ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಲ್ಲ ರೀತಿಯಿಂದಲೂ ಫೇಲ್ ಆದ ಮುಖ್ಯಮಂತ್ರಿ. ಜನರಿಂದ ತಿರಸ್ಕೃತರಾಗಿದ್ದಾರೆ. ಅವರ ಮಾತನ್ನ ನಾವು ಸಿರೀಯೆಸ್ ತಗೆದುಕೊಳ್ಳುವುದಿಲ್ಲ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಹೇಳಿದರು.
ರಾಯಚೂರು (ಜೂ.6) : ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಲ್ಲ ರೀತಿಯಿಂದಲೂ ಫೇಲ್ ಆದ ಮುಖ್ಯಮಂತ್ರಿ. ಜನರಿಂದ ತಿರಸ್ಕೃತರಾಗಿದ್ದಾರೆ. ಅವರ ಮಾತನ್ನ ನಾವು ಸಿರೀಯೆಸ್ ತಗೆದುಕೊಳ್ಳುವುದಿಲ್ಲ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಹೇಳಿದರು.
ಅತಿ ಶೀಘ್ರದಲ್ಲಿ ಕರ್ನಾಟಕದಲ್ಲಿ ಎಮೆರ್ಜೆನ್ಸಿ ಬರುತ್ತದೆ ಎಂಬ ಬೊಮ್ಮಾಯಿ ಹೇಳಿಕೆ ಪ್ರಸ್ತಾಪಿಸಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಸವರಾಜ ಬೊಮ್ಮಾಯಿ ಜನಪರ ಆಡಳಿತ ನೀಡುವಲ್ಲಿ ವಿಫಲರಾದವರು. ಹಾಗಾಗಿ ರಾಜ್ಯದ ಜನರಿಂದ ಅವರು ತಿರಸ್ಕಾರವಾಗಿದ್ದ ಮುಖ್ಯಮಂತ್ರಿ ಅಂಥವರ ಮಾತುಗಳನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದರು.
ಕೊನೆಗೂ ರಾಯಚೂರಿಗೆ ಒಲಿದ ಸಚಿವ ಸ್ಥಾನ; ಅಭಿಮಾನಿಗಳ ಸಂಭ್ರಮಾಚರಣೆ
ನಮ್ಮ ಕೆಲಸ ನಾವು ಜವಾಬ್ದಾರಿಯಿಂದ ಮಾಡಬೇಕು, ಅದನ್ನ ಮಾಡುತ್ತೇವೆ. ಅವರು ವಿರೋಧಪಕ್ಷದವರಾಗಿ ನಮ್ಮನ್ನು ಎಚ್ಚರಿಸುವ ಕೆಲಸ ಮಾಡಲಿ. ಕಾಂಗ್ರೆಸ್ ಪಕ್ಷಕ್ಕೆ ಆಡಳಿತ ಮಾಡುವುದು ಹೊಸದೇನೂ ಅಲ್ಲ. ಕೇಂದ್ರದಲ್ಲಿ ಅತೀ ಹೆಚ್ಚು ಕಾಲ ಕಾಂಗ್ರೆಸ್ ಆಡಳಿತ ನಡೆಸಿದೆ. ಇಡೀ ದೇಶದಲ್ಲಿ ಡ್ಯಾಂಗಳು, ನೀರಾವರಿ, ಬಿಲ್ಡಿಂಗ್ಸ್, ರೈಲ್ವೆ, ಏರ್ ಪೋರ್ಟ್ಸ್ ಎಲ್ಲವೂ ಕಾಂಗ್ರೆಸ್ ಅವಧಿಯಲ್ಲಿಯೇ ಆಗಿವೆ. ಬಿಜೆಪಿ ಬಂದು 9 ವರ್ಷದಲ್ಲಿ ಏನು