ವಾಲ್ಮೀಕಿ ಸಮುದಾಯಕ್ಕೆ ಸಿಎಂ ಸ್ಥಾನ ಬೇಡಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವ ಕೆ ಎನ್ ರಾಜಣ್ಣ ಮಗು ಅತ್ತರೆ ತಾನೇ ತಾಯಿ ಹಾಲು ಕೊಡೋದು. ಹಾಗೇ ನ್ಯಾಯಯುತ ವಾದ ಬೇಡಿಕೆಯನ್ನು ಏಕೆ ಕೇಳಬಾರದು, ಕೇಳಿದರೆ ತಪ್ಪೇನಿದೆ ಎಂದಿದ್ದಾರೆ.
ದಾವಣಗೆರೆ (ಜೂ.18): ವಾಲ್ಮೀಕಿ ಸಮುದಾಯಕ್ಕೆ ಸಿಎಂ ಸ್ಥಾನ ಬೇಡಿಕೆ ವಿಚಾರಕ್ಕೆ ಸಂಬಂಧಿಸಿದಂತೆ ದಾವಣಗೆರೆಯ ವಾಲ್ಮೀಕಿ ಗುರುಪೀಠದಲ್ಲಿ ಮಾತನಾಡಿದ ಸಚಿವ ಕೆ ಎನ್ ರಾಜಣ್ಣ ಮಗು ಅತ್ತರೆ ತಾನೇ ತಾಯಿ ಹಾಲು ಕೊಡೋದು. ಹಾಗೇ ನ್ಯಾಯಯುತ ವಾದ ಬೇಡಿಕೆಯನ್ನು ಏಕೆ ಕೇಳಬಾರದು, ಕೇಳಿದರೆ ತಪ್ಪೇನಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರ ಪಡೆದುಕೊಂಡು ಸಮಾಜವನ್ನು ಬೆಳವಣಿಗೆ ಸಹಕಾರಿಯಾಗಬೇಕು. ಮುಂದಿನ ದಿನಮಾನಗಳಲ್ಲಿ ನಾವು ಕೂಡ ವಾಲ್ಮೀಕಿ ಸಮುದಾಯದಿಂದ ಸಿಎಂ ಬೇಡಿಕೆ ಇಡುತ್ತೇವೆ. ಇದು ಇಡೀ ರಾಜ್ಯದ ಸಮುದಾಯದ ಮಹಾದಾಸೆಯಾಗಿದೆ. ಅದನ್ನು ಬಿಟ್ಟು ನನಗೆ ಮಾಡಿ ಎಂದು ಕೇಳುತ್ತಿಲ್ಲ. ಈ ಅವಧಿಯಲ್ಲಿ ಸಮಯ ಬಂದಾಗ ಡಿಸಿಎಂ ಸ್ಥಾನಕ್ಕೆ ಕೂಡ ಒತ್ತಾಯ ಮಾಡುತ್ತೇವೆ ಎಂದಿದ್ದಾರೆ.
ನಾನು ಮುಂದೆ ಯಾವುದೇ ಚುನಾವಣೆಯಲ್ಲಿನಿಲ್ಲೋದಿಲ್ಲ. ಆದರೆ ನಮ್ಮಗುರಿ ಇರೋದು ಒಂದೇ ನಾಳೆ ಮುಖ್ಯಮಂತ್ರಿ ಆಗೋದು. ಅದಕ್ಕೆ ನಮ್ಮ ಸತೀಶ್ ಜಾರಕಿಹೊಳಿಗೆ ಎಲ್ಲಾ ಅರ್ಹತೆ ಇದೆ. ಆಗ ನಮ್ಮ ಸಮಾಜಕ್ಕೆ ಇನ್ನು ಉತ್ತಮವಾಗುತ್ತದೆ. ನಾವು ಕೂಡ ಈಗ ಡಿಸಿಎಂ ಸ್ಥಾನ ಕೇಳಲು ಹೊರಟಿದ್ವಿ. ರಾಜಕೀಯ ಸಂಘರ್ಷ ಮಾಡದ ಹೊರತು ಯಾವ ಅಧಿಕಾರ ಸಿಗದು. ನಾಳೆ ಡಿಸಿಎಂ ಬಗ್ಗೆ ಒತ್ತಾಯವನ್ನು ಕೂಡ ಮುಂದೆ ಕೇಳುತ್ತೇವೆ. ನಾವು ಕೇಳಲಿಲ್ಲ ಎಂದ್ರೆ ಯಾವ ಅಧಿಕಾರವು ಸಿಗೋಲ್ಲ ಎಂದು ಸಹಕಾರ ಸಚಿವ ರಾಜಣ್ಣ ಹೇಳಿದ್ದಾರೆ.
