ಒಡಿಶಾದಲ್ಲಿ ಬಿಜೆಡಿ ಹಾಗೂ ಬಿಜೆಡಿ ಸಮಬಲದ ಸ್ಪರ್ಧೆಯಲ್ಲಿದ್ದು ಎರಡೂ ಪಕ್ಷಗಳಿಗೆ ತಲಾ 62ರಿಂದ 80 ಬರಬಹುದು ಎಂದು ‘ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ’ ಚುನಾವಣೋತ್ತರ ಸಮೀಕ್ಷೆ ಹೇಳಿದೆ.
ಭುವನೇಶ್ವರ (ಜೂ.3): ಒಡಿಶಾದಲ್ಲಿ ಬಿಜೆಡಿ ಹಾಗೂ ಬಿಜೆಡಿ ಸಮಬಲದ ಸ್ಪರ್ಧೆಯಲ್ಲಿದ್ದು ಎರಡೂ ಪಕ್ಷಗಳಿಗೆ ತಲಾ 62ರಿಂದ 80 ಬರಬಹುದು ಎಂದು ‘ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ’ ಚುನಾವಣೋತ್ತರ ಸಮೀಕ್ಷೆ ಹೇಳಿದೆ.
147 ಸ್ಥಾನಗಳ ಅಸೆಂಬ್ಲಿಯಲ್ಲಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ನೇತೃತ್ವದ ಬಿಜು ಜನತಾ ದಳ (ಬಿಜೆಡಿ) ತನ್ನ ಲೆಕ್ಕಾಚಾರವನ್ನು ಗಣನೀಯವಾಗಿ ಕುಸಿಯಬಹುದು ಮತ್ತು 62 ರಿಂದ 80 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ. ಬಿಜೆಪಿ ಸಮಬಲ ಸ್ಪರ್ಧೆ ನೀಡಿ ಅಷ್ಟೇ ಸ್ಥಾನ ಪಡೆಯಬಹುದು. ಕಾಂಗ್ರೆಸ್ 5-8 ಸ್ಥಾನ ಪಡೆಯಬಹುದು ಎಂದಿದೆ. ಇದು ನಿಜವಾದರೆ 2004ರ ನಂತರ ರಾಜ್ಯ ವಿಧಾನಸಭೆಯಲ್ಲಿ ಬಿಜೆಡಿ ಸಂಪೂರ್ಣ ಬಹುಮತವನ್ನು ಪಡೆಯದಿರುವುದು ಇದೇ ಮೊದಲ ಬಾರಿಗೆ ಆಗಿರಬಹುದು.
ರಾಹುಲ್ ಗಾಂಧಿ ಸೇರಿ ಇಂಡಿಯಾ ಕೂಟ ಚುನಾವಣೋತ್ತರ ಸಮೀಕ್ಷೆ ತಿರಸ್ಕರಿಸಿದ್ದು ಏಕೆ?
ಆಂಧ್ರದಲ್ಲಿ ಟಿಡಿಪಿ ಮೈತ್ರಿಕೂಟ ಜಯಭೇರಿ : ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ 98-120 ಸ್ಥಾನಗಳನ್ನು ಗೆಲ್ಲಲಿದೆ ಎಂದು ಅಂದಾಜಿಸಲಾಗಿದೆ ಎಂದು ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ಭವಿಷ್ಯ ನುಡಿದಿದೆ.
ಆಡಳಿತಾರೂಢ ವೈಎಸ್ಸಾರ್ ಕಾಂಗ್ರೆಸ್ 55 ರಿಂದ 77 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. ಟಿಡಿಪಿ 78 ರಿಂದ 96 ಸ್ಥಾನಗಳೊಂದಿಗೆ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಜನಸೇನಾ 16-18, ಬಿಜೆಪಿ 4-6, ಕಾಂಗ್ರೆಸ್ 0-2 ಸ್ಥಾನ ಗಳಿಸಬಹುದು ಎಂದಿದೆ.
ಪಂಜಾಬಿ ಹಾಡಿನ ಮೂಲಕ ಇಂಡಿಯಾ ಮೈತ್ರಿ ಎಷ್ಟು ಸ್ಥಾನ ಗೆಲ್ಲಲಿದೆ ಎಂದ ರಾಹುಲ್ ಗಾಂಧಿ!
