
ವರದಿ - ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಜ.11): ರಾಜ್ಯ ಸರ್ಕಾರ ಅಭಿವೃದ್ಧಿ ವಿಷಯದಲ್ಲಿ ಸಂಪೂರ್ಣ ವೈಫಲ್ಯ ಆಗಿದೆ. ಸರ್ಕಾರ ಜನತೆಗೆ ಏರೋಪ್ಲೇನ್ ತೋರಿಸುತ್ತಿದೆ. ಬಿಜೆಪಿ ಪಕ್ಷ ಅಲ್ಲ ಇದು, ಬಿಜಿನೆಸ್ ಜನತಾ ಪಾರ್ಟಿ ಆಗಿದೆ. ರಸ್ತೆ, ಚರಂಡಿ ಸೇರಿದಂತೆ ವಿವಿಧ ಕೆಲಸದಲ್ಲಿ ಹಣ ಹೊಡೆಯುತ್ತಿದ್ದಾರೆ. ಜಿಹಾದ್ ಹೆಸರಿನಲ್ಲಿ ಕಟೀಲ್ ರಾಜಕೀಯ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದರು.
ವಿಜಯಪುರದಲ್ಲಿ ನಡೆದ ಸುದ್ದೊಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಜವಾದ ದೇವರು ಅಂಬೇಡ್ಕರ್. ಅವರು ರಚಿಸಿದ ಸಂವಿಧಾನಕ್ಕೆ ನಾನು ಮೊದಲು ಗೌರವ ಕೊಡುತ್ತೇನೆ. ಪಾರ್ಲಿಮೆಂಟ್ ನಲ್ಲಿ ಹೆಜ್ಜೆ ಇಡೋಕ್ಕೆ ಕಟೀಲ್‌ಗೆ ಯೋಗ್ಯತೆ ಇಲ್ಲ. ಅವರಿಗೆ ನಾಚಿಕೆ ಆಗಬೇಕು. ಹಿಂದುತ್ವದಲ್ಲಿ ಮಾತ್ರ ಕಟೀಲ್ ಹೋಗುತ್ತಾರೆ. ಮುಸ್ಲಿಂರನ್ನು ದೂರು ಇಡುವ ಕೆಲಸ ಆಗುತ್ತಿದೆ. ಈ ಸಲ ಬದಲಾವಣೆ ಕಾಂಗ್ರೆಸ್ ಪರ ಬರುತ್ತದೆ. ಬಿಜೆಪಿ ಹಿಂದುತ್ವ ಅಜೆಂಡಾ ನೆಲ ಕಚ್ಚಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ್ ಕಟೀಲ್ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್, ಚುನಾವಣೆಗೆ ಕಾಂಗ್ರೆಸ್ ಭರವಸೆ!
ನಾನು ಸಿನೆಮಾ ತೆಗೆಯುತ್ತಿಲ್ಲ..!
ಮುಂಬರುವ ವಿಧಾನಸಭೆ ಚುನಾವಣೆ ಯಲ್ಲಿ ಸೊರಬ ಕ್ಷೇತ್ರದಿಂದ ಕುಮಾರ ಬಂಗಾರಪ್ಪ ಎದುರು ಮಧು ಬಂಗಾರಪ್ಪ ಸ್ಪರ್ಧೆ ವಿಚಾರವಾಗಿ, ಇದು ಮತ್ತೊಮ್ಮೆ ಸಹೋದರರ ಸವಾಲು ಎನ್ನಬಹುದೇ ಎನ್ನುವ ಪ್ರಶ್ನೆಗೆ ಗರಂ ಮಧು ಬಂಗಾರಪ್ಪ ಗರಂ ಆದರು. ಸಹೋದರರ ಸವಾಲು ಎನ್ನಲು ನಾನು ಸಿನೆಮಾ ತೆಗೆಯುತ್ತಿಲ್ಲ. ಅದಯ ನಮ್ಮ ಸಂಸಾರಿಕ ವಿಚಾರ. ನಮ್ಮ ತಂದೆ ಬಂಗಾರಪ್ಪ ನಮ್ಮ ಮನೆ ಪಂಚಾಯಿತಿ ಈಗಾಗಲೇ ಮಾಡಿ ಬಿಟ್ಟಿದ್ದಾರೆ. ಪದೇ ಪದೇ ಅದೇ ಹೇಳುವದು ಸರಿಯಲ್ಲ. ನಾನು ಕಾಂಗ್ರೆಸ್ ಪಕ್ಷದಿಂದ ಅರ್ಜಿ ಹಾಕಿದ್ದೇನೆ, ಟಿಕೇಟ್ ಸಿಗುವ ವಿಶ್ವಾಸವಿದೆ. ಅದೇ ರೀತಿ ಅವರು ಅವರ ಪಕ್ಷದ ಪರ ಇರುತ್ತಾರೆ, ಅವರವರ ವಿಷಯ ಬಿಟ್ಟು ಬಿಡಿ ಎಂದರು.
