ಕುಡಿಯೋದಕ್ಕೇ ನೀರಿಲ್ಲ, ತ.ನಾಡಿಗೆ ಕೊಡೋದು ಹೇಗೆ?: ಸಚಿವ ಚಲುವರಾಯಸ್ವಾಮಿ

By Kannadaprabha News  |  First Published Jul 16, 2023, 9:26 AM IST

ಪ್ರಸ್ತುತ ಮಳೆ ಸಮಸ್ಯೆ ಎದುರಾಗಿದೆ. ಮತ್ತೊಂದೆಡೆ ತಮಿಳುನಾಡು ತನ್ನ ಪಾಲಿನ ನೀರಿಗೆ ಬೇಡಿಕೆಯಿಟ್ಟಿದೆ. ರಾಜ್ಯದಲ್ಲೇ ಕುಡಿಯುವ ನೀರಿಗೆ ಸಮಸ್ಯೆ ಇರುವಾಗ ತಮಿಳುನಾಡಿಗೆ ನೀರು ಬಿಡುವುದಾದರೂ ಹೇಗೆ? ಎಂದು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಹೇಳಿದರು.


ಮಂಡ್ಯ (ಜು.16): ಪ್ರಸ್ತುತ ಮಳೆ ಸಮಸ್ಯೆ ಎದುರಾಗಿದೆ. ಮತ್ತೊಂದೆಡೆ ತಮಿಳುನಾಡು ತನ್ನ ಪಾಲಿನ ನೀರಿಗೆ ಬೇಡಿಕೆಯಿಟ್ಟಿದೆ. ರಾಜ್ಯದಲ್ಲೇ ಕುಡಿಯುವ ನೀರಿಗೆ ಸಮಸ್ಯೆ ಇರುವಾಗ ತಮಿಳುನಾಡಿಗೆ ನೀರು ಬಿಡುವುದಾದರೂ ಹೇಗೆ? ಎಂದು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಹೇಳಿದರು. ನಗರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರು ಕಾವೇರಿ ನೀರಿಗಾಗಿ ತಮಿಳುನಾಡು ಒತ್ತಡ ಹೇರುತ್ತಿರುವ ಬಗ್ಗೆ ಪ್ರಶ್ನೆ ಕೇಳಿದಾಗ, ಕೆಆರ್‌ಎಸ್‌ ಅಣೆಕಟ್ಟೆಯಲ್ಲಿ ಅಲ್ಪ ಪ್ರಮಾಣದಲ್ಲಿ ನೀರು ಶೇಖರಣೆಯಾದ ಬೆನ್ನಲ್ಲೇ ಕೇಂದ್ರದ ನೀರು ನಿರ್ವಹಣಾ ಸಮಿತಿ ಎದುರು ತಮಿಳುನಾಡು ನೀರಿಗಾಗಿ ಬೇಡಿಕೆ ಇಟ್ಟಿದೆ. 

ಈ ಕುರಿತು ಕಾವೇರಿ ನೀರಾವರಿ ಸಮಿತಿ ಸಭೆಯ ಬಳಿಕವಷ್ಟೆನಿರ್ಧಾರ ಕೈಗೊಳ್ಳಲು ಸಾಧ್ಯ ಎಂದು ಉತ್ತರಿಸಿದರು. ಈ ತಿಂಗಳಾಂತ್ಯಕ್ಕೆ ರಾಜ್ಯದಲ್ಲಿ ಮಳೆಯಾಗುವ ಎಣಿಕೆ ಇದೆ. ಅದಾದರೂ ಹೇಗೆ ಭರವಸೆ ಇಟ್ಟುಕೊಳ್ಳುವುದು? ತಮಿಳುನಾಡು ವಾಡಿಕೆ ಪ್ರಕಾರ ಬಿಡಬೇಕಾದ ನೀರನ್ನು ಕೇಳುತ್ತಿದೆ. ಈ ಬಗ್ಗೆ ಮೊದಲು ಸಭೆ ನಡೆಸಲಿದ್ದೇವೆ, ಅಲ್ಲದೆ ಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವರ ಜೊತೆಗೂ ಚರ್ಚಿಸಲಾಗುವುದು ಎಂದರು.

