ರಾಜ್ಯದ ಮತದಾರರಿಂದ ಬಿಜೆಪಿಗೆ ತಕ್ಕ ಪಾಠ ಸಿಕ್ಕಿದೆ: ಸಚಿವ ಮಹದೇವಪ್ಪ

By Kannadaprabha News  |  First Published Jun 18, 2023, 9:43 PM IST

ದೇಶ ಮತ್ತು ರಾಜ್ಯದ ಉದ್ದಾರ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ ಎಂಬುದನ್ನು ಅರಿತಿರುವ ರಾಜ್ಯದ ಮತದಾರರು ಈ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಹೇಳಿದರು. 


ಕೆ.ಆರ್‌.ನಗರ (ಜೂ.18): ದೇಶ ಮತ್ತು ರಾಜ್ಯದ ಉದ್ದಾರ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ ಎಂಬುದನ್ನು ಅರಿತಿರುವ ರಾಜ್ಯದ ಮತದಾರರು ಈ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಹೇಳಿದರು. ಪಟ್ಟಣದ ಪುರಸಭೆ ಬಯಲು ರಂಗಮಂದಿರದ ಆವರಣದಲ್ಲಿ ಶನಿವಾರ ಸಾಲಿಗ್ರಾಮ ಮತ್ತು ಕೆ.ಆರ್‌. ನಗರ ಬ್ಲಾಕ್‌ ಕಾಂಗ್ರೆಸ್‌ನಿಂದ ನಡೆದ ಮತದಾರರ ಕೃತಜ್ಞತಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮುಂದಿನ ಎಲ್ಲ ಚುನಾವಣೆಗಳಲ್ಲಿಯೂ ಅಭಿವೃದ್ದಿ ವಿರೋಧಿ ಆಡಳಿತ ನಡೆಸುವ ಬಿಜೆಪಿಗೆ ಸೋಲು ನಿಶ್ಚಿತ ಎಂದರು.

ಪ್ರಜಾಪ್ರಭುತ್ವ ಅಂಗ ಸಂಸ್ಥೆಗಳನ್ನು ದಾಳವನ್ನಾಗಿ ದುರ್ಬಳಕೆ ಮಾಡಿಕೊಂಡು ರಾಜಕೀಯ ವಿರೋಧಿಗಳನ್ನು ಹಣಿಯುವ ಬಿಜೆಪಿಯ ಕೆಟ್ಟಚಾಳಿಯನ್ನು ಜನರು ಗಮನಿಸುತ್ತಿದ್ದು, ಇಂತಹ ಕೆಲಸ ಮಾಡುವವರನ್ನು ಶಾಶ್ವತವಾಗಿ ಮನೆಗೆ ಕಳುಹಿಸಲಿದ್ದಾರೆಂದು ತಿಳಿಸಿದರು. ಕೆ.ಆರ್‌. ನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಡಿ. ರವಿಶಂಕರ್‌ ಅವರನ್ನು 27 ಸಾವಿರ ಮತಗಳ ಅಂತರದಿಂದ ಜಯಗಳಿಸುವಂತೆ ಮಾಡಿರುವ ಮತದಾರ ಮಹಾಪ್ರಭುಗಳು, ಐತಿಹಾಸಿಕ ಗೆಲುವು ತಂದು ಕೊಟ್ಟಿದ್ದು ಇದು ಜನರ ಗೆಲುವು ಎಂದು ನುಡಿದರು.

