
ವಿಜಯಪುರ (ಮೇ.07): ಪಹಲ್ಗಾಮ್‌ನ ಘಟನೆಯ ಸೇಡು ತೀರಿಸಿಕೊಳ್ಳಲೇಬೇಕು. ಉಗ್ರರ ಅಡಗು ತಾಣಗಳ ಮೇಲಿನ ದಾಳಿ ಸ್ವಾಗತಾರ್ಹ ಎಂದು ಪಾಕ್ ಉಗ್ರರ ವಿರುದ್ಧ ಏರ್‌ಸ್ಟ್ರೈಕ್ ವಿಚಾರವಾಗಿ ಕೇಂದ್ರ ಸರ್ಕಾರದ ಕ್ರಮವನ್ನು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಸ್ವಾಗತಿಸಿದ್ದಾರೆ. ಕರ್ನಾಟಕ ಕಾಂಗ್ರೆಸ್ ಪೇಸ್ಬುಕ್ ಪೇಜ್‌ನಲ್ಲಿ ಶಾಂತಿ ಪೋಸ್ಟ್ ವಿಚಾರವಾಗಿ ಮಾತನಾಡಿದ ಅವರು, ಅದು ಅಫೀಸಿಯಲ್ ಅಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ
ನಿಶ್ಚಿತವಾಗಿ ಶಾಂತಿ ಬೇಕು. ನಮ್ಮ ದೇಶ ಶಾಂತಿಯನ್ನ ಬಯಸುತ್ತದೆ. ಆದ್ರೆ ಉಗ್ರವಾದದ ವಿಚಾರದಲ್ಲಿ ಶಾಂತಿ ಅಲ್ಲ ಎಂದ ಎಂ ಬಿ ಪಾಟೀಲ್, ಪಾಕ್ ಮಾಡಿದ್ದು ಹೇಡಿತನದ ಕೃತ್ಯ. ಹೇಡಿ ಕೃತ್ಯದ ವಿರುದ್ಧ ಸೇಡು ತೀರಿಸಿಕೊಳ್ಳಲೇಬೇಕು. ಈ ವಿಚಾರದಲ್ಲಿ ಕಾಂಗ್ರೆಸ್, ಬಿಜೆಪಿ ಪಕ್ಷಗಳು ಇಲ್ಲ. ದೇಶದ 140 ಕೋಟಿ ಜನ ಒಗ್ಗಟ್ಟಾಗಿದ್ದೀವಿ. ದೇಶ ಮೊದಲು ನಂತರ ಪಕ್ಷ, ಜಾತಿ, ಧರ್ಮ ಎಲ್ಲ. ದೇಶದ ಹಿತರಕ್ಷಣೆಗೆ ಯಾವುದೇ ಕ್ರಮ ಕೈಗೊಂಡರು ಬೆಂಬಲ ಕೊಡುತ್ತೇನೆ ಎಂದು ತಿಳಿಸಿದರು.
Operation Sindoor: ಕಾಂಗ್ರೆಸ್ ಲೆಕ್ಕದಲ್ಲಿ ಮರ್ಯಾದೆ ಎಂದರೆ ಏನು?: ಆರ್.ಅಶೋಕ್
ಅಧ್ಯಕ್ಷರಾಯ್ಕೆ ಹೈಕಮಾಂಡ್ ಗೆ ಬಿಟ್ಟಿದ್ದು: ಕೆಪಿಸಿಸಿಗೆ ಹೊಸ ಅಧ್ಯಕ್ಷರನ್ನು ನೇಮಕ ಮಾಡೋದು ಹೈಕಮಾಂಡ್ ಗೆ ಬಿಟ್ಟಿದ್ದು. ಹೈಕಮಾಂಡ್ ಯಾರನ್ನು ನಿರ್ಧಾರ ಮಾಡ್ತಾರೋ ಅವರು ಅಧ್ಯಕ್ಷರಾಗ್ತಾರೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದರು. ಕೆಪಿಸಿಸಿ ಅಧ್ಯಕ್ಷ ಬದಲಾವಣೆ ವಿಚಾರದ ಕುರಿತಾಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸತೀಶ ಜಾರಕಿಹೊಳಿ, ಈಶ್ವರ ಖಂಡ್ರೆ ಇರಬಹುದು, ಹೈಕಮಾಂಡ್ ಪರಿಗಣಿಸಿ, ಅಳೆದು ತೂಗಿ ನೋಡ್ತಾರೆ ಎಂದು ಹೇಳಿದರು. ಬಿಜೆಪಿ ಕಾರ್ಯಕರ್ತ ವಿನಯ ಆತ್ಮಹತ್ಯೆ ಪ್ರಕರಣದ ಕುರಿತು ಪ್ರತಿಕ್ರಿಯಿಸಿ, ವಿನಯ ನನಗೆ ಪರಿಚಯ ಇಲ್ಲವೆಂದು ಶಾಸಕ ಪೊನ್ನಣ್ಣ ಹೇಳಿದ್ದಾರೆ. ಬಿಜೆಪಿಯವರು ಸುಮ್ಮನೆ ರಾಜಕೀಯ ಮಾಡುತ್ತಿದ್ದಾರೆ, ಹಿಂದೆ ಕೆ.ಜೆ. ಜಾರ್ಜ್ ಡಿವೈಎಸ್ಪಿ ಗಣಪತಿ ಆತ್ಮಹತ್ಯೆಯಲ್ಲೂ ಹೀಗೆಯೇ ಮಾಡಿದ್ದರು ಎಂದು ಹೇಳಿದರು.
Operation Sindoor: ಪಾಕಿಸ್ತಾನಕ್ಕೆ ಪಾಠ ಕಲಿಸುವ ಸಮಯ ಬಂದಿದೆ: ದಿನೇಶ್ ಗುಂಡೂರಾವ್
ವಕ್ಫ್ ತಿದ್ದುಪಡಿ ಕಾಯ್ದೆ ಕುರಿತು ಮಾತನಾಡಿ, ಪಾರ್ಲಿಮೆಂಟ್‌ನಲ್ಲಿ ಅಮಿತ್ ಶಾ ಅವರು, ವಿಜಯಪುರ ಜಿಲ್ಲೆಯ ಹೊನವಾಡ ಹೆಸರು ಪ್ರಸ್ತಾಪಕ್ಕೆ ಗರಂ ಆದ ಎಂ.ಬಿ. ಪಾಟೀಲ, ಮಹಲ್ ಬಾಗಾಯತ್ ಇರೋದು ಹೊನವಾಡ ಎಂದು ತಪ್ಪಾಗಿ ನಮೂದಾಗಿದೆ. ಇದನ್ನ ಅಮಿತ್ ಶಾ ತಪ್ಪಾಗಿ ಹೇಳಿದ್ದಾರೆ. ಹೊನವಾಡದಲ್ಲಿ 5 ಸ್ಟಾರ್ ಹೊಟೇಲ್ ಮಾಡಲಿಕ್ಕೆ ಆಗತ್ತಾ?. ಇದನ್ನ ನಾನು ಸ್ಪಷ್ಟಪಡಿಸಿದ್ದೇನೆ, ಜಿಲ್ಲೆಯಲ್ಲಿ 12 ಸಾವಿರ ಎಕರೆ ವಕ್ಫ್ ಇಂಧೀಕರಣ ಆಗಿದೆ. ಲ್ಯಾಂಡ್ ಗ್ರ್ಯಾಂಡ್ ಮೇಲೆ ಹಂಚಿದ್ದೇವೆ. ನಾನು ಬೆಂಗಳೂರಲ್ಲಿ, ವಿಜಯಪುರದಲ್ಲಿಯೂ ಹೇಳಿದ್ದೀನಿ. ಇಷ್ಟೊಂದು ತಪ್ಪು ಮಾಹಿತಿ ಕೊಡ್ತಾರೆ, ತೇಜಸ್ವಿ ಸೂರ್ಯ ಹಾಗೂ ಅಮಿತ್ ಶಾ ತಪ್ಪು ಮಾಹಿತಿ ಕೊಡ್ತಿದ್ದಾರೆ ಎಂದು ಅಸಮಧಾನ ಹೊರಹಾಕಿದ ಅವರು, ಕಾನೂನು ಹೋರಾಟ ಅಂತಿಮ, ಸುಪ್ರೀಂ ಕೋರ್ಟ್ ನ್ಯಾಯಯುತ ತೀಪುಘ ನೀಡಲಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.