28ರಂದು ಕಾಂಗ್ರೆಸ್‌ನಿಂದ ಭಾರತ್‌ ಜೋಡೋ - ಸಂವಿಧಾನ ಬಚಾವೋ ಆಂದೋಲನ

By Kannadaprabha News  |  First Published Nov 25, 2022, 9:52 AM IST

ಭಾರತ್‌ ಜೋಡೋ-ಸಂವಿಧಾನ ಬಚಾವೋ ಆಂದೋಲನವನ್ನು ನ.28ರಂದು ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಕ್ಷದ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಎಚ್‌.ಬಿ.ಮಂಜಪ್ಪ ತಿಳಿಸಿದರು.


ದಾವಣಗೆರೆ (ನ.25) : ಭಾರತ್‌ ಜೋಡೋ-ಸಂವಿಧಾನ ಬಚಾವೋ ಆಂದೋಲನವನ್ನು ನ.28ರಂದು ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಕ್ಷದ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಎಚ್‌.ಬಿ.ಮಂಜಪ್ಪ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಮಧ್ಯಾಹ್ನ 3ಕ್ಕೆ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದಲ್ಲಿ ಬಾಬಾ ಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಆಂದೋಲನಕ್ಕೆ ಚಾಲನೆ ನೀಡುವರು ಎಂದರು.

Tap to resize

Latest Videos

Davanagere: ನ.26ರಂದು ನಿವೃತ್ತ ಪಿಂಚಣಿ ನೌಕರರ ಸಮಾವೇಶ: ಕೆ.ಎಂ.ಮರುಳಸಿದ್ದಯ್ಯ

ಬಿಜೆಪಿ ಸರ್ಕಾರಗಳ ವೈಫಲ್ಯ, ಜನ ವಿರೋಧಿ ನೀತಿಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸದುದ್ದೇಶದಿಂದ ಅಂಬೇಡ್ಕರ್‌ ವೃತ್ತದಿಂದ ಎಸ್‌.ನಿಜಲಿಂಗಪ್ಪ ಬಡಾವಣೆಯಲ್ಲಿರುವ ಪಕ್ಷದ ಜಿಲ್ಲಾ ಕಚೇರಿವರೆಗೆ ಬೃಹತ್‌ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದ್ದು, ಕೆಪಿಸಿಸಿ ಎಸ್‌ಸಿ ವಿಭಾಗದ ರಾಜ್ಯಾಧ್ಯಕ್ಷ ಆರ್‌.ಧರ್ಮಸೇನ, ಅಸಂಘಟಿತ ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ಜಿ.ಎಸ್‌.ಮಂಜುನಾಥ, ಮಧು ಬಂಗಾರಪ್ಪ ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಮುಖಂಡರು, ಜನ ಪ್ರತಿನಿಧಿಗಳು, ಕಾರ್ಯಕರ್ತರು, ವಿವಿಧ ಘಟಕಗಳು ಪಾಲ್ಗೊಳ್ಳಲಿವೆ. ಅದೇ ಸಂಜೆ 4ಕ್ಕೆ ಕಾಂಗ್ರೆಸ್‌ ಕಚೇರಿಯಲ್ಲಿ ನಡೆಯುವ ಬಹಿರಂಗ ಸಭೆಯಲ್ಲಿ ಪಕ್ಷದ ರಾಜ್ಯ, ಜಿಲ್ಲಾ ಮುಖಂಡರು ಮಾತನಾಡಲಿದ್ದಾರೆ ಎಂದು ತಿಳಿಸಿದರು.

ಪಕ್ಷದ ಎಸ್‌ಸಿ ಘಟಕದ ಜಿಲ್ಲಾಧ್ಯಕ್ಷ ಬಿ.ಎಚ್‌.ವೀರಭದ್ರಪ್ಪ ಮಾತನಾಡಿ, ಎಸ್ಸಿ ಘಟಕದಿಂದ ಡಿ.26ರಂದು ಹಮ್ಮಿಕೊಂಡಿದ್ದ ಕಾಂಗ್ರೆಸ್‌ ಜಿಲ್ಲಾ ಸಮಾವೇಶ, ಸಾಮೂಹಿಕ ವಿವಾಹ ಮಹೋತ್ಸವ, ಮಾದಾರ ಚನ್ನಯ್ಯ ಜಯಂತಿ ಡಿ.16ರಂದು ದಾವಣಗೆರೆ ಗಾಂಧಿ ನಗರದಲ್ಲಿ ಹಮ್ಮಿಕೊಳ್ಳಲಾಗಿದೆ. ಮಾಯಕೊಂಡ ಮೀಸಲು ಕ್ಷೇತ್ರಕ್ಕೆ 4 ದಶಕದಿಂದ ಪಕ್ಷದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿಕೊಂಡು ಬಂದ ನಾನೂ ಟಿಕೆಟ್‌ಗಾಗಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದೇನೆ. ಈ ಸಲ ವರಿಷ್ಠರು ನನಗೆ ಅವಕಾಶ ನೀಡುವ ವಿಶ್ವಾಸವಿದೆ ಎಂದು ತಿಳಿಸಿದರು.