ಬಿಜೆಪಿ ದ್ವೇಷ ರಾಜಕಾರಣ ಮಾಡುತ್ತಿದೆ: ಹಿಂದು ಕಾರ್ಯಕರ್ತ ಪರೇಶ ಮೇಸ್ತಾ ಹತ್ಯೆಯನ್ನು ಬಿಜೆಪಿ 2018ರ ಚುನಾವಣೆಯಲ್ಲಿ ಅಸ್ತ್ರವನ್ನಾಗಿ ಬಳಸಿಕೊಂಡಿತ್ತು. ಇದರ ಪರಿಣಾಮ ಮಂಗಳೂರು, ಶಿವಮೊಗ್ಗ, ಉಡುಪಿ, ಕಾರವಾರದಲ್ಲಿ ಕೋಮು ಗಲಭೆಗಳಾದವು. ಹಿಂದು- ಮುಸ್ಲಿಂ ನಡುವೆ ಧ್ವೇಷ ಹುಟ್ಟುವಂತಾಯಿತು. ಅದನ್ನು ಯಾರು ಮಾಡಿದರು? ಈಗ ಮತ್ತೆ ಕಾರಣ ಹುಡುಕುತ್ತಿದ್ದಾರೆ. ಆದರೆ ಈ ಬಾರಿ ಜನರಿಗೆ ಗೊತ್ತಿದೆ ಭಾವನಾತ್ಮಕ ವಿಷಯದಿಂದ ಹೊಟ್ಟೆ ತುಂಬುವದಿಲ್ಲ ಎಂದು ಅವರಿಗೆ ಗೊತ್ತಿದೆ. ಮತವನ್ನು ಜನರು ಮೂರ್ಖರಲ್ಲ. ಆದರೆ, ಬಿಜೆಪಿ ನಾಯಕರು ಮುಂದಿನ ಚುನಾವಣೆಗೆ ಕೋಮು ದ್ವೇಷ ಹುಟ್ಟಿಸುವಂತಹ ಕಾರಣ ಹುಡುಕುತ್ತಿದ್ದಾರೆ. ಆದರೆ ಬಿಜೆಪಿಯವರು ಏನೇ ಬಾಲಬಿಚ್ಚಿದರೂ ಅದು ಯಶಸ್ವಿಯಾಗುವದಿಲ್ಲ ಎಂದರು.
