Ballari: ತಂದೆಯ ಹುಟ್ಟುಹಬ್ಬದಂದು ರಾಜಕೀಯಕ್ಕೆ ಎಂಟ್ರಿ ಕೊಟ್ಟ ಜನಾರ್ದನ ರೆಡ್ಡಿ ಮಗಳು

By Govindaraj S  |  First Published Jan 11, 2023, 9:42 PM IST

ಜಿಲ್ಲೆಯ ಅಭಿವೃದ್ಧಿ ಬಗ್ಗೆ ನೂರಾರು ಕನಸನ್ನು ಹೊತ್ತ ಜನಾರ್ದನ ರೆಡ್ಡಿ ಅವರನ್ನು ರಾಜಕೀಯದಲ್ಲಿ ಟಾರ್ಗೆಟ್ ಮಾಡಲಾಯ್ತು. ಲಂಡನ್ ನಲ್ಲಿರುವ ಷ್ಟು ಸೌಕರ್ಯವಿದ್ದರೂ ಬಳ್ಳಾರಿಯಲ್ಲಿರಬೇಕೆನ್ನುವ ಹಂಬಲವಿದ್ದ ಜನಾರ್ದನ ರೆಡ್ಡಿಯನ್ನು ರಾಜಕೀಯ ಕುತಂತ್ರಿಗಳು ಬಳ್ಳಾರಿಗೆ ಬರದಂತೆ ಮಾಡಿದ್ದಾರಂತೆ. 


ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಬಳ್ಳಾರಿ

ಬಳ್ಳಾರಿ (ಜ.11): ಜಿಲ್ಲೆಯ ಅಭಿವೃದ್ಧಿ ಬಗ್ಗೆ ನೂರಾರು ಕನಸನ್ನು ಹೊತ್ತ ಜನಾರ್ದನ ರೆಡ್ಡಿ ಅವರನ್ನು ರಾಜಕೀಯದಲ್ಲಿ ಟಾರ್ಗೆಟ್ ಮಾಡಲಾಯ್ತು. ಲಂಡನ್ ನಲ್ಲಿರುವ ಷ್ಟು ಸೌಕರ್ಯವಿದ್ದರೂ ಬಳ್ಳಾರಿಯಲ್ಲಿರಬೇಕೆನ್ನುವ ಹಂಬಲವಿದ್ದ ಜನಾರ್ದನ ರೆಡ್ಡಿಯನ್ನು ರಾಜಕೀಯ ಕುತಂತ್ರಿಗಳು ಬಳ್ಳಾರಿಗೆ ಬರದಂತೆ ಮಾಡಿದ್ದಾರಂತೆ. ಯಾರು ಎಷ್ಟೇ ತುಳಿದ್ರು. ಬಳ್ಳಾರಿ ಜನರು ನಮ್ಮನ್ನು ಕೈಬಿಡೋದಿಲ್ಲವೆನ್ನುವ ನಂಬಿಕೆ ಇದೆ ಹೀಗಾಗಿ ಹೊಸ ಪಕ್ಷದೊಂದಿಗೆ ಮತ್ತೊಮ್ಮೆ ನಿಮ್ಮ ಮುಂದೆ ಬಂದಿದ್ದೆವೆ ಹೀಗೆ  ಜನಾರ್ದನ ರೆಡ್ಡಿ, ಅವರ ಪತ್ನಿ ಲಕ್ಷ್ಮೀ ಅರುಣಾ ಮತ್ತವರ ಮಗಳು ಬ್ರಾಹ್ಮಿಣಿ ತಮ್ಮ ರಾಜಕೀಯ ವೈರಿಗಳ ವಿರುದ್ದ ಭರ್ಜರಿ ವಾಗ್ದಾಳಿ ನಡೆಸಿದರು. 

