ಯತ್ನಾಳ್‌ ಬಸ್‌ಸ್ಟ್ಯಾಂಡ್‌ನಲ್ಲಿ ಗಿಣಿಶಾಸ್ತ್ರ ಹೇಳಲಿ: ಸಚಿವ ಮಧು ತಿರುಗೇಟು

Published : Aug 16, 2023, 08:25 AM IST
ಯತ್ನಾಳ್‌ ಬಸ್‌ಸ್ಟ್ಯಾಂಡ್‌ನಲ್ಲಿ ಗಿಣಿಶಾಸ್ತ್ರ ಹೇಳಲಿ: ಸಚಿವ ಮಧು ತಿರುಗೇಟು

ಸಾರಾಂಶ

ಆರು ತಿಂಗಳಲ್ಲಿ ಸರ್ಕಾರ ಬೀಳುತ್ತದೆ ಎಂದು ಭವಿಷ್ಯ ಹೇಳುವ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ ಅವರು ಬಸ್‌ ಸ್ಟ್ಯಾಂಡ್‌ನಲ್ಲಿ ಜಾಗ ಖಾಲಿಯಿದೆ, ಅಲ್ಲಿ ಗಿಣಿ ಶಾಸ್ತ್ರ ಹೇಳಲಿ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಖಾರವಾಗಿ ಪ್ರತಿಕ್ರಿಯಿ​ಸಿ​ದರು. 

ಶಿವಮೊಗ್ಗ (ಆ.16): ಆರು ತಿಂಗಳಲ್ಲಿ ಸರ್ಕಾರ ಬೀಳುತ್ತದೆ ಎಂದು ಭವಿಷ್ಯ ಹೇಳುವ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ ಅವರು ಬಸ್‌ ಸ್ಟ್ಯಾಂಡ್‌ನಲ್ಲಿ ಜಾಗ ಖಾಲಿಯಿದೆ, ಅಲ್ಲಿ ಗಿಣಿ ಶಾಸ್ತ್ರ ಹೇಳಲಿ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಖಾರವಾಗಿ ಪ್ರತಿಕ್ರಿಯಿ​ಸಿ​ದರು. ಮಂಗಳವಾರ ನಗ​ರ​ದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವ​ರು, ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡುವಾಗ ಸಾಕ್ಷ್ಯಾಧಾರ ನೀಡಲಿ. ಸುಮ್ಮನೆ ಆರೋಪ ಮಾಡುವುದು ಬೇಡ. ಮುಖ್ಯಮಂತ್ರಿ ಸಹ ಇದನ್ನೇ ಹೇಳಿದ್ದಾರೆ ಎಂದರು.

ಉಪೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಈ ದೇಶದಲ್ಲಿ ಇರುವ ಎಲ್ಲ ಪ್ರಜೆಗಳು ನನ್ನ ಸ್ನೇಹಿತರು. ಹಾಗೆಯೇ ಉಪೇಂದ್ರ ಅವರು ನನ್ನ ಸ್ನೇಹಿತರು. ಅವರು ಏಕೆ ಹಾಗೆ ಹೇಳಿದರೋ ಗೊತ್ತಾಗುತ್ತಿಲ್ಲ. ಇದು ಯಾರಿಗೂ ಅನ್ವಯಿಸಲ್ಲ ಎಂದು ಸಿನಿಮಾದಲ್ಲಿ ಮೊದಲೇ ಹಾಕಿರುತ್ತೇವೆ. ಆದರೆ, ನಿಜ ಜೀವನದಲ್ಲಿ ಏನೇ ಮಾಡಬೇಕಾದರೂ ಯೋಚನೆ ಮಾಡಿ ಮಾಡಬೇಕು. ಯಾರೇ ತಪ್ಪು ಮಾಡಿದರೂ ಅದು ತಪ್ಪೇ. ತಪ್ಪಾಗಿದ್ದರೆ ಉಪೇಂದ್ರ ಕ್ಷಮೆ ಕೇಳಬೇಕು ಎಂದರು.

