
ಬೆಂಗಳೂರು (ಅ.19): ಕರ್ನಾಟಕದ ಮೂರು ಕ್ಷೇತ್ರಗಳ ಉಪಚುನಾವಣೆಯ ಪೈಕಿ ಸಂಡೂರು ಕ್ಷೇತ್ರಕ್ಕೆ ಎಸ್‌ಟಿ ಸಮುದಾಯದ ಬಂಗಾರು ಹನುಮಂತುಗೆ ಟಿಕೆಟ್ ನೀಡಿದೆ. ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನವರಾದ ಹನುಮಂತ್ ಸ್ಯಾಂಡಲ್‌ವುಡ್‌ನ ನಟರಾಗಿಯೂ ಮಿಂಚಿದ್ದರು. ಕನ್ನಡ ಸಿನಿಮಾ ಇಂಡಸ್ಟ್ರಿಯ ಅತ್ಯಂತ ಎತ್ತರದ ನಟ ಎನ್ನುವ ಕೀರ್ತಿಗೂ ಪಾತ್ರರಾಗಿದ್ದ ಬಂಗಾರು ಹನುಮಂತು ಅವರ ಎತ್ತರ 6 ಅಡಿ 4 ಇಂಚು. ಓಂ ಸಾಯಿ ಪ್ರಕಾಶ್ ಅವರ 98ನೇ ಚಿತ್ರದಲ್ಲಿ ನಾಯಕರಾಗಿ ಇವರು ನಡಿಸಿದ್ದರು.ಸಾಯಿ ಪ್ರಕಾಶ್ ನಿರ್ದೇಶನದ ಮನ ಮೆಚ್ಚಿದ ಬಂಗಾರು ಸಿನಿಮಾದ ಮೂಲಕ ಅವರು ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ್ದರು. ಆದರೆ, ಸಿನಿಮಾ ರಂಗದಲ್ಲಿ ಅವರಿಗೆ ಸಿಗದ ಅದೃಷ್ಟ ರಾಜಕೀಯದಲ್ಲಿ ಸಿಕ್ಕಿತ್ತು. ಶ್ರೀನಗರ ಕಿಟ್ಟಿ ಮತ್ತು ಸೌಂದರ್ಯ ಜಯಮಾಲಾ ಪ್ರಮುಖ ಜೋಡಿಯಾಗಿದ್ದ ಪಾರು ವೈಫ್ ಆಫ್ ದೇವದಾಸ್ ಚಿತ್ರದ ಶೂಟಿಂಗ್ ಸಮಯದಲ್ಲಿ ನಟನನ್ನು ಭೇಟಿಯಾದಾಗ ಹನುಮಂತ್ ಅವರ ಕನ್ನಡ ಚಿತ್ರಗಳ ಪ್ರಯತ್ನ ಆರಂಭವಾಗಿತ್ತು.
“ನಾನು ಚಿತ್ರದ ನಿರ್ಮಾಪಕರಲ್ಲಿ ಒಬ್ಬನಾಗಿದ್ದೆ, ಆದರೆ ನಾಯಕನ ವರ್ತನೆ ನನಗೆ ತುಂಬಾ ಮುಜುಗರ ತಂದಿತು. ಅವರು ನನ್ನನ್ನು ತುಂಬಾ ಕೆಟ್ಟದಾಗಿ ನಡೆಸಿಕೊಂಡರು ಮತ್ತು ನನ್ನೊಂದಿಗೆ ಸರಿಯಾಗಿ ಮಾತನಾಡುವ ಸೌಜನ್ಯವನ್ನೂ ತೋರಿರಲಿಲ್ಲ.ಆಗ ನನ್ನ ಸಾಮರ್ಥ್ಯ ತೋರುತ್ತೇನೆ ಎಂದು ನಿರ್ಧಾರ ಮಾಡಿದ್ದೆ' ಎಂದು ಬಂಗಾರು ಹನುಮಂತು ಮನ ಮೆಚ್ಚಿದ ಬಂಗಾರು ಸಿನಿಮಾದ ಶೂಟಿಂಗ್ ವೇಳೆ ಹೇಳಿದ್ದರು.
ಕರ್ನಾಟಕ ಉಪ ಚುನಾವಣೆಯ 2 ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಫೈನಲ್, ಪಟ್ಟಿ ಬಿಡುಗಡೆ!
ಹನುಮಂತು ಅವರು ಮನ ಮೆಚ್ಚಿದ ಬಂಗಾರು ಚಿತ್ರದಲ್ಲಿ ನಟಿಸುತ್ತಿರುವ ವಿಷಯವನ್ನು ಬಹುತಕ ರಹಸ್ಯವಾಗಿಟ್ಟಿದ್ದರು. ಚಿತ್ರದ ಶೂಟಿಂಗ್ ಮುಗಿದ ನಂತರವಷ್ಟೇ ಪತ್ನಿ ಮತ್ತು ಪೋಷಕರಿಗೆ ತಿಳಿಸಿದ್ದರು.ಬಂಗಾರು ಹನುಮಂತು ಈ ಚಿತ್ರದ ಬಳಿಕ ಆರ್ಯಪುತ್ರ ಅನ್ನೋ ಸಿನಿಮಾದಲ್ಲೂ ನಟಿಸಿದ್ದರು. ಆದರೆ, ಸಿನಿಮಾ ರಿಲೀಸ್ ಆಗಿರುವ ಬಗ್ಗೆ ಸುದ್ದಿಯಾಗಲಿಲ್ಲ. ಚಿತ್ರಗಳಲ್ಲಿ ರೋಜಾ, ರವಿಶಂಕರ್, ಶೋಭರಾಜ್ ಮತ್ತು ಸಾಧು ಕೋಕಿಲ ಕೂಡ ನಟಿಸಿದ್ದರು.
ಸಿಎಂ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ: ಬಿಜೆಪಿ ವಿರುದ್ಧ ಹರಿಹಾಯ್ದ ಸಚಿವ ಮಂಕಾಳು ವೈದ್ಯ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.