ಪ್ರಜ್ವಲ್ ತಾತನಿಗೆ ತಕ್ಕ ಮೊಮ್ಮಗ ಆಗಲಿಲ್ಲ, ಅಪ್ಪನಿಗೆ ತಕ್ಕ ಮಗನಾದ: ಬಾಲಕೃಷ್ಣ ವಾಗ್ದಾಳಿ

By Kannadaprabha NewsFirst Published May 22, 2024, 6:03 AM IST
Highlights

ಈ ಹಿಂದೆ ಕುಮಾರಸ್ವಾಮಿ ಅವರೇ ನಾನು ದಾರಿತಪ್ಪಿದ್ದೆ, ಬಳಿಕ ನನ್ನ ಶ್ರೀಮತಿ ನನ್ನನ್ನು ಎಚ್ಚರಿಸಿದರು ಅಂತ ಹೇಳಿದ್ದರು. ಹಾಗೆ ನೂಲಿನಂತೆ ಸೀರೆ ಅಲ್ಲವೇ? ಪ್ರಜ್ವಲ್ ತಾತನಿಗೆ ತಕ್ಕ ಮೊಮ್ಮಗ ಆಗಿದ್ದರೆ ಇದೆಲ್ಲ ಹೊರಗೆ ಬರುತ್ತಿರಲಿಲ್ಲ. ಆದರೆ, ಆತ ತಂದೆಗೆ ತಕ್ಕ ಮಗ ಆಗಿರುವ ಕಾರಣ ಎಲ್ಲವೂ ಆಚೆ ಬರುತ್ತಿದೆ. ಪ್ರಜ್ವಲ್‌ಗೆ ಟಿಕೆಟ್ ಕೊಡದೆ ಹೋಗಿದ್ದರೆ ಇದ್ಯಾವುದೂ ಹೊರಗೆ ಬರುತ್ತಿರಲಿಲ್ಲ ಎಂದ ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ

ರಾಮನಗರ(ಮೇ. 22):  ಸಂಸದ ಪ್ರಜ್ವಲ್ ರೇವಣ್ಣ ತಾತನಿಗೆ ತಕ್ಕ ಮೊಮ್ಮಗ ಆಗಲಿಲ್ಲ. ಬದಲಿಗೆ ತಂದೆಗೆ ತಕ್ಕ ಮಗ ಆಗಿದ್ದಾನೆ. ಆದ್ದರಿಂದಲೇ ಅವರ ಬಗ್ಗೆ ಎಲ್ಲವೂ ಇದೀಗ ಚರ್ಚೆ ಆಗುತ್ತಿವೆ ಎಂದು ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ವಾಗ್ದಾಳಿ ನಡೆಸಿದರು. 

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಹಿಂದೆ ಕುಮಾರಸ್ವಾಮಿ ಅವರೇ ನಾನು ದಾರಿತಪ್ಪಿದ್ದೆ, ಬಳಿಕ ನನ್ನ ಶ್ರೀಮತಿ ನನ್ನನ್ನು ಎಚ್ಚರಿಸಿದರು ಅಂತ ಹೇಳಿದ್ದರು. ಹಾಗೆ ನೂಲಿನಂತೆ ಸೀರೆ ಅಲ್ಲವೇ? ಪ್ರಜ್ವಲ್ ತಾತನಿಗೆ ತಕ್ಕ ಮೊಮ್ಮಗ ಆಗಿದ್ದರೆ ಇದೆಲ್ಲ ಹೊರಗೆ ಬರುತ್ತಿರಲಿಲ್ಲ. ಆದರೆ, ಆತ ತಂದೆಗೆ ತಕ್ಕ ಮಗ ಆಗಿರುವ ಕಾರಣ ಎಲ್ಲವೂ ಆಚೆ ಬರುತ್ತಿದೆ. ಪ್ರಜ್ವಲ್‌ಗೆ ಟಿಕೆಟ್ ಕೊಡದೆ ಹೋಗಿದ್ದರೆ ಇದ್ಯಾವುದೂ ಹೊರಗೆ ಬರುತ್ತಿರಲಿಲ್ಲ ಎಂದರು.  ದೇವೇಗೌಡರು ಮೊಮ್ಮಗನ ವ್ಯಾಮೋಹಕ್ಕೆ ಟಿಕೆಟ್ ಕೊಟ್ಟರು. ಅದರ ಬದಲು ಒಬ್ಬ ಕಾರ್ಯಕರ್ತನಿಗೆ ಟಿಕೆಟ್ ಕೊಟ್ಟು ಗೆಲ್ಲಿಸಬಹುದಿತ್ತು ಎಂದು ಬಾಲಕೃಷ್ಣ ಹೇಳಿದರು.

