MLC Election 2024: ಇಂದು ಮೇಲ್ಮನೆ 6 ಸ್ಥಾನಕ್ಕೆ ಮತದಾನ

By Kannadaprabha News  |  First Published Jun 3, 2024, 5:18 AM IST

ವಿಧಾನಪರಿಷತ್ತಿನ ಮೂರು ಪದವೀಧರ ಮತ್ತು ಮೂರು ಶಿಕ್ಷಕರ ಕ್ಷೇತ್ರಗಳಿಗೆ ಸೋಮವಾರ ಮತದಾನ ನಡೆಯಲಿದೆ. ಈಶಾನ್ಯ ಪದವೀಧರ, ಬೆಂಗಳೂರು ಪದವೀಧರ, ನೈಋತ್ಯ ಪದವೀಧರ ಮತ್ತು ಆಗ್ನೇಯ ಶಿಕ್ಷಕರ, ನೈಋತ್ಯ ಶಿಕ್ಷಕರ, ದಕ್ಷಿಣ ಶಿಕ್ಷಕರ ಕ್ಷೇತ್ರಗಳಿಗೆ ಸೋಮವಾರ ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ.


ಬೆಂಗಳೂರು (ಜೂ.3) : ವಿಧಾನಪರಿಷತ್ತಿನ ಮೂರು ಪದವೀಧರ ಮತ್ತು ಮೂರು ಶಿಕ್ಷಕರ ಕ್ಷೇತ್ರಗಳಿಗೆ ಸೋಮವಾರ ಮತದಾನ ನಡೆಯಲಿದೆ. ಈಶಾನ್ಯ ಪದವೀಧರ, ಬೆಂಗಳೂರು ಪದವೀಧರ, ನೈಋತ್ಯ ಪದವೀಧರ ಮತ್ತು ಆಗ್ನೇಯ ಶಿಕ್ಷಕರ, ನೈಋತ್ಯ ಶಿಕ್ಷಕರ, ದಕ್ಷಿಣ ಶಿಕ್ಷಕರ ಕ್ಷೇತ್ರಗಳಿಗೆ ಸೋಮವಾರ ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ.

ಈ ಆರು ಕ್ಷೇತ್ರಗಳಲ್ಲಿ ಓರ್ವ ಮಹಿಳೆ ಸೇರಿ ಒಟ್ಟು 78 ಅಭ್ಯರ್ಥಿಗಳು ಅಂತಿಮ ಸ್ಫರ್ಧಾ ಕಣದಲ್ಲಿದ್ದಾರೆ. ಪ್ರಮುಖವಾಗಿ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮರಿತಿಬ್ಬೇಗೌಡ, ನೈಋತ್ಯ ಪದವಿಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಡಾ. ಧನಂಜಯ ಸರ್ಜಿ, ನೈಋತ್ಯ ಪದವೀಧರರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯನೂರು ಮಂಜುನಾಥ್, ನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕೆ.ಕೆ. ಮಂಜುನಾಥ್, ನೈಋತ್ಯ ಪದವಿಧರ ಕ್ಷೇತ್ರದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕೆ.ರಘುಪತಿ ಭಟ್, ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ವಿವೇಕಾನಂದ, ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ರುಪ್ಸಾ ಸಂಘಟನೆ ಅಧ್ಯಕ್ಷ ಲೋಕೇಶ್ ತಾಳಿಕೋಟೆ ಸೇರಿ ಒಟ್ಟು 78 ಅಭ್ಯರ್ಥಿಗಳು ತಮ್ಮ ಗೆಲುವಿಗೆ ಸೆಣಸಲಿದ್ದಾರೆ.

Tap to resize

Latest Videos

ಯತೀಂದ್ರ ಸಿದ್ದರಾಮಯ್ಯ ಸೇರಿ 7 ಮಂದಿಗೆ ಕಾಂಗ್ರೆಸ್ ಪರಿಷತ್ ಟಿಕೆಟ್ ಘೋಷಣೆ, ಇಲ್ಲಿದೆ ಪಟ್ಟಿ

ಈಶಾನ್ಯ ಪದವೀಧರ ಕ್ಷೇತ್ರದಲ್ಲಿ 19 ಅಭ್ಯರ್ಥಿಗಳು ಕಣದಲ್ಲಿದ್ದು, ಬೆಂಗಳೂರು ಪದವೀಧರ ಕ್ಷೇತ್ರದಲ್ಲಿ 15 ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ. ನೈಋತ್ಯ ಪದವೀಧರ ಕ್ಷೇತ್ರದಲ್ಲಿ 10 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ 15 ಮಂದಿ ಸ್ಪರ್ಧಿಸುತ್ತಿದ್ದು, ನೈಋತ್ಯ ಶಿಕ್ಷಕರ ಕ್ಷೇತ್ರದಲ್ಲಿ 8 ಅಭ್ಯರ್ಥಿಗಳ ನಡುವೆ ಸೆಣಸಾಟ ನಡೆಯಲಿದೆ. ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ 11 ಅಭ್ಯರ್ಥಿಗಳ ನಡುವೆ ಗೆಲುವಿಗೆ ಪೈಪೋಟಿ ಜರುಗಲಿದೆ.ಪದವೀಧರ ಕ್ಷೇತ್ರದಲ್ಲಿ 2,01,632 ಪುರುಷರು, 1,61,907 ಮಹಿಳೆಯರು ಹಾಗೂ 34 ಇತರರು ಸೇರಿ ಒಟ್ಟು3,63,573 ಮತದಾರರು ಇದ್ದಾರೆ. ಶಿಕ್ಷಕರ ಕ್ಷೇತ್ರದಲ್ಲಿ 38,305 ಪುರುಷರು, 31,954 ಮಹಿಳೆಯರು ಹಾಗೂ ಒಬ್ಬರು ಇತರರು ಸೇರಿ ಒಟ್ಟು 70,260 ಮತದಾರರಿದ್ದಾರೆ.