Tap to resize

Latest Videos

undefined

ಜನಾರ್ದನ ರೆಡ್ಡಿ ಹುಟ್ಟುಹಬ್ಬದ ನೆಪದಲ್ಲಿ ಜನಾರ್ದನ ರೆಡ್ಡಿ ಅನುಪಸ್ಥಿತಿಯಲ್ಲಿ ಬಳ್ಳಾರಿಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಮಾವೇಶ ಮಾಡಲಾಯಿತು. ಹೆಸರಿಗೆ ಹುಟ್ಟುಹಬ್ಬದ ಆಚರಣೆಯಾದ್ರೂ ಇಲ್ಲಿ ನಡೆದಿದ್ದು ಮಾತ್ರ ರಾಜಕೀಯ ಸಮಾವೇಶ. ಇದೇ ಮೊದಲ ಬಾರಿಗೆ ರಾಜಕೀಯ ವೇದಿಕೆಯಲ್ಲಿ ಭರ್ಜರಿ ಮಾತನಾಡಿದ ಜನಾರ್ದನ ರೆಡ್ಡಿ ಮಗಳು ಬ್ರಾಹ್ಮಿಣಿ ತಮ್ಮ ತಂದೆಯನ್ನು ರಾಜಕೀಯದಲ್ಲಿ ಟಾರ್ಗೆಟ್ ಮಾಡಲಾಗಿದೆ ಎಂದು‌ ಹೇಳೋ ಮೂಲಕ ಮೊದಲ ಭಾಷಣದಲ್ಲಿಯೇ ಗಮನ ಸೆಳೆದರು.

ಜನಾರ್ದನ ರೆಡ್ಡಿ ಸಾಮಾಜಿಕ ಜಾಲತಾಣಗಳ ಖಾತೆ ಹ್ಯಾಕ್: ದೂರು ದಾಖಲು

ಗಂಡ  ಮಾಡಿದ ಅಭಿವೃದ್ಧಿ ಬಗ್ಗೆ ವಿವರಣೆ ನೀಡಿದ ಲಕ್ಷ್ಮೀ ಅರುಣಾ: ಈಗಾಗಲೇ ಕಳೆದೊಂದು ವಾರದಿಂದ ರಾಜಕೀಯ ರಣರಂಗದ ಕಣಕ್ಕಿಳಿದಿರೋ ಜನಾರ್ದನ ರೆಡ್ಡಿ ಪತ್ನಿ ಲಕ್ಷ್ಮೀ ಅರುಣಾ ಜನಾರ್ದನ ರೆಡ್ಡಿ ಹುಟ್ಟು ಹಬ್ಬದ ವೇದಿಕೆಯಲ್ಲಿ  ಬಸವಣ್ಣನ ವಚನದಿಂದ ಮಾತು ಪ್ರಾರಂಭಿಸಿದ್ರು. ಜೀವನದಲ್ಲಿ ಜನಾರ್ದನ ರೆಡ್ಡಿ ಇಲ್ಲದೇ ವೇದಿಕೆಯಲ್ಲಿ ಮಾತನಾಡ್ತೇನೆ ಎಂದು ಕನಸಿನಲ್ಲಿ ಊಹಿಸಿರಲಿಲ್ಲ. ಆದರೆ ಜನಾರ್ದನ ರೆಡ್ಡಿ ಪ್ರೀತಿ ಮಾಡೋ ಜನರ ಮಧ್ಯೆ ಇದೀಗ ಮಾತನಾಡ್ತಿದ್ದೇನೆ ಎಂದ ಅವರು ನಮ್ಮ ಕಷ್ಟ ನಷ್ಟು ನೋವು ನಲಿವು ಹಂಚಿಕೊಳ್ಳಲು ನಿಮ್ಮ ಮುಂದೆ ಬಂದಿದ್ದೇನೆ ಎಂದರು.