Latest Videos

ಕೇಂದ್ರ ಪ್ರಜ್ವಲ್‌ ಪಾಸ್‌ಪೋರ್ಟ್‌ ರದ್ದುಪಡಿಸಲಿ: ಗೃಹ ಸಚಿವ ಪರಮೇಶ್ವರ್‌

ಪ್ರಜ್ವಲ್ ಹಗರಣಗಳು ಅಮಿತ್ ಶಾಗೆ ಮೊದಲೇ ಗೊತ್ತಿತ್ತು. ಆ ಸೀಡಿಗಳೆಲ್ಲ ಅಮಿತ್ ಶಾ ಕೈ ಸೇರಿದ್ದರಿಂದಲೇ ಅವರು ಟಿಕೆಟ್ ಬೇಡ ಅಂದಿದ್ರು. ಆದರೂ ಪ್ರಕರಣದಲ್ಲಿ ಕಾಂಗ್ರೆಸ್ ಅನ್ನು ವಿಲನ್ ಮಾಡುತ್ತಿದ್ದಾರೆ. ವಿಡಿಯೋ ಮಾಡಿದ್ದು ಜೆಡಿಎಸ್ ಸಂಸದ, ವಿಡಿಯೋ ಸಿಡಿ ಮಾಡಿ ಹಂಚಿದ್ದು ಬಿಜೆಪಿಯ ದೇವರಾಜೇಗೌಡ. ಆದರೆ ಕಾಂಗ್ರೆಸ್ ಪಕ್ಷದವರನ್ನು ವಿಲನ್ ಮಾಡುತ್ತಿದ್ದಾರೆ. ನಾವೇನು ಸೀಡಿ ಫ್ಯಾಕ್ಟರಿ ಇಟ್ಟುಕೊಂಡಿದ್ದೇವಾ? ವಿಡಿಯೋ ಮಾಡಿ ತಂದು ಕೊಡಿ ಅಂತ ಹೇಳಿದ್ವಾ? ಆರೋಪ ಮಾಡುತ್ತಿರುವ ಕುಮಾರಸ್ವಾಮಿ ಒಬ್ಬ ಮಾಜಿ ಮುಖ್ಯಮಂತ್ರಿ. ಸ್ವಲ್ಪ ಗಂಭೀರವಾಗಿ ಇರುವುದನ್ನು ಕಲಿಯಬೇಕು ಎಂದು ಕಿಡಿಕಾರಿದರು.

ಪ್ರಜ್ವಲ್ ರೇವಣ್ಣ ಕೇಸ್ ನಲ್ಲಿ 100 ಕೋಟಿ ಡೀಲ್ ನಡೆದಿದೆ ಎಂಬ ದೇವರಾಜೇಗೌಡ ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ದೇವರಾಜೇಗೌಡ ಯಾರು ಅಂತ ಎಲ್ಲರಿಗೂ ಗೊತ್ತು. ಮೊದಲು ದೇವೇಗೌಡರ ಕುಟುಂಬದ ವಿರುದ್ಧ ಮಾತನಾಡುತ್ತಿದ್ದರು. ಆಮೇಲೆ ನಮ್ಮ ವಿರುದ್ಧ ಮಾತನಾಡಲು ಶುರು ಮಾಡಿದ್ದಾನೆ. ಇದೆಲ್ಲ ಬಿಜೆಪಿಯವರು ಅವನ ಕೈಯಲ್ಲಿ ಆಟ ಆಡಿಸುತ್ತಿದ್ದಾರೆ. ಬಿಜೆಪಿಯರು ಯಾವ ರೀತಿ ಕೀ ಕೊಡುತ್ತಾರೋ ಆ ರೀತಿ ದೇವರಾಜೇಗೌಡ ಆಡುತ್ತಿದ್ದಾನೆ ಎಂದು ಹೇಳಿದರು.
ಪ್ರಜ್ವಲ್ ಪ್ರಕರಣವನ್ನು ಸಿಬಿಐಗೆ ಏಕೆ ಕೊಡಬೇಕು? ಈ‌ ಹಿಂದೆ ಬಿಡಿಸಿಸಿ ಬ್ಯಾಂಕ್ ಸಂಬಂಧಪಟ್ಟ ಕೇಸ್ ಕೊಟ್ಟು 35 ವರ್ಷಗಳೇ ಕಳೆದಿವೆ‌. ಏನು ತೀರ್ಮಾನ ಆಗಿಲ್ಲ. ಎಸ್‌ಐಟಿಯವರು ಕೇಸ್ ತನಿಖೆ ನಡೆಸುತ್ತಿದ್ದಾರೆ. ಅವರಿಗೆ ಸಮಾಧಾನ ಆಗಲಿಲ್ಲ ಅಂದರೆ ಸಿಬಿಐಗೆ ಕೊಡಬೇಕೋ ಬೇಡ್ವೋ ಅಂತ ಯೋಚನೆ ಮಾಡಬೇಕು ಎಂದರು.

'ನಾನು ರಾಜೀನಾಮೆ ಕೊಡಬೇಕೆಂಬುದು ಪಾಪ ಅವನ ಆಸೆ': ಎಚ್‌ಡಿಕೆ ವಿರುದ್ಧ ಡಿಕೆ ಶಿವಕುಮಾರ ಕಿಡಿ

ನಾವೇನೂ ಬಳೆ ತೊಟ್ಕೊಂಡು ಕೂತಿಲ್ಲ, ನಮಗೂ ಫೋಟೋ ಸುಡೋಕೆ ಬರುತ್ತೆ

ರಾಮನಗರ: ಡಿ.ಕೆ.ಶಿವಕುಮಾರ್ ವಿರುದ್ಧ ಪ್ರತಿಭಟನೆ ಮಾಡಿಸಿ ಪೋಸ್ಟರ್ ಸುಟ್ಟು ಹಾಕಿ ಚಪ್ಪಲಿಯಲ್ಲಿ ಹೊಡಿಸುತ್ತೀರಾ ಕುಮಾರಸ್ವಾಮಿಯವರೇ ? ನಾವು ತಾಳ್ಮೆಯಿಂದ ಇದ್ದೇವೆ. ಅಂದ ಮಾತ್ರಕ್ಕೆ ನಾವೇನು ಬಳೆ ತೊಟ್ಟುಕೊಂಡು ಕೂತಿಲ್ಲ. ನಮಗೂ ಫೋಟೋಗೆ ಬೆಂಕಿ ಇಟ್ಟು ಸುಡಲು ಬರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ವಿರುದ್ಧ ಮಾಗಡಿ ಶಾಸಕ ಬಾಲಕೃಷ್ಣ ವಾಗ್ದಾಳಿ ನಡೆಸಿದರು.

ಯಾರು ತಪ್ಪು ಮಾಡಿದ್ದಾರೋ ಅವರ ಫೋಟೋ ಸುಡಲಿ. ಆದರೆ ನೀವು ಡಿ.ಕೆ.ಶಿವಕುಮಾರ್ ಅವರ ಫೋಟೋ ಸುಟ್ಟಿದ್ದೀರಿ. ಸರ್ಕಲ್‌ನಲ್ಲಿ ಭಾವಚಿತ್ರಕ್ಕೆ ಚಪ್ಪಲಿ ಹೊಡೆಯುುವ ಕೆಲಸ ಮಾಡಲು ನಮಗೆ ಬರುವುದಿಲ್ಲವೇ? ಡಿ.ಕೆ.ಶಿವಕಮಾರ್‌ ಅವರ ಶಿಷ್ಯಂದಿರೇನು ಸುಮ್ಮನೆ ಕೂತಿಲ್ಲ. ನಾವು ಮನಸ್ಸು ಮಾಡಿದರೆ ಕುಮಾರಸ್ವಾಮಿ ಅವರ ಪೋಟೊಗೂ ಬೆಂಕಿ ಇಟ್ಟು ಸುಡುತ್ತೇವೆ. ನಾವೇನೂ ಬಳೆ ತೊಟ್ಟಿಕೊಂಡು ಕೂತಿಲ್ಲ ಎಂದರು.

click me!