Tap to resize

Latest Videos

ಕರಾವಳಿಯಲ್ಲಿ ಇನ್ನೂ 5 ದಿನ ಭಾರಿ ಮಳೆ: ಯೆಲ್ಲೋ ಅಲರ್ಟ್‌

ರೈತ ಕುಟುಂಬಕ್ಕೆ ಪರಿಹಾರ ವಿತರಣೆ: ಸಿಡಿಲು ಬಡಿದು ಮೃತಪಟ್ಟಿದ್ದ ತಾಲೂಕಿನ ಬೀರವಳ್ಳಿ ಜವರೇಗೌಡರ ಪುತ್ರ ರೈತ ಮಂಜುನಾಥ್‌ ನಿವಾಸಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಶನಿವಾರ ಭೇಟಿ ನೀಡಿ ಮೃತರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ಸರ್ಕಾರದ ಪರವಾಗಿ ಮೃತರ ಪತ್ನಿ ಶಾಂತಿ ಅವರಿಗೆ 5 ಲಕ್ಷ ರು. ಪರಿಹಾರ ಚೆಕ್‌ ವಿತರಿಸಿದರು. ರೈತ ಮಂಜುನಾಥ್‌ ತಮ್ಮ ಕೃಷಿ ಜಮೀನಿನಲ್ಲಿ ಕೃಷಿ ಚಟುವಟಿಕೆ ನಡೆಸುತ್ತಿದ್ದ ವೇಳೆ ಮಂದಗೆರೆ ಬಲದಂಡೆ ನಾಲೆ ಏರಿ ಬಳಿ ಸಿಡಿಲು ಬಡಿದು ಸ್ಥಳದಲ್ಲಿಯೇ ಮೃತಪಟ್ಟಿದ್ದರು. 

ಇವರ ಜೊತೆಯಿದ್ದ ಇದೇ ಗ್ರಾಮದ ಹನುಮಯ್ಯ ಪುತ್ರ ರಾಜು ಗಾಯಗೊಂಡಿದ್ದರು. ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ ಬಳಿಕ ಸಚಿವರು ಗಾಯಾಳು ರಾಜು ನಿವಾಸಕ್ಕೂ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿ ಗಾಯಾಳುಗೆ ವೈಯಕ್ತಿಕವಾಗಿ 25 ಸಾವಿರ ರು. ನಗದು ನೀಡಿ ಶೀಘ್ರ ಗುಣಮುಖರಾಗುವಂತೆ ಆಶಿಸಿದರು. ಈ ವೇಳೆ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್‌, ಟಿಎಪಿಸಿಎಂಎಸ್‌ ಅಧ್ಯಕ್ಷ ಬಿ.ಎಲ್‌.ದೇವರಾಜು, ಕಾಂಗ್ರೆಸ್‌ ಮುಖಂಡ ವಿಜಯ ರಾಮೇಗೌಡ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಕಿಕ್ಕೇರಿ ಸುರೇಶ್‌, ಬಿ.ನಾಗೇಂದ್ರಕುಮಾರ್‌, ವಕೀಲರ ಸಂಘದ ಅಧ್ಯಕ್ಷ ಎನ್‌.ಆರ್‌.ರವಿಶಂಕರ್‌ ಹಲವರು ಇದ್ದರು.

ನಮ್ಮ ಸರ್ಕಾರ ಭದ್ರವಾಗಿದೆ, ಕೊಟ್ಟಭರವಸೆ ಈಡೇರಿಸುತ್ತಿದೆ: ಸಚಿವ ಖಂಡ್ರೆ

ಕುಮಾರಸ್ವಾಮಿಯನ್ನು ರೈತನ ಮಗ ಎಂದು ಯಾರೂ ಕರೆಯಲ್ಲ: ಭ್ರಷ್ಟಾಚಾರಕ್ಕೆ ಜಾತಿ ಇದೆ ಎಂದು ನಾನು ಎಲ್ಲಿಯೂ ಹೇಳಿಲ್ಲ ಎಂದು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದರು. ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರದ ವಿಷಯ ಬಂದಾಗ ಕೆಲವರು ಜಾತಿಯನ್ನೇ ರಕ್ಷಾ ಕವಚ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಾರೆ ಎಂಬ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಡಿ.ಕೆ.ಶಿವಕುಮಾರ್‌, ಚಲುವರಾಯಸ್ವಾಮಿ ವಿರುದ್ಧ ಮಾತನಾಡಿದರೆ ತಮಗೆ ಅನುಕೂಲ ಆಗುತ್ತದೆ ಎಂಬ ಭಾವನೆಯಿಂದ ಹಾಗೆ ಮಾತನಾಡುತ್ತಾರೆ. ಸಮಯ ಬಂದಾಗ ಅವರಿಗೆ ಉತ್ತರಿಸುವೆ ಎಂದರು. ನಾನು ಒಬ್ಬ ಸಾಮಾನ್ಯ ರೈತನ ಮಗ. ದೇವೇಗೌಡರನ್ನೂ ರೈತನ ಮಗ ಎಂದೇ ಕರೆಯುತ್ತಾರೆ. ಆದರೆ, ಕುಮಾರಸ್ವಾಮಿ ಅವರನ್ನು ಯಾರಾದರೂ ರೈತನ ಮಗ ಎಂದು ಕರೆದಿದ್ದನ್ನು ನೋಡಿಲ್ಲ. ಅವರನ್ನು ‘ದೇವೇಗೌಡರ ಮಗ’ ಎಂದೇ ಗುರುತಿಸೋದು ಎಂದು ವ್ಯಂಗ್ಯವಾಡಿದರು.

click me!