ಸಿದ್ದರಾಮಯ್ಯ ಸೋಲಿಗೆ ವ್ಯೂಹ ರಚಿಸುತ್ತೇವೆ: ಸಚಿವ ಸುಧಾಕರ್‌

By Govindaraj SFirst Published Jan 12, 2023, 12:30 AM IST
Highlights

ಮಾಜಿ ಸಿಎಂ ಸಿದ್ದರಾಮಯ್ಯ ಅವರ ರಾಜಕೀಯ ತೀರ್ಮಾನ ಅವರಿಗೆ ಮಾರಕವಾಗಬಹುದು, ಅವರಿಗೇ ಮಾರಕವಾಗುವ ಪರಿಸ್ಥಿತಿ ಇರುವಾಗ ಜಿಲ್ಲೆಗಳ ಇತರೆ ಕ್ಷೇತ್ರಗಳ ಮೇಲೆ ಯಾವುದೇ ಪ್ರಭಾವ ಬೀರಲು ಸಾಧ್ಯವಿಲ್ಲ ಎಂದು ಕೋಲಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಬಗ್ಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು.

ಚಿಕ್ಕಬಳ್ಳಾಪುರ (ಜ.12): ಮಾಜಿ ಸಿಎಂ ಸಿದ್ದರಾಮಯ್ಯ ಅವರ ರಾಜಕೀಯ ತೀರ್ಮಾನ ಅವರಿಗೆ ಮಾರಕವಾಗಬಹುದು, ಅವರಿಗೇ ಮಾರಕವಾಗುವ ಪರಿಸ್ಥಿತಿ ಇರುವಾಗ ಜಿಲ್ಲೆಗಳ ಇತರೆ ಕ್ಷೇತ್ರಗಳ ಮೇಲೆ ಯಾವುದೇ ಪ್ರಭಾವ ಬೀರಲು ಸಾಧ್ಯವಿಲ್ಲ ಎಂದು ಕೋಲಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಬಗ್ಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು.

ನಗರದ ಹೊರ ವಲಯದ ಚಿತ್ರಾವತಿ ಬಳಿ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಕೆ.ವಿ. ನಾಗರಾಜ್‌ ಅವರ ಹುಟ್ಟುಹಬ್ಬ ಸಂಭ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೋಲಾರಕ್ಕೂ ಅವರಿಗೂ ಯಾವುದೇ ರೀತಿಯ ವಿಶೇಷ ಸಂಬಂಧ ಇಲ್ಲ. ಸ್ವಾಭಾವಿಕವಾಗಿ ಅವರು ಅಲ್ಪಸಂಖ್ಯಾತ ಮತಗಳು ಮತ್ತು ಇತರೆ ಹಲವು ಜಾತಿಗಳ ಮತಗಳ ಲೆಕ್ಕಾಚಾರದಲ್ಲಿ ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿರ್ಸಲು ತೀರ್ಮಾನಿಸಿದ್ದಾರೆ ಎಂದರು.

