ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಲಾಭಾಂಶ ಪಡೆಯಲು ರಾಜೀನಾಮೆ ಕೊಟ್ಟು ಬೇರೆ ಪಕ್ಷ ಸೇರಿದಂತೆ ನಾನು ಸೇರಲ್ಲ. ಕೆಲವರು ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಮಾಡಿ ಏನೇನು ಪಡೆದು ಶಾಸಕರ ಕುರ್ಚಿ ಮಾತ್ರ ಬಿಟ್ಟು ಹೋದರು ಎಂದು ಮಾಜಿ ಶಾಸಕ ಎಚ್.ಪಿ.ರಾಜೇಶ್, ಎಸ್.ವಿ.ರಾಮಚಂದ್ರ ವಿರುದ್ಧ ಶಾಸಕ ಬಿ.ದೇವೇಂದ್ರಪ್ಪ ನೇರ ವಾಗ್ದಾಳಿ ನಡೆಸಿದರು.
ಜಗಳೂರು (ಜೂ.7) : ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಲಾಭಾಂಶ ಪಡೆಯಲು ರಾಜೀನಾಮೆ ಕೊಟ್ಟು ಬೇರೆ ಪಕ್ಷ ಸೇರಿದಂತೆ ನಾನು ಸೇರಲ್ಲ. ಕೆಲವರು ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಮಾಡಿ ಏನೇನು ಪಡೆದು ಶಾಸಕರ ಕುರ್ಚಿ ಮಾತ್ರ ಬಿಟ್ಟು ಹೋದರು ಎಂದು ಮಾಜಿ ಶಾಸಕ ಎಚ್.ಪಿ.ರಾಜೇಶ್, ಎಸ್.ವಿ.ರಾಮಚಂದ್ರ ವಿರುದ್ಧ ಶಾಸಕ ಬಿ.ದೇವೇಂದ್ರಪ್ಪ (Devendrappa MLA)ನೇರ ವಾಗ್ದಾಳಿ ನಡೆಸಿದರು.
ವಿಧಾನಸಭಾ ಕ್ಷೇತ್ರದ ಅರಸಿಕೆರೆ ಗ್ರಾಮದಲ್ಲಿ ಕೋಲ ಶಾಂತೇಶ್ವರ ಮಠದ ಸಭಾಂಗಣದಲ್ಲಿ ಅರಸಿಕೆರೆ ಬಿಳಿಚೋಡು ಬ್ಲಾಕ್ ಕಾಂಗ್ರೆಸ್ ವತಿಯಿಂದ ಶಾಸಕ ಬಿ.ದೇವೇಂದ್ರಪ್ಪ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಹಾಗೂ ಕಾರ್ಯಕರ್ತರಿಗೆ ಕೃತಜ್ಞತಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ ಮೋಸಗಾರರಿಗೆ ಕಾಲವಿಲ್ಲ, ಜನರ ತೀರ್ಪು ಬಂದ ಮೇಲೆ ಬೆನ್ನಿಗೆ ಚೂರಿ ಹಾಕುವವರಿಗೆ ಜಾಗವಿಲ್ಲ. ಹಣ ಬಲವೋ, ತಾಕತ್ತಿನ ಬಲವೋ ನೋಡುತ್ತೇನೆ. ಬೆನ್ನಿಗೆ ಚೂರಿ ಹಾಕುವವರು ಎಷ್ಟುದಿವಸ ಇರುತ್ತೀರಿ. ಕೆಣಕಬೇಡ್ರಿ, ಕೆಣಕಿ ಅನುಭವಿಸಬೇಡ್ರಿ. ನನ್ನ ಹತ್ತಿರ ನಡೆಯಲ್ಲ ಜೊತೆಯಲ್ಲಿದ್ದೇ ಸೋಲಿಸಲು ಪ್ರಯತ್ನಿಸಬೇಡಿ. ಪಕ್ಷದೊಳಗೆ ಇದ್ದು, ಪಕ್ಷಕ್ಕೆ ಮೋಸ ಮಾಡಿದರೆ ಅವಧಿ ಮುಗಿಯೊಳಗೆ ರಾಜೀನಾಮೆ ಕೊಟ್ಟು ಇತಿಹಾಸ ಬರೆಯುತ್ತೇನೆ ಎಂದು ನೂತನ ಶಾಸಕ ಬಿ.ದೇವೇಂದ್ರಪ್ಪ ಹೇಳಿಕೆ ನೀಡಿದ್ದು ಸೇರಿದ್ದ ಕಾರ್ಯಕರ್ತರ ಅಭಿನಂದನೆ ಸಭೆಯಲ್ಲಿ ಆಶ್ಚರ್ಯ ಮೂಡಿಸಿತು.