Tap to resize

Latest Videos

ಇಂದಿರಾ ಕ್ಯಾಂಟೀನ್‌ನಲ್ಲಿ ಕಬಾಬ್‌ ತಿನ್ನಲು ಅವಕಾಶ: ಸಚಿವ ಎಚ್‌.ಸಿ.ಮಹದೇವಪ್ಪ

ಶಾಸಕ ಡಿ. ರವಿಶಂಕರ್‌ ಮಾತನಾಡಿ, ಕ್ಷೇತ್ರದ ಜನರು ನನ್ನ ಮೇಲೆ ನಂಬಿಕೆ ಇಟ್ಟು ನೀಡಿರುವ ಅಧಿಕಾರವನ್ನು ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಸದ್ಬಳಕೆ ಮಾಡಿಕೊಂಡು ಅವರ ಸೇವಕನಂತೆ ಕೆಲಸ ಮಾಡುತ್ತೇನೆ ಎಂದು ವಾಗ್ದಾನ ನೀಡಿದರು. ರೇಷ್ಮೆ ಮತ್ತು ಪಶು ಸಂಗೋಪನಾ ಸಚಿವ ಕೆ. ವೆಂಕಟೇಶ್‌, ಶಾಸಕರಾದ ಕೆ. ಹರೀಶ್‌ಗೌಡ. ಅನಿಲ್‌ ಚಿಕ್ಕಮಾದು, ಎಚ್‌.ಎಂ. ಗಣೇಶ್‌ಪ್ರಸಾದ್‌, ಡಾ.ಡಿ. ತಿಮ್ಮಯ್ಯ, ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ, ಕೆ.ಆರ್‌. ನಗರ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಡಾ.ಕೆ.ಆರ್‌. ರವೀಂದ್ರ, ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ ಮಾತನಾಡಿ, ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.

ಸಿದ್ದು ಈಗ ಸಿಎಂ, ಮುಂದೆಯೂ ಅವರೇ ಇರ್ತಾರೆ: ಸಚಿವ ಮಹದೇವಪ್ಪ

ಮಾಜಿ ಸಂಸದ ಕಾಗಲವಾಡಿಶಿವಣ್ಣ, ಜಿಪಂ ಮಾಜಿ ಸದಸ್ಯರಾದ ಅಮಿತ್‌, ವಿ. ದೇವರಹಟ್ಟಿ, ಜಿ.ಆರ್‌. ರಾಮೇಗೌಡ, ತಾಪಂ ಮಾಜಿ ಅಧ್ಯಕ್ಷ ಹಾಡ್ಯಮಹದೇವಸ್ವಾಮಿ, ಮಾಜಿ ಸದಸ್ಯ ಎ.ಟಿ. ಗೋವಿಂದೇಗೌಡ, ತಾಲೂಕು ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಸಿ.ಪಿ. ರಮೇಶ್‌ಕುಮಾರ್‌, ಕೆಪಿಸಿಸಿ ಸದಸ್ಯರಾದ ಪುಷ್ಪಲತಾ ರಮೇಶ್‌ಕುಮಾರ್‌, ಮಾಜಿ ಸದಸ್ಯ ಎಸ್‌.ಪಿ. ತಮ್ಮಯ್ಯ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಜೆ. ಶಿವಣ್ಣ, ಜಿಲ್ಲಾ ಕುರುಬರ ಸಂಘದ ನಿರ್ದೇಶಕ ಬಸವರಾಜು, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ಎಸ್‌. ಮಹದೇವ್‌, ಉದಯಶಂಕರ್‌, ನಗರ ಕಾಂಗ್ರೆಸ್‌ ವಕ್ತಾರ ಎಂ.ಜೆ. ರಮೇಶ್‌, ವಕ್ತಾರ ಸೈಯದ್‌ಜಾಬೀರ್‌, ಮಹಿಳಾ ಘಟಕದ ಅಧ್ಯಕ್ಷೆ ರಾಣಿ, ಲತಾ, ಎಪಿಎಂಸಿ ಮಾಜಿ ಅಧ್ಯಕ್ಷ ಎಂ. ರಮೇಶ್‌, ಮಾಜಿ ಉಪಾಧ್ಯಕ್ಷ ಎಚ್‌.ಎಚ್‌.ನಾಗೇಂದ್ರ, ಪುರಸಭೆ ಮಾಜಿ ಅಧ್ಯಕ್ಷ ಪ್ರಕಾಶ್‌, ಕೆ.ಜಿ. ಸುಬ್ರಹ್ಮಣ್ಯ, ಗೀತಾ ಮಹೇಶ್‌, ಸದಸ್ಯ ಜಾವೀದ್‌ಪಾಷಾ, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ವೈ.ಎಸ್‌. ಕುಮಾರ್‌, ಮಾಜಿ ನಿರ್ದೇಶಕ ಕೆ.ಎನ್‌. ಪ್ರಸನ್ನಕುಮಾರ್‌, ಕಾಂಗ್ರೆಸ್‌ ಮುಖಂಡರಾದ ಕೃಷ್ಣಭಟ್‌, ಎಚ್‌.ಪಿ. ಗೋಪಾಲ್‌, ಪಿಕೆಎಂ ರವಿ, ವೆಂಕಟೇಶ್‌ ಇದ್ದರು.

click me!