ಬಿಚ್ಚಿಡುವವರು, ಬಿಚ್ಚಾಕುವವರನ್ನು ನಿಲ್ಲಿಸಲು ಸಾಧ್ಯವೇ?: ಎಚ್‌ಡಿಕೆಗೆ ಡಿಕೆಶಿ ತಿರುಗೇಟು

ಸಿಎಂ, ಡಿಸಿಎಂಗೆ ಲೋಕಸಭೆ ಚುನಾವಣೆ ಟಾರ್ಗೆಟ್‌: ಲೋಕಸಭೆ ಚುನಾವಣೆ ಸಂಬಂಧ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಎರಡು ದಿನ ಸಭೆ ನಡೆದಿತ್ತು. ಅಲ್ಲಿ ಇಡಿ ರಾಜ್ಯದಲ್ಲಿ ಗೆಲುವು ಸಾಧಿಸಲು ಸಿಎಂ ಹಾಗೂ ಡಿಸಿಎಂಗೆ ಗುರಿ ನೀಡಲಾಗಿದೆ. ಅದೇ ರೀತಿ ಸಚಿವರಿಗೂ ಕೆಲ ಕ್ಷೇತ್ರಗಳಲ್ಲಿ ಗೆಲ್ಲಲು ಟಾರ್ಗೆಟ್‌ ನೀಡಲಾಗಿದೆ. ಲೋಕಸಭೆಯಲ್ಲಿ ಹೆಚ್ಚಿನ ಸ್ಥಾನ ಗೆದ್ದೇ ಗೆಲ್ಲುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮುಳುಗಡೆ ಸಂತ್ರಸ್ತರ ಸಮಸ್ಯೆಗೆ ಪರಿಹಾರ: ಜಿಲ್ಲೆಯಲ್ಲಿ ಹಲವು ದಶಕಗಳಿಂದ ಕಗ್ಗಂಟಾಗಿರುವ ಶರಾವತಿ ಮುಳುಗಡೆ ಸಂತ್ರಸ್ತರು ಹಾಗೂ ಬಗರ್‌ಹುಕುಂ ಸಾಗುವಳಿದಾರರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವ​ರುು ವಿಶೇಷ ಆಸಕ್ತಿ ವಹಿಸಿದ್ದಾರೆ. ಶೀಘ್ರದಲ್ಲಿ ಸದರಿ ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಕ್ರಮ ವಹಿಸಲಾಗುವುದು. ಈ ಸಂಬಂಧ ಅಡಿಷನಲ್‌ ಅಡ್ವೊಕೇಟ್‌ ಜನರಲ್‌ ಸೇರಿದಂತೆ ರಾಜ್ಯಮಟ್ಟದ ಅಧಿಕಾರಿಗಳು ಹಾಗೂ ತಜ್ಞರನ್ನು ಒಳಗೊಂಡಂತೆ ಈಗಾಗಲೇ ಅನೇಕ ಮಹತ್ವದ ಸಭೆಗಳನ್ನು ಏರ್ಪಡಿಸಿ, ಸಮಾಲೋಚನೆ ನಡೆಸಲಾಗಿದೆ. ಅಗತ್ಯವಿದ್ದಲ್ಲಿ ರೈತರ ಹಿತಕಾಯುವಲ್ಲಿ ಕಾನೂನು ಸಮರಕ್ಕೂ ಸರ್ಕಾರ ಬದ್ಧವಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಅಗತ್ಯವಿದ್ದಲ್ಲಿ ಕೇಂದ್ರದ ಸಹಕಾರ ಪಡೆದು ನ್ಯಾಯಾಲಯದಲ್ಲಿ ಸಮರ್ಥವಾಗಿ ವಿಷಯ ಮಂಡನೆ ಮಾಡಲಾಗುವುದು. ಜಿಲ್ಲೆಯಲ್ಲಿನ ಕಂದಾಯ ಮತ್ತು ಅರಣ್ಯ ಇಲಾಖೆಗಳ ನಡುವಿನ ಭೂ ಸಮಸ್ಯೆಯನ್ನು ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ವಾರದಲ್ಲಿ 2 ದಿನ ಮೊಟ್ಟೆ: 1ರಿಂದ 10ನೇ ತರಗತಿ ಮಕ್ಕಳಿಗೆ ವಾರದಲ್ಲಿ ಎರಡು ದಿನ ಎರಡು ಮೊಟ್ಟೆನೀಡಲಾಗುವುದು. ಈ ಕಾರ್ಯ​ಕ್ರ​ಮಕ್ಕೆ ಆ.18ರಂದು ಮಂಡ್ಯದಲ್ಲಿ ಚಾಲನೆ ನೀಡಲಾಗುತ್ತಿದೆ. ಇದರಿಂದ 60 ಲಕ್ಷ ಮಕ್ಕಳಿಗೆ ಅನುಕೂಲ ಆಗಲಿದೆ. ನನ್ನ ಇಲಾಖೆಯಡಿ 1.20 ಲಕ್ಷ ಮಕ್ಕಳು ಬರುತ್ತಾರೆ. ಶಾಲೆಗಳ ದುರಸ್ತಿಯಾಗಬೇಕಿದೆ. ಹೊಸ ಶಾಲೆಗಳ ನಿರ್ಮಾಣವೂ ಆಗಬೇಕಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು. ದೇಶದಲ್ಲಿ ಮೊದಲ ಬಾರಿಗೆ 2ನೇ ಸಲ ಪೂರಕ ಪರೀಕ್ಷೆ ನಡೆಸಲಾಗುತ್ತದೆ. ಅವರನ್ನು ಫೇಲ್‌ ಮಾಡಿದರೆ ಒಂದು ವರ್ಷ ಕಾಯಬೇಕು. ಹಾಗಾಗಿ ಅವರಿಗೆ ಮತ್ತೊಮ್ಮೆ ಅವಕಾಶ ನೀಡಲಾಗಿದೆ. ಮಕ್ಕಳನ್ನು ಫೇಲ್‌ ಮಾಡಬಾರದು ಅವರಿಗೆ ಅವಕಾಶ ನೀಡಬೇಕು. ಮಕ್ಕಳು ಅನುತ್ತೀರ್ಣ ಆಗುವುದಕ್ಕೆ ಹಲವು ಕಾರಣಗಳಿರುತ್ತವೆ. ಹೀಗಾಗಿ, ಎರಡನೇ ಪೂರಕ ಪರೀಕ್ಷೆ ನಡೆಸುತ್ತೇವೆ. ದೇಶದಲ್ಲೇ ಇದು ಹೊಸ ಪ್ರಯತ್ನವಾಗಲಿದೆ ಎಂದರು.

