ನನ್ನನ್ನು ಟಾರ್ಗೆಟ್‌ ಮಾಡಿದರೆ ಡಿಕೆಶಿ ಸಿಎಂ ಆಗಲ್ಲ: ಸಿ.ಟಿ.ರವಿ

Published : Aug 16, 2023, 10:14 AM IST
ನನ್ನನ್ನು ಟಾರ್ಗೆಟ್‌ ಮಾಡಿದರೆ ಡಿಕೆಶಿ ಸಿಎಂ ಆಗಲ್ಲ: ಸಿ.ಟಿ.ರವಿ

ಸಾರಾಂಶ

ನಾನು ಆರೆಸ್ಸೆಸ್‌ ಸ್ವಯಂ ಸೇವಕ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಕೊತ್ವಾಲ್‌ ರಾಮಚಂದ್ರನ ಶಿಷ್ಯ. ಅವರು ಎಲ್ಲರಿಗೂ ಟ್ರೀಟ್ಮೆಂಟ್‌ ಕೊಡುತ್ತಾರೆ. ಅವರದ್ದು ಕೊತ್ವಾಲ್‌ ಮಾದರಿ ಟ್ರೀಟ್ಮೆಂಟ್‌. ಅವರು ನನ್ನನ್ನು ಟಾರ್ಗೆಟ್‌ ಮಾಡಿದರೆ ಮುಖ್ಯಮಂತ್ರಿ ಆಗಲ್ಲ ಎಂದು ಮಾಜಿ ಶಾಸಕ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.

ಚಿಕ್ಕಮಗಳೂರು (ಆ.16): ನಾನು ಆರೆಸ್ಸೆಸ್‌ ಸ್ವಯಂ ಸೇವಕ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಕೊತ್ವಾಲ್‌ ರಾಮಚಂದ್ರನ ಶಿಷ್ಯ. ಅವರು ಎಲ್ಲರಿಗೂ ಟ್ರೀಟ್ಮೆಂಟ್‌ ಕೊಡುತ್ತಾರೆ. ಅವರದ್ದು ಕೊತ್ವಾಲ್‌ ಮಾದರಿ ಟ್ರೀಟ್ಮೆಂಟ್‌. ಅವರು ನನ್ನನ್ನು ಟಾರ್ಗೆಟ್‌ ಮಾಡಿದರೆ ಮುಖ್ಯಮಂತ್ರಿ ಆಗಲ್ಲ ಎಂದು ಮಾಜಿ ಶಾಸಕ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.

ತಾವು ಕಮಿಷನ್‌ ಪಡೆದಿಲ್ಲ ಎಂದು ಅಜ್ಜಯ್ಯನ ಬಳಿ ಹೋಗಿ ಪ್ರಮಾಣ ಮಾಡಲಿ ಎಂದು ಸಿ.ಟಿ.ರವಿ ಸವಾಲು ಹಾಕಿದ್ದರು. ಈ ಹಿನ್ನೆಲೆಯಲ್ಲಿ ಸಿ.ಟಿ.ರವಿಗೆ ಟ್ರೀಟ್ಮೆಂಟ್‌ ಕೊಡಿಸಬೇಕಿದೆ ಎಂದು ಡಿ.ಕೆ.ಶಿವಕುಮಾರ್‌ ತಿರುಗೇಟು ನೀಡಿದ್ದರು. ಈ ಸಂಬಂಧ ಮಂಗಳವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಿ.ಟಿ.ರವಿ, ಡಿ.ಕೆ.ಶಿವಕುಮಾರ್‌ ಅವರದು ಕೊತ್ವಾಲ್‌ ಮಾದರಿ ಟ್ರೀಟ್ಮೆಂಟ್‌. ನನಗೆ ಭಯವಾಗುತ್ತಿದೆ. ಹೀಗಾಗಿ ನನಗೆ ರಕ್ಷಣೆ ಕೊಡಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುತ್ತೇನೆ ಎಂದರು.

ಸುಪ್ರೀಂಕೋರ್ಟ್ ಆದೇಶಕ್ಕೂ ಮೊದಲೇ ಕೆಆರ್‌ಎಸ್‌ನಿಂದ ತಮಿಳುನಾಡಿಗೆ ಹೆಚ್ಚಿನ ನೀರು ಬಿಡುಗಡೆ!