ಬಲಗೈ ತೋರು ಬೆರಳು, ಮಧ್ಯದ ಬೆರಳಿಗೆ ಶಾಯಿ:

ಶಿಕ್ಷಕರ ಕ್ಷೇತ್ರದಲ್ಲಿ 151 ಸಾಮಾನ್ಯ ಮತಗಟ್ಟೆ ಮತ್ತು 19 ಉಪ ಮತಗಟ್ಟೆ ಸೇರಿ ಒಟ್ಟು 170 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಪದವಿಧರ ಕ್ಷೇತ್ರದಲ್ಲಿ 307 ಸಾಮಾನ್ಯ ಮತಗಟ್ಟೆ ಮತ್ತು 154 ಉಪ ಮತಗಟ್ಟೆ ಸೇರಿ ಒಟ್ಟು 461 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ನೈಋತ್ಯ ಶಿಕ್ಷಕರ ಕ್ಷೇತ್ರ ಹೊರತು ಪಡಿಸಿ ಇನ್ನುಳಿದ ಕ್ಷೇತ್ರದಲ್ಲಿ ಬಲಗೈ ತೋರುಬೆರಳಿಗೆ ಶಾಯಿ ಹಾಕಲಾಗುವುದು. ನೈಋತ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಲಗೈ ಮಧ್ಯದ ಬೆರಳಿಗೆ ಶಾಯಿ ಹಾಕಲಾಗುತ್ತದೆ.

ಅಭ್ಯರ್ಥಿಗಳಿಂದ ಮನೆ-ಮನೆ ಪ್ರಚಾರ:

ಆರು ಕ್ಷೇತ್ರಗಳ ಚುನಾವಣೆ ಹಿನ್ನೆಲೆಯಲ್ಲಿ ನಡೆದ ಅಬ್ಬರದ ಬಹಿರಂಗ ಪ್ರಚಾರ ಶನಿವಾರ ಸಂಜೆ ಅಂತ್ಯವಾಯಿತು. ಭಾನುವಾರ ಸಂಜೆ 6 ಗಂಟೆ ವರೆಗೆ ಅಭ್ಯರ್ಥಿಗಳು ಮತದಾರರ ಮನೆ-ಮನೆಗೆ ತೆರಳಿ ಮತಯಾಚಿಸಿ ತಮ್ಮ ಗೆಲುವಿಗೆ ಅಂತಿಮ ಕಸರತ್ತು ನಡೆಸಿದರು. ಸೋಮವಾರ ಮತದಾನ ನಡೆಯಲಿದ್ದು, ಎಲ್ಲ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಜೂ.6ರಂದು ಮತ ಎಣಿಕೆ ಕಾರ್ಯ ಜರುಗಲಿದ್ದು, ಯಾರು ಗೆಲುವಿನ ದಡ ಸೇರಲಿದ್ದಾರೆ ಎಂಬುದು ಹೊರಬೀಳಲಿದೆ.

ಎಕ್ಸಿಟ್ ಪೋಲ್‌ನಲ್ಲಿ ಕೈಗೆ ಬಿಗ್ ಶಾಕ್, ಮೈತ್ರಿ ರಾಕ್..! ಧೂಳೆಬ್ಬಿಸಲಿದ್ಯಂತೆ ಕಮಲದಳ ಮೈತ್ರಿಕೂಟ..ಕಾಂಗ್ರೆಸ್‌ಗೆ ಲೋಕಾಘಾತ..?

ಪ್ರಮುಖ ಅಭ್ಯರ್ಥಿಗಳುಮರಿತಿಬ್ಬೇಗೌಡ ಕಾಂಗ್ರೆಸ್‌ಆಯನೂರು ಮಂಜುನಾಥ್ ಕಾಂಗ್ರೆಸ್‌ಕೆ.ಕೆ. ಮಂಜುನಾಥ್ ಕಾಂಗ್ರೆಸ್‌ಡಾ.ಧನಂಜಯ ಸರ್ಜಿ ಬಿಜೆಪಿವಿವೇಕಾನಂದಜೆಡಿಎಸ್‌ ಎಸ್‌.ಎಲ್‌. ಬೋಜೇಗೌಡ ಜೆಡಿಎಸ್‌ಲೋಕೇಶ್ ತಾಳಿಕೋಟೆ ಪಕ್ಷೇತರರಘುಪತಿ ಭಟ್‌ ಪಕ್ಷೇತರ

click me!