ಸಿಎಂ ಸ್ಥಾನದ ಆಮಿಷ ತೋರಿದ್ರೂ ಬಿಜೆಪಿ ತೊರೆಯಲ್ಲ: ಮಾಲೀಕಯ್ಯ ಗುತ್ತೇದಾರ್‌

By Kannadaprabha News  |  First Published Mar 24, 2023, 9:11 AM IST

ಮಾಲೀಕಯ್ಯ ಗುತ್ತೆದಾರ್‌ ಬೆಂಕಿ ಇದ್ದ ಹಾಗೆ, ಪಕ್ಷಕ್ಕ ಬನ್ನಿರಿ ಅಂತ ನನ್ನನ್ನ ಸಂಪರ್ಕ ಮಾಡುವ ಧೈರ್ಯ ಕಾಂಗ್ರೆಸ್‌ನವರಿಗೆ ಇಲ್ಲ, ಯಾಕಂದ್ರ ನಾನು ಚಿಚಂನ್‌ಸೂರ ಅವರಹಂಗ ಅಲ್ಲ, ತತ್ವ, ಸಿದ್ಧಾಂತಕ್ಕ ಬದ್ಧನಾಗಿರೋ ಮನುಷ್ಯ. ಮಾತಾಡಿದ್ರ ಮುಗಿತು, ಮೋದಿಜಿಯವರಿಂದಾಗಿ ನಾನು ಬಿಜೆಪಿಯಲ್ಲಿರುವೆ.


ಕಲಬುರಗಿ (ಮಾ.24): ಮಾಲೀಕಯ್ಯ ಗುತ್ತೆದಾರ್‌ ಬೆಂಕಿ ಇದ್ದ ಹಾಗೆ, ಪಕ್ಷಕ್ಕ ಬನ್ನಿರಿ ಅಂತ ನನ್ನನ್ನ ಸಂಪರ್ಕ ಮಾಡುವ ಧೈರ್ಯ ಕಾಂಗ್ರೆಸ್‌ನವರಿಗೆ ಇಲ್ಲ, ಯಾಕಂದ್ರ ನಾನು ಚಿಚಂನ್‌ಸೂರ ಅವರಹಂಗ ಅಲ್ಲ, ತತ್ವ, ಸಿದ್ಧಾಂತಕ್ಕ ಬದ್ಧನಾಗಿರೋ ಮನುಷ್ಯ. ಮಾತಾಡಿದ್ರ ಮುಗಿತು, ಮೋದಿಜಿಯವರಿಂದಾಗಿ ನಾನು ಬಿಜೆಪಿಯಲ್ಲಿರುವೆ, ಕೊನೆಯುಸಿರು ಇರೋವರೆಗೂ ಬಿಜೆಪಿಯಲ್ಲೇ ಇರುತ್ತೇನೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ, ಮಾಜಿ ಸಚಿವ ಮಾಲೀಕಯ್ಯಾ ಗುತ್ತೇದಾರ್‌ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಮಗೆ ಕಾಂಗ್ರೆಸ್‌ನವರು ಯಾರು ಸಂಪರ್ಕ ಮಾಡಿಲ್ಲ, ಯಾವುದೇ ಕಾರಣಕ್ಕು ಬಿಜೆಪಿ ಬಿಡೋದಿಲ್ಲ, ಕೆಲವೊಂದು ಮಾಧ್ಯಮದಲ್ಲಿ ಮಾಲಿಕಯ್ಯ ಗುತ್ತೇದಾರ ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರ್ಪಡೆಯಾಗ್ತಾರೆ ಅಂತಾ ಹೇಳಿದ್ದಾರೆ. 