undefined
Bagalkote: 15 ವರ್ಷಗಳಿಂದ ಮಾಶಾಸನಕ್ಕಾಗಿ ಅಲೆಯುತ್ತಿರೋ ಹಿರಿಯ ಕಲಾವಿದ, ತುತ್ತು ಅನ್ನಕ್ಕೆ
ಸಿದ್ದರಾಮಯ್ಯ ಸಿಎಂ ಆಗಿ ಈ ಐದು ವರ್ಷ ಇರ್ತಾರೆ ಮುಂದಿನ ಐದು ವರ್ಷ ಇರುತ್ತಾರೆ. ಅಧಿಕಾರ ಹಂಚಿಕೆ ವಿಚಾರವಾಗಿ ಎಐಸಿಸಿ ಚರ್ಚೆ ಮಾಡುತ್ತದೆ. ಜನರ ವಿಶ್ವಾಸ ಏನಿದೆ ಅದರಂತೆ ನನ್ನ ವಿಶ್ವಾಸವಿದೆ. ಸಿದ್ದರಾಮಯ್ಯ ರಾಜ್ಯದಲ್ಲಿ ಸಿಎಂ ಆಗಿ ಬಡವರ ಕಣ್ಣೀರು ಹೊರೆಸುವ ನಂಬಿಕೆ ಇಟ್ಟಿದ್ದಾರೆ. ನಂಬಿಕೆಗೆ ಅನುಗುಣವಾಗಿ ಧ್ವನಿ ಇಲ್ಲದವರಿಗೆ ಧ್ವನಿ ನೀಡುತ್ತಾರೆ. ಅಂತವರು ಸಿಎಂ ಆಗಿ ಹೆಚ್ಚು ಕಾಲ ಇರಬೇಕು ಎನ್ನುವುದು ನಮ್ಮ ಆಸೆ ಎಐಸಿಸಿಯವರು ನಾಳೆ ಬಿಡಿ ಎಂದರೆ ಬಿಡ್ತಾರೆ. ಅವರು ಏನ್ ನಿರ್ಣಯ ತೆಗೆದುಕೊಂಡಿದ್ದಾರೋ ಅದರಂತೆ ನಡೆಯುತ್ತಾರೆ ಎಂದಿದ್ದಾರೆ.
ಮತಾಂತರ ನಿಷೇಧ ಕಾಯ್ದೆ ರದ್ದತಿ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ರಾಜಣ್ಣ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ಯಾವ ನಿರೀಕ್ಷೆಗೆ ಸ್ಪಂದಿಸಿ ಕೆಲಸ ಮಾಡುತ್ತೇವೆ. ಅ ಹಿನ್ನಲೆಯಲ್ಲಿ ಕೆಲವೊಂದು ಬದಲಾವಣೆ ಆಗುತ್ತವೆ. ಅದನ್ನು ಸರಿ ಎಂದು ಜನರು ಒಪ್ಪುತ್ತಾರೆ ಎಂದ ಕೆ ಎನ್ ರಾಜಣ್ಣ.