ಕಾಂಗ್ರೆಸ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಕೆ.ಶೆಟ್ಟಿ, ಮಹಿಳಾ ಜಿಲ್ಲಾಧ್ಯಕ್ಷೆ, ಮಾಜಿ ಮೇಯರ್‌ ಅನಿತಾಬಾಯಿ ಮಾಲತೇಶ, ಕೆ.ಜಿ.ಶಿವಕುಮಾರ, ಅಯೂಬ್‌ ಪೈಲ್ವಾನ್‌, ನಂಜಾನಾಯ್ಕ, ಯುವರಾಜ, ಡೋಲಿ ಚಂದ್ರು, ರಾಕೇಶ, ಸುಭಾನ್‌, ದಾದಾಪೀರ್‌ ಇತರರು ಇದ್ದರು.

ಸದಾಶಿವ ವರದಿ ಶಿಫಾರಸ್ಸಿಗೆ ಆಗ್ರಹಿಸಿ ಡಿ.11ರಂದು ಸಮಾವೇಶ

ಮಾಯಕೊಂಡ ಟಿಕೆಟ್‌ಗೆ ಕಾಂಗ್ರೆಸ್ಸಿನಲ್ಲಿ ಹೆಚ್ಚು ಅರ್ಜಿ ದಕ್ಷಿಣಕ್ಕೆ ಶಾಮನೂರು ಸೇರಿ 5 ಅರ್ಜಿ, ಉತ್ತರಕ್ಕೆ ಒಂದೂ ಅರ್ಜಿ ಇಲ್ಲ!

ದಾವಣಗೆರೆ: ದಾವಣಗೆರೆ ಜಿಲ್ಲೆಯ ಏಳೂ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ ಬಯಸಿ ಅರ್ಜಿ ಸಲ್ಲಿಕೆಯಾಗಿದ್ದು, ಈ ಪೈಕಿ ಪರಿಶಿಷ್ಟಜಾತಿಗೆ ಮೀಸಲಾದ ಮಾಯಕೊಂಡ ಕ್ಷೇತ್ರಕ್ಕೆ ಅತಿ ಹೆಚ್ಚು ಅರ್ಜಿ ಸಲ್ಲಿಕೆಯಾಗಿವೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಎಚ್‌.ಬಿ.ಮಂಜಪ್ಪ ತಿಳಿಸಿದರು. ದಾವಣಗೆರೆ ಉತ್ತರಕ್ಕೆ ಯಾರೂ ಸಹ ಅರ್ಜಿ ಸಲ್ಲಿಸಿಲ್ಲವಾದರೂ ಮಾಜಿ ಸಚಿವರು, ನಮ್ಮ ನಾಯಕರಾದ ಎಸ್‌.ಎಸ್‌.ಮಲ್ಲಿಕಾರ್ಜುನ ಸ್ಪರ್ಧಿಸುವ ಸಾಧ್ಯತೆ ಇದೆ ಎಂದರು. ದಕ್ಷಿಣ ಕ್ಷೇತ್ರದಿಂದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಸೇರಿ ಒಟ್ಟು 5 ಅರ್ಜಿ ಸಲ್ಲಿಕೆಯಾಗಿವೆ. ಹೊನ್ನಾಳಿಗೆ ತಾವು ಸೇರಿ 5 ಜನರು ಅರ್ಜಿ ಸಲ್ಲಿಸಿದ್ದೇವೆ. ಹರಿಹರಕ್ಕೆ ಶಾಸಕ ಎಸ್‌.ರಾಮಪ್ಪ ಸೇರಿ 6 ಜನರು, ಜಗಳೂರಿಗೆ ಮಾಜಿ ಶಾಸಕ ಎಚ್‌.ಪಿ. ರಾಜೇಶ ಸೇರಿ 5 ಹಾಗೂ ಚನ್ನಗಿರಿ ಕ್ಷೇತ್ರದ ಟಿಕೆಟ್‌ ಬಯಸಿ 7 ಜನರು ಕೆಪಿಸಿಸಿಗೆ ಅರ್ಜಿ ನೀಡಿದ್ದಾರೆ. ಪಕ್ಷದ ಟಿಕೆಟ್‌ಗೆ ಅರ್ಜಿ ಸಲ್ಲಿಸುವವರಿಗೆ ಪಕ್ಷದ ಕಚೇರಿಗಾಗಿ ವಂತಿಗೆ ಸಂಗ್ರಹಿಸುತ್ತಿದ್ದು, ಅದೇನೂ ತಪ್ಪಲ್ಲ. ಯಾರಿಗೆ ಟಿಕೆಟ್‌ ಬೇಕೋ ಅಂತಹವರು ಅರ್ಜಿ ಜೊತೆ ನಿರ್ದಿಷ್ಟಮೊತ್ತದ ಡಿಡಿ ಕೊಡುತ್ತಾರೆ ಎಂದು ಅವರು ಹೇಳಿದರು.

click me!