We want Modi... ನೇಪಾಳದಲ್ಲಿ ಯುವಕರ ಘೋಷಣೆ- ಓಲಿ ಬೇಡ ನಮಗೂ ಮೋದಿ ಬೇಕೆಂದ ವಿಡಿಯೋ ವೈರಲ್​

Published : Sep 12, 2025, 05:51 PM IST
We Want A PM Like Modi Says Nepals Youth

ಸಾರಾಂಶ

ನೇಪಾಳದಲ್ಲಿ ಸಾಮಾಜಿಕ ಜಾಲತಾಣ ನಿಷೇಧದ ನಂತರ ಭುಗಿಲೆದ್ದ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿವೆ. ಯುವ ಪ್ರತಿಭಟನಾಕಾರರು ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದ್ದು, ಭಾರತದ ಪ್ರಧಾನಿ ನರೇಂದ್ರ ಮೋದಿಯಂತಹ ನಾಯಕತ್ವವನ್ನು ಬಯಸುತ್ತಿದ್ದಾರೆ.  

ಕಳೆದ ಕೆಲವು ದಿನಗಳಿಂದ ನೇಪಾಳ (Nepal) ಹೊತ್ತಿ ಉರಿಯುತ್ತಿದೆ. ದೇಶಾದ್ಯಂತ ಸೋಷಿಯಲ್​ ಮೀಡಿಯಾ ಬ್ಯಾನ್​ ಮಾಡಿರುವುದನ್ನೇ ನೆಪವಾಗಿಟ್ಟುಕೊಂಡು ಯುವ ಸಮುದಾಯ (Nepal's Gen Z protest) ಪ್ರತಿಭಟನೆ ನಡಸುತ್ತಿದೆ. ಆದರೆ, ಸೋಷಿಯಲ್​ ಮೀಡಿಯಾ ಬ್ಯಾನ್​ ಎನ್ನುವುದು ಕೇವಲ ನೆಪ ಮಾತ್ರ. ಬಹಳ ವರ್ಷಗಳಿಂದ ನೇಪಾಳದಾದ್ಯಂತ ಭ್ರಷ್ಟಾಚಾರ ವಿರೋಧಿ ಬೃಹತ್ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಯುವ ಪ್ರತಿಭಟನಾಕಾರರು ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರ ನಾಯಕತ್ವವನ್ನು ಬಹಿರಂಗವಾಗಿ ತಿರಸ್ಕರಿಸುತ್ತಲೇ ಬಂದಿದ್ದರು. ಆದರೆ ಇದೀಗ ಓಲಿ ಅವರು social media ban ಮಾಡಿರುವುದು ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದಂತೆ ಆಗಿದೆ. ಯುವ ಸಮುದಾಯ ಹಚ್ಚಿರುವ ಈ ಬೆಂಕಿಗೆ ಇದಾಗಲೇ 35 ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮಾಜಿ ಪ್ರಧಾನಿಯ ಪತ್ನಿ ಸಜೀವ ದಹನಗೊಂಡಿದ್ದಾರೆ!

ಮೋದಿ ಬೇಕೆಂದ ಯುವಕರು

ಪ್ರತಿಭಟನಾಕಾರರು NDTV ಜೊತೆಗೆ ಮಾತನಾಡುತ್ತಾ, ಈ ಪ್ರತಿಭಟನೆಗೆ ಕಾರಣ, ಹಲವು ವರ್ಷಗಳಿಂದ ರಾಜಕೀಯ ಅಸ್ಥಿರತೆ ಆಗಿದೆ. ನಮಗೆ ಭ್ರಷ್ಟಾಚಾರ ಮುಕ್ತ ಆಡಳಿತ ಬೇಕು. ಅಂಥ ಸರ್ಕಾರ ಬೇಕು. ನಮಗೆ ಓಲಿ ಅಲ್ಲ, ನಮಗೆ ಬೇಕಾಗಿರುವುದು ಭಾರತದ ಪ್ರಧಾನಿಯಾಗಿರುವ ನರೇಂದ್ರ ಮೋದಿ (Narendra Modi) ಅವರಂಥ ಪ್ರಧಾನಿ ಎಂದಿದ್ದಾರೆ. ಓಲಿ ಅವರು ಭ್ರಷ್ಟಾಚಾರದಲ್ಲಿ ತೊಡಗಿದ್ದರು, ಅವರು ಎಲ್ಲಿಯೇ ಅಡಗಿ ಕುಳಿತರೂ ನಾವು ಬಿಡುವುದಿಲ್ಲ ಎಂದಿದ್ದಾರೆ.