ಅದೇಲ್ಲ ಶುದ್ದು ಸುಳ್ಳು ನಾನು ಬಿಜೆಪಿ ಪಕ್ಷದ ಶಿಸ್ತಿನ ಸಿಪಾಯಿ. ಅಫಜಲಪುರದಲ್ಲಿ ಟಿಕೆಟ್‌ ಆಗಲಿ, ಆಗದೆ ಇರಲಿ ಬಿಜೆಪಿಯಲ್ಲೆ ಇರ್ತೆನೆ ಎಂದು ಪಷ್ಟಪಡಿಸಿದರು. ಬಿಜೆಪಿಯಿಂದ ಎಲ್ಲವನ್ನು ಪಡೆದಿರುವ ಬಾಬೂರಾವ್‌ ಚಿಂಚನ್‌ಸೂರ್‌ ಪಕ್ಷ ಬಿಡುವ ನಿರ್ಣಯ ಅವರನ್ನ ರಾಜಕೀಯವಾಗಿ ಮೂಲೆಗುಂಪಾಗಿಸಲಿದೆ, ಈ ಬೆಳವಣಿಗೆಯಿಂದ ಬಿಜೆಪಿಗೆ ಯಾವುದೇ ನಷ್ಟವಿಲ್ಲ, ನಷ್ಟಆಗೋದು ಬಾಬೂರಾವ್‌ ಅವರಿಗೆ ಎಂದರು. ಬಾಬುರಾವ್‌ ಚಿಂಚನ್ಸೂರ್‌ ಬಿಜೆಪಿ ತೊರೆದ ರೀತಿ ಸರಿಯಿಲ್ಲ. ಇದರಿಂದಾಗಿ ಚಿಂಚನ್ಸೂರ್‌ ರಾಜಕೀಯ ಭವಿಷ್ಯ ಪತನ ಆದಂತಾಗಿದೆ ಎಂದು ವ್ಯಾಖ್ಯಾನಿಸಿದ ಅವರು ತಾವು ಬಿಜೆಪಿ ತ್ಯಜಿಸಿ ಕಾಂಗ್ರೆಸ್‌ ಸೇರ್ಪಡೆ ಆಗುವುದಾಗಿ ಕೆಲವರು ವದಂತಿ ಹಬ್ಬಿಸಿದ್ದಾರೆ. 

Tap to resize

Latest Videos

undefined

ಇಂದು ಬಾದಾಮಿಗೆ ಸಿದ್ದರಾಮಯ್ಯ ಭೇಟಿ: ತೀವ್ರ ಕುತೂಹಲ

ಕಾಂಗ್ರೆಸ್‌ ಸೇರ್ಪಡೆ ಆಗುವುದಾಗಿ ಉದ್ದೇಶಪೂರ್ವಕವಾಗಿಯೇ ಹೀಗೆ ಕೆಲವರು ವದಂತಿ ಹಬ್ಬಿಸುತ್ತಿದ್ದಾರೆ. ಕಾಂಗ್ರೆಸ್‌ ಸೇರ್ಪಡೆ ಆಗುವಂತಹ ಪರಿಸ್ಥಿತಿ ತಮಗೆ ಬಂದಿಲ್ಲ ಎಂದರು. ಅಫಜಲ್ಪುರ ಕ್ಷೇತ್ರದಲ್ಲಿ ಬಿಜೆಪಿ ಅತ್ಯಂತ ಬಲಿಷ್ಠವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶ ಸದೃಢ ಸ್ಥಿತಿಯಲ್ಲಿದೆ. ಹಾಗಾಗಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ತವರು ಜಿಲ್ಲೆಯ ಎಲ್ಲ ಒಂಬತ್ತು ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲಿಸುವುದು ತಮ್ಮ ಮುಂದಿರುವ ಏಕೈಕ ಗುರಿ ಎಂದರು. ಕೊನೆಯ ಉಸಿರು ಇರುವವರೆಗೂ ಬಿಜೆಪಿಯಲ್ಲೇ ಇರುವುದಾಗಿ ಒತ್ತಿ ಹೇಳಿದ ಅವರು, ಬೇರೆ ಪಕ್ಷದವರು ಮುಖ್ಯಮಂತ್ರಿ ಮಾಡುವ ಆಮಿಷ ಒಡ್ಡಿದರೂ ತಾವು ಬಿಜೆಪಿ ತೊರೆಯುವುದಿಲ್ಲವೆಂದರು.

