ಸರ್ಕಾರಿ ಸುತ್ತೋಲೆಯನ್ನು ಓದಿ ಅರ್ಥ ಮಾಡಿಕೊಳ್ಳಲಾಗದ ಮಧು ಬಂಗಾರಪ್ಪ ಒಂದು ಅವಧಿಯ ನಾಲಾಯಕ್ ಶಾಸಕ. ಅವನು ಅನುಕಂಪದ ಅಲೆಯಲ್ಲಿ ಚುನಾವಣೆ ಗೆದ್ದನೇ ಹೊರತು, ಸ್ವಂತ ಶಕ್ತಿಯಿಂದಲ್ಲ ಎಂದು ತಮ್ಮ ಸಹೋದರನ ವಿರುದ್ಧ ಶಾಸಕ ಕುಮಾರ ಬಂಗಾರಪ್ಪ ವಾಗ್ದಾಳಿ ನಡೆಸಿದರು.
ಸೊರಬ (ಮಾ.18): ಸರ್ಕಾರಿ ಸುತ್ತೋಲೆಯನ್ನು ಓದಿ ಅರ್ಥ ಮಾಡಿಕೊಳ್ಳಲಾಗದ ಮಧು ಬಂಗಾರಪ್ಪ ಒಂದು ಅವಧಿಯ ನಾಲಾಯಕ್ ಶಾಸಕ. ಅವನು ಅನುಕಂಪದ ಅಲೆಯಲ್ಲಿ ಚುನಾವಣೆ ಗೆದ್ದನೇ ಹೊರತು, ಸ್ವಂತ ಶಕ್ತಿಯಿಂದಲ್ಲ ಎಂದು ತಮ್ಮ ಸಹೋದರನ ವಿರುದ್ಧ ಶಾಸಕ ಕುಮಾರ ಬಂಗಾರಪ್ಪ ವಾಗ್ದಾಳಿ ನಡೆಸಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ತಾಲೂಕಿನಲ್ಲಿ 14 ಜನ ತಹಸೀಲ್ದಾರರು ವರ್ಗಾವಣೆಗೊಂಡಿದ್ದಾರೆ ಎಂದು ಸುಳ್ಳಿನ ಕಂತೆ ಕಟ್ಟುತ್ತಿದ್ದಾನೆ. ಆದರೆ ತಾಲೂಕಿಗೆ ಇಬ್ಬರು ತಹಸೀಲ್ದಾರರು ಮಾತ್ರ ಬಂದುಹೋಗಿದ್ದಾರೆ. ಅಧಿಕಾರಿಗಳ ಸುತ್ತೋಲೆಯನ್ನು ಓದಿ ಗ್ರಹಿಸಲಾಗದಷ್ಟುತಲೆಯಲ್ಲಿ ಜ್ಞಾನ ಇರದವನನ್ನು ಕಾಂಗ್ರೆಸ್ ಹಿಂದುಳಿದ ವರ್ಗಗಳ ಅಧ್ಯಕ್ಷರನ್ನಾಗಿ ಮಾಡಿರುವುದು ಕಾಂಗ್ರೆಸ್ ಅಧೋಗತಿ ಸೂಚಿಸುತ್ತದೆ. ಇಂಥವರು ಬಿಜೆಪಿ ಬಗ್ಗೆ ಮತ್ತು ತಮ್ಮ ಅವಧಿಯಲ್ಲಾದ ಅಭಿವೃದ್ಧಿ ಯೋಜನೆಗಳ ಬಗ್ಗೆ ಮಾತನಾಡಲು ಯೋಗ್ಯತೆ ಬೇಕು. ಮಾಡಿದ ಎಲ್ಲ ಕಾಮಗಾರಿಗಳು ಗುಣಮಟ್ಟವಂಚಿತವಾಗಿವೆ. ಪ್ರಮುಖ ರಸ್ತೆಗಳಿಗೆ ಡಾಂಬರೀಕರಣ ಮತ್ತು ಕಾಂಕ್ರೀಟಿಕರಣ ನಡೆಸಿದ ಮರುದಿನವೇ ಕಿತ್ತುಹೋಗಿದ್ದವು. ಅವುಗಳನ್ನೆಲ್ಲ ಪುನಃ ರಿಪೇರಿ ಮಾಡಿಸಿದ್ದೇನೆ ಎಂದು ಸಮರ್ಥಿಸಿಕೊಂಡರು.