ಅಭಿವೃದ್ಧಿಯಿಂದ ವಿಜಯಪುರದ ಚಿತ್ರಣವೇ ಬದಲು: ಶಾಸಕ ಯತ್ನಾಳ
ಸಾವಿನ ಮನೆಯಲ್ಲಿ ಕುಳಿತು ಬಿಜೆಪಿ ಅಧಿಕಾರ:
ಇಂಥ ಭಾವನಾತ್ಮಕ ವಿಷಯ ವನ್ನು ಮುಂದಿಟ್ಟುಕೊಂಡು ಬಿಜೆಪಿ ಚುನಾವಣೆ ಎದುರಿಸುವುದಾದರೆ ಕಾಂಗ್ರೆಸ್ ಸಹ ಇದಕ್ಕೆ ತಕ್ಕ ಕೌಂಟರ್ ನೀಡುತ್ತಲೇ ಇದೆ. ಅಂದು ಹಿಂದು ಕಾರ್ಯಕರ್ತ ಪರೇಶ್ ಮಿಸ್ತ್ರಾ ಹತ್ಯೆಯನ್ನು ಸಿಬಿಐಗೆ ವಹಿಸಿದ್ದಾಗ, ಅದನ್ನು ಸಿದ್ದರಾಮಯ್ಯ ತಿದ್ದಿದ್ದಾರೆ ಎಂದು ಹೇಳಿದರು. ಆದರೆ ಆವಾಗ ಇದೇ ಬಿಜೆಪಿ ಸರ್ಕಾರವಿತ್ತು. ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪ ಅವರಿಗೆ 'ಬಿ' ರಿಪೋರ್ಟ್ ನೀಡಿತು ಎಂದರು. ದೊಡ್ಡ ಸಂಸ್ಥೆಯಾಗಿರುವ ಸಿಬಿಐ ನೀಡಿದ ವರದಿಯನ್ನು ಅನುಮಾನದಿಂದ ಬಿಜೆಪಿ ನೋಡಿತು. ಈ ಸರ್ಕಾರ ಬಂದಿದ್ದು ಜನರ ಸಹಕಾರ ದಿಂದಲ್ಲ, ಸಾವಿನ ಮನೆಯಲ್ಲಿ ಕುಳಿತು ಅಧಿಕಾರ ನಡೆಸಿದ್ದಾರೆ. ಈಗ ನಿತ್ಯ ಶೇ.40, ಶೇ.30 ಪರ್ಸೆಂಟ್ , ಸ್ಯಾಂಟ್ರೋ ರವಿ ಪ್ರಕರಣ ಬೆಳಕಿಗೆ ಬರಲು ಅವರು ಅಧಿಕಾರಕ್ಕೆ ಬಂದಿದ್ದು, ಬಿಜೆಪಿ ಜನರ ವಿಶ್ವಾಸದಿಂದಲ್ಲ ಎಂದು ತೋರಿಸುತ್ತದೆ ಎಂದರು.
ಜಿಲ್ಲಾವಾರು ಪ್ರಣಾಳಿಕೆ ಬಿಡುಗಡೆ..!
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಪರವಾಗಿ ರಾಜ್ಯಕ್ಕೆ ಒಂದು ಪ್ರನಾಳಿಕೆ ತಯಾರಿಸಲಾಗುತ್ತಿದೆ. ನಂತರ ಪ್ರತಿ ಜಿಲ್ಲಾವಾರು ಪ್ರತ್ಯೇಕ ಪ್ರನಾಳಿಕೆಯನ್ನು ತಯಾರಿ ನಡೆಸಲಾಗುತ್ತಿದೆ ಎಂದರು. ಒಂದು ಜಿಲ್ಲೆಯಲ್ಲಿರುವ ಸಮಸ್ಯೆ ಬೇರೆ ಜಿಲ್ಲೆಯಲ್ಲಿ ಇಲ್ಲ, ಹೀಗಾಗಿ ಜಿಲ್ಲಾವಾರು ಪ್ರಣಾಳಿಕೆಗೆ ಆದ್ಯತೆ ನೀಡಲಾಗಿದೆ. ಆಯಾ ಸ್ಥಳೀಯ ಮುಖಂಡರ ನೇತ್ವತೃದಲ್ಲಿ ಚಿಂತನ ಮಂಥನ ನಡೆಸಿ ಪ್ರಣಾಳಿಕೆ ತಯಾರಿಸುವುದಾಗಿ ತಿಳಿಸಿದರು. ಬಿಜೆಪಿಯವರ ತರ 300- 400 ಭರವಸೆಯ ಪ್ರಣಾಳಿಕೆ ತಯಾರಿಸಿ ಬುರುಡೆ ಬಿಟ್ಟುವರ ರೀತಿ ಅದರಲ್ಲಿ 10 ಆಶ್ವಾಸನೆ ಈಡೇರಿಸದೇ ಇರಲು ಆಗುವದಿಲ್ಲ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.