'ಈ ಗ್ಯಾರಂಟಿ ಹೊಡೆತಕ್ಕ ಯಾರ್ ತಡಿತಾರ್ ರೀ' ಬಿಜೆಪಿ ಸೋಲಿಗೆ ಸಂಸದ ದೇವೇಂದ್ರಪ್ಪ ಪ್ರತಿಕ್ರಿಯೆ
ಮಲತಾಯಿ ಧೋರಣೆ ಮಾಡಲ್ಲ:
ಅರಸಿಕೆರೆ ಭಾಗದ ಕೆಲವು ಕಾಂಗ್ರೆಸ್ ಮುಖಂಡರು ಕಾಂಗ್ರೆಸ್‌ಗೆ ದ್ರೋಹ ಮಾಡಿದ್ದಾರೆ. ಕಾರ್ಯಕರ್ತರು ಮಾತ್ರ ನಮ್ಮನ್ನು ಬಿಡಲಿಲ್ಲ. ಪಕ್ಷಕ್ಕೆ ದ್ರೋಹ ಮಾಡುವವರಿಗೆ ಜಾಗವಿಲ್ಲ ಎಂದು ಎಚ್ಚರಿಕೆ ನೀಡಿದರಲ್ಲದೇ ಕ್ಷೇತ್ರದ 7 ಗ್ರಾಮ ಪಂಚಾಯಿತಿಗಳಿಗೆ ಮಲತಾಯಿ ಧೋರಣೆ ಮಾಡಲ್ಲ. ಹೆಚ್ಚಿನ ಅನುದಾನದಲ್ಲಿ ಅಭಿವೃದ್ಧಿಪಡಿಸುವೆ ಎಂದು ಶಾಸಕ ಭರವಸೆ ನೀಡಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ಮಾತನಾಡಿ, ಕ್ಷೇತ್ರದ ಅಭಿವೃದ್ಧಿ ನಿರೀಕ್ಷೆಗಳ ಬಡ ಕುಟುಂಬದಲ್ಲಿ ಜನಿಸಿದ ಶಾಸಕ ದೇವೇಂದ್ರಪ್ಪ ಸಮರ್ಥವಾಗಿ ಈಡೇರಿಸುತ್ತಾರೆ ಎಂಬ ವಿಶ್ವಾಸವಿದೆ. ಮುಂಬರುವ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಹೆಚ್ಚು ಅಭ್ಯರ್ಥಿಗಳ ಗೆಲ್ಲಿಸಿ ಶಾಸಕರ ಕೈ ಬಲಪಡಿಸಬೇಕಿದೆ ಎಂದರು.
ಕೆಪಿಸಿಸಿ ಎಸ್‌ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ, ಕೆಪಿಸಿಸಿ ತಾಲೂಕು ಉಸ್ತುವಾರಿ ಕಲ್ಲೇಶ್ ರಾಜ್ ಪಟೇಲ್ ಮಾತನಾಡಿ, ಕಾಂಗ್ರೆಸ್ ಪಕ್ಷವನ್ನು ಪ್ರಮುಖ ಮುಖಂಡರು ಕೈಬಿಟ್ಟು ಹೋದ ಸಂದರ್ಭದಲ್ಲಿ ಉಳಿದ ಕೆಲವೇ ಕಾರ್ಯಕರ್ತ ಕಟ್ಟಾಳುಗಳು ಪಕ್ಷದ ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರಿಗೆ ಧನ್ಯವಾದ ಸಲ್ಲಿಸಿದರು.