ದೇವೇಗೌಡರ ಕುಟುಂಬ ತೆರಿಗೆ ಹಣ ಲೂಟಿ ಮಾಡಿಲ್ಲ: ಎಚ್.ಡಿ.ಕುಮಾರಸ್ವಾಮಿ
ಎಲ್ಲ ಇಲಾಖೆಗಳು ಒಂದೇ ಸೂರಿನಡಿ ಜನತೆ ನೆರವಾಗುವ .100 ಕೋಟಿ ವೆಚ್ಚದ ವಿಸ್ತಾರ ಯೋಜನೆ ಇಡೀ ಭಾರತದಲ್ಲಿ ಮೊದಲ ಬಾರಿಗೆ ತಾಲೂಕಿಗೆ ಮಂಜೂರಾತಿಯಾಗಿದೆ. ವಿದ್ಯುತ್‌ನ ಯುಜಿ ಕೇಬಲ್ ಅಳವಡಿಕೆ, 24 ಗ್ರೀಡ್ ನಿರ್ಮಾಣ, ಮುಖ್ಯರಸ್ತೆ ಅಗಲೀಕರಣ ಮತ್ತು ಡಾಂಬರೀಕರಣ, ಮೂಡಿ- ಮೂಗೂರು ಏತ ನೀರಾವರಿ, ಒಂದು ಇಂಚು ರೈತ ಜಮೀನು ಮುಳುಗಡೆಯಾಗದ 32 ಸಾವಿರ ಎಕರೆಗೆ ನೀರಾವರಿ ಸೌಲಭ್ಯ ಕಲ್ಪಿಸುವ ದಂಡಾವತಿ ಯೋಜನೆ ಹೀಗೆ ಹಲವು ಪಟ್ಟಿಯೇ ತಮ್ಮಲ್ಲಿದೆ. ತಂದೆ-ತಾಯಿಯ ಸಮಾಧಿ ನಿರ್ಮಸಲು 11 ವರ್ಷ ತೆಗೆದುಕೊಂಡರೂ ಸಂಪೂರ್ಣವಾಗದೇ ಹಾಗೇ ಉಳಿದಿರುವಾಗ ಆತನಿಂದ ಸಮಾಜದ ಅಭಿವೃದ್ಧಿಯನ್ನು ಬಯಸುವುದಾದರೂ ಹೇಗೆ? ಎಂದರು.
ತಾಲೂಕಿನಲ್ಲಿ ಬಗರ್‌ಹುಕುಂ ಹೆಸರಿನಲ್ಲಿ ಉಳ್ಳವರಿಗೆ ಹಕ್ಕುಪತ್ರ ನೀಡಿ ಬಡವರನ್ನು ವಂಚಿಸಿದ್ದಾನೆ. ಬಲಗೈ ಭಂಟ ಮೆಸ್ಕಾಂ ಅಧಿಕಾರಿಗಳ ಮೇಲೆ ಕೊರಳಪಟ್ಟಿಹಿಡಿದು ದೌರ್ಜನ್ಯ ನಡೆಸುವುದೇ ಅಭಿವೃದ್ಧಿ ಎಂದು ತಿಳಿದಿದ್ದಾರೆ. ಇಂಥವರನ್ನು ಸುಮ್ಮನೆ ಬಿಟ್ಟರೆ ಸಮಾಜಕ್ಕೆ ಕಂಟಕವಾಗುತ್ತಾರೆ. ಇಂಥ ದೌರ್ಜನ್ಯದಿಂದಾಗಿಯೇ ತಾಲೂಕಿನ ಜನತೆ ಕಳೆದ ಚುನಾವಣೆಯಲ್ಲಿ ಮನೆಯಲ್ಲಿ ಕೂರುವಂತೆ ಮಾಡಿದ್ದಾರೆ. ಆದ್ದರಿಂದ ಮುಂದಿನ ದಿನಗಳಲ್ಲಾದರೂ ತನ್ನ ವರ್ತನೆಯನ್ನು ತಿದ್ದಿಕೊಂಡು ಮನಸ್ಸು ಬೆಸೆಯುವಂತ ಕೆಲಸಗಳನ್ನು ಮಾಡಲಿ ಅಂಥ ಅಣ್ಣನಾಗಿ ಬುದ್ಧಿ ಹೇಳುತ್ತೇನೆ ಎಂದರು. ತಾವು ಮತ್ತು ತಾಲೂಕಿನ ಬಿಜೆಪಿ ಮುಖಂಡರು ಯಾವುದೇ ಒಂದೇ ಒಂದು ಇಂಚು ಜಮೀನಾಗಲೀ ಅಥವಾ ಆಸ್ತಿಯಾಗಲೀ ಖರೀದಿ ಮಾಡಿದ್ದೇನೆ ಎಂದು ದಾಖಲಿಸಿ ತೋರಿಸಲಿ.