ಮಾಡಿಲ್ಲ. ಆಸ್ಪತ್ರೆ, ಶಿಕ್ಷಣ, ಐಐಟಿ, ಏಮ್ಸ್ ದೇಶದಲ್ಲಿ ದೊಡ್ಡ ಸಂಸ್ಥೆಗಳು ಮಾಡಿದ್ದು ಕಾಂಗ್ರೆಸ್ ಪಕ್ಷವೇ ಹೊರತು ಬಿಜೆಪಿ ಅಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ರಾಯಚೂರು: ಜನರಿಗೆ ಶುದ್ಧ ಕುಡಿಯುವ ನೀರು ಸರಬರಾಜು ಸವಾಲು
ರಾಜ್ಯದಲ್ಲಿಅನೇಕ ಯೋಜನೆಗಳು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆಗಿವೆ. ದೇವರಾಜ್ ಅರಸ್ , ಎಸ್.ಎಂ.ಕೃಷ್ಣ ಮತ್ತು ಸಿದ್ದರಾಮಯ್ಯ ಕಾಲದಲ್ಲಿ ಅನೇಕ ಯೋಜನೆಗಳು ಜಾರಿಯಾಗಿವೆ. ಧರ್ಮ, ಜಾತಿ ಮೀರಿ ಎಲ್ಲರನ್ನೂ ಒಟ್ಟುಗೂಡಿಸಿ ಅಭಿವೃದ್ಧಿ ಮಾಡಿದ್ದು ಕಾಂಗ್ರೆಸ್. ಹೀಗಾಗಿ ಯಾರು ಏನೇ ಹೇಳಿದರೂ ಸಹ ನಾವು ತಲೆಕೆಡಿಸಿಕೊಳ್ಳುವುದಿಲ್ಲ.ಜನಪರವಾದ ಸಂದೇಶ ನೀಡಿದರೆ ನಾವು ಅದನ್ನು ಕಾರ್ಯರೂಪಕ್ಕೆ ತರುತ್ತೇವೆ. ಅವರು ರಾಜಕೀಯ ಮಾಡಿದರೆ ರಾಜಕೀಯವಾಗಿ ಉತ್ತರ ಕೊಡುವ ಶಕ್ತಿ ಕಾಂಗ್ರೆಸ್ ಗೆ ಇದೆ ಎಂದ ಸಚಿವ ಬೋಸರಾಜು.
ಶಿಕ್ಷಕರ ನೇಮಕಾತಿ ವಿಳಂಬ: ನಿಂತ ಜಾಗದಲ್ಲೇ ಪರಿಹರಿಸಿದ ಸಚಿವ
ಕಲ್ಯಾಣ ಕರ್ನಾಟಕ ಭಾಗದ ಜಿಪಿಟಿಆರ್ ಶಿಕ್ಷಕರ ನೇಮಕಾತಿ ವಿಳಂಬ ಹಿನ್ನೆಲೆ ನೇಮಕಗೊಂಡ ಅಭ್ಯರ್ಥಿಗಳು ಸಚಿವ ಎನ್‌ಎಸ್ ಬೋಸರಾಜು ಅವರನ್ನು ಭೇಟಿ ಮಾಡಿದರು.
ಜಿಲ್ಲೆಗೆ ಆಗಮಿಸಿರುವ ಸಚಿವ ಎನ್ಎಸ್ ಬೋಸರಾಜುರನ್ನು ಭೇಟಿ ಮಾಡಿ ಕೂಡಲೇ ನೇಮಕಾತಿ ಪೂರ್ಣಗೊಳಿಸುವಂತೆ ಮನವಿ ಮಾಡಿದರು. ಅಭ್ಯರ್ಥಿಗಳ ಮನವಿಗೆ ಸ್ಪಂದಿಸಿದ ಸಚಿವರು, ಈ ಬಗ್ಗೆ ರಾಯಚೂರು ಜಿ.ಪಂ.ಸಭೆಯಲ್ಲಿ ಡಿಡಿಪಿಐನಿಂದ ಮಾಹಿತಿ ಪಡೆದರು. ಸಚಿವರು ಮಾಹಿತಿ ಪಡೆದ ಬೆನ್ನಲ್ಲೇ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಂದ ಆದೇಶ ಹೊರಡಿಸಲಾಗಿದೆ. ಆಯ್ಕೆಗೊಂಡ ಅಭ್ಯರ್ಥಿಗಳ ಮೂಲ ದಾಖಲೆಗಳನ್ನು ಪರಿಶೀಲನೆಗೆ ತರುವಂತೆ ಪತ್ರ ಕಳಿಸಲಾಗಿದೆ.