ಕುಮಾರ ಬಂಗಾರಪ್ಪ ಭ್ರಷ್ಟಶಾಸಕ. ಅಭಿವೃದ್ಧಿ ಕಾಮಗಾರಿಗಳ ಹೆಸರಿನಲ್ಲಿ ಹಣ ಲೂಟಿ ಹೊಡೆಯುತ್ತಿದ್ದಾರೆ. ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿರುವ ಅವರಿಗೆ ಮುಂಬರುವ ವಿಧಾನಸಭಾ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸದಂತೆ ಟಿಕೇಟ್ ತಪ್ಪಿಸುವುದೇ ನಮ್ಮ ಗುರಿಯಾಗಿದೆ ಎಂದು ನಮೋ ವೇದಿಕೆಯ ತಾಲೂಕು ಅಧ್ಯಕ್ಷ ಪಾಣಿ ರಾಜಪ್ಪ ಹೇಳಿದರು.
ಸೊರಬ (ಫೆ.11) : ಕುಮಾರ ಬಂಗಾರಪ್ಪ ಭ್ರಷ್ಟಶಾಸಕ. ಅಭಿವೃದ್ಧಿ ಕಾಮಗಾರಿಗಳ ಹೆಸರಿನಲ್ಲಿ ಹಣ ಲೂಟಿ ಹೊಡೆಯುತ್ತಿದ್ದಾರೆ. ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿರುವ ಅವರಿಗೆ ಮುಂಬರುವ ವಿಧಾನಸಭಾ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸದಂತೆ ಟಿಕೇಟ್ ತಪ್ಪಿಸುವುದೇ ನಮ್ಮ ಗುರಿಯಾಗಿದೆ ಎಂದು ನಮೋ ವೇದಿಕೆಯ ತಾಲೂಕು ಅಧ್ಯಕ್ಷ ಪಾಣಿ ರಾಜಪ್ಪ ಹೇಳಿದರು.
ಪಟ್ಟಣದ ನಮೋ ವೇದಿಕೆ(Namo Vedike) ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿ, ಅಭಿವೃದ್ಧಿ ಕಾಮಗಾರಿಗಳಲ್ಲಿ ಕಮಿಷನ್ ವ್ಯವಹಾರ ನಡೆಸುತ್ತಿದ್ದಾರೆ. ಇದನ್ನು ಪ್ರಶ್ನಿಸಿದರೆ ಹಗೆತನ ಸಾಧಿಸುವುದು ಅವರ ಜಾಯಮಾನವಾಗಿದ್ದು, ತಮಗಾಗದವರ ವಿರುದ್ಧ ಇಲ್ಲಸಲ್ಲದ ಊಹಾಪೋಹಗಳನ್ನು ಸೃಷ್ಟಿಸಿ ಪಕ್ಷ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಹೈಕಮಾಂಡ್ ಯಾವುದೇ ಕಾರಣಕ್ಕೂ ಕುಮಾರ ಬಂಗಾರಪ್ಪ ಅವರಿಗೆ ಸ್ಪರ್ಧಿಸಲು ಟಿಕೆಟ್ ನೀಡಬಾರದು ಎಂದರು.
ಶಿವಮೊಗ್ಗ: ಬಿಎಸ್ವೈ ಕಾಳಜಿಯಿಂದಾಗಿ ಪರಿಶಿಷ್ಟರಿಗೆ ಹಕ್ಕುಪತ್ರ
ರಾಜ್ಯಾಧ್ಯಕ್ಷ ನಳಿನಕುಮಾರ್ ಕಟೀಲ್(Nalin kumar kateel), ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ(CT Ravi) ನೇತೃತ್ವದಲ್ಲಿ ಈಚೆಗೆ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಜನರು ಪೇಜ್ ಪ್ರಮುಖರಲ್ಲ. ನಿಜವಾದ 6 ಸಾವಿರ ಪೇಜ್ ಪ್ರಮುಖರು ನಮೋ ವೇದಿಕೆಯಲ್ಲಿದ್ದಾರೆ ಎಂದು ತಿಳಿಸಿದರು.