ಅಫಜಲ್ಪುರ ಟಿಕೆಟ್‌ ಪೈಪೋಟಿ: ಅಫಜಲ್ಪುರ ಕ್ಷೇತ್ರದಲ್ಲಿ ಸಹೋದರ ನಿತಿನ್‌ ಗುತ್ತೇದಾರ್‌ ಚುನಾವಣೆಗೆ ನಿಲ್ಲುವುದು ಬಿಡುವುದು ಅವರಿಗೆ ಬಿಟ್ಟಿದ್ದು. ಒಂದುವೇಳೆ ತಮಗೆ ಟಿಕೆಟ್‌ ಸಿಗದೆ ಅವರಿಗೆ ಸಿಕ್ಕರೂ ಅವರ ಪರವಾಗಿ ಕೆಲಸ ಮಾಡುವುದಾಗಿ ಸ್ಪಷ್ಟಪಡಿಸಿದರು. ಬಿಜೆಪಿ ರಾಜ್ಯ ಉಪಾಧ್ಯಕ್ಷನಾಗಿ ಪಕ್ಷ ಸಂಘಟಿಸಿದ್ದೇನೆ. ಕ್ಷೇತ್ರದ ಜನರೊಂದಿಗೆ ನಿರಂತರ ಸಂಪರ್ಕ ಹೊಂದಿರುವೆ. ನನಗೆ ಕೋವಿಡ್‌ ಆದಾಗ ಆರೋಗ್ಯ ಕೈಕೊಟ್ಟಿತು. ಆಗ ಕ್ಷೇತ್ರದ ಜನರ ಸಮಸ್ಯೆಗಳನ್ನು ಕೇಳಲು ಆಗಲಿಲ್ಲ. ಆಗ ಸಹೋದರ ನಿತಿನ್‌ ಗುತ್ತೇದಾರ್‌ಗೆ ಕರೆಸಿಕೊಂಡೆ. ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸು. ನಾನು ನನ್ನ ಮಕ್ಕಳನ್ನು ರಾಜಕೀಯಕ್ಕೆ ತರುವುದಿಲ್ಲ. ನೀನೇ ನನ್ನ ಉತ್ತರಾಧಿಕಾರಿ ಎಂದೆ. ಆ ರೀತಿ ಆತ ನಡೆದುಕೊಳ್ಳಲಿಲ್ಲ. ಜನರೇ ಆತನ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ಅದನ್ನೇ ನಿತಿನ್‌ ಗುತ್ತೇದಾರ್‌ ಮುಂದಿಟ್ಟುಕೊಂಡು ಬಾಲಿಶತನದ ಹೇಳಿಕೆಯನ್ನು ನೀಡುತ್ತಿದ್ದಾನೆಂದು ಸಹೋದರನಿಗೆ ಮಾತಿನಲ್ಲಿ ತಿವಿದರು.

ಗುತ್ತೇದಾರ್‌ ಕುಟುಂಬ ಜಾರಕಿಹೊಳಿ ಕುಟುಂಬವಲ್ಲ: ತಮ್ಮ ತಂದೆ ದಿ. ವೆಂಕಯ್ಯ ಗುತ್ತೇದಾರ್‌ ತಾಲೂಕಿನಲ್ಲಿ ಕಿಂಗ್‌ ಮೇಕರ್‌ ಆಗಿದ್ದರು. ಅವರೇ ಹಣಮಂತರಾವ್‌ ದೇಸಾಯಿ, ನೀಲಕಂಠರಾವ್‌ ಪಾಟೀಲ, ಡಿ.ಬಿ. ಕಲ್ಮಣಕರ್‌, ಎಂ.ವೈ. ಪಾಟೀಲ್‌ ಮುಂತಾದವರಿಗೆ ಶಾಸಕರಾಗಿ ಮಾಡಿದರು. ಶಾಸಕರಾದ ಹಣಮಂತರಾವ್‌ ದೇಸಾಯಿ ಅವರು ತಂದೆಯವರ ವಿರುದ್ಧ ಮಾತನಾಡಲಾರಂಭಿಸಿದಾಗ ಜನರು ಕುಟುಂಬದಿಂದಲೇ ಶಾಸಕರಾಗಲು ತಂದೆಯವರಿಗೆ ಒತ್ತಡ ತಂದರು. ಆಗ ನಾನು ಗುತ್ತಿಗೆದಾರನಾಗಿದ್ದೆ. ಉತ್ತಮ ಜೀವನ ಸಾಗಿಸುತ್ತಿದ್ದೆ.1985ರಲ್ಲಿ ನಾನು ಕ್ರಿಕೆಟ್‌ ಆಡುವಾಗ ನನಗೆ ಕಾಂಗ್ರೆಸ್‌ ಟಿಕೆಟ್‌ ಬಂತು. ನಾನೂ ಸಹ ತಂದೆ ಅಣತಿಯಂತೆ ಶಾಸಕನಾದೆ ಎಂದು ತಮ್ಮ ರಾಜಕೀಯ ಫ್ಲ್ಯಾಶ್‌ ಬ್ಯಾಕ್‌ ತೆರೆದಿಟ್ಟರು.