ಇದನ್ನೂ ಓದಿ: Nepal ಜೆನ್ ಝೀ ನಡುವೆ ಒಡಕು, ಸೇನಾ ಕಚೇರಿ ಮುಂದೆ ಘರ್ಷಣೆ

ಭಾರತಕ್ಕೆ ಕೈದಿಗಳ ಅಕ್ರಮ ಪ್ರವೇಶ

ಇದರ ಮಧ್ಯೆಯೇ, ನೇಪಾಳದಲ್ಲಿ ಪ್ರತಿಭಟನೆಯ ಕಾವು ಜೋರಾಗಿಯೇ ನಡೆಯುತ್ತಿದೆ. ಈಗಲೂ ನೇಪಾಳ ಬೂದಿ ಮುಚ್ಚಿದ ಕೆಂಡದಂತೆ ಆಗಿದೆವಿವಿಧ ಜೈಲುಗಳಿಂದ ಸಹಸ್ರಾರು ಕೈದಿಗಳು ತಪ್ಪಿಸಿಕೊಂಡು ಬಂದಿದ್ದಾರೆ. ಹಲವರು ಭಾರತವನ್ನು ಅಕ್ರಮವಾಗಿ ಪ್ರವೇಶಿಸಿದ್ದಾರೆ. ಇದಾಗಲೇ 35 ಕೈದಿಗಳನ್ನು ಭಾರತದ ಸಶಸ್ತ್ರ ಸೀಮಾ ಬಲ್(ಎಸ್‌ಎಸ್‌ಬಿ) ಬಂಧಿಸಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. 22 ಕೈದಿಗಳನ್ನು ಉತ್ತರ ಪ್ರದೇಶದ ಭಾರತ-ನೇಪಾಳ ಗಡಿಯಲ್ಲಿ, 10 ಮಂದಿಯನ್ನು ಬಿಹಾರದಲ್ಲಿ ಮತ್ತು ಮೂವರನ್ನು ಪಶ್ಚಿಮ ಬಂಗಾಳದಲ್ಲಿ ಸೆರೆಹಿಡಿಯಲಾಗಿದೆ. ಈ ಬೆಳವಣಿಗೆ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು, ಈ ಕೈದಿಗಳನ್ನು ಭಾರತ-ನೇಪಾಳ ಗಡಿಯಾದ್ಯಂತ ವಿವಿಧ ಚೆಕ್‌ಪೋಸ್ಟ್‌ಗಳಲ್ಲಿ ಇರಿಸಿದ್ದಾರೆ ಎಂದು ಎಎನ್‌ಐಗೆ ತಿಳಿಸಿದ್ದಾರೆ. ಅಧಿಕಾರಿಗಳ ಪ್ರಕಾರ, ಎಲ್ಲಾ ಗಡಿ ಪ್ರವೇಶ ಸ್ಥಳಗಳಲ್ಲಿ ಕಟ್ಟುನಿಟ್ಟಿನ ಕಣ್ಗಾವಲು ಮುಂದುವರಿದಿರುವುದರಿಂದ ಬಂಧಿತರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

ಹಂಗಾಮಿ ಮುಖ್ಯಸ್ಥೆಯಾಗಿ ಸುಶೀಲಾ ಕರ್ಕಿ?

ಈ ಮಧ್ಯೆ ನೇಪಾಳದಲ್ಲಿ ಮಧ್ಯಂತರ ಸರ್ಕಾರದ ಹಂಗಾಮಿ ಮುಖ್ಯಸ್ಥೆಯಾಗಿ ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅವರು ನೇಮಕಗೊಳ್ಳುವ ಸಾಧ್ಯತೆಯಿದೆ. ನೇಪಾಳ ಅಧ್ಯಕ್ಷ ರಾಮಚಂದ್ರ ಪೌಡೆಲ್, ಹಿರಿಯ ರಾಜಕೀಯ ನಾಯಕರು, ಸೇನಾ ಮುಖ್ಯಸ್ಥರು ಮತ್ತು ಇತ್ತೀಚಿನ ಸಾಮೂಹಿಕ ಪ್ರತಿಭಟನೆಗಳ ಮುಂಚೂಣಿಯಲ್ಲಿರುವ ಯುವ ನೇತೃತ್ವದ ಜನರಲ್ ಝಡ್ ಚಳವಳಿಯ ಪ್ರತಿನಿಧಿಗಳ ನಡುವೆ ತೀವ್ರ ಮಾತುಕತೆಗಳ ಮಧ್ಯೆ ಈ ಪ್ರಸ್ತಾಪ ಬಂದಿದೆ. ನೇಪಾಳದ ನ್ಯಾಯಾಂಗದಲ್ಲಿ ಗೌರವಾನ್ವಿತ ಹುದ್ದೆ ಹೊಂದಿದ್ದ ಮತ್ತು ಭ್ರಷ್ಟಾಚಾರ ವಿರೋಧಿ ಹೋರಾಟಗಾರ್ತಿ ಕರ್ಕಿ ಅವರನ್ನು ಮಧ್ಯಂತರ ಸರ್ಕಾರದ ಮುಖ್ಯಸ್ಥರನ್ನಾಗಿ ಮಾಡಲು ಗುಂಪು ಬಲವಾಗಿ ಶಿಫಾರಸು ಮಾಡಿದೆ. ಅವರು ನೇಮಕಗೊಂಡರೆ, ಸುಶೀಲಾ ಕರ್ಕಿ ನೇಪಾಳದ ಮೊದಲ ಮಹಿಳಾ ಪ್ರಧಾನಿಯಾಗುತ್ತಾರೆ.

ಇದನ್ನೂ ಓದಿ: ನೇಪಾಳಕ್ಕೆ ಪ್ರವಾಸ ಹೋಗಿದ್ದ ಭಾರತೀಯ ಮಹಿಳೆ ಜೇನ್ ಝಿ ಹೋರಾಟದ ಕಿಚ್ಚಿಗೆ ಬಲಿ

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!