ಎನ್‌ಇಪಿ ಬದಲಾಗಿ ಎಸ್‌ಇಪಿ: ಈಗಾಗಲೇ ಪಠ್ಯಪುಸ್ತಕ ಪರಿಷ್ಕರಣೆ ಆಗಿದೆ. ಆದರೆ, ಅದರಲ್ಲಿ ಇನ್ನಷ್ಟುಬದಲಾವಣೆ ಆಗಬೇಕಿದೆ. ಸ್ಟೇಟ್‌ ಎಜುಕೇಷನ್‌ ಪಾಲಿಸಿ (ಎಸ್‌​ಇ​ಪಿ)ಯನ್ನು ಮುಂದಿನ ದಿನಗಳಲ್ಲಿ ಜಾರಿಗೆ ತರುತ್ತೇವೆ. ಇದಕ್ಕಾಗಿ ಕಮಿಟಿಗಳನ್ನು ರಚಿಸುವ ಕೆಲಸ ಮಾಡಿದ್ದೇವೆ. ಮಕ್ಕಳ ಭವಿಷ್ಯಕ್ಕೆ ಪೂರಕ ಶಿಕ್ಷಣ ನೀಡುತ್ತೇವೆ. ಕರ್ನಾಟಕ ಡಿಜಿಟಲ್‌ ಲೈಬ್ರರಿಯಲ್ಲಿ 40 ಲಕ್ಷ ಪುಸ್ತಕಗಳಿವೆ. ಇಲ್ಲಿ 1ನೇ ತರಗತಿಯಿಂದ ಐ.ಎ.ಎಸ್‌.ವರೆಗೆ ವ್ಯಾಸಂಗ ಮಾಡುವ ಪುಸ್ತಕಗಳಿವೆ. ಕರ್ನಾಟಕ ಡಿಜಿಟಲ್‌ ಲೈಬ್ರರಿ ವೆಬ್‌ನಲ್ಲಿ ಎಲ್ಲರೂ ಓದಬಹುದು. ಶಿಕ್ಷಕರ ದಿನಾಚರಣೆಯಂದು ಈ ವೆಬ್‌ಸೈಟ್‌ ರಿ ಲಾಂಚ್‌ ಮಾಡುತ್ತೇವೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

ರಾಜಕಾರಣಿಗಳಲ್ಲಿ ಸೇವಾ ಮನೋಭಾವ ಕುಸಿತ: ಸಿಎಂ ಸಿದ್ದರಾಮಯ್ಯ

ಮುಂದಿನ ವರ್ಷದೊಳಗೆ ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನು ಆರಂಭಿಸಲಿದ್ದೇವೆ. ಎರಡು ಮೂರು ಗ್ರಾಮ ಪಂಚಾಯತಿಗಳಿಗೆ 1ರಂತೆ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಆರಂಭಿಸಲಿದ್ದೇವೆ. ಎಲ್‌ಕೆಜಿ, ಯುಕೆಜಿಯನ್ನು ಸರ್ಕಾರಿ ಶಾಲೆಗಳನ್ನು ಆರಂಭಿಸಲಿದ್ದೇವೆ. ಶಿಕ್ಷಕರ ನೇಮಕಾತಿ ವಿಷಯ ಕೋರ್ಚ್‌ನಲ್ಲಿದೆ. ಹೀಗಾಗಿ, ನೇಮಕಾತಿ ಸಾಧ್ಯವಾಗುತ್ತಿಲ್ಲ. ಬೇಗನೆ ಸಮಸ್ಯೆ ಬಗೆಹರಿಸುವ ವಿಶ್ವಾಸವಿದೆ. ಶಿಕ್ಷಕರ ಕೊರತೆ ನೀಗಿಸುವ ಉದ್ದೇಶದಿಂದ ಶೀಘ್ರವೇ 10 ಸಾವಿರ ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳುತ್ತೇವೆ. ರಾಜ್ಯದಲ್ಲಿ 1600 ಅನಧಿಕೃತ ಶಾಲೆಗಳಿವೆ. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಸೇರಿಯನ್‌ ಹೆರಿಗೆ ಹೆಚ್ಚಳ ಏಕೆ ಎಂದು ತಿಳಿಯಲು ಆಡಿಟ್‌: ಸಚಿವ ದಿನೇಶ್‌ ಗುಂಡೂರಾವ್
ಪ್ರಧಾನಿಗೆ ಪತ್ರ ಬರೆಯುವುದರಲ್ಲಿ ಸಿದ್ದರಾಮಯ್ಯ, ಡಿಕೆಶಿ ನಿಸ್ಸೀಮರು: ಬಿ.ವೈ.ವಿಜಯೇಂದ್ರ