ವಿಧಾನಸಭಾ ಚುನಾವಣೆಯಲ್ಲಿ ನಾವು 136 ಸೀಟು ಗೆದ್ದಿದ್ದಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಹೊಟ್ಟೆಉರಿಯುತ್ತಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಆರೋಪಿಸಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು.
ತುಮಕೂರು (ಜು.16): ವಿಧಾನಸಭಾ ಚುನಾವಣೆಯಲ್ಲಿ ನಾವು 136 ಸೀಟು ಗೆದ್ದಿದ್ದಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಹೊಟ್ಟೆಉರಿಯುತ್ತಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಆರೋಪಿಸಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಳು ಹೆಚ್ಚಾಗಿವೆ ಎಂಬ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆಗೆ ತಿರುಗೇಟು ನೀಡಿದ ಪರಮೇಶ್ವರ್, ನಾವು 136 ಸೀಟ್ ಗೆದ್ದ ಜೋಶ್‌ನಲ್ಲಿದ್ದೇವೆ. ಆದರೆ, ಅವರ ಪಕ್ಷ ಗೆದ್ದು ಅಧಿಕಾರಕ್ಕೆ ಬರಲಿಲ್ಲ. ಆದ್ದರಿಂದ ಅವರಿಗೆ ಹೊಟ್ಟೆಉರಿ ಇರಬಹುದು. ಅದಕ್ಕೆ ಆ ರೀತಿಯಲ್ಲಿ ಮಾತನಾಡುತ್ತಾರೆ ಎಂದರು. ಬೇಕಿದ್ದರೆ, ಅವರ ಸರ್ಕಾರ ಇದ್ದಾಗ ರಾಜ್ಯದಲ್ಲಿ ಎಷ್ಟುಕೊಲೆಗಳಾಗಿವೆ. ಎಷ್ಟುರೇಪ್ ಪ್ರಕರಣಗಳು ನಡೆದಿವೆ.
ಎಷ್ಟು ಕ್ರಿಮಿನಲ್ ಕೇಸ್‌ಗಳು ಆಗಿವೆ ಎಂಬುದರ ಲೆಕ್ಕ ಕೊಡುತ್ತೇನೆ. ನಮ್ಮ ಸರ್ಕಾರದ ಅವಧಿಯಲ್ಲಿ ಯಾರೇ ಕೊಲೆ ಮಾಡಲಿ, ಕೂಡಲೇ ತಪ್ಪಿತಸ್ಥರನ್ನು ಹಿಡಿದು ಶಿಕ್ಷೆ ಕೊಡಿಸುತ್ತಿದ್ದೇವೆ. ಹಿರೇಕೋಡಿ ನಂದಿಪರ್ವತ ಆಶ್ರಮದ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜರನ್ನು ಕೊಂದವರನ್ನು 6 ಗಂಟೆಯಲ್ಲಿ ಹಿಡಿದು ಕೋರ್ಚ್‌ಗೆ ಒಪ್ಪಿಸಿದ್ದೇವೆ. ಹತ್ಯೆ ಸಂಬಂಧ ತನಿಖೆ ನಡಿಯುತ್ತಿದೆ. ಬೆಂಗಳೂರಿನಲ್ಲಿ ಜೋಡಿ ಕೊಲೆ ಆಯಿತು. ಹಂತಕರನ್ನು 7 ಗಂಟೆಯಲ್ಲಿ ಕುಣಿಗಲ್ ಬಳಿ ಬಂಧಿಸಲಾಗಿದೆ. ಸುಮ್ಮನೆ ‘ಲಾ ಆ್ಯಂಡ್ ಆರ್ಡರ್’ ಹಾಳಾಗಿ ಹೋಗಿದೆ ಎಂದು ಹೇಳಿಕೆ ಕೊಡುವುದು ಸರಿಯಲ್ಲ. ಅವರ ಕಾಲದಲ್ಲಿ ಏನಾಗುತ್ತಿತ್ತು ಎಂಬುದನ್ನು ನಾವೂ ಬಿಡಿಸಿ ಹೇಳುತ್ತೇವೆ ಎಂದು ಕಿಡಿ ಕಾರಿದರು.