Chikkaballapur Utsav: ಡಾ.ಸುಧಾಕರ್‌ ದೂರದೃಷ್ಟಿ ನಾಯಕ: ಸಚಿವ ಮುನಿರತ್ನ

ಸೋಲಿಗೆ ವ್ಯೂಹ ರಚಿಸುತ್ತೇವೆ: ತಾವು ವೈಯಕ್ತಿಕವಾಗಿ ಕೋಲಾರದಿಂದ ಸ್ಪರ್ಧೆ ಮಾಡಲು ತೀರ್ಮಾನಿಸಿದ್ದು, ಕಾಂಗ್ರೆಸ್‌ ಹೈಕಮಾಂಡ್‌ ತೀರ್ಮಾನವೇ ಅಂತಿಮ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಹಾಗಾಗಿ ಕೋಲಾರದಲ್ಲಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲು ಅಗತ್ಯವಿರುವ ವ್ಯೂಹ ನಾವು ಮಾಡುತ್ತೇವೆ ಎಂದರು. ಕೋಲಾರ ಜಿಲ್ಲೆಯ ಕೆಲವು ನಾಯಕರ ಬುಡ ಅಲ್ಲಾಡುತ್ತಿದೆ, ಹಾಗಾಗಿ ಅವರು ಉಳಿಯಲು ಇವರನ್ನು ಬಲಿಪಶು ಮಾಡುತ್ತಿದ್ದಾರೆ ಎನಿಸುತ್ತದೆ. ಕೋಲಾರವನ್ನು ಏನೇ ಆಗಲೀ ನಾವು ಗೆಲ್ಲಬೇಕು ಎಂದು ಪಣ ತೊಟ್ಟಿದ್ದೇವೆ ಎಂದು ಸಚಿವರು ಹೇಳಿದರು.

ಕೃಷಿಕನಿಗೆ ಸಂದ ಗೌರವ: ಕೃಷಿಕ ಕುಟುಂಬದಿಂದ ಬಂದ ಕೆ.ವಿ. ನಾಗರಾಜ್‌ ಅವರು ಕೃಷಿಕರ ಕಷ್ಟಅರ್ಥಮಾಡಿಕೊಂಡಿದ್ದ ಕಾರಣ ಹೈನುಗಾರಿಕೆಗೆ ವಿಶೇಷ ಒತ್ತು ನೀಡಿದ್ದಾರೆ. ಅಲ್ಲದೆ ಅವರಿಗೆ ದೊರೆತ ಮಾವು ಮತ್ತು ಖಾದಿ ಮಂಡಳಿಗಳು ರೈತ ಸಂಬಂಧಿ ಮಂಡಳಿಗಳೇ ಆಗಿದ್ದು, ಇವುಗಳಲ್ಲಿ ಅವರು ಕೃಷಿಕರಿಗಾಗಿ ಸಾಕಷ್ಟುಅಭಿವೃದ್ಧಿ ಮಾಡುವತ್ತ ಶ್ರಮಿಸುತ್ತಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಮೆಚ್ಚುಗೆ ವ್ಯಕ್ತಪಡಿಸಿದರು.

ಬಿಜೆಪಿ ಸರ್ಕಾರಕ್ಕೆ ಹೆಸರು ತಂದ ಸುಧಾಕರ್‌: ಕೋವಿಡ್‌ ಎರಡನೇ ಅಲೆ ಸಂದರ್ಭದಲ್ಲಿ ನನಗೆ ಕೋವಿಡ್‌ ಪಾಸಿಟಿವ್‌ ಬಂದಾಗ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ನನ್ನನ್ನು ರಕ್ಷಿಸಿದರೆಂದು ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಚಿಕ್ಕಬಳ್ಳಾಪುರ ಉತ್ಸವದಲ್ಲಿ ಪಾಲ್ಗೊಂಡು ಫಲಪುಪ್ಪ ಪ್ರದರ್ಶನ ಹಾಗೂ ಆಹಾರ ಮೇಳ, ಕೃಷಿ ವಸ್ತು ಪ್ರದರ್ಶನ ವೀಕ್ಷಿಸಿದ ಬಳಿಕ ಮಾತನಾಡಿದ ಅವರು, ಒಬ್ಬ ಸಚಿವರಾಗಿ ಕರ್ನಾಟಕವನ್ನು ಕೋವಿಡ್‌ನಿಂದ ಪಾರು ಮಾಡಿದ ಮಹಾನ್‌ ದೊಡ್ಡ ವ್ಯಕ್ತಿತ್ವ ಅವರದು ಎಂದರು.

