ಕ್ಷೇತ್ರದ ಶಾಸಕ ಕೆಎಂ ಶಿವಲಿಂಗೇಗೌಡ ಅವರ ಕಾಲದಲ್ಲಿ ಆದಂತಹ ತಪ್ಪುಗಳು, ನಿಷ್ಠಾವಂತ ಕಾರ್ಯಕರ್ತರ ಕಡೆಗಡನೆ ಮುಂತಾದವುಗಳನ್ನು ನಾವು ಮತ್ತೆ ಸರಿಪಡಿಸಿಕೊಳ್ಳುತ್ತೇವೆ.
ಅರಸೀಕೆರೆ (ಮಾ.17): ಕ್ಷೇತ್ರದ ಶಾಸಕ ಕೆಎಂ ಶಿವಲಿಂಗೇಗೌಡ ಅವರ ಕಾಲದಲ್ಲಿ ಆದಂತಹ ತಪ್ಪುಗಳು, ನಿಷ್ಠಾವಂತ ಕಾರ್ಯಕರ್ತರ ಕಡೆಗಡನೆ ಮುಂತಾದವುಗಳನ್ನು ನಾವು ಮತ್ತೆ ಸರಿಪಡಿಸಿಕೊಳ್ಳುತ್ತೇವೆ. ನಮ್ಮಿಂದ ತಪ್ಪಾಗಿದ್ದರೆ ಅದನ್ನು ಸರಿಮಾಡಿಕೊಂಡು ಹಳೆಯ ಕಾರ್ಯಕರ್ತರನ್ನು ಪಕ್ಷಕ್ಕೆ ದುಡಿದಂತವರನ್ನು ಪರಿಗಣಿಸಿ ನಾವು ಮತ್ತೆ ಒಂದುಗೂಡಿಸಿ ಪಕ್ಷವನ್ನು ಕಟ್ಟುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ತಿಳಿಸಿದರು. ನಗರದ ಶ್ರೀನಿವಾಸನಗರದಲ್ಲಿರುವ ಹಳೆಯ ಕಾರ್ಯಕರ್ತ ಹಾಗೂ ಎಚ್ ಡಿ ಕುಮಾರಸ್ವಾಮಿ ಅಭಿಮಾನಿ ಬಳಗದ ರಾಜ್ಯಾಧ್ಯಕ್ಷರಾಗಿದ್ದ ಬಿಜಿ ನಿರಂಜನ್ ನಿವಾಸಕ್ಕೆ ಕುಮಾರಸ್ವಾಮಿ ಭೇಟಿ ನೀಡಿ ಮಾತುಕತೆ ನಡೆಸಿದರು.
ನಿರಂಜನ್ ಒಬ್ಬ ಪಕ್ಷದ ನಿಷ್ಠಾವಂತ ಕಾರ್ಯಕರ್ತ ನಮ್ಮ ಜೊತೆ ಇದ್ದವನು ಪಕ್ಷಕ್ಕೋಸ್ಕರ ದುಡಿದಿದ್ದಾನೆ. ಆದರೆ 15 ವರ್ಷದಲ್ಲಿ ಅರಸೀಕೆರೆ ಕ್ಷೇತ್ರದ ಶಾಸಕ ಎಲ್ಲರನ್ನು ಸರಿಯಾಗಿ ತೆಗೆದುಕೊಂಡು ಹೋಗದೇ. ಕಾರ್ಯಕರ್ತರನ್ನು, ನಿಷ್ಠೆಯಿಂದ ಪಕ್ಷಕ್ಕೆ ದುಡಿದವರನ್ನು ಮರೆತು ತಮಗೆ ಬೇಕಾದವರನ್ನು ಹಿಂಬಾಲಕರನ್ನು ಬೆಳೆಸಿಕೊಂಡು ಬಂದಿದ್ದಾರೆ. ಹಾಗಾಗಿ ನಿರಂಜನ್‌ರಂತಹ ನಿಷ್ಠಾವಂತ ಕಾರ್ಯಕರ್ತರು ಪಕ್ಷದಿಂದ ದೂರ ಹೋಗಿದ್ದರು. ಈಗ ನಾವು ಮತ್ತೆ ಅವರನ್ನೆಲ್ಲ ಕರೆತಂದು ಪಕ್ಷಕ್ಕೆ ಸೇರಿಸಿಕೊಂಡು ಒಂದು ಗೂಡಿಸಿಕೊಂಡು ಪಕ್ಷ ಬಲವರ್ಧನೆ ಮಾಡಿ ಪಕ್ಷವನ್ನು ಗೆಲ್ಲಿಸುವ ಕೆಲಸ ಮಾಡುತ್ತೇವೆ. ಇವರಿಂದ ನಮ್ಮ ಪಕ್ಷಕ್ಕೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಬೆಲೆ ಏರಿಸಿ ಬದುಕು ಮೂರಾಬಟ್ಟೆ ಮಾಡುತ್ತಿರುವ ಬಿಜೆಪಿ: ಯತೀಂದ್ರ ಸಿದ್ದರಾಮಯ್ಯ
