ಮಹಿಳೆಯೊಂದಿಗೆ ಬಿಜೆಪಿ ಟಿಕೆಟ್ ಆಕಾಂಕ್ಷಿಯ ಲವ್ವಿಡವ್ವಿ, ಚುಂಬನದ ಫೋಟೋಗಳು ವೈರಲ್

By Suvarna News  |  First Published Jul 1, 2022, 4:07 PM IST

* ಬಿಜೆಪಿ ಟಿಕೆಟ್ ಆಕಾಂಕ್ಷಿಯ ಲವ್ವಿಡವ್ವಿ
* ಗ್ರಾ.ಪಂ ಸದಸ್ಯೆಯೊಂದಿಗೆ ಮಧುಗಿರಿ ಬಿಜೆಪಿ ಟಿಕೆಟ್ ಆಕಾಂಕ್ಷಿಯ ಲವ್ವಿಡವ್ವಿ
* ಮಹಿಳೆಯೊಂದಿಗೆ ಚುಂಬನದ ಫೋಟೋಗಳು ವೈರಲ್.


ತುಮಕೂರು, (ಜುಲೈ, 01):  ಮಧುಗಿರಿ ಮಧು ಒಂದು ವರ್ಷದಿಂದ ಸಮಾಜಸೇವೆಯಲ್ಲಿ ಗುರುತಿಸಿಕೊಂಡಿದ್ದಾರೆ. ಮಧುಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದು, ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶದಿಂದ ಪ್ರಚಾರ ಶುರುಮಾಡಿದ್ದಾರೆ.ಇದರ ಮಧ್ಯೆ ಮಹಿಳೆಯೊಂದಿಗಿನ ಲವ್ವಿಡವ್ವಿ ಫೋಟೋಗಳು ಮಧುಗೆ ಶಾಕ್ ನೀಡಿದೆ.

ಹೌದು.. ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಮಧುಗಿರಿಯ ಮಧು ಕಾಮಪುರಾಣ ಬಟಾಬಯಲಾಗಿದೆ. ಮಹಿಳೆಯ ಜೊತೆಗಿನ ಲವ್ವಿಡವ್ವಿ ಫೋಟೋಗಳು ವೈರಲ್ ಆಗಿವೆ. ಮಧುಗಿರಿ ತಾಲ್ಲೂಕಿನ  ಬೇಡತ್ತೂರು ಗ್ರಾಮದ ಸದಸ್ಯೆ ಮಂಜುಳ ಜೊತೆಗೆ ಎಂಜಾಯ್ ಮಾಡುತ್ತಿರುವುದು ಹಾಗೂ ಇಬ್ಬರ ಚುಂಬನದ ಫೋಟೋಗಳು ಹರಿದಾಡುತ್ತಿವೆ.

ಯುವತಿ ಅಪಹರಿಸಿ ನಿರಂತರ ಅತ್ಯಾಚಾರ, ಮನುಷ್ಯರ ಮಾಂಸ ತಿನ್ನಿಸಿದ ಕೀಚಕರು

Tap to resize

Latest Videos

 ಬೆಂಗಳೂರಿನ ಖಾಸಗಿ ಹೋಟೆಲ್ ಗೆ ಕರೆದುಕೊಂಡು‌ ಹೋಗಿ ಎಂಜಾಯ್ ಮಾಡಿದ್ದಾರೆ. ಫೋಟೋ ವೈರಲ್ ಆದ ತಕ್ಷಣ, ಮಧು ಮಧುಗಿರಿಯಿಂದ ಯಾರ ಸಂಪರ್ಕಕ್ಕೂ ಸಿಗದೇ  ನಾಪತ್ತೆಯಾಗಿದ್ದಾರೆ. 

ಬಿಜೆಪಿ ಮಾಜಿ ಸಿಎಂ ಸದಾನಂದಗೌಡರ ಸೇರಿದಂತೆ ಬಿಜೆಪಿ ಮುಖಂಡರ ಜೊತೆಗೆ ಗುರುತಿಸಿಕೊಂಡಿದ್ದ ಮಧು, ಮಧುಗಿರಿ ಟಾರಿಟಬಲ್ ಟ್ರಸ್ಟ್ ಹೆಸರಿನಲ್ಲಿ ಗುರುತಿಸಿಕೊಂಡಿದ್ದರು.  ಒಂದು ವರ್ಷದಿಂದ ಸಮಾಜಸೇವೆಯಲ್ಲಿ ಗುರುತಿಸಿಕೊಂಡಿದ್ದ‌ ಮಧು, ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶದಿಂದ ಪ್ರಚಾರ ಶುರು ಹಚ್ಚಿಕೊಂಡಿದ್ದರು.

ಸದ್ಯ ಮಧುಗಿರಿ ಮೂಲದ ಮಹಿಳೆ ಜೊತೆ ಅಕ್ರಮ ಸಂಬಂದ ಹೊಂದಿರುವ ಆರೋಪ ಕೇಳಿಬಂದಿದ್ದು,ಇಬ್ಬರ ನಡುವಿನ ಪೋಟೋ ಗಳು ಹಾಗೂ ಆಡಿಯೋ ಸಂಭಾಷಣೆ ವೈರಲ್ ಆಗಿದೆ.

click me!