ಮಾ.5ರಂದು ಸಮಾವೇಶ:
ನಮೋ ವೇದಿಕೆ ವತಿಯಿಂದ ಮಾಚ್‌ರ್ 5ರಂದು ಆನವಟ್ಟಿಯಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಅಂದು ಸುಮಾರು 20 ಸಾವಿರ ಸಂಖ್ಯೆಯಲ್ಲಿ ಜನರನ್ನು ಸೇರಿಸುವ ಉದ್ದೇಶ ಹೊಂದಲಾಗಿದೆ. ಸಾಧ್ಯವಾದರೇ ವೇದಿಕೆಯ ಅಭ್ಯರ್ಥಿಯನ್ನು ಅಂದೇ ಘೋಷಿಸಲಾಗುತ್ತದೆ. ನಮೋ ವೇದಿಕೆಯ ಕಾರ್ಯಕರ್ತರು ಬಿಜೆಪಿ ನಿಷ್ಟರಾಗಿದ್ದು, ನಾವು ಯಾರ ಗುಲಾಮರಲ್ಲ. ಮಾರಾಟದ ವಸ್ತುಗಳೂ ಅಲ್ಲ ಎಂದರು.
ಬಿಜೆಪಿ ಹಿರಿಯ ಮುಖಂಡ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಎಚ್.ಎಸ್. ದತ್ತಾತ್ರೇಯ ಅವರ ಸಹೋದರ ಎಚ್.ಎಸ್. ಮಂಜಪ್ಪ ಮಾತನಾಡಿ, ಶಾಸಕರ ವಿರುದ್ಧವಾದ ನಮೋ ವೇದಿಕೆ ನಿಲುವು ಯಾವುದೇ ಕಾರಣಕ್ಕೂ ಬದಲಾಗುವುದಿಲ್ಲ. ಚುನಾವಣೆಯಲ್ಲಿ ನಮೋ ವೇದಿಕೆಯಿಂದ ಸೂಕ್ತವಾದ ಅಭ್ಯರ್ಥಿಯನ್ನು ಗುರುತಿಸಿ ಟಿಕೆಟ್ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.
ರಾಜ್ಯಾಧ್ಯಕ್ಷ ನಳಿನಕುಮಾರ್ ಕಟೀಲ್ ಮತ್ತು ಶಾಸಕ ಕುಮಾರ್ ಬಂಗಾರಪ್ಪ ತಮ್ಮ ಮನೆಗೆ ಸೌಹಾರ್ದಯುತ ಭೇಟಿ ನೀಡಿದ್ದು, ಉಭಯ ಕುಶಲೋಪರಿಗೆ ಮಾತ್ರ ಸೀಮಿತವಾಗಿದೆ. ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ ಎಂದರು.
ಬಿಸಿಲಿಗೆ ಪಂಚರತ್ನ ಯಾತ್ರೆ ಪಂಚರ್ ಆಗಿದೆ; ಪ್ರಜಾಧ್ವನಿಯಾತ್ರೆ ಬ್ರೇಕ್ ಫೇಲ್ ಆಗಿದೆ: ಕಟೀಲ್ ವ್ಯಂಗ್ಯ
ಸಭೆಯಲ್ಲಿ ನಮೋ ವೇದಿಕೆಯ ಮುಖಂಡರಾದ ಕುಸುಮಾ ಪಾಟೀಲ್, ಎಂ.ಕೆ. ಯೋಗೇಶ್, ನಿರಂಜನ್ ಕುಪ್ಪಗಡ್ಡೆ, ಸುತ್ತುಕೋಟೆ ನಿಂಗಪ್ಪ, ಡಿ. ಶಿವಯೋಗಿ, ಮಲ್ಲಿಕಾರ್ಜುನ ಗುತ್ತೇರ್, ಹೇಮರಾಜ, ಎ.ಎಲ್.ಅರವಿಂದ್, ಅಶೋಕ ನಾಯಕ್, ಗುರುಪ್ರಸನ್ನಗೌಡ, ರಾಘವೇಂದ್ರ, ಬೆನವಪ್ಪ ಮೊದಲಾದವರಿದ್ದರು.