ಬಿಜೆಡಿಯಿಂದ ಎಕ್ಸಿಟ್ ಪೋಲ್ ತಿರಸ್ಕಾರ: ಒಡಿಶಾದ 147 ವಿಧಾನಸಭಾ ಕ್ಷೇತ್ರಗಳ ಪೈಕಿ ಕನಿಷ್ಠ 110 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಬಿಜೆಡಿ ಮೂರನೇ ಎರಡರಷ್ಟು ಬಹುಮತ ಪಡೆಯಲಿದೆ ಹಾಗೂ ಸರ್ಕಾರ ರಚಿಸಲಿದೆ ಎಂದು ರಾಜ್ಯದ ಆಡಳಿತಾರೂಢ ಪಕ್ಷ ಭಾನುವಾರ ತಿಳಿಸಿದೆ.
ಒಡಿಶಾದಲ್ಲಿ ಬಿಜೆಪಿ 15 ಲೋಕಸಭಾ ಸ್ಥಾನಗಳನ್ನು ಹಾಗೂ ಸುಮಾರು 80 ವಿಧಾನಸಭೆ ಸ್ಥಾನಗಳನ್ನು ಗೆಲ್ಲಲಿದೆ ಎಂದು ಶನಿವಾರ ಚುನಾವಣೋತ್ತರ ಸಮೀಕ್ಷೆ ಹೇಳಿದ್ದವು. ಈ ಬಗ್ಗೆ ಮಾತನಾಡಿದ ಬಿಜೆಡಿ ವಕ್ತಾರ ಸಸ್ಮಿತ್ ಪಾತ್ರ, ನಮ್ಮ ಸಮೀಕ್ಷೆಯ ಪ್ರಕಾರ ನಾವು 12 ಲೋಕಸಭಾ ಸ್ಥಾನಗಳು ಹಾಗೂ 110 ವಿಧಾನಸಭಾ ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತೇವೆ. 2014 ಮತ್ತು 2019ರ ಚುನಾವಣೆಯ ಸಮೀಕ್ಷೆಗಳು ತಪ್ಪು ಎಂದು ಸಾಬೀತಾಗಿದೆ. ಈ ಬಾರಿಯೂ ಅದೇ ಆಗಲಿದೆ ಎಂದರು.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ ಎಂಪಿ ಮಾನಸ್ ಮಂಗರಾಜ್ ‘ಎಕ್ಸಿಟ್ ಪೋಲ್‌ಗಳು ಏನೇ ಇರಲಿ, ಸಾರ್ವಜನಿಕರು ನಮ್ಮ ಪ್ರಾಮಾಣಿಕತೆ, ಕಠಿಣ ಪರಿಶ್ರಮ ಮತ್ತು ಸಮರ್ಪಣೆಯನ್ನು ಅನುಮೋದಿಸಿದ್ದಾರೆ ಎಂಬ ವಿಶ್ವಾಸ ನನಗಿದೆ’ ಎಂದು ತಿಳಿಸಿದ್ದಾರೆ.
ತೆಲಂಗಾಣ ಎಂಎಲ್‌ಸಿ ಉಪಚುನಾವಣೆ: ಬಿಆರ್‌ಎಸ್‌ಗೆ ಜಯ
ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರ ಜಿಲ್ಲೆಯಾದ ಮೆಹಬೂಬ್‌ನಗರ ವಿಧಾನ ಪರಿಷತ್ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯ ಫಲಿತಾಂಶ ಭಾನುವಾರ ಹೊರಬಿದ್ದಿದ್ದು, ಬಿಆರ್‌ಎಸ್ ಪಕ್ಷ ಜಯ ಸಾಧಿಸಿದೆ. ಇದು ಕಾಂಗ್ರೆಸ್‌ಗೆ ಮುಜುಗರ ತಂದಿದೆ.
ಬಿಆರ್‌ಎಸ್ ಪಕ್ಷದ ಅಭ್ಯರ್ಥಿ ನವೀನ್ ಕುಮಾರ್ 762 ಮತ ಪಡೆದರೆ, ಆಡಳಿತರೂಢ ಕಾಂಗ್ರೆಸ್ ಅಭ್ಯರ್ಥಿ ಎಂ. ಜೀವನ್ ರೆಡ್ಡಿ ಅವರು 653 ಮತ ಪಡೆದು ಪರಾಭವಗೊಂಡಿದ್ದಾರೆ.
ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನ ನಂತರ ಬಿಆರ್‌ಎಸ್‌ಗೆ ಈ ಉಪಚುನಾವಣೆಯಲ್ಲಿ ಗೆಲುವು ಒಂದು ಬೂಸ್ಟರ್ ಆಗಿದೆ.