ಎಲ್ಲರನ್ನೂ  ಬೆಳೆಸಿದ ಜನಾರ್ದನ ರೆಡ್ಡಿ ಇದೀಗ ಒಬ್ಬಂಟಿಯಾಗಿದ್ದೇವೆಂದು ಸಿಂಧನೂರಿನಲ್ಲಿ ಭಾಷಣದಲ್ಲಿ ಮಾತನಾಡಿದ್ರು. ಈ ಮಾತು ನನ್ನ ಉಸಿರು ನಿಲ್ಲುವಂತೆ ಮಾಡಿತ್ತು. ಆದರೆ ಇದೀಗ ಅವರು ಕಟ್ಟಿದ ಪಕ್ಷಕ್ಕೆ ಬಳ್ಳಾರಿಯ ಜನರು ಬೆಂಬಲಕ್ಕೆ ನಿಂತಿದ್ದಾರೆ. ಬಳ್ಳಾರಿ ಜನರು ನಮ್ಮ ಕೈಬಿಡೋದಿಲ್ಲ ಎನ್ನುವುದು ಈ ವೇದಿಕೆ ನೋಡಿದ್ರೇ ಗೊತ್ತಾಗ್ತದೆ ಎಂದ ಅವರು, ಜನಾರ್ದನ ರೆಡ್ಡಿ ಅವರು, ಮಾಡಿದ ಉದ್ಯಮ ರಾಜಕೀಯ ಬೆಳವಣಿಗೆ ಬಗ್ಗೆ ಸುದೀರ್ಘ ಮಾತನಾಡಿದ್ರು 2008ರಲ್ಲಿ ಬಳ್ಳಾರಿ ಉಸ್ತುವಾರಿ ಸಚಿವರಾಗಿದ್ದಾಗ ಬಳ್ಳಾರಿ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಹುಟ್ಟುವ ಸೂರ್ಯನನ್ನು ನಿಲ್ಲಿಸೋಕೆ ಅಗಲ್ಲ. ಹಾಗೇ ಜನರಿಂದ ಜನಾರ್ದನನನ್ನು ದೂರ ಮಾಡಲಾಗೋದಿಲ್ಲ ಎಂದರು.

ಮೊದಲ ಭಾಷಣದಲ್ಲಿಯೇ ಗಮನ ಸೆಳೆದ ಬ್ರಾಹ್ಮಿಣಿ: ಕಳೆದ ಇಪ್ಪತ್ತೈದು ವರ್ಷದಿಂದ ಜನಾರ್ದನ ರೆಡ್ಡಿ ರಾಜಕೀಯದಲ್ಲಿದ್ರು, ಅವರು ತಮ್ಮ ಪತ್ನಿ ಮತ್ತು ಮಕ್ಕಳನ್ನು ಎಂದಿಗೂ ಹೊರಗೆ ಕರೆದುಕೊಂಡು ಬಂದಿರಲಿಲ್ಲ. ಆಗೋಮ್ಮೆ ಈಗೋಮ್ಮೆ ಪತ್ನಿ ಅರುಣಾ ವೇದಿಕೆ ಮೇಲೆ ಕಾಣಿಸಿಕೊಂಡ್ರು ಮಾತನಾಡಿರಲಿಲ್ಲ. ಇದೀಗ ಇದೇ ಮೊದಲ ಜನಾರ್ದನ ರೆಡ್ಡಿ ಪುತ್ರಿ ಬ್ರಾಹ್ಮಿಣಿ ಮೊದಲ ಬಾರಿಗೆ ವೇದಿಕೆಯಲ್ಲಿ ಮಾತನಾಡೋ ಮೂಲಕ ಭರ್ಜರಿ ಬ್ಯಾಟಿಂಗ್  ಮಾಡಿದ್ರು. ಒಂದು ಕಡೆ ಸಂತೋಷ ದುಃಖದ ಜೊತೆಗೆ ಮಹತ್ವದ ಜವಾಬ್ದಾರಿ ಹೊತ್ತು ನಿಮ್ಮ ಮುಂದೆ ಬಂದಿದ್ದೇನೆ ಎನ್ನುವ ಮೂಲಕ ಕಲ್ಯಾಣ ರಾಜ್ಯದ ಕನಸು ನನಸು ಮಾಡಲು ಜನಾರ್ದನ ರೆಡ್ಡಿ ನಿಂತಿದ್ದಾರೆ ಅವರ ಹಿಂದೆ ಬಳ್ಳಾರಿ ಜನರಿದ್ದಾರೆ ಎಂದರು.  