ಮಾಜಿ ಎಪಿಎಂಸಿ ಸದಸ್ಯ ಎಚ್.ನಾಗರಾಜ್ ಮಾತನಾಡಿ ಅರಸೀಕೆರೆಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಕಳಪೆಯಾಗಿದ್ದು, ಬಸ್ ನಿಲ್ದಾಣ ಕಾಮಗಾರಿ ಆರಂಭವಾಗಿಲ್ಲ. ಕೆಇಬಿ ಉಪಠಾಣೆ ನನೆಗುದಿಗೆ ಬಿದ್ದಿದೆ, ಆಸ್ಪತ್ರೆಗೆ ಮೂಲಸೌಕರ್ಯ ಕೊರತೆಯಿದೆ. ಗ್ರಂಥಾಲಯ ಸೌಲಭ್ಯ ಶೀಘ್ರ ಈಡೇರಿಸಬೇಕಿದೆ ಎಂದು ಮನವಿಮಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಂಷೀರ್ ಅಹ್ಮದ್, ಎಸ್.ಮಂಜುನಾಥ್, ಪಲ್ಲಾಗಟ್ಟೆಶೇಖರಪ್ಪ, ಪೂಜಾರ್ ಮರಿಯಪ್ಪ, ಸಿ.ತಿಪ್ಪೇಸ್ವಾಮಿ, ಮಾದಿಹಳ್ಳಿ ಚಂದ್ರಪ್ಪ, ಕವಲಹಳ್ಳಿ ರವೀಂದ್ರಣ್ಣ, ಸಿದ್ದಣ್ಣ, ಆನಂದಪ್ಪ, ಅಹಮ್ಮದ್ ಅಲಿ, ಬೂದಿಹಾಳ್ ಮಂಜಣ್ಣ, ಶೆಟ್ಟಿನಾಯ್ಕ ಬೂದಿಹಳ್ಳಿ ಸಿದ್ದೇಶ್, ಕುಮಾರ್‌ನಾಯ್ಕ, ತೌಡೂರು ಕೆಂಚಪ್ಪ, ಬಿ.ರಾಮಣ್ಣ, ಎಚ್.ರಾಮಚಂದ್ರಪ್ಪ, ಪುಣಭಗಟ್ಟೆಕೆಂಚಪ್ಪ ಸೇರಿ ಇತರರಿದ್ದರು.
ದಾವಣಗೆರೆ: ಖಾಸಗಿ ಬಸ್‌ನಲ್ಲೂ ಉಚಿತ ಪ್ರಯಾಣಕ್ಕೆ ಕೂಗು!
ಪೌರಕಾರ್ಮಿಕರಿಗಾಗಿ ಶಾಸಕ ವೇತನ ಮೀಸಲು
ಇಂದಿನಿಂದ ದಿನಕ್ಕೆ 3 ಗ್ರಾಮ ಪಂಚಾಯಿತಿಗಳಲ್ಲಿ ಅರಸಿಕೆರೆ ಹೋಬಳಿ ಸೇರಿ ಕ್ಷೇತ್ರದ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಅಧಿಕಾರಿಗಳ ಸಭೆ ಕರೆದು ಜನಸಾಮಾನ್ಯರ ಅಹವಾಲು ಸ್ವೀಕರಿಸಲಾಗುವುದು. ಮುಂದಿನ ವಾರದಲ್ಲಿ 7 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಡಿಪಿ ಸಭೆ, ಜಗಳೂರಿನಲ್ಲಿ ಜನ ಸಂಪರ್ಕ ಕೇಂದ್ರ ತರೆದಿದ್ದು, ಅರಸಿಕೆರೆ ಭಾಗದಲ್ಲೂ ಈ ಕೇಂದ್ರ ತೆರೆಯಲಾಗುವುದು. ಕಂಪ್ಯೂಟರ್ ಆಪರೇಟರ್ ನಿಯೋಜಿಸಿ ಜಗಳೂರಿನಿಂದ ಸಾರ್ವಜನಿಕರಿಗೆ ಅಲೆದಾಟ ತಪ್ಪಿಸಲಾಗುವುದು ಎಂದರು. ಶಾಸಕನಾದ ನನಗೆ ತಿಂಗಳಿಗೆ 2 ಲಕ್ಷ ರು. ಸಂಬಳ ನೀಡುತ್ತಿದ್ದು ಅದನ್ನು ಪೌರಕಾರ್ಮಿಕರಿಗಾಗಿ ವೇತನ ಮೀಸಲಿಡುವೆ. ನಾನು ವಾರಕ್ಕೊಮ್ಮೆ ಪೌರಕಾರ್ಮಿಕರ ಜೊತೆ ಕಸಗುಡಿಸುವೆ ಅವರಿಗೆ ಸಮವಸ್ತ್ರ, ಶ್ರೇಯೋಭಿವೃದ್ಧಿಗೆ ಶ್ರಮಿಸುವೆ ಎಂದು ಶಾಸಕ ದೇವೇಂದ್ರಪ್ಪ ಹೇಳಿದರು.