ಡಿ.ಕೆ.ಶಿವಕುಮಾರ್‌ ಅವರಿಗೆ ಅಧಿಕಾರ ಬಂದಿದೆ ಎಂಬ ಅಹಂನಲ್ಲಿ ಎಲ್ಲರಿಗೂ ಟ್ರೀಟ್ಮೆಂಟ್‌ ಕೊಡುವಂಥ ಹುಮ್ಮಸ್ಸು ಬಂದಿರಬಹುದು. ನಾನೊಬ್ಬ ಸಾಮಾನ್ಯ ಕಾರ್ಯಕರ್ತ, ಅವರು ನಮ್ಮ ದೇಶದ ಅತೀ ಶ್ರೀಮಂತ ಶಾಸಕ. ಅವರ ಕೈಯಲ್ಲಿ ಬೆಂಗಳೂರಿನ ಉಸ್ತುವಾರಿ, ಬೆಂಗಳೂರು ಅಭಿವೃದ್ಧಿ, ನೀರಾವರಿ ಎಲ್ಲಾ ಇಲಾಖೆಗಳಿವೆ. ನಾನು ಸೋತಿರುವವನು, ನನ್ನನ್ನು ಟಾರ್ಗೆಟ್‌ ಮಾಡಿ ಅವರು ಮುಖ್ಯಮಂತ್ರಿ ಆಗಲು ಸಾಧ್ಯವಿಲ್ಲ. ಅವರಿಗೆ ಟಾರ್ಗೆಟ್‌ ಮಾಡಲು ಬೇರೆಯವರಿದ್ದಾರೆ ಎಂದು ಟೀಕಿಸಿದರು.

ಸಿ.ಟಿ. ರವಿ ಮಾಸ್ಟರ್‌ ಮೈಂಡ್‌ ಉಗ್ರ: ರಾಜಕಾರಣದಲ್ಲಿ ಮಾಸ್ಟರ್‌ ಮೈಂಡ್‌ ಉಗ್ರ ಯಾರಾದ್ರು ಇದ್ರೆ ಅದು ಸಿ.ಟಿ.ರವಿ ಎಂದು ಕೆಪಿಸಿಸಿ ಕಿಸಾನ್‌ ಘಟಕ ರಾಜ್ಯಾಧ್ಯಕ್ಷ ಸಚಿನ್‌ ಮೀಗಾ ಗಂಭೀರ ಆರೋಪ ಮಾಡಿದ್ದಾರೆ. ಕೊಪ್ಪದಲ್ಲಿ ಹೇಳಿಕೆ ನೀಡಿರುವ ಅವರು, ಕುಕ್ಕರ್‌ ಬಾಂಬ್‌ ಬ್ಲಾಸ್ಟ್‌ ಉಗ್ರ ಶಾರಿಕ್‌ಕ್ಕಿಂತ ಸಿ.ಟಿ.ರವಿ ಒಂದು ಕೈ ಮೇಲೆ. ಅವರು ರಾಜಕೀಯದಲ್ಲಿ ಹಲವರನ್ನ ಬಲಿ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.

ರಾಜಕಾರಣಿಗಳಲ್ಲಿ ಸೇವಾ ಮನೋಭಾವ ಕುಸಿತ: ಸಿಎಂ ಸಿದ್ದರಾಮಯ್ಯ

ಗೋರಿ, ದರ್ಗಾಗಳನ್ನ ಸಂಚಿನಲ್ಲಿ ಧ್ವಂಸ ಮಾಡಿಸಿದ್ದೆ ಅದು ಸಿ.ಟಿ.ರವಿ ಎಂದಿರುವ ಅವರು ಮಹೇಂದ್ರ ಕುಮಾರ್‌ ಬಳಸಿಕೊಂಡು ಗೋರಿ, ದರ್ಗಾ, ದೇವಸ್ಥಾನಗಳನ್ನ ದ್ವಂಸ ಮಾಡಿದ್ರು ಎಂದು ಆರೋಪಿಸಿದ್ದಾರೆ. ಸಿ.ಟಿ.ರವಿ ಪದೇ, ಪದೇ ತಮ್ಮ ನಾಲಿಗೆಯನ್ನ ಹರಿಬಿಡ್ತಿದ್ದಾರೆ. ಸಿದ್ದರಾಮಯ್ಯ ಅವರನ್ನ ಸಿದ್ರಾಮುಲ್ಲಾ ಖಾನ್‌ ಅಂದಿದ್ರು, ಈಗ ಮತ್ತೆ ಡಿಸಿಎಂ ಡಿಕೆಶಿ ಹೆಸರಿಗೆ ಕೊತ್ವಾಲ್‌ ಹೆಸರನ್ನ ಸೇರಿಸಿದ್ದಾರೆ. ಸಿ.ಟಿ.ರವಿಗೆ ಚಿಕ್ಕಮಗಳೂರು ಜನ ಮನೆಗೆ ಕಳಿಸಿದ್ದಾರೆ. ಇಂತಹ ವಿಕೃತ ಹೇಳಿಕೆಗಳಿಂದ ಖುಷಿ ಪಡುವ ಅವರನ್ನು ಗಡಿಪಾರು ಮಾಡಬೇಕೆಂದು ಒತ್ತಾಯಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
'ಏಯ್, ಹಾಗೆಲ್ಲಾ ನಾಟಿ ಕೋಳಿ ಬಿಡಬಾರದು, ಏನೂ ಆಗೊಲ್ಲ ತಿನ್ನಬೇಕು': ಆರ್. ಅಶೋಕ್‌ಗೆ ಸಿದ್ದರಾಮಯ್ಯ ಕಿವಿಮಾತು!