ಅಭಿವೃದ್ಧಿಗಾಗಿ ಮತ್ತೊಮ್ಮೆ ರಾಜಕೀಯ ಪಕ್ಷ ಕಟ್ಟಿದ್ದಾರೆ. ಜನಾರ್ದನ ರೆಡ್ಡಿ ಕಟ್ಟಿದ ಸಾಮ್ರಾಜ್ಯದಿಂದ ಅವರೇ ದೂರವಾಗೋ ಸ್ಥಿತಿ ಬಂದಿದೆ. ಯಾವ ಊರಿಗೆ ಹೋದ್ರು ಬಳ್ಳಾರಿ ಪ್ರೀತಿಸುತ್ತಿದ್ರು ಇಲ್ಲಿಗೆ ಬರಬೇಕು ಎನ್ನುತ್ತಿದ್ರು, ಜನಾರ್ದನ ರೆಡ್ಡಿ ಆದ್ರೇ,  ವಿಧಿಯಾಟವೇನೆಂದ್ರೇ ಅವರ ಪ್ರೀತಿಸೋ ಬಳ್ಳಾರಿಯಿಂದಲೇ ಅವರು ದೂರವಾಗುತ್ತದೆ  ಎಂದು ಕೊಂಡಿರಲಿಲ್ಲ. ಸಮಯ ಕಡಿಮೆ ಇದೆ ಯಾವುದೇ ಕ್ಷಣದಲ್ಲಿ ಚುನಾವಣೆ ಬರಬಹುದು. ಎಲ್ಲಾ ಪಕ್ಷ ಕಟ್ಟೋಣ.. ಇದ್ದದ್ದು ಇದ್ದಂಗೆ ಜನರ ಮುಂದೆ ಹೇಳಿ ಹೋಗೋಣ ಜನಾರ್ದನ ರೆಡ್ಡಿ ಒಬ್ಬಂಟಿಯಲ್ಲ ನಿಮ್ಮಲ್ಲರ ಆಶೀರ್ವಾದ ನಮ್ಮ ಮೇಲಿದೆ ಎಂದರು.

ಬೈಕ್ ರ್ಯಾಲಿ ಮತ್ತು 56 ಕೆಜಿ ಕೇಕ್ ಕಟ್ ಮಾಡಿದ ಅಭಿಮಾನಿಗಳು: ಜನಾರ್ದನ ರೆಡ್ಡಿ ಹುಟ್ಟು ಹಬ್ಬದ ಹಿನ್ನೆಲೆ ಬಳ್ಳಾರಿಯಲ್ಲಿ ಬೃಹತ್ ಬೈಕ್ ರಾಲಿಯನ್ನು ಹಮ್ಮಿಕೊಳ್ಳಲಾಗಿತ್ತು. ಬೈಕ್ ರಾಲಿಗೆ  ಜನಾರ್ದನ ರೆಡ್ಡಿ ಪತ್ನಿ ಲಕ್ಷ್ಮೀ ಅರುಣಾ ಚಾಲನೆ ನೀಡಿದ್ರು. ಬೈಕ್ ರ್ಯಾಲಿಯಲ್ಲಿ 2000 ಕ್ಕೂ ಹೆಚ್ಚು  ಕಾರ್ಯಕರ್ತರು ಭಾಗಿಯಾಗೋ ಮೂಲಕ ಪಕ್ಷ ಬಾವುಟವನ್ನು ಹಿಡಿದು ಕುಣಿದಾಡಿದ್ರು. ಆಕ್ಟೀವಾ ಗಾಡಿ ಚಾಲನೆ ಮಾಡೋ ಮೂಲಕ ರೆಡ್ಡಿ ಪತ್ನಿ ಲಕ್ಷ್ಮೀ ಅರುಣಾ ಹುಮ್ಮಸ್ಸು ತುಂಬಿದ್ರು. ಇನ್ನೂ ಜನಾರ್ದನ ರೆಡ್ಡಿ ಕಟೌಟ್ ಗೆ ಹಾಲಿನ ಅಭಿಷೇಕ ಮಾಡಿ ಅಭಿಮಾನಿಗಳು ಸಂಭ್ರಮಿಸಿದ್ರು. ನಗರ ಮತ್ತು ಗ್ರಾಮೀಣ ಕ್ಷೇತ್ರ ಕೌಲ ಬಜಾರ್ ವ್ಯಾಪ್ತಿಯ ಹತ್ತು. ಕೀ ಮೀ ಬೈಕ್ ರ್ಯಾಲಿ ನಡೆಯಿತು. ಇನ್ನೂ ವೇದಿಕೆಯಲ್ಲಿ ವಿವಿಧ ಮಠಾಧೀಶರು ಸೇರಿದಂತೆ ಮುಸ್ಲಿಂ ಮತ್ತು ಕ್ರೈಸ್ತ ಧರ್ಮ ಗುರುಗಳು ಉಪಸ್ಥಿತರಿದ್ರು. ಕಾರ್ಯಕ್ರಮದ ಕೊನೆಯಲ್ಲಿ ಐವತ್ತಾರು ಕೆ.ಜಿಯ ಕತ್ತರಿಸಲಾಯಿತು.

