ಕುಮಾರಣ್ಣನ ಜನಪರ ಆಡಳಿತದಿಂದ ರಾಜ್ಯದಲ್ಲಿ ಮತ್ತೊಮ್ಮೆ ಜೆಡಿಎಸ್ ಅಧಿಕಾರ ಖಚಿತ!

By Kannadaprabha News  |  First Published Mar 19, 2023, 11:36 AM IST

ರಾಜ್ಯದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಮಾಡಿರುವ ಹಲವಾರು ಜನಪರ ಆಡಳಿತದಿಂದ ಜೆಡಿಎಸ್‌ ಅಧಿಕಾರಕ್ಕೆ ಬರಲಿದೆ. ರಾಜ್ಯದಲ್ಲಿ 120ಕ್ಕೂ ಅಧಿಕ ಸ್ಥಾನ ಗೆಲ್ಲಲಿದೆ ಎಂದು ಯಲಬುರ್ಗಾ ಕ್ಷೇತ್ರದ ಜೆಡಿಎಸ್‌ ನಿಯೋಜಿತ ಅಭ್ಯರ್ಥಿ ಮಲ್ಲನಗೌಡ ಕೋನನಗೌಡರ ಹೇಳಿದರು.


ಕುಕನೂರು (ಮಾ.19) :

ರಾಜ್ಯದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಮಾಡಿರುವ ಹಲವಾರು ಜನಪರ ಆಡಳಿತದಿಂದ ಜೆಡಿಎಸ್‌ ಅಧಿಕಾರಕ್ಕೆ ಬರಲಿದೆ. ರಾಜ್ಯದಲ್ಲಿ 120ಕ್ಕೂ ಅಧಿಕ ಸ್ಥಾನ ಗೆಲ್ಲಲಿದೆ ಎಂದು ಯಲಬುರ್ಗಾ ಕ್ಷೇತ್ರದ ಜೆಡಿಎಸ್‌ ನಿಯೋಜಿತ ಅಭ್ಯರ್ಥಿ ಮಲ್ಲನಗೌಡ ಕೋನನಗೌಡರ(Mallanagowda Konanagowda) ಹೇಳಿದರು.

Latest Videos

undefined

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಶನಿವಾರ ಮಾತನಾಡಿದ ಅವರು, ಮಾಜಿ ಸಚಿವ ಬಸವರಾಜ ರಾಯರಡ್ಡಿ(Basavaraj Rayareddy) ಹಾಗೂ ಸಚಿವ ಹಾಲಪ್ಪ ಆಚಾರ್‌(Halappa achar) ಅವರು ಒಂದೇ ನಾಣ್ಯದ ಎರಡು ಮುಖವಿದ್ದಂತೆ. ಕ್ಷೇತ್ರದ ರೈತ ವರ್ಗಕ್ಕೆ ಈ ಇಬ್ಬರು ಕೂಡ ಸುಳ್ಳು ಹೇಳುತ್ತಾ ರಾಜಕಾರಣ ಮಾಡುತ್ತಿದ್ದಾರೆ.

Karnataka election 2023: ಕೊಪ್ಪಳದಲ್ಲಿ ಜೆಡಿಎಸ್‌ ಟಿಕೆಟ್‌ಗೆ ಎಲ್ಲಿಲ್ಲದ ಬೇಡಿಕೆ!

ಈ ಹಿಂದೆ ರಾಯರಡ್ಡಿ ಅವರು ಕಾಂಗ್ರೆಸ್‌ ನಡುಗೆ ಕೃಷ್ಣೆಯ ಕಡೆ ಎನ್ನುವ ಮೂಲಕ ಐದು ವರ್ಷ ಸಚಿವರಾಗಿ ಅಧಿಕಾರ ಅನುಭವಿಸಿದರೂ ಸಹ ಕ್ಷೇತ್ರಕ್ಕೆ ಹನಿ ನೀರು ತರಲಿಲ್ಲ. ಕುಮಾರಸ್ವಾಮಿ ಅವರು ಸಿಎಂ ಇದ್ದಾಗ ಕೃಷ್ಣ ಬೀ ಸ್ಕೀಂಗೆ ಅನುದಾನ ನೀಡಿದರು. ಹಾಲಪ್ಪ ಆಚಾರ ಅವರು ತಮ್ಮ ಭಾಷಣದಲ್ಲಿ ಕುಮಾರಸ್ವಾಮಿ (HD Kumarswamy)ಅವರನ್ನು ಸ್ಮರಿಸುತ್ತಾರೆ. ಕುಮಾರಸ್ವಾಮಿ ಅವರ ಜನಪರ ಆಡಳಿತ ರಾಜ್ಯಕ್ಕೆ ಬೇಕಿದೆ. ಯಲಬುರ್ಗಾದಲ್ಲೂ ಸಹ ಕ್ಷೇತ್ರದ 12 ಸಾವಿರ ರೈತರು ಸಾಲ ಮನ್ನಾ ಯೋಜನೆ ಲಾಭ ಪಡೆದಿದ್ದಾರೆ. ಈಗಾಗಲೇ ಪಂಚರತ್ನ ಯೋಜನೆ ಬಗ್ಗೆ ಜನರಲ್ಲಿ ತಿಳಿಸುವ ಮೂಲಕ ಜೆಡಿಎಸ್‌ ಪಕ್ಷಕ್ಕೆ ಬೆಂಬಿಸುವಂತೆ ಮನವಿ ಮಾಡಲಾಗುತ್ತಿದೆ ಎಂದರು.

ಮಂಡ್ಯದಲ್ಲಿ ಪುತ್ಥಳಿ ಪಾಲಿಟಿಕ್ಸ್‌, ಲಿಂಗಾಯತ ಮತ ಸೆಳೆಯಲು ಬಿಜೆಪಿ-ಜೆಡಿಎಸ್‌ ಸರ್ಕಸ್‌ ..!

ಕ್ಷೇತ್ರದಲ್ಲಿ ಸೀರೆ ಹಂಚಿಕೆ ಮಾಡುತ್ತಿದ್ದು, ಮೊದಲು ತಮ್ಮ ಮನೆಯ ಹೆಣ್ಣು ಮಕ್ಕಳಿಗೆ ಸೀರೆ ನೀಡಲಿ.ಅವರು ಅವುಗಳನ್ನು ಬಳಕೆ ಮಾಡಲಿ.ಕೇವಲ . 70 ಸೀರೆ ನೀಡುತ್ತಿದ್ದಾರೆ. ಸೀರೆ ಸಾಕಷ್ಟುಬೆಲೆ ಬಾಳುತ್ತವೆ ಎಂದು ವ್ಯಂಗ್ಯವಾಡಿದರು.

click me!