
ಕಾರವಾರ(ಅ.19): ಎಲ್ಲೆಲ್ಲಿ ಬಿಜೆಪಿಯವರಿಗೆ ರಾಜಕಾರಣ ಮಾಡಲಾಗಲ್ಲ, ಅಲ್ಲಿ ಇಂತಹದನ್ನೆಲ್ಲಾ ಮಾಡೋದು. ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ, ಯಾವುದೇ ತಪ್ಪು ಮಾಡಿಲ್ಲ ಎಂದು ಮೀನುಗಾರಿಕಾ ಸಚಿವ ಮಂಕಾಳು ವೈದ್ಯ ತಿಳಿಸಿದ್ದಾರೆ.
ಇಂದು(ಶನಿವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಮಂಕಾಳು ವೈದ್ಯ ಅವರು, ನಮ್ಮ ಜಿಲ್ಲೆಯಲ್ಲಿ ಪರೇಶ್ ಮೆಸ್ತಾ ಕೊಲೆ ಅಂತ ಹೇಳಿದ್ರು. ಪರೇಶ್ ಮೆಸ್ತಾ ಪ್ರಕರಣ ಮುಂದಿಟ್ಟುಕೊಂಡು ದೊಡ್ಡ ಗಲಾಟೆ ಮಾಡಿದ್ರು. ಈ ಪ್ರಕರಣವನ್ನು ಸಿಬಿಐಗೆ ಕೊಡ್ಲೇಬೇಕೆಂದು ಹೇಳಿದ್ರು. ಒತ್ತಾಯ ಮಾಡಿದಕ್ಕೆ ಸಿಬಿಐಗೆ ವಹಿಸಿ, ತನಿಖೆ ಕೂಡಾ ಆಯ್ತು. ತನಿಖೆಯಲ್ಲಿ ಸಹಜ ಸಾವು ಅಂತ ವರದಿ ಬಂದಿದೆ ಎಂದು ಹೇಳಿದ್ದಾರೆ.
ಕರ್ನಾಟಕದ ಇತಿಹಾಸದಲ್ಲೇ ಯಾರಿಗೂ 10 ಲಕ್ಷ ಪರಿಹಾರ ಕೊಟ್ಟಿಲ್ಲ: ಎಚ್‌ಡಿಕೆ ವಿರುದ್ಧ ಸಚಿವ ಮಂಕಾಳು ವೈದ್ಯ ಗರಂ..!
ಈಗ್ಲೂ ಮುಡಾದಲ್ಲಿ ಏನೋ ಆಗಿದೆ ಅಂತಾ ಹೇಳ್ತಾ ಇದ್ದಾರೆ. ಪರೇಶ್ ಮೆಸ್ತಾ ಪ್ರಕರಣಕ್ಕೂ ಇದಕ್ಕೂ ಯಾವುದೇ ವ್ಯತ್ಯಾಸ ಇಲ್ಲ. ಮುಡಾ ಆರೋಪದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಕ್ಲೀನ್ ಚಿಟ್ ಸಿಗುತ್ತದೆ ಎಂದು ಸಚಿವ ಮಂಕಾಳು ವೈದ್ಯ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.