ಅರಸೀಕೆರೆ ಕ್ಷೇತ್ರದ ಶಾಸಕ ಶಿವಲಿಂಗೇಗೌಡ ನಮ್ಮ ಪಕ್ಷದಲ್ಲಿ ಎಲ್ಲಾ ರೀತಿಯ ಅಧಿಕಾರವನ್ನು ಅನುಭವಿಸಿ ಪಕ್ಷ ಬಿಟ್ಟು ಹೋಗುತ್ತಿದ್ದಾರೆ. ದೇವೇಗೌಡರು ಇರುವ ತನಕ ಪಕ್ಷ ಬಿಟ್ಟು ಹೋಗುವುದಿಲ್ಲ ಜೆಡಿಎಸ್‌ನಲ್ಲಿ ಇರುತ್ತೇನೆ ಎಂದು ಪ್ರಮಾಣ ಮಾಡಿದ್ದರು. ಈಗ ಕಾಂಗ್ರೆಸ್ ಪಕ್ಷದಲ್ಲಿ ಹೋಗಿ ಸಿದ್ದರಾಮಯ್ಯ ಅವರನ್ನು ಹೊಗಳುತ್ತಿದ್ದಾರೆ. ಆದರೆ ಸಿದ್ದರಾಮಯ್ಯನವರಿಗೆ ಗೆದ್ದೇ ಗೆಲ್ಲುತೀನಿ ಎಂಬ ಒಂದು ಕ್ಷೇತ್ರವಿಲ್ಲ ಚಾಮುಂಡೇಶ್ವರಿ ವರುಣ ಬಾದಾಮಿ ಈಗ ಕೋಲಾರ ಈಗೆ ಅಲೆಮಾರಿಯಂತೆ ಸುತ್ತುತ್ತಿರುವ ಸಿದ್ದರಾಮಯ್ಯ ಅವರಿಗೆ ಗೆಲ್ಲುವಿನ ಗ್ಯಾರಂಟಿ ಇಲ್ಲ ಇವರನೆಲ್ಲ ಹೇಗೆ ಗೆಲ್ಲಿಸುತ್ತಾರೆ ಎಂದು ಕುಟುಕಿದರು.
ಈ ದಿನ ಕಾಂಗ್ರೆಸ್‌ಗೆ ಹೋಗಿ ಸಿದ್ದರಾಮಯ್ಯ ಅವರನ್ನು ಮೆಚ್ಚಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ಅವರನ್ನು ಸಹ ಈ ಶಿವಲಿಂಗೇಗೌಡ ತೆಗಳುತ್ತಾನೆ ಮತ್ತು ಅವರನ್ನು ಸಹ ಮುಂದಿನ ದಿನ ಲೆಕ್ಕಕ್ಕಿಲ್ಲದ ರೀತಿ ಮಾತನಾಡುತ್ತಾರೆ ಇಂಥ ಕಾಲ ಬಂದೇ ಬರುತ್ತದೆ ಅಂಥಾ ಜಾಯಮಾನದ ವ್ಯಕ್ತಿ ಶಾಸಕ ಶಿವಲಿಂಗೇಗೌಡ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪಕ್ಷದ ಅಭ್ಯರ್ಥಿ ಬಾಣಾವರ ಅಶೋಕ್, ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಸಿಕಂದರ್, ಮುಖಂಡರಾದ ಹರ್ಷವರ್ಧನ್, ಗಂಗಾಧರ್, ದೇವಕುಮಾರ್ ಕೇಶವ್ ಜೆಡಿಎಸ್ ತಾಲೂಕು ಅಧ್ಯಕ್ಷ ಚಂದ್ರಶೇಖರ್, ಮುಖಂಡರಾದ ಹರ್ಷವರ್ಧನ, ಕೃಪಣ್ಣ, ಗಂಡಸಿ ರಾಜು ಮುಂತಾದವರು ಇದ್ದರು.
ಕಾಂಗ್ರೆಸ್ ಪಕ್ಷ ಮುಳುಗುವ ಹಡಗು: ಸಿಎಂ ಬೊಮ್ಮಾಯಿ
ಕಾಂಗ್ರೆಸ್‌ಗೆ ಕೆಟ್ಟ ಚಾಳಿ: ಕಾಂಗ್ರೆಸ್‌ಗೆ ಈ ಹಿಂದಿನಿಂದಲೂ ಒಂದು ಕೆಟ್ಟಚಾಳಿ ಇದೆ ಯಾರು ಇವರನ್ನು ಅಧಿಕಾರಕ್ಕೆ ಏರಲು ಸಹಾಯ ಮಾಡುತ್ತಾರೋ ಆ ಪಕ್ಷವನ್ನು ಸರ್ವನಾಶ ಮಾಡುತ್ತಾರೆ. ಈ ಬಾರಿಯು ಸಮಿಶ್ರ ಸರ್ಕಾರವಿದ್ದಾಗ ಸಮರ್ಥ ಶಾಸಕರನ್ನು ಆಮಿಷವೊಡ್ಡಿ ತಮ್ಮೆಡೆಗೆ ಸೆಳೆದಿದ್ದಾರೆ. ಕಾಂಗ್ರೆಸ್‌ಗೆ ಸ್ವಸಾಮರ್ಥ್ಯದಿಂದ ಗೆಲುವ ಶಕ್ತಿ ಇಲ್ಲ ಅಂತಹ ಅಭ್ಯರ್ಥಿಗಳಿಲ್ಲ ಅದರಿಂದಲ್ಲೇ ಬೇರೆ ಪಕ್ಷದ ಸಮರ್ಥ ಅಭ್ಯರ್ಥಿಗಳನ್ನು ತಮ್ಮತ್ತ ಸೆಳೆದ್ದು ಅಧಿಕಾರಕ್ಕೆ ಬರಲು ಹವಣಿಸುತ್ತಿದ್ದಾರೆ ಎಂದು ಛೇಡಿಸಿದರು.