ತಮ್ಮ ಹೆಸರಿನಲ್ಲಿದ್ದ ತಂದೆ ಮಾಡಿದ 120 ಎಕರೆ ತೋಟವನ್ನು ದೋಚಿ ಅದರ ಫಲ ಉಣ್ಣುತ್ತಿದ್ದಾನೆ. ನಿನ್ನೆ ಮೊನ್ನೆ ಪಕ್ಷ ಸೇರಿಕೊಂಡು ಕಾಂಗ್ರೆಸ್‌ಗೆ ಹುಟ್ಟಿದ್ದೇನೆ ಎನ್ನುವಂತೆ ಮಾತನಾಡುತ್ತಿದ್ದಾನೆ. ಸಿದ್ದರಾಮಯ್ಯ ಅವರನ್ನು ತಂದೆ, ಡಿ.ಕೆ. ಶಿವಕುಮಾರ ಅವರನ್ನು ಅಣ್ಣಾ ಎಂದು ಸಂಬೋಧಿಸುತ್ತಾನೆ. 2004ರಲ್ಲಿ ತಂದೆ-ತಾಯಿಯನ್ನು ಕುಮಾರ ಬಂಗಾರಪ್ಪ ಹೊರಹಾಕಿದ್ದಾನೆ ಎಂದು ಸುಳ್ಳಿನ ಕಂತೆ ಕಟ್ಟಿದ್ದ ಮಧು ಬಂಗಾರಪ್ಪ, ಆ ಸಯಮದಲ್ಲಿ ಮನೆ ಮೇಲೆ ಸಾಲ ಮಾಡಿ ಅದನ್ನು ತಂದೆ-ತಾಯಿಯ ಮೇಲೆ ಹೊರಿಸಿ, ಮೂರು ತಿಂಗಳು ಚೆನ್ನೈ, ಬಾಂಬೆ ಮೊದಲಾದ ಕಡೆ ತಲೆಮರೆಸಿಕೊಂಡಿದ್ದ. ಶಿವಮೊಗ್ಗ ಡೆಂಟಲ್ ಕಾಲೇಜನ್ನು ತನ್ನ ವಶಕ್ಕೆ ಪಡೆದು, ನುಂಗಿ ನೀರು ಕುಡಿದಿದ್ದಾನೆ. ಕನಿಷ್ಠ ಸೌಜನ್ಯ ಇದಿದ್ದರೆ ನಮ್ಮ ಮಗಳ ಮದುವೆಗೆ ಬಂದು ಆಶೀರ್ವದಿಸುತ್ತಿದ್ದ. ಆದರೆ ಅಂಥ ಔದಾರ್ಯದ ಗುಣ ಆತನಲ್ಲಿಲ್ಲ. ಇಂಥ ಮನೆ ಮುರುಕ ತಮ್ಮನಿಂದ ತಾವು ಮತ್ತು ಬಿಜೆಪಿ ಪಾಠ ಕಲಿಯುವ ಅವಶ್ಯಕತೆ ಇಲ್ಲ. ಅವನಿಗೆ ಅಣ್ಣ ಎನ್ನುವ ಯೋಗ್ಯತೆ ಕೂಡಾ ಕಳೆದುಕೊಂಡಿದ್ದಾನೆ.