ಖಜಾನೆ ಖಾಲಿ ಮಾಡಿದ ಹಿಂದಿನ ಬಿಜೆಪಿ ಸರ್ಕಾರ: ದೇಶಪಾಂಡೆ
ಸರ್ಕಾರಕ್ಕೆ 6 ತಿಂಗಳಾದರೂ ಹನಿಮೂನ್ ಅವಧಿ ನೀಡಿ: ಸರ್ಕಾರದ ಹನಿಮೂನ್ ಅವಧಿ ಕುರಿತಂತೆ ಸದನದಲ್ಲಿ ಗುರುವಾರ ಸ್ವಾರಸ್ಯಕರ ಚರ್ಚೆ ನಡೆಯಿತು. ಜೆಡಿಎಸ್‌ನ ಟಿ.ಎ. ಶರವಣ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ವೇಳೆ ಮಾತನಾಡುವ ಸಂದರ್ಭದಲ್ಲಿ, ‘ಸರ್ಕಾರ ರಚನೆಯಾಗಿ 2 ತಿಂಗಳಾಗುತ್ತಿದೆ. ಇನ್ನೂ ಸಮರ್ಪಕವಾಗಿ ಆಡಳಿತ ಆರಂಭಿಸಿಲ್ಲ. ಸರ್ಕಾರದ ಹನಿಮೂನ್ ಅವಧಿ ಮುಗಿದಿದ್ದು, ಇನ್ನೂ ಕಾರ್ಯಪ್ರವೃತ್ತರಾಗಬೇಕು’ ಎಂದು ಹೇಳಿದರು. ಆಗ ಮಧ್ಯಪ್ರವೇಶಿಸಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್, ‘ನೀವೇ ಹೇಳಿದಂತೆ ಸರ್ಕಾರ ರಚನೆಯಾಗಿ ಇನ್ನೂ 2 ತಿಂಗಳೂ ಆಗಿಲ್ಲ. ಅಷ್ಟರೊಳಗೆ ನಮ್ಮ ಮೇಲೆ ಮುಗಿಬಿದ್ದರೆ ಹೇಗೆ. ಹನಿಮೂನ್ ಅವಧಿಯಾಗಿ 6 ತಿಂಗಳಾದರೂ ಕೊಡಿ. ಆನಂತರ ನಮ್ಮ ಕೆಲಸದ ಬಗ್ಗೆ ಮಾತನಾಡಿ’ ಎಂದು ಹಾಸ್ಯ ಮಾಡಿದರು.
ಮಾತೃವಂದನ, ಮಾತೃಪೂರ್ಣ ಯೋಜನೆ ನಿಲ್ಲಿಸಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ‘ಜೆಡಿಎಸ್‌ನವರು ನಮ್ಮ ಬಗ್ಗೆ ಚಿಂತೆ ಮಾಡುವ ಅವಶ್ಯಕತೆಯಿಲ್ಲ. ಈಗ ನಮ್ಮ ಮದುವೆಯಾಗಿದೆ. ಮುಂದಿನ 5 ವರ್ಷಗಳ ಕಾಲ ಸಂಸಾರವನ್ನು ಚೆನ್ನಾಗೇ ನಡೆಸುತ್ತೇವೆ. ಜನರ ಮನಸ್ಸಿನಲ್ಲಿರುವಂತೆ ಕೆಲಸ ಮಾಡುತ್ತೇವೆ’ ಎಂದರು. ಅದಕ್ಕೆ ಟಿ.ಎ. ಶರವಣ, ‘ಆಯ್ತು 6 ತಿಂಗಳು ಹನಿಮೂನ್ ಮೂಡ್‌ನಲ್ಲೇ ಇರಿ. ಆನಂತರವಾದರೂ ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸುವತ್ತ ಗಮನಹರಿಸಿ. ಅಲ್ಲಿಯವರೆಗೆ ಸುಳ್ಳು ಹೇಳಬೇಡಿ’ ಎಂದು ಮಾರುತ್ತರ ನೀಡಿದರು.