ಅವೈಜ್ಞಾನಿಕ ಮೀನುಗಾರಿಕೆ ವಿರುದ್ಧ ಬೀದಿಗಿಳಿದ ಮೀನುಗಾರರು: ಕಠಿಣ ಕ್ರಮ ಕೈಗೊಳ್ಳಲು ಒತ್ತಾಯ

ವಿಡಿಯೋ ಮೂಲಕ ಸಂದೇಶ ನೀಡಿದ ಜನಾರ್ದನ ರೆಡ್ಡಿ: ಕಾರ್ಯಕ್ರಮದ ಕೊನೆಯಲ್ಲಿ ವಿಡಿಯೋ ಸಂದೇಶವನ್ನು ನೀಡಿದ ಜನಾರ್ದನ ರೆಡ್ಡಿ ತಾವಿಲ್ಲಿದ ವೇಳೆಯಲ್ಲಿಯೂ ತಮ್ಮ ಕುಟುಂಬದ ಜೊತೆ ಬಳ್ಳಾರಿ ಜನರು ಇರೋದಕ್ಕೆ ಧನ್ಯವಾದಗಳನ್ನು ಸಲ್ಲಿಸಿದ್ರು. ಒಂದು ಕಡೆ ಸಂತೋಷ ಮತ್ತೊಂದು ಕಡೆ ದುಖಃ ಇದೆ. ನಾನಿಲ್ಲದೇ ನನ್ನ ಹೆಂಡ್ತಿ‌ ಮಗಳು ನನ್ನ ಹುಟ್ಟು ಹಬ್ಬ ಅಚರಣೆ ಮಾಡಿದ್ದಾರೆ. ಹೆಂಡತಿ ಮಗಳ ಜೊತೆ ನಾವಿದ್ದೇವೆ ಎನ್ನುವ  ಬಳ್ಳಾರಿ ಜನರ ಋಣ ತಿರಿಸಲಾಗಲ್ಲ ಎಂದ್ರು. ಅಲ್ಲದೇ ನನಗೆ ಇರೋ ಸೌಕರ್ಯಕ್ಕೆ ಲಂಡನ್‌ನಲ್ಲಿ‌ ಇರಬಹುದಾಗಿತ್ತು. ಆದ್ರೇ ನನಗೆ ಬಳ್ಳಾರಿಯಲ್ಲಿ ಇದ್ರೇ ಮಾತ್ರ ನೆಮ್ಮದಿ ಸಿಕ್ತದೆ. ಇವತ್ತಲ್ಲ ನಮ್ಮ ಕನಸು ಈಡೇರುತ್ತದೆ. ಬಳ್ಳಾರಿ ಅಭಿವೃದ್ಧಿ ಮಾಡೋಣ ಹಿಂದೆ ಹೆಜ್ಜೆ ಹಾಕೋ ಪ್ರಶ್ನೆಯೇ ಇಲ್ಲ ಎಂದ್ರು ಅಲ್ಲದೇ  ತಾವು ಗಂಗಾವತಿಯಿಂದಲೇ ಸ್ಪರ್ಧಿಸೋದಾಗಿ ಹೇಳಿದ ಅವರು ಮುಂಬರುವ ಚುನಾವಣೆಯಲ್ಲಿ ಯಾವುದೇ ಸರ್ಕಾರ ಬಂದ್ರು ತಮ್ಮ ಸಹಕಾರವಿಲ್ಲದೇ ಅಧಿಕಾರ ನಡೆಸಲು ಸಾಧ್ಯವಿಲ್ಲವೆಂದು ಹೇಳಿದರು.

click me!