ವಿದ್ಯುತ್ ದರ ಕಡಿಮೆಯಾಗಲ್ಲ ಎಂದ ಸಿಎಂ: ಕರ್ನಾಟಕ ಬಂದ್‌ಗೆ ಕರೆಕೊಟ್ಟ ಕೆಸಿಸಿಐ
ನಟ ಕಿಚ್ಚ ಸುದೀಪ್ ಗೆ ಕಿವಿ ಮಾತು ಹೇಳಿದ ಸಚಿವ ಕೆ ಎನ್ ರಾಜಣ್ಣ ನಮ್ಮ ಸಮಾಜದ ಮೇರು ನಟ ಸುದೀಪ್, ರಾಜ್ ಕುಮಾರ್ ಅವರು ರಾಜಕೀಯ ಕ್ಕೆ ಬಂದು ಏನು ಬೇಕಾದರೂ ಆಗಬಹುದಿತ್ತು. ಆದರೆ ರಾಜಕೀಯದಿಂದ ದೂರ ಇದ್ದಿದ್ದಕ್ಕೆ ದೇವತಾ ಮನುಷ್ಯ ಎಂದು ಎಲ್ಲಾ ಸಮುದಾಯದವರು ಗುರುತಿಸುತ್ತಾರೆ. ಸಿನಿಮಾ ನಟರು ರಾಜಕೀಯ ಕ್ಕೆ ಬರೋದ್ರಿಂದ ಗೌರವ ಕಡಿಮೆಯಾಗುತ್ತದೆ. ಒಂದು ಸಮುದಾಯದ ಅಭ್ಯರ್ಥಿ ಗಳ ಪರ ವಿರುದ್ದ ಮಾಡಿದಾಗ ಅ ಸಮುದಾಯದವರೇ ನಿಮಗೆ ಪರ ವಿರುದ್ದ ಆಗುತ್ತಾರೆ. ಅದಕ್ಕೆ ಅವಕಾಶ ಕೊಡಬೇಡಿ ಎಂದು ಕಿವಿ ಮಾತು ಹೇಳಿದ್ದೇನೆ ಎಂದ ಕೆ ಎನ್ ರಾಜಣ್ಣ ಹೇಳಿದ್ದಾರೆ.
ಕಿಚ್ಚ ಸುದೀಪ್ ಬಗ್ಗೆ ಬೇಸರ ವ್ಯಕ್ತಪಡಿಸಿದ ಸಹಕಾರ ಸಚಿವ ರಾಜಣ್ಣ, ಕಿಚ್ಚಾ ಸುದೀಪ್ ನಮ್ಮ ವಿರುದ್ದವೇ ಭಾಷಣ ಮಾಡಿದ್ದಾರೆ. ಸಾಮಾನ್ಯ ಕ್ಷೇತ್ರದಲ್ಲಿ ಬಂದು ಪ್ರಚಾರ ಮಾಡಿದ್ರೆ ಏನು ಅನ್ನುಸ್ತಾ ಇರ್ಲಿಲ್ಲ. ಎಸ್ಟಿ ಮೀಸಲು ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದು ನೋವು ಅನ್ನುಸ್ತು, ನಮ್ಮವರು ಎರಡು ಕಡೆ ಸ್ಪರ್ಧಿಸಿದಾಗ ಒಬ್ಬರ ಪರವಾಗಿ,ಇನ್ನೊಬ್ಬರ ವಿರುದ್ಧವಾಗಿ ಪ್ರಚಾರ ಮಾಡಿದ್ರು. ಇದು ನಮಗೆಲ್ಲಾ ಬೇಸರ ತರಿಸಿತು. ಇದು ಪ್ರತಿಭಾನ್ವಿತ ನಟನ ಭವಿಷ್ಯಕ್ಕೆ ಕುತ್ತು ತರುತ್ತದೆ. ಅತನಿಗೆ ಅನುಭವ ಕಡಿಮೆ ಇದೆ, ಶ್ರೇಷ್ಠ ನಟನಾಗಲು ಅವಕಾಶ ಇದೆ. ಇದನ್ನು ಅರಿತುಕೊಂಡು ಮುಂದುವರೆಯಲಿ ಎಂದು ಹೇಳಿದ್ದಾರೆ.