ಕೇಂದ್ರ ಸಚಿವ ಭಗವಂತ ಖೂಬಾ ಹಾಗೂ ಶಾಸಕ ಪ್ರಭು ಚವ್ಹಾಣ್ ಅವರ ನಡುವಿನ ಕಿತ್ತಾಟ ಮತ್ತಷ್ಟುತಾರಕಕ್ಕೇರಿದೆ. ಕೆಲ ದಿನಗಳ ಹಿಂದಷ್ಟೇ ಕೊಲೆ ಯತ್ನದ ಆರೋಪ ಮಾಡಿದ್ದ ಚವ್ಹಾಣ್ ಅವರು ಇದೀಗ ಖೂಬಾ ವಿರುದ್ಧ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ.
ಬೀದರ್ (ಆ.16): ಕೇಂದ್ರ ಸಚಿವ ಭಗವಂತ ಖೂಬಾ ಹಾಗೂ ಶಾಸಕ ಪ್ರಭು ಚವ್ಹಾಣ್ ಅವರ ನಡುವಿನ ಕಿತ್ತಾಟ ಮತ್ತಷ್ಟುತಾರಕಕ್ಕೇರಿದೆ. ಕೆಲ ದಿನಗಳ ಹಿಂದಷ್ಟೇ ಕೊಲೆ ಯತ್ನದ ಆರೋಪ ಮಾಡಿದ್ದ ಚವ್ಹಾಣ್ ಅವರು ಇದೀಗ ಖೂಬಾ ವಿರುದ್ಧ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. ಖೂಬಾ ನನ್ನನ್ನು ‘ಲಂಬಾಣಿ ಚೋರ್’ ಎಂದು ಕರೆದು ಅವಮಾನ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ಮಂಗಳವಾರ ಔರಾದ್‌ನ ಸ್ವಗ್ರಾಮದಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಖೂಬಾ ಎಂಜಿನಿಯರಿಂಗ್ ಓದಿದವರು. ಅವರದ್ದು ದೊಡ್ಡ ಜಾತಿ, ನನ್ನದು ಸಣ್ಣ ಜಾತಿ. ನಾನು ಬಿ.ಎ. ಓದಿದವನು. ನಾನು ಎಷ್ಟೇ ಪ್ರಾಮಾಣಿಕವಾಗಿ ತನು ಮನದಿಂದ ಅವರ ಪರ ಕಾರ್ಯನಿರ್ವಹಿಸಿದರೂ ನನ್ನನ್ನು ದ್ವೇಷಿಸುತ್ತಾ ಸಾಗಿದರು ಎಂದು ನೋವು ತೋಡಿಕೊಂಡರು.
undefined
ಸುಪ್ರೀಂಕೋರ್ಟ್ ಆದೇಶಕ್ಕೂ ಮೊದಲೇ ಕೆಆರ್‌ಎಸ್‌ನಿಂದ ತಮಿಳುನಾಡಿಗೆ ಹೆಚ್ಚಿನ ನೀರು ಬಿಡುಗಡೆ!
ನನ್ನ ಕೊಲೆಗೆ ಕೇಂದ್ರ ಸಚಿವ ಭಗವಂತ ಖೂಬಾ ಸಂಚು ರೂಪಿಸಿರುವ ಆರೋಪ ನಿಜ. ನಾನು ಈ ಕುರಿತು ಎಸ್ಪಿ ಹಾಗೂ ಐಜಿ ಅವರಿಗೆ ಪತ್ರ ಬರೆದಿದ್ದೇನೆ. ರೌಡಿಗಳನ್ನು ಹಿಂದೆ ಇಟ್ಟುಕೊಂಡಿರುವ ಅವರು ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನನ್ನ ಮೇಲೆ ಗಾಡಿ ಹತ್ತಿಸುವ ಪ್ರಯತ್ನ ಮಾಡಿದ್ದಾರೆ. ಇದೆಲ್ಲವನ್ನೂ ನಾನು ವರಿಷ್ಠರಿಗೆ ಬರೆದ ಪತ್ರದಲ್ಲಿ ಬರೆದಿದ್ದೇನೆ. ನಾನು ಯಾವಾಗಲೂ ದಾಖಲೆ ಸಹಿತ ಮಾತನಾಡುತ್ತೇನೆ. ನನ್ನ ಬಳಿ ಅವರ ವಿರುದ್ಧ 300 ಪುಟಗಳ ದಾಖಲೆ ಇದೆ ಎಂದು ತಿಳಿಸಿದರು.
