚಿ ಕಳಿಸಿದ್ದಾರೆ
*  ಎಲ್ಲೆಡೆ ಚಡ್ಡಿ ಕಳೆದುಕೊಂಡಿರುವ ನೀವು, ಆತಂಕದಲ್ಲಿ ಆರ್‌ಎಸ್‌ಎಸ್‌ ಚಡ್ಡಿ ಸುಡಲು ಮುಂದಾಗಿದ್ದೀರಿ
*  ಸಿದ್ದರಾಮಯ್ಯ ಬಾದಾಮಿ ಜನರಿಗೆ ಋುಣಿಯಾಗಿರಬೇಕು
 


ನಿಡಗುಂದಿ(ಜೂ.07):  ದೇಶದ ಜನರೇ ಕಾಂಗ್ರೆಸ್‌ ಚಡ್ಡಿ ಕಳಚಿದ್ದಾರೆ. ಉತ್ತರಪ್ರದೇಶ, ಮಧ್ಯಪ್ರದೇಶ, ಆಸ್ಸಾಂ, ಛತ್ತೀಸಗಢ ರಾಜ್ಯಗಳಲ್ಲಿ ಜನರು ಕಾಂಗ್ರೆಸ್‌ ನಾಯಕರ ಚಡ್ಡಿ ಕಳಚಿ ಮನೆಗೆ ಕಳುಹಿಸಿದ್ದಾರೆ. ಅಲ್ಲಿ ಅಧಿಕಾರವನ್ನು ಕಳೆದುಕೊಂಡಿರುವ ಕಾಂಗ್ರೆಸ್‌ ಬೆತ್ತಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಪಟ್ಟಣದಲ್ಲಿ ವಾಯವ್ಯ ಪದವೀಧರ ಹಾಗೂ ಶಿಕ್ಷಕರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕಾಗಿ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮತದಾರರು ಸಿದ್ದರಾಮಯ್ಯನ ಚಡ್ಡಿ ಮಾತ್ರವಲ್ಲ ಪಂಚೆಯನ್ನೂ ಕಳಚಿ ಕಳುಹಿಸಿದ್ದಾರೆ. ಹೀಗಾಗಿ, ತಮ್ಮ ಹರಿದ ಚಡ್ಡಿಯೇ ಸಡಿಲವಾಗಿರುವ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ ನಾಯಕರು ಹತಾಶಗೊಂಡು ಬೇರೆಯವರ ಚಡ್ಡಿ ಸುಡಲು ಮುಂದಾಗಿದ್ದಾರೆ ಎಂದರು.

Tap to resize

Latest Videos

ನಮ್ಮಲ್ಲಿ ಅಭ್ಯರ್ಥಿ ಇಲ್ಲ ಅಂತೇನೂ ಹೊರಟ್ಟಿ ಕರೆತಂದಿಲ್ಲ: ಕಟೀಲ್‌

ಎಲ್ಲೆಡೆ ಚಡ್ಡಿ ಕಳೆದುಕೊಂಡಿರುವ ನೀವು, ಆತಂಕದಲ್ಲಿ ಆರ್‌ಎಸ್‌ಎಸ್‌ ಚಡ್ಡಿ ಸುಡಲು ಮುಂದಾಗಿದ್ದೀರಿ. ಭವಿಷ್ಯದಲ್ಲಿ ದೇಶದ ಜನರು ಅಳಿದುಳಿದ ನಿಮ್ಮ ಚಡ್ಡಿ, ಲಂಗೋಟಿಯನ್ನು ಕಸಿದು ಬೆತ್ತಲೆ ಮಾಡುತ್ತಾರೆ. ಹೀಗಾಗಿ, ತಕ್ಷಣ ಕಾಂಗ್ರೆಸ್‌ ನಾಯಕರು ಇಂತಹ ಹುಚ್ಚು ಚಟುಚಟಿಕೆ ನಿಲ್ಲಿಸಬೇಕು ಎಂದು ಕುಟುಕಿದರು.

ರಾಜ್ಯಸಭೆ: ಜೆಡಿಎಸ್‌ನ ಆತ್ಮಸಾಕ್ಷಿ ಮತ ಕಾಂಗ್ರೆಸ್‌ಗೆ ಬರುತ್ತೆ: ಸಿದ್ದು

ರಾಜ್ಯದಲ್ಲಿ ಐದು ವರ್ಷ ಆಡಳಿತ ನಡೆಸಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರನ್ನು 30 ಸಾವಿರ ಮತಗಳ ಅಂತರದಿಂದ ಸೋಲಿಸಿದ ಜನರು ಚಡ್ಡಿ ಕಳಚಿದ್ದಾರೆ. ತಮ್ಮ ತವರು ಕ್ಷೇತ್ರದಲ್ಲಿ ಮುಖಭಂಗಕ್ಕೆ ಒಳಗಾದ ಸಿದ್ದರಾಮಯ್ಯ ಅವರನ್ನು ಉತ್ತರ ಕರ್ನಾಟಕದ ಬಾದಾಮಿ ಕ್ಷೇತ್ರದ ಮತದಾರರು ದೊಡ್ಡ ಮನಸು ಮಾಡಿ ಕೈಹಿಡಿದು ಚಡ್ಡಿ ತೊಡಿಸಿದ್ದಾರೆ. ಬಾದಾಮಿ ಮತಕ್ಷೇತ್ರದ ಜನರ ದೊಡ್ಡ ಮನಸಿನಿಂದ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಕುಳಿತುಕೊಳ್ಳುವ ಅವಕಾಶ ಪಡೆದಿದ್ದಾರೆ ವಿನಃ ಸ್ವಸಾಮರ್ಥ್ಯದಿಂದಲ್ಲ. ಇದಕ್ಕಾಗಿ ಅವರು ಬಾದಾಮಿ ಜನರಿಗೆ ಋುಣಿಯಾಗಿರಬೇಕು ಎಂದು ತಿರುಗೇಟು ನೀಡಿದರು.

ಆರ್‌ಎಸ್‌ಎಸ್‌ ಚಡ್ಡಿ ಸುಡುವ ಕೆಲಸ ಮಾಡಿ. ನಿಮ್ಮ ನಾಯಕ ರಾಹುಲ್‌ ಗಾಂಧಿ, ಅವರ ತಂದೆ ಹಾಗೂ ಅವರ ಅಜ್ಜ ಆರ್‌ಎಸ್‌ಎಸ್‌ ಅನ್ನು ಒಳಗಿನಿಂದ ಸುಡಲು ಹೋದವರೇ. ಇದರ ಪರಿಣಾಮವಾಗಿಯೇ ಈಗ ರಾಜಕೀಯವಾಗಿ ಕಾಂಗ್ರೆಸ್‌ ಪರಿಸ್ಥಿತಿ ಏನಾಗಿದೆ ಎಂಬುದನ್ನು ನೀವು, ನಾವೆಲ್ಲ ನೋಡುತ್ತಿದ್ದೇವೆ ಎಂದರು.
 

click me!