ಜೆಡಿಎಸ್‌ ಪಕ್ದದಲ್ಲಿ ನಾನು ರಾಜನಂತೆ ಇದ್ದೆ. ಆದರೂ ತಂದೆ ತೀರಿದ ಮೇಲೆ ಕಾಂಗ್ರೆಸ್‌ ಸೇರಲಿ ಒತ್ತಡ ಬಂತು. ನನಗೆ ಮನಸ್ಸಿರಲಿಲ್ಲ. ಕೊನೆಗೆ ಸಹೋದರರು ನನ್ನ ತಾಯಿ ಮೂಲಕ ಪಕ್ಷ ಸೇರುವಂತೆ ಮಾಡಿದರು. ಮುಂಬರುವ ಚುನಾವಣೆಯಲ್ಲಿ ಅಫಜಲಪುರ ಕ್ಷೇತ್ರದಲ್ಲಿ ಬಿಜೆಪಿಯಿಂದ ಯಾರಿಗೆ ಟಿಕೆಟ್‌ ಕೊಟ್ಟರೂ ಅವರ ಪರವಾಗಿ ಕೆಲಸ ಮಾಡುವೆ. ಮೋದಿ ಅವರ ನಾಯಕತ್ವದಲ್ಲಿ ಖರ್ಗೆ ತವರು ಜಿಲ್ಲೆಯಲ್ಲಿ ಎಲ್ಲ 9 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದರು. ನನಗೆ ಬಿಜೆಪಿ ಟಿಕೆಟ್‌ ಸಿಕ್ಕರೆ ಸಹೋದರ ನಿತಿನ್‌ ಗುತ್ತೇದಾರ್‌ ನನ್ನ ಪರವಾಗಿ ಕೆಲಸ ಮಾಡುತ್ತಾನೆ. 

ರಾಹುಲ್‌ ಗಾಂಧಿಗೆ ಜೈಲು ರಾಜಕೀಯ ಪ್ರೇರಿತ: ಡಿ.ಕೆ.ಶಿವಕುಮಾರ್‌

ಇಲ್ಲದೇ ಇದ್ದರೆ ಬೇರೆ ಪಕ್ಷದಿಂದ ಸ್ಪರ್ಧಿಸಿದರೂ ಬಿಜೆಪಿಗೆ ಯಾವುದೇ ರೀತಿಯಲ್ಲಿ ಹಾನಿಯಾಗುವುದಿಲ್ಲ. ನಾನು ಕ್ಷೇತ್ರದ 138 ಗ್ರಾಮಗಳಲ್ಲಿ ಸಂಚರಿಸಿರುವೆ. ಎಲ್ಲೆಡೆ ಬಿಜೆಪಿಗೆ ಬೆಂಬಲ ಇದೆ. ನಾನೂ ಸಹ ಎಲ್ಲರೂ ಬಿಜೆಪಿ ಬೆಂಬಲಿಸಿ ಮೋದಿ ಅವರ ಕೈ ಬಲಪಡಿಸಲು ಹೇಳಿರುವೆ. ಈ ಬಾರಿ ಅಫಜಲಪುರ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದರು. ನಿತಿನ್‌ ಗುತ್ತೇದಾರ್‌ ಒಬ್ಬ ಚೈಲ್ಡಿಶ್‌, ಆತ ತಾನೊಬ್ಬ ಚೈಲ್ಡಿಶ್‌ ಎಂಬುದನ್ನು ಮಾತಲ್ಲೇ ಸಾಬೀತು ಮಾಡುತ್ತಿದ್ದಾನೆ. ತನಗೆ ನಾಲಿಗೆ ಮತ್ತು ತಲೆಗೆ ಕನೆಕ್ಷನ್‌ ಇಲ್ಲ ಎನ್ನುತ್ತಿರುವುದು ಬೇಸರ ಮೂಡಿಸಿದೆ ಎಂದರು. ಜಿಪಂ ಮಾಜಿ ಸದಸ್ಯೆ ಶೋಭಾ ಬಾಣಿ, ಶಿವಕಾಂತ ಮಹಾಜನ, ವಿಜಯಕುಮಾರ್‌ ಹಲಕರ್ಟಿ ಇದ್ದರು.

click me!