ಬೆಳಗಾವಿ: ಲಕ್ಷ್ಮೀ ಹೆಬ್ಬಾಳಕರ ಕ್ಷೇತ್ರದ ಮೇಲೆ ರಮೇಶ ಜಾರಕಿಹೊಳಿ ಕಣ್ಣು..!

By Kannadaprabha News  |  First Published Nov 25, 2022, 9:30 AM IST

ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಪ್ರತಿನಿಧಿಸುತ್ತಿರುವ ಬೆಳಗಾವಿ ಗ್ರಾಮೀಣ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಜಾರಕಿಹೊಳಿ ತಮ್ಮ ಪರಮಾಪ್ತನ್ನು ಚುನಾವಣಾ ಕಣಕ್ಕಿಳಿಸಲು ಸಿದ್ಧತೆ ನಡೆಸಿದ್ದಾರೆ. 


ಬೆಳಗಾವಿ(ನ.25):  ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಸಚಿವ, ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಇದೀಗ ಮತ್ತೆ ರಾಜಕೀಯದಲ್ಲಿ ಸಕ್ರೀಯರಾಗಿದ್ದಾರೆ. ತಮ್ಮ ರಾಜಕೀಯ ಬದ್ಧವೈರಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಪ್ರತಿನಿಧಿಸುತ್ತಿರುವ ಬೆಳಗಾವಿ ಗ್ರಾಮೀಣ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಜಾರಕಿಹೊಳಿ ತಮ್ಮ ಪರಮಾಪ್ತನ್ನು ಚುನಾವಣಾ ಕಣಕ್ಕಿಳಿಸಲು ಸಿದ್ಧತೆ ನಡೆಸಿದ್ದಾರೆ.

ತಮ್ಮ ಪರಮಾಪ್ತ, ಹಿಂಡಲಗಾ ಗ್ರಾಪಂ ಅಧ್ಯಕ್ಷ ನಾಗೇಶ ಮಂಡೋಳ್ಕರ ಅವರನ್ನು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಬಿಜೆಪಿಯಿಂದ ಕಣಕ್ಕಿಳಿಸಲು ರಮೇಶ ಜಾರಕಿಹೊಳಿ ತಂತ್ರಗಾರಿಕೆ ರೂಪಿಸಿದ್ದಾರೆ. ರಾಜಕೀಯ ಬೆಳವಣಿಗೆಯೊಂದರಲ್ಲಿ ನಾಗೇಶ ಮಂಡೋಳ್ಕರ ಅವರನ್ನು ತಮ್ಮ ಜೊತೆಗೆ ಬೆಂಗಳೂರಿಗೆ ಕರೆದುಕೊಂಡು ಹೋಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿಸಿರುವ ಭಾವಚಿತ್ರ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ಆಗಿ ವೈರಲ್‌ ಆಗಿದೆ.

Tap to resize

Latest Videos

ಬಿಜೆಪಿ ತೊರೀತಾರಾ ರಮೇಶ ಜಾರಕಿಹೊಳಿ..?

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಮರಾಠ ಸಮುದಾಯದವರೇ ಪ್ರಮುಖ ನಿರ್ಣಾಯಕರಾಗಿದ್ದು, ಹೀಗಾಗಿ ಅದೇ ಸಮುದಾಯದ ನಾಗೇಶ ಮಂಡೋಳ್ಕರ ಅವರನ್ನು ಕಣಕ್ಕಿಳಿಸಿದರೆ, ಬಿಜೆಪಿ ಗೆಲುವಿಗೆ ಅನುಕೂಲವಾಗುತ್ತದೆ. ಹಾಗಾಗಿ, ಮಡೋಳ್ಕರ ಅವರಿಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡುವಂತೆ ರಮೇಶ ಜಾರಕಿಹೊಳಿ ಮುಖ್ಯಮಂತ್ರಿಗೆ ಮನವರಿಕೆ ಮಾಡಿದ್ದಾರೆ ಎನ್ನಲಾಗಿದೆ. ಜಾರಕಿಹೊಳಿ ಅವರ ಈ ನಡೆದ ಕಲಮ, ಕೈ ಪಾಳಯದಲ್ಲಿಯೂ ತೀವ್ರ ಸಂಚಲಕ್ಕೆ ಕಾರಣವಾಗಿದೆ.ಮಂಡೋಳ್ಕರ ಸಿಎಂ ಭೇಟಿ ವಿಚಾರ ನಾನಾ ಚರ್ಚೆಗೂ ಗ್ರಾಸವಾಗಿದೆ.
 

click me!