ಅಜ್ಞಾನಿ, ಮೂರ್ಖತನದಿಂದ ವರ್ತಿಸುತ್ತಿರುವ, ಕಾನೂನು ಬದ್ಧವಾಗಿ ಮಾತನಾಡಲು ಬಾರದವನು ಅಭಿವೃದ್ಧಿ ರಾಜಕಾರಣವನ್ನು ಸಹಿಸದೇ ತಮ್ಮ ವಿರುದ್ಧ ಮಾತನಾಡುತ್ತಿದ್ದಾನೆ. ನಮ್ಮವರು, ತಮ್ಮವರು ಎನ್ನುವ ಭಾವನೆಯನ್ನೇ ಹೊಂದಿರದ ಆತನಿಂದ ಮನಸ್ಸುಗಳು ಎಂದಿಗೂ ಬೆಸೆಯುವುದಿಲ್ಲ. ಆತನ ವರ್ತನೆಗಳಿಗೆ ತನ್ನ ಕುಟುಂಬದ ವತಿಯಿಂದ ಧಿಕ್ಕಾರವಿರಲಿ. ಕೆಳಮಟ್ಟದ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಸಮಾಜವನ್ನು ತಪ್ಪು ದಾರಿಗೆಳೆದು ಕುಲಗೆಡಿಸುತ್ತಿರುವ ಮಧು ತಿದ್ದಿಕೊಳ್ಳಬೇಕು. ರಾಜಕಾರಣ ಬೇರೆ, ಸಮಾಜ ಬೇರೆ, ನಾವು-ನಮ್ಮದು ಎನ್ನುವ ಅಹಂಕಾರ ಬೇರೆ. ನಾನು ಎನ್ನುವ ಅಹಂನಿಂದ ನಡೆಯುತ್ತಿರುವ ದಾರಿ ಅಕ್ಷಮ್ಯ. ಒಳ್ಳೆಯ ನಡೆ-ನುಡಿ ಬೆಳೆಸಿಕೊಳ್ಳದಿದ್ದರೆ ರಾಕ್ಷಸನಂತೆ ಭಸ್ಮವಾಗುತ್ತೀಯ ಎಂದು ತಿಳಿಹೇಳಿದರು.
ಚಿಕ್ಕಬಳ್ಳಾಪುರ ಜೆಡಿಎಸ್‌ನ ಭದ್ರಕೋಟೆ: ನಿಖಿಲ್ ಕುಮಾರಸ್ವಾಮಿ
ನಮೋ ವೇದಿಕೆ ಬಿಜೆಪಿ ವೇದಿಕೆ: ನಮೋ ವೇದಿಕೆ ಎನ್ನುವುದು ಪ್ರಧಾನಿ ನರೇಂದ್ರ ಮೋದಿ ಹೆಸರಿನ ಬಿಜೆಪಿಯ ವೇದಿಕೆ. ನಮ್ಮ ನಡುವೆ ರಾಜಕೀಯವಾಗಿ ಭಿನ್ನಾಭಿಪ್ರಾಯಗಳು ಇರಬಹುದು. ಆದರೆ ಅವೆಲ್ಲವನ್ನು ಸರಿಮಾಡಿಕೊಂಡು ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ ಎಂದು ಶಾಸಕ ಕುಮಾರ್ ಬಂಗಾರಪ್ಪ ಹೇಳಿದರು. ಪಕ್ಷ ಕಟ್ಟಲು ದುಡಿದವರು ಪಕ್ಷದಲ್ಲಿ ಟಿಕೆಟ್ ಕೇಳುವುದು ಅಪರಾಧವಲ್ಲ. ಅವರ ಹೇಳಿಕೆಗೆ ಮಧು ಬಂಗಾರಪ್ಪ ಕಣ್ಣೀರು ಸುರಿಸುವ ಅವಶ್ಯಕತೆ ಇಲ್ಲ. ಅವರು ಜೆಡಿಎಸ್‌ನಿಂದ ಏಕೆ ಹೊರಗೆ ಬಂದರು. ಕುಮಾರಸ್ವಾಮಿ ಅವರಿಗೆ ಏನು ಮಾಡಿದ್ದಾರೆ. ಎಚ್.ಡಿ. ರೇವಣ್ಣರ ಬಳಿ ಎಷ್ಟುತಿಂದಿದ್ದಾರೆ ಎಂಬುದು ಜೆಡಿಎಸ್ ನಾಯಕರು ಚುನಾವಣಾ ಸಂದರ್ಭದಲ್ಲಿ ಇಲ್ಲಿಗೆ ಬಂದು ವಿವರಿಸುತ್ತಾರೆ. ಹಾಗಾಗಿ, ಜೆಡಿಎಸ್ ಹಾಗೂ ಕುಮಾರಸ್ವಾಮಿ ಅವರನ್ನು ಟೀಕಿಸುವ ನೈತಿಕತೆ ಮಧು ಬಂಗಾರಪ್ಪ ಅವರಿಗೆ ಏಕೆ ಇಲ್ಲ ಎಂದು ಪ್ರಶ್ನಿಸಿದರು.