ನಾಯಿ ಎಂದು ಹೀಯಾಳಿಸಿದ್ದಾರೆ: ಖೂಬಾ ಅವರು ನನ್ನ ಮೇಲೆ ವಿಷ ಕಾರುತ್ತಿದ್ದಾರೆ. ನನ್ನನ್ನು ನಾಯಿ ಎಂದೆಲ್ಲ ಹೀಯಾಳಿಸಿದ್ದಾರೆ. ನನಗೆ ಕ್ಯಾನ್ಸರ್ ಆಗಲಿ, ಬೇಗ ಸಾಯಲಿ. ಚವ್ಹಾಣ್ ಸತ್ತರೆ ಮಣ್ಣಿಗೂ ಹೋಗಲ್ಲ. ಅವರನ್ನು ಜೈಲಿಗೆ ಹಾಕಿಸುತ್ತೇನೆ ಎಂದೆಲ್ಲ ಕೆಟ್ಟದಾಗಿ ಭಾಷಣ ಮಾಡಿದ್ದಾರೆ. ಯಾರಿಗೂ ಪರಿಚಯವೇ ಇಲ್ಲದ ಭಗವಂತ ಖೂಬಾರನ್ನು ಎಲ್ಲರಿಗೂ ಪರಿಚಯಿಸಿದ್ದೇ ನಾನು. ಅಂದು ಖೂಬಾಗೆ ಟಿಕೆಟ್ ನೀಡದಿದ್ದರೇ ನಾನು ವಿಷ ಸೇವಿಸುವುದಾಗಿ ಹೇಳಿದ್ದೆ. ಆದರೆ ಇದೀಗ ಖೂಬಾ ಅವರು ಕಾಂಗ್ರೆಸ್ ಕಾರ್ಯಕರ್ತರ ಜೊತೆಗೆ ಸೇರಿ ಬಿಜೆಪಿ ಅಭ್ಯರ್ಥಿಗಳನ್ನೇ ಸೋಲಿಸಲು ಪ್ರಯತ್ನಿಸಿದ್ದಾರೆ. ಅವರು ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಸಭೆ ನಡೆಸಿದ್ದಾರೆ. ಇದರ ಕುರಿತು ನಮ್ಮ ಬಳಿ ದಾಖಲೆ ಇದೆ ಎಂದು ತಿಳಿಸಿದರು.
ಖೂಬಾ ಹಠಾವೋ ಬಿಜೆಪಿ ಬಚಾವೋ: ಔರಾದ್ ಅಷ್ಟೇ ಅಲ್ಲ ಬಸವಕಲ್ಯಾಣ, ಆಳಂದ ಸೇರಿ ಕ್ಷೇತ್ರದ ಎಲ್ಲೆಡೆ ಭಗವಂತ ಖೂಬಾ ಅವರಿಗೆ ಟಿಕೆಟ್ ನೀಡದಂತೆ ಕಾರ್ಯಕರ್ತರು, ಮುಖಂಡರು ಆಗ್ರಹಿಸುತ್ತಿದ್ದಾರೆ. ಈ ಕುರಿತು ಹೈಕಮಾಂಡ್‌ಗೆ ನಾವು ಒತ್ತಡ ಹಾಕುತ್ತೇವೆ. ಖೂಬಾ ಹಠಾವೋ, ಬಿಜೆಪಿ ಬಚಾವೋ ಎಂದು ಮನವಿ ಸಲ್ಲಿಸುತ್ತೇವೆ. ಇಷ್ಟಾದರೂ ಅವರಿಗೇ ಪಕ್ಷ ಟಿಕೆಟ್ ನೀಡಿದರೆ ಪಕ್ಷದ ಪರ ನಾವು ಕೆಲಸ ಮಾಡ್ತೇವೆ, ನಾವು ಪಕ್ಷದ ಶಿಸ್ತಿನ ಸಿಪಾಯಿ ಎಂದರು.
ಲಾಡ್ಜ್ನಲ್ಲಿ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ: ಸೂಸೈಡ್‌ಗೂ ಮುನ್ನ ಆತ ಮಾಡಿದ್ದೇನು ಗೊತ್ತಾ?
ಸೀತೆ ಅಪಹರಿಸಿದ ರಾವಣನಂತೆ ಖೂವಾ ಅವರು ಅಹಂಕಾರಿ. ಅವರ ಪರಿವಾರದ ಎಲ್ಲರೂ ಗುತ್ತಿಗೆದಾರರು. ಒಬ್ಬರಿಗೆ ರೈಲ್ವೆ, ಒಬ್ಬರಿಗೆ ಕೃಷಿ, ಮತ್ತೊಬ್ಬರಿಗೆ ಲೋಕೋಪಯೋಗಿ ಇಲಾಖೆ, ಇನ್ನೊಬ್ಬರಿಗೆ ಸರ್ಕಾರಿ ಆಸ್ಪತ್ರೆ ಬಟ್ಟೆಸ್ವಚ್ಛತೆಗೆ ಫಿಕ್ಸ್ ಮಾಡಿದ್ದೀರಾ ಎಂದು ಭಗವಂತ ಖೂಬಾ ಅವರ ಕುರಿತು ಶಾಸಕ ಪ್ರಭು ಚವ್ಹಾಣ್ ಆರೋಪಗಳ ಸುರಿಮಳೆಗೈದರು.