ಸಿದ್ದರಾಮಯ್ಯಗೆ ಬಾದಾಮಿಗೆ ತಂದು ನಿಲ್ಲಿಸಿ ಗೆಲ್ಲಿಸಿದವನೇ ನಾನು. ಅವರಿಗೆ ಎರಡು ಸಲ ಪ್ರೋಟೋಕಾಲ್ ಲೈಫ್ ಕೊಟ್ಟು, ಮೇಕಪ್ ಮಾಡಿ ಮುಖ್ಯಮಂತ್ರಿ ಮಾಡ್ದೆ ನಾನು, ಆದ್ರೀಗ ನನ್ನ ಮಗನ ಬಗ್ಗೆ ಹಗುರಾಗಿ ಮಾತನಾಡುತ್ತಿರುವುದು ನೋವಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ನುಡಿದರು.
ಬೀದರ್ (ಫೆ.11) : ಸಿದ್ದರಾಮಯ್ಯಗೆ ಬಾದಾಮಿಗೆ ತಂದು ನಿಲ್ಲಿಸಿ ಗೆಲ್ಲಿಸಿದವನೇ ನಾನು. ಅವರಿಗೆ ಎರಡು ಸಲ ಪ್ರೋಟೋಕಾಲ್ ಲೈಫ್ ಕೊಟ್ಟು, ಮೇಕಪ್ ಮಾಡಿ ಮುಖ್ಯಮಂತ್ರಿ ಮಾಡ್ದೆ ನಾನು, ಆದ್ರೀಗ ನನ್ನ ಮಗನ ಬಗ್ಗೆ ಹಗುರಾಗಿ ಮಾತನಾಡುತ್ತಿರುವುದು ನೋವಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ನುಡಿದರು.
ಬೀದರ್‌ಗೆ ಭೇಟಿಯಾದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಎಲ್ಲವನ್ನೂ ದೈವಕ್ಕೆ ಬಿಟ್ಟಿದ್ದೇನೆ. ನಾನು ಯಾವೊತ್ತು ಅಹಂಕಾರ, ಅಹಂಭಾವ ಹೊಂದಿಲ್ಲ, ಪ್ರಯತ್ನ ನಮ್ಮದು. ಜನರ ಆಶೀರ್ವಾದ ಮುಖ್ಯವಾದದ್ದು, ಜನತಾ ಜನಾರ್ಧನ ಎಂದು ನಂಬಿದವ ನಾವು ಎಂದರು.
ಬಿಜೆಪಿಯದು ಮಂಚದ ಸರ್ಕಾರ, ಸಿಎಂ ಬೊಮ್ಮಾಯಿ ರಾಜೀನಾಮೆ ನೀಡಬೇಕು: ಸಿ.ಎಂ.ಇಬ್ರಾಹಿಂ
ನನ್ನ ಮಗನನ್ನು ವಲಸಿಗೆ ಎಂದು ಹೇಳುವ ಜಮೀರ್ ಅಹ್ಮದ್(Jameer ahmed) ಬಾದಾಮಿಯಲ್ಲಿ ಗೆದ್ದ ಸಿದ್ದರಾಮಯ್ಯ(Siddaramaiah) ವಲಸಿಗ ಅಲ್ವಾ? ಚಾಮರಾಜಪೇಟೆಯಲ್ಲಿ ಎರಡು ಬಾರಿ ಗೆದ್ದ ಜಮೀರ್ ವಲಸಿಗ ಅಲ್ಲವೇ ಎಂದು ಪ್ರಶ್ನಿಸಿದರು.
ನನ್ನ ಮಗ ಮಿರಾಜುದ್ದೀನ್ ಪಟೇಲ್ ನನ್ನ ಜಾಗ ತುಂಬಲು ಹುಮನಾಬಾದ್ ಕ್ಷೇತ್ರದಲ್ಲಿ ನಿಂತಿದ್ದಾನೆ. ಇನ್ಮುಂದೆ ದೇವರು ಮತ್ತು ಜನತಾ ಜನಾರ್ಧನನ ನಿರ್ಧಾರ ಅಂತಿಮ. ಗತಿಯಿಲ್ಲದೆ ಜಮೀರ್ ಅಹ್ಮದ್ ಅವರನ್ನು ಕಾಂಗ್ರೆಸ್‌ನವರು ಇಟ್ಟುಕೊಂಡಿದ್ದಾರೆ ಎಂದು ಸಿಎಂ ಇಬ್ರಾಹಿಂ ಲೇವಡಿ ಮಾಡಿದರು.
ಇನ್ನು ಅಲ್ಪಸಂಖ್ಯಾತರಿಗೆ ಕ್ಷೇತ್ರ ಬಿಟ್ಟುಕೊಡಲು ಎಚ್‌ಡಿ ಕುಮಾರಸ್ವಾಮಿ(HD Kumaraswamy) ಅವರಿಗೆ ಸಲಹೆ ನೀಡುತ್ತಿರುವ ಸಿದ್ದರಾಮಯ್ಯ ಹುಮನಾಬಾದ್ ರಾಜಶೇಖರ ಪಾಟೀಲ್ ಅವರಿಗೆ ಸಲಹೆ ನೀಡಿ, ಇಬ್ಬರು ತಮ್ಮಂದಿರು ಶಾಸಕರಿದ್ದಾರೆ, ಈ ಬಾರಿ ಕ್ಷೇತ್ರವನ್ನು ಅಲ್ಪಸಂಖ್ಯಾತ ಸಿಎಂ ಇಬ್ರಾಹಿ ಮಗನಿಗೆ ಬಿಟ್ಟುಕೊಡಲು ತಿಳಿಸಲಿ ಎಂದು ಮರುಸವಾಲೆಸೆದರು.
ಜನರ ಸಮಸ್ಯೆ ಅರಿಯಲು ಜೆಡಿಎಸ್ ಪಂಚರತ್ನ ಯಾತ್ರೆ: ಸಿಎಂ ಇಬ್ರಾಹಿಂ
ಇನ್ನು ಜೆಡಿಎಸ್(JDS)ನಿಂದ ಮುಂದಿನ ಸಿಎಂ ಮುಸ್ಲಿಂ ಸಮುದಾಯದ(Muslim community)ವರು ಎಂದು ನಾರಾಯಣಸ್ವಾಮಿ(Narayanaswamy) ಹೇಳಿಕೆ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಜೆಡಿಎಸ್‌ನ ಯಜಮಾನ ನಾನು, ನನ್ನ ನೇತೃತ್ವದಲ್ಲಿ ಚುನಾವಣೆ ನಡೆಯುತ್ತಿದೆ. ನಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಎಚ್‌ಡಿ ಕುಮಾರಸ್ವಾಮಿ ಇದ್ದಾರೆ. ಅವರೇ ನಮ್ಮN ಮುಂದಿನ ಸಿಎಂ ಎಂದು ಸಿಎಂ ಇಬ್ರಾಹಿಂ ಸ್ಪಷ್ಟಪಡಿಸಿದರು.