ಮಾದರಿ ಗ್ರಾಮ ಪರಿಕಲ್ಪನೆಗೆ ಶ್ಲಾಘನೆ: ಚಿಕ್ಕಬಳ್ಳಾಪುರ ಉತ್ಸವವನ್ನು ಬಹಳ ಚಿಂತನೆ, ದೂರದೃಷ್ಟಿಯಿಂದ ಆಯೋಜಿಸಿದ್ದಾರೆ. ಇದು ಬರೀ ಪ್ರದರ್ಶನವಲ್ಲ. ಹನಿ ನೀರಿಗೂ ಪರದಾಡಬೇಕಾದ ಸ್ಥಿತಿ ಇರುವ ಜಿಲ್ಲೆಗೆ ನೀರಾವರಿ ಕಲ್ಪಿಸಿ ಅದನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ವಸ್ತು ಪ್ರದರ್ಶನದಲ್ಲಿ ತೋರಿಸಿದ್ದಾರೆ. ಮಳಿಕೆ, ಮಾದರಿ ಗ್ರಾಮ ಪರಿಕಲ್ಪನೆ ನಿಜಕ್ಕೂ ನೋಡಿದವರಿಗೆ ಸಾಕಷ್ಟುಅರಿವು, ಪ್ರೇರಣೆ ನೀಡುತ್ತದೆಂದರು. ಸುಧಾಕರ್‌ ನಾಯಕತ್ವ ಈ ಜಿಲ್ಲೆಗೆ ಸಿಕ್ಕಿರುವುದು ಪುಣ್ಯ, ಅವರ ನಾಯಕತ್ವನ್ನು ಜಿಲ್ಲೆಯ ಜನತೆ ಬಳಸಿಕೊಳ್ಳಬೇಕು, ಅವರ ಅಭಿವೃದ್ದಿಯ ದೂರದೃಷ್ಠಿ ಎಲ್ಲರನ್ನು ಬೆರಗುಗೊಳಿಸುತ್ತದೆ. 

Chikkaballapur Utsav: ರಾಜ್ಯದ ಯಾವುದೇ ಶಾಸಕರು ಮಾಡದ ಸಾಹಸ ಸುಧಾಕರ್ ಮಾಡಿದ್ದಾರೆ: ಸಚಿವ ಸೋಮಶೇಖರ್

ಒಬ್ಬ ಶಾಸಕನಾಗಿ, ಮಂತ್ರಿಯಾಗಿ ತನ್ನ ಜಿಲ್ಲೆಗೆ ಏನು ಮಾಡಬಹುದು ಎಂಬುದನ್ನು ಸಚಿವ ಸುಧಾಕರ್‌ ತೋರಿಸಿಕೊಟ್ಟಿದ್ದಾರೆ. ಇದೆಲ್ಲಾ ನಮಗೆ ಮಾದರಿ. ಸುಧಾಕರ್‌ ರವರ ಬದ್ದತೆ, ಕಾರ್ಯದಕ್ಷತೆ, ಕಾರ್ಯಪ್ರವೃತ್ತಿ ಚಿಕ್ಕಬಳ್ಳಾಪುರ ಉತ್ಸವದಲ್ಲಿ ಮೇಳೈಸಿದೆಯೆಂದು ಸಚಿವ ಆಗರ ಜ್ಞಾನೇಂದ್ರ ಹೇಳಿದರು. ರಾಜ್ಯದಲ್ಲಿ ಯಡಿಯೂರಪ್ಪ ಹಾಗೂ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಒಳ್ಳೆ ಹೆಸರು ಇದ್ದರೆ ಅದು ಸುಧಾಕರ್‌ ಅವರ ಶ್ರಮದಿಂದ ಮಾತ್ರ ಸಾಧ್ಯವೆಂದರು. ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಸಾಧನೆಗಳ ಬಗ್ಗೆ ಉತ್ಸವದಲ್ಲಿ ವ್ಯವಸ್ಥಿತವಾಗಿ ಬೆಳಕು ಚೆಲ್ಲಿದ್ದಾರೆಂದರು. ಬರದ ನಾಡು ಆಗಿದ್ದ ಈ ಭಾಗವನ್ನು ಮಲೆನಾಡಾಗಿ ಪರಿವರ್ತಿಸಿದ್ದಾರೆಂದರು.

click me!